ಮಂಗಳೂರು ಕುಕ್ಕರ್ ಬಾಂಬ್ ಬ್ಲಾಸ್ಟ್ (Managluru Cooker Blast) ಪ್ರಕರಣದಲ್ಲಿ ಗಂಭೀರವಾಗಿ ಗಾಯಗೊಂಡು ಚಿಕಿತ್ಸೆ ಪಡೆದುಕೊಳ್ಳುತ್ತಿರುವ ಶಂಕಿತ ಉಗ್ರ ಶಾರೀಕ್ (Sharik) ಹತ್ಯೆಗೆ ಸಂಚು ರೂಪಿಸಲಾಗಿದೆಯಾ ಅನ್ನೋ ಅನುಮಾನ ಮೂಡಿದೆ. ಸದ್ಯ ಶಾರೀಕ್ಗೆ ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇದೀಗ ಶಾರೀಕ್ ಚಿಕಿತ್ಸೆ ಪಡೆದುಕೊಳ್ಳುತ್ತಿರುವ ಆಸ್ಪತ್ರೆ ಮತ್ತು ವಾರ್ಡ್ ಬಳಿಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ (Police Protection) ಏರ್ಪಡಿಸಲಾಗಿದೆ. ಹ್ಯಾಂಡ್ಲರ್ಸ್, ಸ್ಲೀಪರ್ ಸೆಲ್ಗಳನ್ನು ಌಕ್ಟಿವ್ ಮಾಡಿ ದಾಳಿ ನಡೆಸುವ ಶಂಕೆ ಹಿನ್ನೆಲೆ ಪೊಲೀಸ್ ಭದ್ರತೆ ಹೆಚ್ಚಿಸಲಾಗಿದೆ ಎಂದು ತಿಳಿದು ಬಂದಿದೆ. ಶಾರೀಕ್ ಇರುವ ವಾರ್ಡ್ ಬಳಿ ಪೊಲೀಸರು ಹೈ ಅಲರ್ಟ್ ಆಗಿದ್ದಾರೆ. ಒಬ್ಬ ಇನ್ಸ್ಪೆಕ್ಟರ್, ಓರ್ವ PSI, ASI ಭದ್ರತೆಗೆ ನಿಯೋಜನೆ ಮಾಡಲಾಗಿದೆ.
ಆಸ್ಪತ್ರೆಯ ಹೊರಗೂ ಸಿಎಆರ್ ತುಕಡಿ ನಿಯೋಜನೆ ಮಾಡಲಾಗಿದೆ. ಶಾರೀಕ್ ಕೊಠಡಿ ಪ್ರವೇಶದ ಬಳಿ ಮೆಟಲ್ ಡಿಟೆಕ್ಟರ್ ಅಳವಡಿಕೆ ಮಾಡಲಾಗಿದೆ. ಇನ್ನು ಆಸ್ಪತ್ರೆಗೆ ಬರುವ ರೋಗಿಗಳು ಮತ್ತು ರೋಗಿ ಸಂಬಂಧಿಕರು ಹಾಗೂ ಆಸ್ಪತ್ರೆ ಸಿಬ್ಬಂದಿ ಸೇರಿದಂತೆ ಎಲ್ಲಾ ಸಾರ್ವಜನಿಕರ ಮೇಲೆ ಚಲನವಲನದ ಮೇಲೆ ನಿಗಾ ಇರಿಸಲಾಗಿದೆ.
ಮೊಬೈಲ್ನಲ್ಲಿರುವ ಮಾಹಿತಿ ಡಿಕೋಡಿಂಗ್
ಶಾರೀಕ್ ಮೊಬೈಲ್ ಜಾಲಾಡುತ್ತಿರುವ ಪೊಲೀಸರಿಗೆ ಬಿಗ್ ಶಾಕ್ ಎದುರಾಗಿದೆ. ಈಗಾಗಲೇ ಶಾರೀಕ್ ಮೊಬೈಲ್ನಲ್ಲಿರುವ ಸಂಖ್ಯೆಗಳಿಗೆ ಫೋನ್ ಮಾಡಿ ಮಾಹಿತಿ ಕಲೆ ಹಾಕುತ್ತಿದ್ದಾರೆ. ಶಾರೀಕ್ ಮೊಬೈಲ್ನಲ್ಲಿರುವ ಮಾಹಿತಿಯನ್ನು ಡಿಕೋಡ್ ಮಾಡಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ.
ಮೊಬೈಲ್ನಲ್ಲಿ ಅಶ್ಲೀಲ ವಿಡಿಯೋಗಳು
ಶಾರೀಕ್ ಮೊಬೈಲ್ನಲ್ಲಿ ಅಶ್ಲೀಲ ವಿಡಿಯೋಗಳು ಪತ್ತೆಯಾಗಿವೆ ಎಂದು ತಿಳಿದು ಬಂದಿದೆ. ಇದರ ಜೊತೆಗೆ ಉಗ್ರ ತರಬೇತಿಯ ಸಾವಿರಕ್ಕೂ ಅಧಿಕ ವಿಡಿಯೋಗಳು ಶಾರೀಕ್ ಮೊಬೈಲ್ ಮತ್ತು ಪೆನ್ಡ್ರೈವ್ನಲ್ಲಿ ಪತ್ತೆಯಾಗಿವೆ ಎಂದು ತಿಳಿದು ಬಂದಿದೆ. ಈ ವಿಡಿಯೋಗಳಲ್ಲಿ ಬಾಂಬ್ ತಯಾರಿಕೆ, ಪ್ರಚೋದನೆ, ಐಸಿಸ್, ಅಲ್ಖೈದ್ ಸಂದೇಶಗಳಿವೆ ಎನ್ನಲಾಗಿದೆ. ಇನ್ನು ಬಹುತೇಕ ಸೆಲ್ಫಿ ಫೋಟೋ ಮತ್ತು ವಿಡಿಯೋಗಳಿವೆ ಎನ್ನಲಾಗಿದೆ.
ಮೊಬೈಲ್ ರಿಪೇರಿ ತರಬೇತಿಗೆ ಸೇರಿದ್ಯಾಕೆ?
ಇನ್ನು ಶಾರೀಕ್ ತನಗೆ ಬೇಕಾದ ಹಾಗೆ ಮೊಬೈಲ್ಗಳನ್ನು ಪರಿವರ್ತನೆ ಮಾಡಿಕೊಳ್ಳಲು ತರಬೇತಿಗೆ ಸೇರಿದ್ದನಂತೆ. ಕಳೆದ 45 ದಿನಗಳಲ್ಲಿ ಐದಾರು ಮೊಬೈಲ್ ಬಳಕೆ ಮಾಡಿದ್ದ ಎಂದು ತಿಳಿದು ಬಂದಿದೆ. ಒಂದು ಮೊಬೈಲ್ನ್ನು 15 ದಿನ ಬಳಸಿ ನಂತರ ಮಾರಾಟ ಮಾಡುತ್ತಿದ್ದನು. ತದನಂತರ ಮತ್ತೆ ಸೆಕೆಂಡ್ ಹ್ಯಾಂಡ್ ಮೊಬೈಲ್ ಖರೀದಿಸುತ್ತಿರುವ ವಿಚಾರ ಬೆಳಕಿಗೆ ಬಂದಿದೆ.
ಬೇರೆಯವರ ಮೊಬೈಲ್ನಿಂದ ಹಣ ವರ್ಗಾವಣೆ
ಇನ್ನು ಯಾರಾದ್ರೂ ಪರಿಚಯವಾದ್ರೆ ಅವರ ಮೊಬೈಲ್ ಸಂಖ್ಯೆಗೆ ಹಣ ಹಾಕಿಸಿಕೊಳ್ಳುತ್ತಿದ್ದನು. ತನ್ನ ಮೊಬೈಲ್ಗೆ ಹಣ ಬರುತ್ತಿಲ್ಲ ಎಂದು ಸುಳ್ಳು ಹೇಳಿ ಅನ್ಯರ ಮೊಬೈಲ್ನಲ್ಲಿಯೇ ಆನ್ಲೈನ್ ವ್ಯವಹಾರ ಮಾಡುತ್ತಿದ್ದ ಎಂದು ತಿಳಿದು ಬಂದಿದೆ.
ಟಿವಿ ನೋಡೋಕೆ ಬಿಡುತ್ತಿರಲಿಲ್ಲ
ಶಾರೀಕ್ ತೀರ್ಥಹಳ್ಳಿಯ ಮನೆಯಲ್ಲಿದ್ದಾಗ ಕುಟುಂಬಸ್ಥರು ಟಿವಿಯಲ್ಲಿ ಮನರಂಜನೆ ಕಾರ್ಯಕ್ರಮಗಳನ್ನ ನೋಡೋಕೆ ಬಿಡ್ತಿರಲಿಲ್ಲ. ಷರಿಯಾ ಮನಸ್ಥಿತಿ ಹೊಂದಿದ್ದ ಶಾರೀಕ್ ನಾಲ್ಕು ವರ್ಷಗಳಿಂದ ನಡವಳಿಕೆಯನ್ನೇ ಬದಲಿಸಿಕೊಂಡಿದ್ದನು. ಕುಟುಂಬಸ್ಥರನ್ನು ವಿಚಾರಣೆಗೆ ಒಳಪಡಿಸಿದಾಗ ಈ ಮಾಹಿತಿ ಲಭ್ಯವಾಗಿದೆ.
ಶಾರೀಕ್ ಐಸಿಸ್ ಸೇರಲು ಆಸೆ ವ್ಯಕ್ತಪಡಿಸಿದ್ದ ಎಂಬ ಮಾಹಿತಿ ಲಭ್ಯವಾಗಿದೆ. ಕುಕ್ಕರ್ ಬಾಂಬ್ ಹಿಡಿದು ಫೋಟೋಗೆ ಫೋಸ್ ಕೊಟ್ಟಿದ್ದೇ ಈ ಕಾರಣಕ್ಕೆ ಎನ್ನಲಾಗ್ತಿದೆ.
ಇದನ್ನೂ ಓದಿ: Mangaluru Blast: ಐಸಿಸ್ ಸೇರಲು ಶಾರೀಕ್ ಯತ್ನ? ಬೆಂಗಳೂರಿನ ಅತ್ತೆ ಮನೆಯಲ್ಲಿ ವಾಸವಾಗಿದ್ನಾ ಉಗ್ರ?
ಮಂಗಳೂರು ಕುಕ್ಕರ್ ಬ್ಲಾಸ್ಟ್ ಪ್ರಕರಣವನ್ನು ನಮ್ಮ ಪೊಲೀಸರು ಸರಿಯಾದ ರೀತಿಯಲ್ಲಿ ತನಿಖೆ ನಡೆಸಿದ್ದಾರೆ. ಘಟನೆಗೆ ಸಂಬಂಧಿಸಿದ ಸಾಕ್ಷ್ಯಾಧಾರ ಸಂಗ್ರಹಿಸಿದ್ದಾರೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ