ಮಂಗಳೂರು ಏರ್​​ಪೋರ್ಟ್​​​ ಸುತ್ತ ತೀವ್ರ ಶೋಧ; ಬಾಂಬ್​ ಇಟ್ಟ ಶಂಕಿತನಿಗಾಗಿ ಹುಡುಕಾಟ

ನಗರದಲ್ಲಿ ಪೊಲೀಸ್ ಹೈ ಅಲರ್ಟ್ ಘೋಷಣೆ ಮಾಡಿದ್ದು, ರೈಲ್ವೆ ನಿಲ್ದಾಣದಲ್ಲಿ ಪೊಲೀಸರು ತಪಾಸಣೆ ನಡೆಸುತ್ತಿದ್ದಾರೆ. ಅಧಿಕಾರಿಗಳು ಪ್ರತಿ  ಬ್ಯಾಗ್ ಹಾಗೂ ವಸ್ತುಗಳ ಸ್ಕ್ಯಾನ್​ ಮಾಡಿ ಪರಿಶೀಲನೆ ಮಾಡುತ್ತಿದ್ಧಾರೆ. 

news18-kannada
Updated:January 21, 2020, 1:12 PM IST
ಮಂಗಳೂರು ಏರ್​​ಪೋರ್ಟ್​​​ ಸುತ್ತ ತೀವ್ರ ಶೋಧ; ಬಾಂಬ್​ ಇಟ್ಟ ಶಂಕಿತನಿಗಾಗಿ ಹುಡುಕಾಟ
ಏರ್​ಪೋರ್ಟ್​ನಲ್ಲಿ ಪತ್ತೆಯಾದ ಸಜೀವ ಬಾಂಬ್​ ಪರಿಶೀಲನೆ ನಡೆಸುತ್ತಿರುವ ಪೊಲೀಸರು.
  • Share this:
ಮಂಗಳೂರು(ಜ.21): ನಿನ್ನೆ ಮಂಗಳೂರು ವಿಮಾನ ನಿಲ್ದಾಣದಲ್ಲಿ  ಜೀವಂತ ಬಾಂಬ್​ ಪತ್ತೆಯಾದ ಬಳಿಕ ಕರಾವಳಿ ಅಕ್ಷರಶಃ ತಲ್ಲಣಗೊಂಡಿದೆ. ನಗರದಾದ್ಯಂತ ಹೈ ಅಲರ್ಟ್​ ಘೋಷಣೆ ಮಾಡಲಾಗಿದ್ದು, ಕಟ್ಟೆಚ್ಚರ ವಹಿಸಲಾಗಿದೆ. ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿದೆ. 

ನಿನ್ನೆ ಬಾಂಬ್​ ನಿಷ್ಕ್ರಿಯಗೊಳಿಸಿದ್ದ ಸ್ಥಳದಲ್ಲಿ ಇಂದು ರಾಷ್ಟ್ರೀಯ ಭದ್ರತಾ ಸಿಬ್ಬಂದಿ (ಎನ್​​ಎಸ್​​ಜಿ) ತೀವ್ರ ಶೋಧ ನಡೆಸಿದ್ಧಾರೆ. ಮಂಗಳೂರು ವಿಮಾನ ನಿಲ್ದಾಣದ ಸುತ್ತ ಭಾರೀ ಹುಡಕಾಟ ನಡೆಸಿದ್ದಾರೆ. ಬಾಂಬ್​ ಸ್ಕ್ವಾಡ್​, ಭದ್ರತಾ ಸಿಬ್ಬಂದಿ, ಏರ್​ಪೋರ್ಟ್​​ ಅಧಿಕಾರಿಗಳಿಂದ ಕಮಾಂಡೋಗಳು ಮಾಹಿತಿ ಪಡೆದಿದ್ದಾರೆ. 5 ಜನರ ಎನ್​ಎಸ್​​ಜಿ ಕಮಾಂಡೋ ತಂಡ ಶೋಧ ಕಾರ್ಯಾಚರಣೆಯಲ್ಲಿ ನಿರತವಾಗಿದೆ.

Bangalore Crime: ಶೂಟ್​ ಮಾಡುವುದಾಗಿ ಬೆದರಿಸಿ ಕಾರು, ಹಣ ದೋಚಿದ ದುಷ್ಕರ್ಮಿಗಳು

ನಗರದಲ್ಲಿ ಪೊಲೀಸ್ ಹೈ ಅಲರ್ಟ್ ಘೋಷಣೆ ಮಾಡಿದ್ದು, ರೈಲ್ವೆ ನಿಲ್ದಾಣದಲ್ಲಿ ಪೊಲೀಸರು ತಪಾಸಣೆ ನಡೆಸುತ್ತಿದ್ದಾರೆ. ಅಧಿಕಾರಿಗಳು ಪ್ರತಿ  ಬ್ಯಾಗ್ ಹಾಗೂ ವಸ್ತುಗಳ ಸ್ಕ್ಯಾನ್​ ಮಾಡಿ ಪರಿಶೀಲನೆ ಮಾಡುತ್ತಿದ್ಧಾರೆ.  ರೈಲ್ವೆ ಇಲಾಖೆ, ರೈಲ್ವೆ ಇಲಾಖೆ ಭದ್ರತಾ ಸಿಬ್ಬಂದಿ,  ಪೊಲೀಸ್ ಸಿಬ್ಬಂದಿ, ಶ್ವಾನ ದಳದಿಂದ ತೀವ್ರ ತಪಾಸಣೆ ನಡೆಸಲಾಗುತ್ತಿದೆ. 

ಮಂಗಳೂರು ವಿಮಾನ ನಿಲ್ದಾಣಕ್ಕೆ ಜನವರಿ 28ರವರೆಗೆ ಎನ್​ಎಸ್​​​ಜಿ ಕಮಾಂಡೋ ಭದ್ರತೆ ಒದಗಿಸಲಾಗುತ್ತದೆ. ಎನ್​ಎಸ್​​ಜಿ 27ನೇ ಬೆಟಾಲಿಯನ್​ ಈಗಾಗಲೇ ಮಂಗಳೂರಿಗೆ ಆಗಮಿಸಿದ್ದು, ತೀವ್ರ ತಪಾಸಣೆ ನಡೆಸುತ್ತಿದ್ದಾರೆ. ಒಟ್ಟು 16 ಮಂದಿ ಎನ್​ಎಸ್​ಜಿ ಕಮಾಂಡೋಗಳು ಬೆಂಗಳೂರಿನಿಂದ ಮಂಗಳೂರಿಗೆ ತೆರಳಿದ್ದಾರೆ.

ಮಂಗಳೂರು ವಿಮಾನ ನಿಲ್ದಾಣದಲ್ಲಿ ಪತ್ತೆಯಾದ ಬಾಂಬ್; ಯಶಸ್ವಿಯಾಗಿ ಸ್ಪೋಟಿಸಿ ಆತಂಕ ದೂರ ಮಾಡಿದ ಪೊಲೀಸರು

ಗಣರಾಜ್ಯೋತ್ಸವ ಹಿನ್ನಲೆಯಲ್ಲೂ ನಗರದಾದ್ಯಂತ ಭಾರೀ ಕಟ್ಟೆಚ್ಚರ ವಹಿಸಲಾಗಿದೆ.  ವಿಮಾನ ನಿಲ್ದಾಣಕ್ಕೆ ಸಿಐಎಸ್​​ಎಫ್​​ ಮತ್ತು ಎನ್​ಎಸ್​ಜಿ ಯೋಧರ ಭಧ್ರತೆ ಒದಗಿಸಲಾಗುತ್ತದೆ. ಎನ್​ಎಸ್​ಜಿ ಕಮಾಂಡೋಗಳು ಸಿಐಎಸ್​​ಎಫ್​​​​ ಅಧಿಕಾರಿಗಳಿಂದ ಮಾಹಿತಿ ಸಂಗ್ರಹಿಸಿದ್ದಾರೆ. 

 
First published: January 21, 2020, 12:49 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading