• Home
 • »
 • News
 • »
 • state
 • »
 • Mangaluru Bomb Blast: ಶಾರೀಕ್ ಆರೋಗ್ಯದಲ್ಲಿ ಚೇತರಿಕೆ; ಎಂಟು ತಜ್ಞ ವೈದ್ಯರಿಂದ ಚಿಕಿತ್ಸೆ

Mangaluru Bomb Blast: ಶಾರೀಕ್ ಆರೋಗ್ಯದಲ್ಲಿ ಚೇತರಿಕೆ; ಎಂಟು ತಜ್ಞ ವೈದ್ಯರಿಂದ ಚಿಕಿತ್ಸೆ

ಶಾರೀಕ್

ಶಾರೀಕ್

ಮಂಗಳೂರು ಕುಕ್ಕರ್ ಬಾಂಬ್ ‌ಸ್ಫೋಟ ಪ್ರಕರಣದ ಬಗ್ಗೆ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಪ್ರತಿಕ್ರಿಯೆ ನೀಡಿದ್ದಾರೆ.

 • News18 Kannada
 • 3-MIN READ
 • Last Updated :
 • Dakshina Kannada, India
 • Share this:

Mangaluru Cooker Bomb Blast: ಮಂಗಳೂರು ಕುಕ್ಕರ್ ಬಾಂಬ್ ಬ್ಲಾಸ್ಟ್ ಪ್ರಕರಣದ ತನಿಖೆ ಚುರುಕುಗೊಂಡಿದೆ. ಪೊಲೀಸರು (Police) ಹಾಗೂ ಎನ್​ಐಎ (NIA) ಅಧಿಕಾರಿಗಳು ಸ್ಫೋಟದ ತನಿಖೆಯನ್ನ ಚುರುಕುಗೊಳಿಸಿದ್ದು ಪ್ರತಿಯೊಂದು ಹಂತದಲ್ಲೂ ಸಾಕ್ಷ್ಯಗಳನ್ನ ಕಲೆ ಹಾಕ್ತಿದ್ದಾರೆ. ಅತ್ತ ಮಂಗಳೂರಿನ ಫಾದರ್​ ಮುಲ್ಲರ್ ಆಸ್ಪತ್ರೆಯಲ್ಲಿ ಶಂಕಿತ ಉಗ್ರ ಶಾರೀಕ್​ಗೆ ಚಿಕಿತ್ಸೆ ಮುಂದುವರಿಸಲಾಗಿದೆ. ಸದ್ಯ ಶಾರೀಕ್ ವೆಂಟಿಲೇಟರ್ (Ventilator)​​ ಸ್ಥಿತಿಯಿಂದ ಹೊರಬಂದಿದ್ದು, ಆರೋಗ್ಯದಲ್ಲಿ (Health) ಚೇತರಿಕೆ ಕಂಡುಬಂದಿದೆ. ಎಂಟು ಮಂದಿ ತಜ್ಞ ವೈದ್ಯರಿಂದ ಶಾರೀಕೆಗೆ ಚಿಕಿತ್ಸೆ ನೀಡಲಾಗ್ತಿದ್ದು, ಸುಟ್ಟ ಗಾಯದಿಂದ ಬಾಂಬರ್ ನರಳಾಡುತ್ತಿದ್ದಾನೆ. ಇನ್ನು ಪ್ರಕರಣವನ್ನ ಸರ್ಕಾರ ಈಗಾಗಲೇ ಎನ್​ಐಎ ತನಿಖೆಗೆ (NIA Investigation) ಒಪ್ಪಿಸಿದೆ. ಇನ್ನು ಎರಡು ದಿನದೊಳಗೆ ನ್ಯಾಯಾಲಯದಿಂದ‌ ಎನ್​ಐಎಗೆ ಅಧಿಕೃತವಾಗಿ ವರ್ಗಾವಣೆಯಾಗುವ ಸಾಧ್ಯತೆಗಳಿವೆ.


ಮಂಗಳೂರು ಕುಕ್ಕರ್ ಬಾಂಬ್ ‌ಸ್ಫೋಟ ಪ್ರಕರಣದ ಬಗ್ಗೆ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಪ್ರತಿಕ್ರಿಯೆ ನೀಡಿದ್ದಾರೆ. ಕರಾವಳಿ ಜನತೆ ಜಾಗೃತರಾಗಿರಬೇಕು. ಕರಾವಳಿಯಲ್ಲಿ ದೇವಸ್ಥಾನಗಳು, ಪ್ರಸಿದ್ಧ ಕ್ಷೇತ್ರ ಬಹಳಷ್ಟಿದೆ.  ‌ಡಿಸೆಂಬರ್, ಜನವರಿ ತಿಂಗಳಲ್ಲಿ ವಿಶೇಷ ಉತ್ಸವ ನಡೆಯುತ್ತೆ. ಹೀಗಾಗಿ ನಾವೆಲ್ಲ ಜಾಗೃತರಾಗಿರಬೇಕು ಎಂದು ಕಿವಿಮಾತು ಹೇಳಿದರು.


ಮಂಗಳೂರಿನಲ್ಲಿ ಜನಜಾಗೃತಿ ಅಭಿಯಾನ


ಇನ್ನು ಭಯೋತ್ಪಾದಕರ ವಿರುದ್ಧ ಮಂಗಳೂರಿನಲ್ಲಿ ಜನಜಾಗೃತಿ ಅಭಿಯಾನ ನಡೆಸಲಾಯ್ತು. ಮಂಗಳೂರಿನಲ್ಲಿ ವಿಶ್ವ ಹಿಂದೂ ಪರಿಷತ್, ಭಜರಂಗದಳದ ಕಾರ್ಯಕರ್ತರು ಅಭಿಯಾನ ಮಾಡಿದ್ರು. ಮಂಗಳೂರಿನ ಏಳು ಸ್ಥಳಗಳಲ್ಲಿ ಭಿತ್ತಿ ಪತ್ರ ಹಿಡಿದು ಅಭಿಯಾನ ಮಾಡಲಾಯ್ತು.


ಶಾರೀಕ್ ಹತ್ಯೆಗೆ ಸಂಚು?


ಮಂಗಳೂರು ಕುಕ್ಕರ್ ಬಾಂಬ್ ಬ್ಲಾಸ್ಟ್ (Managluru Cooker Blast)​ ಪ್ರಕರಣದಲ್ಲಿ ಗಂಭೀರವಾಗಿ ಗಾಯಗೊಂಡು ಚಿಕಿತ್ಸೆ ಪಡೆದುಕೊಳ್ಳುತ್ತಿರುವ ಶಂಕಿತ ಉಗ್ರ ಶಾರೀಕ್ (Sharik) ಹತ್ಯೆಗೆ ಸಂಚು ರೂಪಿಸಲಾಗಿದೆಯಾ ಅನ್ನೋ ಅನುಮಾನ ಮೂಡಿದೆ.


ಸದ್ಯ ಶಾರೀಕ್​ಗೆ ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇದೀಗ ಶಾರೀಕ್ ಚಿಕಿತ್ಸೆ ಪಡೆದುಕೊಳ್ಳುತ್ತಿರುವ ಆಸ್ಪತ್ರೆ ಮತ್ತು ವಾರ್ಡ್​ ಬಳಿಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ (Police Protection)​ ಏರ್ಪಡಿಸಲಾಗಿದೆ. ಹ್ಯಾಂಡ್ಲರ್ಸ್, ಸ್ಲೀಪರ್ ಸೆಲ್‌ಗಳನ್ನು ಆಕ್ಟಿವ್ ಮಾಡಿ ದಾಳಿ ನಡೆಸುವ ಶಂಕೆ ಹಿನ್ನೆಲೆ ಪೊಲೀಸ್ ಭದ್ರತೆ ಹೆಚ್ಚಿಸಲಾಗಿದೆ ಎಂದು ತಿಳಿದು ಬಂದಿದೆ.


ಇದನ್ನೂ ಓದಿ:  Mangaluru Cooker Bomb: ಈ 6 ಸ್ಥಳಗಳನ್ನು ಟಾರ್ಗೆಟ್ ಮಾಡಿದ್ನಾ ರಾಕ್ಷಸ ಶಾರೀಕ್?


ಶಾರೀಕ್ ಇರುವ ವಾರ್ಡ್‌ ಬಳಿ ಪೊಲೀಸರು ಹೈ ಅಲರ್ಟ್ ಆಗಿದ್ದಾರೆ. ಒಬ್ಬ ಇನ್ಸ್‌ಪೆಕ್ಟರ್, ಓರ್ವ PSI, ASI ಭದ್ರತೆಗೆ ನಿಯೋಜನೆ ಮಾಡಲಾಗಿದೆ.


ಎಲ್ಲರ ಚಲನವಲನದ ಮೇಲೆ ನಿಗಾ


ಆಸ್ಪತ್ರೆಯ ಹೊರಗೂ ಸಿಎಆರ್ ತುಕಡಿ ನಿಯೋಜನೆ ಮಾಡಲಾಗಿದೆ. ಶಾರೀಕ್ ಕೊಠಡಿ ಪ್ರವೇಶದ ಬಳಿ ಮೆಟಲ್ ಡಿಟೆಕ್ಟರ್ ಅಳವಡಿಕೆ ಮಾಡಲಾಗಿದೆ. ಇನ್ನು ಆಸ್ಪತ್ರೆಗೆ ಬರುವ ರೋಗಿಗಳು ಮತ್ತು ರೋಗಿ ಸಂಬಂಧಿಕರು ಹಾಗೂ ಆಸ್ಪತ್ರೆ ಸಿಬ್ಬಂದಿ ಸೇರಿದಂತೆ ಎಲ್ಲಾ ಸಾರ್ವಜನಿಕರ ಮೇಲೆ ಚಲನವಲನದ ಮೇಲೆ ನಿಗಾ ಇರಿಸಲಾಗಿದೆ.


ಮೊಬೈಲ್​ನಲ್ಲಿರುವ ಮಾಹಿತಿ ಡಿಕೋಡಿಂಗ್


ಶಾರೀಕ್ ಮೊಬೈಲ್ ಜಾಲಾಡುತ್ತಿರುವ ಪೊಲೀಸರಿಗೆ ಬಿಗ್ ಶಾಕ್ ಎದುರಾಗಿದೆ. ಈಗಾಗಲೇ ಶಾರೀಕ್ ಮೊಬೈಲ್​ನಲ್ಲಿರುವ ಸಂಖ್ಯೆಗಳಿಗೆ ಫೋನ್ ಮಾಡಿ ಮಾಹಿತಿ ಕಲೆ ಹಾಕುತ್ತಿದ್ದಾರೆ. ಶಾರೀಕ್ ಮೊಬೈಲ್​ನಲ್ಲಿರುವ ಮಾಹಿತಿಯನ್ನು ಡಿಕೋಡ್​ ಮಾಡಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ.


ಇದನ್ನೂ ಓದಿ:  Mangaluru Blast: ಐಸಿಸ್​ ಸೇರಲು ಶಾರೀಕ್​​ ಯತ್ನ? ಬೆಂಗಳೂರಿನ ಅತ್ತೆ ಮನೆಯಲ್ಲಿ ವಾಸವಾಗಿದ್ನಾ ಉಗ್ರ?


ಐಸಿಸ್​ ಸೇರಲು ಯತ್ನ


ಶಾರೀಕ್ ಐಸಿಸ್ ಸೇರಲು ಆಸೆ ವ್ಯಕ್ತಪಡಿಸಿದ್ದ ಎಂಬ ಮಾಹಿತಿ ಲಭ್ಯವಾಗಿದೆ. ಕುಕ್ಕರ್ ಬಾಂಬ್ ಹಿಡಿದು ಫೋಟೋಗೆ ಫೋಸ್ ಕೊಟ್ಟಿದ್ದೇ ಈ ಕಾರಣಕ್ಕೆ ಎನ್ನಲಾಗ್ತಿದೆ. ಬಾಂಬ್ ಹಿಡಿದಿರುವ ಫೋಟೋ ವೈರಲ್ ಆಗಿದೆ.

Published by:Mahmadrafik K
First published: