Mangaluru Cooker Bomb Blast: ಮಂಗಳೂರು ಕುಕ್ಕರ್ ಬಾಂಬ್ ಸ್ಘೋಟದ ಶಂಕಿತ ಉಗ್ರ ಶಾರೀಕ್ ಕುರಿತು ದಿನಕ್ಕೊಂದು ಸ್ಫೋಟಕ ಮಾಹಿತಿ ಹೊರ ಬರ್ತಿದೆ. ಶಂಕಿತ ಉಗ್ರ ಶಾರೀಕ್ (Sharik) ಉಡುಪಿಯ ಶ್ರೀಕೃಷ್ಣಮಠಕ್ಕೂ (Krishna Mutt) ಬಂದಿದ್ದ ಎಂದು ಹೇಳಲಾಗುತ್ತಿದೆ. ಹೀಗಾಗಿ ಮಂಗಳೂರು ಪೊಲೀಸರು (Mangaluru Police), ಕೃಷ್ಣ ಮಠಕ್ಕೆ ಭೇಟಿ ನೀಡಿ ಮಾಹಿತಿ ಕಲೆ ಹಾಕುತ್ತಿದ್ದಾರೆ. ಅಕ್ಟೋಬರ್ 11ರಂದು ಕೃಷ್ಣಮಠ ಹಾಗೂ ರಥಬೀದಿಯಲ್ಲಿ (Rathabidi) ಶಾರೀಕ್ ಸುತ್ತಾಡಿರುವ ಬಗ್ಗೆಯೂ ತಿಳಿದು ಬಂದಿದೆ. ರಥಬೀದಿ ಸ್ಥಳದಿಂದ ಶಾರೀಕ್ ಮೊಬೈಲ್ನಿಂದ (Sharik Mobile) ಕರೆ ಮಾಡಲಾಗಿದೆ. ಫೋನ್ ಕರೆಯಿಂದಾಗಿ ಪೊಲೀಸರಿಗೆ ಈ ವಿಷಯ ಗೊತ್ತಾಗಿದೆ. ಮಾನಸಿಕ ಅಸ್ವಸ್ಥ ಮಹಿಳೆಯೊಬ್ಬರು ಶಾರೀಕ್ಯಿಂದ ಮೊಬೈಲ್ ಪಡೆದು ಕರೆ ಮಾಡಿದ್ದಾರೆ. ಹೀಗಾಗಿ ಉಡುಪಿಯ ರಥಬೀದಿ ಆಸುಪಾಸಿನ ಸಿಸಿಟಿವಿ ಫೂಟೇಜ್ (CCTV Footage) ಮಂಗಳೂರು ಪೊಲೀಸರು ಪರಿಶೀಲನೆ ನಡೆಸಿದ್ರು. ದುರದೃಷ್ಟವಶಾತ್ ಪೊಲೀಸರಿಗೆ ಯಾವುದೇ ದೃಶ್ಯಾವಳಿ ಲಭ್ಯವಾಗಿಲ್ಲ.
ಉಡುಪಿಯಲ್ಲಿ ಸ್ಯಾಟ್ಲೈಟ್ ಫೋನ್
ಇನ್ನು ಉಡುಪಿಯಲ್ಲೂ ಸ್ಯಾಟ್ಲೈಟ್ ಫೋನ್ ಸಕ್ರಿಯವಾಗಿದ್ಯಾ ಅನ್ನೋ ಪ್ರಶ್ನೆ ಎಂದಿದೆ. ಯಾಕಂದ್ರೆ ಮಂದಾರ್ತಿ ಸಮೀಪದ ಅರಣ್ಯ ಪ್ರದೇಶದಲ್ಲಿ ನವೆಂಬರ್ 9ರಂದು ಸ್ಯಾಟಲೈಟ್ ಫೋನ್ ಆ್ಯಕ್ಟಿವ್ ಆಗಿರೋದು ಪತ್ತೆಯಾಗಿದೆ.
ಮಂದಾರ್ತಿ ದೇವಸ್ಥಾನದಿಂದ ಸುಮಾರು ಒಂದೂವರೆ ಕಿಲೋ ಮೀಟರ್ ದೂರದಲ್ಲಿ ಸ್ಯಾಟಲೈಟ್ ಫೋನ್ ಆ್ಯಕ್ಟಿವ್ ಆಗಿದೆ. ಹೀಗಾಗಿ ಉಗ್ರರ ಕರಿಚಾಯೆ ಕೃಷ್ಣನಗರಿ ಉಡುಪಿ ಮೇಲೂ ಬಿದ್ದಿದೆ.
ಈ ಕುರಿತು ರಾಜ್ಯ ಆಂತರಿಕ ಭದ್ರತಾ ವಿಭಾಗದಿಂದ ಜಿಲ್ಲಾ ಆಂತರಿಕ ವಿಭಾಗಕ್ಕೆ ಮಾಹಿತಿ ನೀಡಲಾಗಿದೆ. 2020 ರಲ್ಲೂ ಜಿಲ್ಲೆಯಲ್ಲಿ ಸ್ಯಾಟಲೈಟ್ ಫೋನ್ ಸದ್ದು ಮಾಡಿತ್ತು.
ಬೆಂಗಳೂರಿನಲ್ಲಿ ಗರ್ಲ್ ಫ್ರೆಂಡ್
ಶಾರೀಕ್ ವಾಟ್ಸಪ್ ಪರಿಶೀಲನೆ ನಡೆಸಿದಾಗ ಆತನಿಗೆ ಬೆಂಗಳೂರಿನಲ್ಲಿ ಒಬ್ಬಳು ಗರ್ಲ್ಫ್ರೆಂಡ್ ಇರೋ ವಿಷಯ ಬೆಳಕಿಗೆ ಬಂದಿದೆ. ಶಾರೀಕ್ ಈ ಯುವತಿ ವಾಟ್ಸಪ್ನಲ್ಲಿ ಸಂಪರ್ಕದಲ್ಲಿದ್ದ ಎಂಬ ವಿಷಯ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಬೆಂಗಳೂರಿನ ಅಮೃತಹಳ್ಳಿಯ ಅಪಾರ್ಟ್ಮೆಂಟ್ನಲ್ಲಿ ಯುವತಿ ವಾಸವಾಗಿದ್ದಾಳೆ. ಬೆಂಗಳೂರಿಗೆ ಬಂದಾಗ ಶಾರೀಕ್ ಯುವತಿ ಜೊತೆ ಸುತ್ತಾಡುತ್ತಿದ್ದನು. ಶಾಪಿಂಗ್ ಮಾಡಿಸುವ ನೆಪದಲ್ಲಿ ಯುವತಿ ಶಾರೀಕ್ ಸುತ್ತಾಡುತ್ತಿದ್ದನು.
ಇದನ್ನೂ ಓದಿ: Mangaluru Blast: ಮೈಸೂರಿನಲ್ಲಿ ಕುಕ್ಕರ್ ಬಾಂಬ್ ರೆಡಿ ; ಶಾರೀಕ್ ಕತೆ ಬಿಚ್ಚಿಟ್ಟ ಅಲೋಕ್ ಕುಮಾರ್
ಯುವತಿಯ ವಿಚಾರಣೆ
ಬೆಂಗಳೂರಿಗೆ ಬಂದ ಪ್ರತಿಬಾರಿಯೂ ಶಾರೀಕ್ ಯುವತಿಯನ್ನು ಭೇಟಿಯಾಗುತ್ತಿದ್ದನು. ಈ ಹಿನ್ನೆಲೆ ರಾಜ್ಯ ಹಾಗೂ ಕೇಂದ್ರ ತನಿಖಾ ತಂಡಗಳು ಯುವತಿಯನ್ನು ವಿಚಾರಣೆಗೆ ಒಳಪಡಿಸಿವೆ. ವಿಚಾರಣೆ ವೇಳೆ ಸ್ಪೋಟದಲ್ಲಿ ಯಾಕೆ ಪಾತ್ರ ಇಲ್ಲ ಎಂಬುವುದು ಮೇಲ್ನೋಟಕ್ಕೆ ಕಂಡು ಬಂದ ಹಿನ್ನೆಲೆ ಯುವತಿಯನ್ನು ಹೇಳಿಕೆ ಪಡೆದು ಕಳುಹಿಸಲಾಗಿದೆ ಎಂದು ತಿಳಿದು ಬಂದಿದೆ.
ಮಂಗಳೂರಲ್ಲಿ ಕುಕ್ಕರ್ ಬಾಂಬ್ ಬ್ಲಾಸ್ಟ್ ಪ್ರಕರಣದ ತನಿಖೆ ಚುರುಕಾಗಿದೆ. ಶಾರೀಕ್ ಸ್ಫೋಟಕ ಸಂಚಿನ ಮಾಹಿತಿಗಳು ಬಗೆದಷ್ಟೂ ಹೊರ ಬರುತ್ತಿವೆ. ಶಾರೀಕ್ ಮೊಬೈಲ್ ರಿಪೇರಿ ತರಬೇತಿ ತರಗತಿಗೆ ಸೇರಿದ್ದರ ಹಿಂದೆ ಬೇರೆ ಪ್ಲ್ಯಾನ್ ಇತ್ತಂತೆ. ಸ್ಫೋಟಕ್ಕೆ ವಸ್ತುಗಳ ಖರೀದಿಸೋಕೆಂದೇ ಕ್ಲಾಸ್ಗೆ ಸೇರಿರೋ ಶಂಕೆ ವ್ಯಕ್ತವಾಗಿದೆ.
ಇದನ್ನೂ ಓದಿ: Mangaluru Blast: ಶಂಕಿತ ಉಗ್ರ ಸೂಸೈಡ್ ಬಾಂಬರ್ ಆಗಿದ್ನಾ?
ಮೈಸೂರಿನ ಕೆ.ಟಿ ಸ್ಟ್ರೀಟ್ನಲ್ಲಿ ಸೆಕೆಂಡ್ ಹ್ಯಾಂಡ್ ಮೊಬೈಲ್ ಖರೀದಿಸಿ, ಆ ಮೊಬೈಲ್ಗಳಲ್ಲಿದ್ದ ಹಲವು ಸಿಮ್ಗಳನ್ನು ಬಳಸಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.
ಹ್ಯಾಂಡಲರ್ಗಳಿಗೆ ಫೋಟೋ ಕಳುಹಿಸಿದ್ದ ಶಾರೀಕ್
ಬಾಂಬ್ ಸ್ಫೋಟಕ್ಕೂ ಮುನ್ನ ಶಾರೀಕ್ ಜಿಹಾದ್ ಸಂಬಂಧ ವಿಡಿಯೋ ಮಾಡಿ ತನ್ನ ಹ್ಯಾಂಡ್ಲರ್ಗಳಿಗೆ ಕಳುಹಿಸಿದ್ದನಂತೆ. ಕುಕ್ಕರ್ ಬಾಂಬ್ ಹಿಡಿದುಕೊಂಡು ತೆಗೆಸಿಕೊಂಡ ಫೋಟೋವನ್ನೂ ಹ್ಯಾಂಡ್ಲರ್ಗೆ ಕಳುಹಿಸಿದ್ದ ಎಂಬ ಮಾಹಿತಿ ಲಭ್ಯವಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ