• Home
  • »
  • News
  • »
  • state
  • »
  • Mangaluru Blast: ಶಾರೀಕ್ ‘ಹೆಜ್ಜೆ’ಗುರುತು ಪತ್ತೆ; ‘ಹಿಂದೂ’ಗಳಿಗೆ ಉಗ್ರಪಟ್ಟ ಕಟ್ಟಲು ಯತ್ನ!

Mangaluru Blast: ಶಾರೀಕ್ ‘ಹೆಜ್ಜೆ’ಗುರುತು ಪತ್ತೆ; ‘ಹಿಂದೂ’ಗಳಿಗೆ ಉಗ್ರಪಟ್ಟ ಕಟ್ಟಲು ಯತ್ನ!

ಉಗ್ರ ಶಾರೀಕ್

ಉಗ್ರ ಶಾರೀಕ್

ಶಾರೀಕ್​ ಪಡೀಲ್ ಬಸ್ ನಿಲ್ದಾಣದಲ್ಲಿ ಇಳಿದು ನಾಗುರಿಗೆ ನಡೆದು ಹೋದ ವಿಡಿಯೋ ನ್ಯೂಸ್ 18ಗೆ ಸಿಕ್ಕಿದೆ. ಇದರ ಮಧ್ಯೆ ಶಾರೀಕ್​ ಜೊತೆ ಮತ್ತೊಬ್ಬ ಮಂಗಳೂರಿಗೆ ಬಂದಿರುವ ಸಾಧ್ಯತೆಯೂ ವ್ಯಕ್ತವಾಗಿದೆ.

  • Share this:

Mangaluru Bomb Blast: ಶಂಕಿತ ಉಗ್ರ ಶಾರೀಕ್ (Sharik) ಬಾಂಬ್ ಇಡುವ ದಿನ ಬಹಳ ಚಂಚಲನಾಗಿದ್ದ ಎಂದು ತಿಳಿದು ಬಂದಿದೆ. ಮೈಸೂರಿನಿಂದ ಮಂಗಳೂರಿಗೆ (Mysuru To Mangaluru) ಬರುವಾಗ 3 ಬಸ್ ಬದಲಿಸಿದ್ದನು. ಮೈಸೂರಿನಿಂದ ಮಡಿಕೇರಿಗೆ, ಮಡಿಕೇರಿಯಿಂದ ಪುತ್ತೂರಿಗೆ, ಪುತ್ತೂರಿನಿಂದ ಮತ್ತೊಂದು ಬಸ್ ಬದಲಿಸಿರುವ ವಿಚಾರ ಬೆಳಕಿಗೆ ಬಂದಿದೆ. ಪುತ್ತೂರಿನಿಂದ ಪಂಪ್​​ವೆಲ್​​​ಗೆ ಟಿಕೆಟ್ ಪಡೆದು, ಪಡೀಲ್‌ನಲ್ಲೇ ಇಳಿದಿದ್ದನಂತೆ. ಬಳಿಕ ನಡೆದುಕೊಂಡೇ ಪಂಪ್​ವೆಲ್​ ಮಾರ್ಗವಾಗಿ ತೆರಳಿದ್ನಂತೆ. ಬಳಿಕ ರೈಲ್ವೇ ಜಂಕ್ಷನ್ ಬಳಿ ಪುರುಷೋತ್ತಮ್ ಅವರ ಆಟೋ ಹತ್ತಿದ್ದಾನೆ. ಆಗ ನಸೀಬು ಕೆಟ್ಟು ಕುಕ್ಕರ್ ಬಾಂಬ್ ಬ್ಲಾಸ್ಟ್ (Cooker Blast) ಆಗಿದೆ. ಶಾರೀಕ್​ ಪಡೀಲ್ ಬಸ್ ನಿಲ್ದಾಣದಲ್ಲಿ ಇಳಿದು ನಾಗುರಿಗೆ ನಡೆದು ಹೋದ ವಿಡಿಯೋ ನ್ಯೂಸ್ 18ಗೆ ಸಿಕ್ಕಿದೆ. ಇದರ ಮಧ್ಯೆ ಶಾರೀಕ್​ ಜೊತೆ ಮತ್ತೊಬ್ಬ ಮಂಗಳೂರಿಗೆ ಬಂದಿರುವ ಸಾಧ್ಯತೆಯೂ ವ್ಯಕ್ತವಾಗಿದೆ.


ಶಂಕಿತ ಉಗ್ರ ಶಾರೀಕ್​ ಪಂಪ್​​ವೆಲ್​ ಫ್ಲೈ ಓವರ್ ಬಳಿ ಕುಕ್ಕರ್ ಬಾಂಬ್ ಇಡೋಕೆ ಸಂಚು ರೂಪಿಸಿದ್ದ ಎನ್ನಲಾಗಿದೆ. ಯಾಕಂದ್ರೆ ಪಂಪ್​ವೆಲ್ ಫ್ಲೈ ಓವರ್ ಕೆಳಗಿನ ರಸ್ತೆಯಲ್ಲಿ ಸಂಜೆ ವೇಳೆ ಹೆಚ್ಚಿನ ಜನಸಂದಣಿ ಇರುತ್ತೆ.


ಕೋಣಾಜೆ-ತೊಕ್ಕೊಟ್ಟು-ಉಳ್ಳಾಲ ಭಾಗಕ್ಕೆ ತೆರಳುವ ಜನ ಇದೇ ಮಾರ್ಗ ಬಳಸ್ತಾರೆ. ಅಲ್ಲಿ ಸ್ಫೋಟ ಸಂಭವಿಸಿದ್ರೆ ಅಪಾರ ಸಾವು-ನೋವು ಸಂಭವಿಸುತ್ತೆ ಎಂದು ಶಾರೀಕ್ ಲೆಕ್ಕಾಚಾರ ಹಾಕಿದ್ದ ಎನ್ನಲಾಗಿದೆ.


ಹಿಂದೂ ಭಯೋತ್ಪಾದಕ ಅಂತ ಬಿಂಬಿಸಲು ಯತ್ನ


ಶಂಕಿತ ಉಗ್ರ ಶಾರೀಕ್​​ ಬಾಂಬ್​ ಬ್ಲಾಸ್ಟ್ ಮಾಡಿ, ಹಿಂದೂ ಭಯೋತ್ಪಾದಕ ಎಂದು ಬಿಂಬಿಸಿಕೊಳ್ಳಲು ಯತ್ನಿಸಿದ್ದ ಅನ್ನೋದು ಅವರ ಉಡುಗೆ ತೊಡುಗೆ ಮತ್ತು ನಕಲಿ ಆಧಾರ್ ಕಾರ್ಡ್​ ಹೇಳುತ್ತದೆ. ಯಾಕಂದ್ರೆ ಕುಕ್ಕರ್ ಬಾಂಬ್ ಜೊತೆಗೆ ಪೋಸ್​ ಕೊಟ್ಟಾಗ ಶಾರೀಕ್ ಗಡ್ಡ ಬೆಳೆಸಿದ್ದ.


ಆದರೆ ಬ್ಲಾಸ್ಟ್ ಮಾಡುವ ಸಂದರ್ಭದಲ್ಲಿ ಕ್ಲೀನ್ ಶೇವ್ ಮಾಡಿದ್ದ. ಗಡ್ಡ ಮಾತ್ರವಲ್ಲದೇ ದೇಹವನ್ನು ಶೇವ್ ಮಾಡಿದ್ದ. ಪರ್ಸ್​ನಲ್ಲಿ ಹಿಂದೂ ಹೆಸರಿನ ಆಧಾರ್ ಕಾರ್ಡ್, ಕೇಸರಿ ಮಿಶ್ರಿತ ಶರ್ಟ್ ಧರಿಸಿದ್ದ. ಮೊಬೈಲ್​ನಲ್ಲಿ ಈಶಾ ಫೌಂಡೇಷನ್​ನ ಈಶನ ಪೋಟೋ ಸಿಕ್ಕಿವೆ.


50ಕ್ಕೂ ಹೆಚ್ಚು ಜನರ ಹೇಳಿಕೆ ದಾಖಲು


ಮೈಸೂರಲ್ಲಿ 3 ಪ್ರತ್ಯೇಕ ತಂಡಗಳು ಶಾರೀಕ್ ಓಡಾಡಿದ್ದ ಜಾಗ, ವಸ್ತುಗಳನ್ನ ಖರೀದಿ ಮಾಡಿದ್ದ ಅಂಗಡಿಯನ್ನು ಪರಿಶೀಲಿಸಿವೆ. ಶಾರೀಕ್ ಓಡಾಡಿದ ಆಟೋ, ಓಲಾ ಕ್ಯಾಬ್ ಚಾಲಕರನ್ನ ವಿಚಾರಣೆಗೆ ಒಳಪಡಿಸಲಾಗಿದೆ. ಈವರೆಗೆ 50ಕ್ಕೂ ಹೆಚ್ಚು ಜನರ ಹೇಳಿಕೆ ದಾಖಲಿಸಿಕೊಳ್ಳಲಾಗಿದೆ.


ಇದನ್ನೂ ಓದಿ:  Mangaluru Blast: ಸೋದರಿಯರ ಖಾತೆಗೆ ಲಕ್ಷ ಲಕ್ಷ ಹಣ ವರ್ಗಾವಣೆ; ವಿದೇಶದಿಂದ ಫಂಡಿಂಗ್ ಆಗಿತ್ತಾ?


ಎಲ್ಲೆಲ್ಲಿ 150 ಬೆಂಕಿಪೊಟ್ಟಣ, ವೈರ್, ಮಿಕ್ಸಿ ಜಾರ್, ಗ್ರೈಂಡರ್ ಖರೀದಿಸಿದ್ನೋ ಆ ಅಂಗಡಿಗಳ ಮಾಲೀಕರನ್ನೂ ವಿಚಾರಣೆ ಮಾಡಲಾಗಿದೆ. ಕೆಲ ವಸ್ತುಗಳನ್ನು ಶಾರೀಕ್ ಆನ್​ಲೈನ್ ಮುಲಕ ತರಿಸಿಕೊಂಡಿರೋ ಮಾಹಿತಿ ಸಿಕ್ಕಿದೆ. ಇನ್ನೂ ಕೆಲ ವಸ್ತುಗಳನ್ನ ಕೊಯಮತ್ತೂರಿನಿಂದ್ಲೂ ತಂದಿದ್ದಾನೆ ಎನ್ನಲಾಗ್ತಿದೆ.


ಸ್ಪೋಟಕ ವಸ್ತುಗಳು ಪತ್ತೆ


ಶಾರೀಕ್ ಮನೆಯಲ್ಲಿ ಕಂದು, ಬಿಳಿ, ಕೆಂಪು ಬಣ್ಣದ ಪೌಡರ್, ಒಂದು ಇಂಡಕ್ಷನ್ ಸ್ಟೌ, ಅಲ್ಯೂಮಿನಿಯಂ ಫಾಯ್ಲ್, ಹಳದಿ ಬಣ್ಣದ ಲೈಟರ್, ಸೆಲ್ಲೋ ಟೇಪ್ & ಪೇಪರ್ ರಾಪರ್, 3 ಪಾತ್ರೆ, 1 ತಟ್ಟೆ, 1 ಚೊಂಬು, 472 ಗ್ರಾಂ ಚಿಕ್ಕ ಬೋಲ್ಟ್​ಗಳು, ಸರ್ಜಿಕಲ್ ಗ್ಲೌಸ್​ಗಳು, ಅಲ್ಯೂಮಿನಿಯಂ ಪೇಪರ್​ಗಳು, ಪೈಪ್​ಗಳು, ಬೆಂಕಿ ಕಡ್ಡಿ ಮಿಶ್ರಿತ ಪುಡಿ, ಗ್ರೈಂಡರ್, ಸಲ್ಫರ್, ಕಾಂಕ್ರೀಟ್ ಕಲ್ಲು, 150 ಬೆಂಕಿಪೊಟ್ಟಣ, 4 ಮೊಬೈಲ್ ಬ್ಯಾಟರಿ, ಮೊಬೈಲ್ ಸ್ಪೇರ್ ಪಾರ್ಟ್ಸ್, ಟೈಮರ್, AK 47ನಂತೆ ಕಾಣುವ ಗನ್, ಪ್ಲಾಸ್ಟಿಕ್ ಗುಂಡುಗಳು ಸಿಕ್ಕಿವೆ ಎಂದು ತಿಳಿದು ಬಂದಿದೆ.


ಇದನ್ನೂ ಓದಿ:  Cheating Case: ನಿನ್ನನ್ನೇ ಮದ್ವೆ ಆಗ್ತೀನಿ, IAS ಸೆಲೆಕ್ಟ್ ಆಯ್ತು ಅಂತೇಳಿ 40 ಲಕ್ಷ ಪಂಗನಾಮ ಹಾಕಿದ ಯುವತಿ


ಮಂಗಳೂರು, ಮೈಸೂರು ಮಾತ್ರವಲ್ಲ ಶಿವಮೊಗ್ಗ, ಕೊಯಮತ್ತೂರು, ಕೇರಳಕ್ಕೂ ತೆರಳಿರೋ ಪೊಲೀಸರು ಮಾಹಿತಿ ಸಂಗ್ರಹಿಸ್ತಿದ್ದಾರೆ. ಸಿಡಿಆರ್ ಹಾಗೂ ಟವರ್ ಲೊಕೇಷನ್ ಮಾಹಿತಿ ಸಂಗ್ರಹಿಸ್ತಿದ್ದಾರೆ.


ಕೇಂದ್ರ ಗೃಹ ಸಚಿವಾಲಯ ನಿನ್ನೆ ಶಾರೀಕ್ ಕುರಿತು ವರದಿ ಪಡೆದಿದ್ದು,​ ಚೇತರಿಕೆ ಕಂಡ್ರೆ ಮಾಹಿತಿ ಪಡೆಯಲು 8 ತಂಡಗಳು ಕಾಯ್ತಿವೆ.

Published by:Mahmadrafik K
First published: