ಮಂಗಳೂರು (ಮೇ 30): ಮಂಗಳೂರು ವಿಶ್ವವಿದ್ಯಾನಿಲಯದ (Mangaluru University) ಕೆಲ ಕಾಲೇಜಿನಲ್ಲಿ ಹಿಜಾಬ್ ವಿವಾದ (Hijab Controversy) ಮತ್ತೆ ಭಾರೀ ಸದ್ದು ಮಾಡ್ತಿದೆ. ಕಾಲೇಜಿನಲ್ಲಿ (College) ಹಿಜಾಬ್ ಧರಿಸಲು ಅವಕಾಶ ಕೋರಿ ವಿದ್ಯಾರ್ಥಿನಿಯರು ಪಟ್ಟು ಹಿಡಿದಿದ್ದಾರೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಅನುಮತಿಗಾಗಿ ವಿದ್ಯಾರ್ಥಿನಿಯರು (Students) ಡಿ.ಸಿ ಕಚೇರಿ ಮೆಟ್ಟಿಲೇರಿದ್ರು. ಇಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳು ವಿದ್ಯಾರ್ಥಿನಿಯರ ಜೊತೆಗೆ ಸಭೆ ನಡೆಸಿದ್ರು. ಸಭೆ ಬಳಿಕ ಮಾತಾಡಿದ ಜಿಲ್ಲಾಧಿಕಾರಿಗಳು (District Collector) ಸಿಂಡಿಕೇಟ್ ಸಭೆಯ (Syndicate Meeting) ನಿರ್ಣಯವನ್ನು ಪಾಲಿಸಲು ಸೂಚಿಸಿರೋದಾಗಿ ತಿಳಿಸಿದ್ದಾರೆ. ಸಭೆಯಲ್ಲಿ ಮಂಗಳೂರು ವಿವಿ ಕಾಲೇಜಿನ ಪ್ರಾಂಶುಪಾಲೆ ಅನುಸೂಯ ಅವರು ಕೂಡ ಭಾಗಿಯಾಗಿದ್ದರು.
ನಿರ್ಧಾರ ಬದಲಿಸಲು ಜಿಲ್ಲಾಮಟ್ಟದಲ್ಲಿ ಸಾಧ್ಯವಿಲ್ಲ
ಸಭೆಯ ಬಳಿಕ ಮಾತನಾಡಿದ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ಕೆ ವಿ ರಾಜೇಂದ್ರ, ಮಂಗಳೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸಭೆಯಲ್ಲಿ ಹಿಜಾಬ್ ಕಡ್ಡಾಯ ಮಾಡಿದ ಬಗ್ಗೆ ಆಕ್ಷೇಪಿಸಿದ ವಿದ್ಯಾರ್ಥಿನಿಯರು ಸಭೆಯಲ್ಲಿ ಭಾಗಿಯಾಗಿದ್ದರು. ಸಿಂಡಿಕೇಟ್ ಸಭೆಯ ನಿರ್ಧಾರವನ್ನು ಬದಲಿಸಲು ಜಿಲ್ಲಾಮಟ್ಟದಲ್ಲಿ ಸಾಧ್ಯವಿಲ್ಲ.
ಸಿಂಡಿಕೇಟ್ ಸಭೆಯ ನಿರ್ಧಾರ ಪಾಲಿಸಬೇಕು
ಸಿಂಡಿಕೇಟ್ ಸಭೆಯ ನಿರ್ಧಾರವನ್ನು ಕಾಲೇಜಿನೊಳಗೆ ಪಾಲಿಸಬೇಕು. ಇದನ್ನು ಕಾನೂನು ರೀತ್ಯವಾಗಿ ನೋಡಬೇಕಾಗುತ್ತದೆಯೇ ಹೊರತು ಕಾಲೇಜಿನ ಆವರಣದಲ್ಲಿ ಶಾಂತಿ ಭಂಗವಾಗದಂತೆ ನೋಡಿಕೊಳ್ಳಬೇಕು ಎಂದರು. ವಿದ್ಯಾರ್ಥಿಗಳ ಜೊತೆ ಚರ್ಚಿಸಲಾಗಿದೆ. ಸಿಂಡಿಕೇಟ್ ಸಭೆಯಲ್ಲಿ ಹಿಜಾಬ್ ಕುರಿತಾಗಿ ತೆಗೆದುಕೊಂಡ ನಿರ್ಣಯದ ಅಧಿಕೃತ ಪತ್ರ ತಮಗೆ ನೀಡಲ್ಲ. ನಿರ್ಣಯವನ್ನು ವಾಟ್ಸ್ಆ್ಯಪ್ ಮೂಲಕ ರವಾನಿಸಿದ್ದಾರೆ ಎಂದು ವಿದ್ಯಾರ್ಥಿಗಳು ನಮ್ಮಲ್ಲಿ ದೂರಿದ್ದಾರೆ.
ಆದೇಶದ ವಿರುದ್ಧದ ನಿರ್ಣಯ ತಗೆದುಕೊಳ್ಳುವಂತಿಲ್ಲ
ನಿರ್ಣಯ ಆದೇಶ ಪತ್ರವನ್ನು ಕೊಡಿಸುವುದಾಗಿ ತಿಳಿಸಿದ್ದೇನೆ. ಸಿಂಡಿಕೇಟ್ ನಿರ್ಧಾರವನ್ನು ಪಾಲನೆ ಮಾಡುವ ಕುರಿತು ವಿದ್ಯಾರ್ಥಿಗಳಿಗೆ ತಿಳಿ ಹೇಳಲಾಗಿದೆ ಎಂದರು. ಹೈಕೋರ್ಟ್ ಆದೇಶದ ಅನ್ವಯ ಆಯಾ ಸಂಸ್ಥೆಗಳು ನಿರ್ಧಾರ ತೆಗೆದುಕೊಳ್ಳುತ್ತವೆ. ಈ ಕಾಲೇಜಿನಲ್ಲಿ ಆದೇಶದ ವಿರುದ್ಧವಾದ ನಿರ್ಣಯ ತೆಗೆದುಕೊಂಡಿದ್ದಾರೆ, ಕಾನೂನು ರೀತಿಯಲ್ಲಿ ಕ್ರಮಕ್ಕೆ ಮುಂದಾಗಬೇಕಾಗುತ್ತದೆ ಎಂದು ಎಚ್ಚರಿಸಿದ್ದೇವೆ ಎಂದರು. ಕ್ಯಾಂಪಸ್ ನಲ್ಲಿ ಕಾನೂನು ಕೈಗೆ ತೆಗೆದುಕೊಳ್ಳಬಾರದು, ಕಾಲೇಜಿನಲ್ಲಿ ನಿಯಮ ಉಲ್ಲಂಘನೆ ಮಾಡಬಾರದು ಹಾಗೂ ಕಾಲೇಜು ಒಳಗೆ ಶಾಂತಿ ಭಂಗ ಮಾಡಬಾರದು ಎಂದು ಡಿಸಿ ತಿಳಿಸಿದ್ದಾರೆ.
ಇದನ್ನೂ ಓದಿ: UPSC ಪರೀಕ್ಷೆಯಲ್ಲಿ ಕನ್ನಡಿಗರ ಸಾಧನೆ; ಇಲ್ಲಿದೆ ಕರ್ನಾಟಕದ ಟಾಪರ್ಸ್ ಲಿಸ್ಟ್
ಹಿಜಾಬ್ಗೆ ಅವಕಾಶ ಕೋರಿ ವಿದ್ಯಾರ್ಥಿನಿ ಪಟ್ಟು
ಇನ್ನು ಕಾಲೇಜಿನಲ್ಲಿ ಹಿಜಾಬ್ ಧರಿಸಲು ಪಟ್ಟು ಹಿಡಿದ ವಿದ್ಯಾರ್ಥಿನಿ, ಈ ಬಗ್ಗೆ ಡಿಸಿ ಅವರ ಬಳಿ ಹೋಗಿ ಮಾತನಾಡಿದ್ದೇವೆ. ಡಿಸಿಯವರ ಮಾತಿನಲ್ಲಿ ಅಸಹಾಯಕತೆ ಗೊತ್ತಾಗುತ್ತಿದೆ. ಈ ಆದೇಶ ಸಿಂಡಿಕೇಟ್ನಿಂದ ಬಂದಿದ್ದು, ಜಿಲ್ಲಾಧಿಕಾರಿಯಿಂದ ಏನು ಮಾಡಲು ಸಾಧ್ಯವಿಲ್ಲ ಎಂದು ಗೊತ್ತಾಯಿತು ಎಂದ್ರು. ದಾಖಲೆ ಇರುವುದರಿಂದ ಕಾನೂನಾತ್ಮಕ ಹೋರಾಟ ಮಾಡಿ ಎಂಬ ಅಭಿಪ್ರಾಯ ನೀಡಿದ್ದಾರೆ.
ABVP ಒತ್ತಡದಿಂದ ಹಿಜಾಬ್ ಬ್ಯಾನ್
ಕರ್ನಾಟಕದ ಹಿಜಾಬ್ ವಿವಾದಕ್ಕೂ ನಮ್ಮ ಕಾಲೇಜಿನ ಹಿಜಾಬ್ ವಿವಾದಕ್ಕೂ ಸಂಬಂಧ ಇಲ್ಲ. ABVP ಒತ್ತಡದಿಂದ ನಮ್ಮ ಸಿಂಡಿಕೇಟ್ ಹಿಜಾಬ್ ನಿಷೇಧದ ಆದೇಶ ಮಾಡಿದೆ. ಈ ಹಿಂದೆ ಹಿಜಾಬ್ ಮುಖ್ಯವೋ ಶಿಕ್ಷಣ ಮುಖ್ಯವೊ ಎಂದು ಪ್ರಶ್ನಿಸುತ್ತಿದ್ರು. ಆದ್ರೆ ಇವತ್ತು ಎ.ಬಿ.ವಿ.ಪಿಯ ಒತ್ತಡ ಮುಖ್ಯವೊ ನಮ್ಮ ಶಿಕ್ಷಣ ಮುಖ್ಯವೊ ಎಂದು ಪ್ರಶ್ನಿಸುತ್ತೇವೆ. ಇದು ಹೈಕೋರ್ಟ್ ವರೆಗೂ ಹೋಗುವ ವಿಚಾರವಲ್ಲ, ವಿಶ್ವವಿದ್ಯಾಲಯದ ಮಟ್ಟದಲ್ಲೇ ಸಮಸ್ಯೆ ಬಗೆಹರಿಸಬಹುದು ಎಂದು ಗೌಸಿಯಾ ಹೇಳಿದ್ದಾರೆ.
ನಾವು ಶಾಸಕ ಯು.ಟಿ ಖಾದರ್ ನ್ನು ಭೇಟಿ ಮಾಡಿದ್ದೇವೆ. ಅವರಿಂದ ಸರಿಯಾಗಿ ಯಾವುದೇ ಪ್ರತಿಕ್ರಿಯೆ ಸಿಕ್ಕಿಲ್ಲ. ಧಾರ್ಮಿಕ ಪಂಡಿತರು, ವಿದ್ಯಾರ್ಥಿ ಸಂಘಟನೆ, ಸ್ತ್ರೀ ಪರ ಹೋರಾಟಗಾರರಿಗೆ ಬಹಿರಂಗವಾಗಿ ಆಹ್ವಾನ ನೀಡುತ್ತಿದ್ದೇವೆ. ಈ ಸಮಸ್ಯೆಗೆ ಪರಿಹಾರ ನೀಡುವುದಾದ್ರೆ ನಾವು ಅವರ ಜೊತೆ ನಾವು ಸೇರುತ್ತೇವೆ.
ಇದನ್ನೂ ಓದಿ: Yogi Adityanath: ಅಯೋಧ್ಯೆ ಬಳಿಕ ಕಾಶಿ, ಮಥುರಾದ ಮೇಲೆ ಗಮನ! ಯೋಗಿ ಆದಿತ್ಯನಾಥ್ ಘೋಷಣೆ
ಕಾನೂನಾತ್ಮಕ ಹೋರಾಟ ಕಷ್ಟ
ಕಾನೂನಾತ್ಮಕವಾಗಿ ಹೋದ್ರೆ ತುಂಬಾ ಸಮಯ ತೆಗೆದುಕೊಳ್ಳುತ್ತೆ. ಈಗಾಗಲೇ ಸಾಕಷ್ಟು ಹಾಜರಾತಿ ಹೋಗಿದೆ. ಹಾಜರಾತಿ ಇಲ್ಲದಿದ್ರೆ ಪರೀಕ್ಷೆ ಬರೆಯುವುದಕ್ಕೂ ಆಗುವುದಿಲ್ಲ. ಕಾಲೇಜಿಗೆ ಹೋಗಬೇಕೆಂದು ಇದೆ. ಆದ್ರೆ ಕಾಲೇಜಿಗೆ ನಮ್ಮನ್ನು ಸೇರಿಸಿಕೊಳ್ಳುವುದಿಲ್ಲ. ಮುಂದೇನಾಗುತ್ತೆ ಎಂದು ನೋಡುತ್ತೇವೆ ಎಂದು ಮಂಗಳೂರಿನಲ್ಲಿ ಹಿಜಾಬ್ಗಾಗಿ ಪಟ್ಟು ಹಿಡಿದ ವಿದ್ಯಾರ್ಥಿನಿ ಗೌಸಿಯಾ ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ