ಮಂಗಳೂರು ಬಾಂಬ್​ ಪತ್ತೆ ಪ್ರಕರಣ: ಸೈಬರ್ ಪೊಲೀಸ್​​​​ ವಶಕ್ಕೆ ಆರೋಪಿ ಆದಿತ್ಯರಾವ್

ಮೂರು ದಿನಗಳ ಹಿಂದೆಯಷ್ಟೇ ಮಂಗಳೂರು(ಜ.23) ನ್ಯಾಯಲಯವೂ ಆರೋಪಿ ಆದಿತ್ಯರಾವ್​​ನನ್ನು 10 ದಿನಗಳ ಕಾಲ ಪೊಲೀಸರ ವಶಕ್ಕೆ ಒಪ್ಪಿಸಿತ್ತು. ಬೆಂಗಳೂರಿನಿಂದ ಮಂಗಳೂರಿಗೆ ಕರೆತಂದ ಪೊಲೀಸರು ಆದಿತ್ಯರಾವ್​​ನನ್ನು ಇಲ್ಲಿನ ಪ್ರಥಮ ದರ್ಜೆ 6ನೇ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದರು.

ಆದಿತ್ಯ ರಾವ್​

ಆದಿತ್ಯ ರಾವ್​

 • Share this:
  ಬೆಂಗಳೂರು(ಜ.26): ಮಂಗಳೂರು ವಿಮಾನ ನಿಲ್ದಾಣ ಬಾಂಬ್​​ ಪತ್ತೆ ಪ್ರಕರಣದಲ್ಲಿ ಪೊಲೀಸರ ವಶದಲ್ಲಿರುವ ಆರೋಪಿ ಆದಿತ್ಯರಾವ್​​ನನ್ನು ಸೈಬರ್​​​ ಪೊಲೀಸ್​​ ಕಸ್ಟಡಿಗೆ ನೀಡಲಾಗಿದೆ. ಈಗಾಗಲೇ ತನಿಖೆ ಆರಂಭಿಸಿರುವ ಸೈಬರ್​​ ಪೊಲೀಸರು ಆದಿತ್ಯರಾವ್​​ನನ್ನು ಇನ್ನೂ ಮಹಜರಿಗೆ ಕರೆದುಕೊಂಡು ಹೋಗಿಲ್ಲ. ಆದರೆ, ಆದಿತ್ಯರಾವ್​​​ ಕಂಪ್ಯೂಟರ್ ಬಳಸಿ ಹೇಗೆ ಆನ್‌ಲೈನ್‌ನಲ್ಲಿ ಸ್ಫೋಟಕ ತಯಾರಿಕೆ ಬಗ್ಗೆ ಜಾಲಾಡಿದ್ದ ಎಂಬುದರ ಸುತ್ತ ತನಿಖೆ ಮಾಡುತ್ತಿದ್ದಾರೆ. ಆನ್‌ಲೈನ್ ಮೂಲಕ ಸ್ಫೋಟಕ ಸಾಮಗ್ರಿಗಳನ್ನು ಖರೀದಿಸಲು ಯಾರಿಗೆ ಇಮೇಲ್​​​ ಕಳುಹಿಸಿದ್ದ ಎಂಬ ಬಗ್ಗೆಯೂ ಸೈಬರ್ ಪೊಲೀಸರು ವಿಸ್ತೃತವಾಗಿ ವಿಚಾರಣೆ ನಡೆಸುತ್ತಿದ್ದಾರೆ ಎನ್ನಲಾಗುತ್ತಿದೆ.

  ಮೂರು ದಿನಗಳ ಹಿಂದೆಯಷ್ಟೇ ಮಂಗಳೂರು(ಜ.23) ನ್ಯಾಯಲಯವೂ ಆರೋಪಿ ಆದಿತ್ಯರಾವ್​​ನನ್ನು 10 ದಿನಗಳ ಕಾಲ ಪೊಲೀಸರ ವಶಕ್ಕೆ ಒಪ್ಪಿಸಿತ್ತು. ಬೆಂಗಳೂರಿನಿಂದ ಮಂಗಳೂರಿಗೆ ಕರೆತಂದ ಪೊಲೀಸರು ಆದಿತ್ಯರಾವ್​​ನನ್ನು ಇಲ್ಲಿನ ಪ್ರಥಮ ದರ್ಜೆ 6ನೇ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದರು. ಈ ವೇಳೆ 10 ದಿನಗಳ ಪೊಲೀಸರ ವಶಕ್ಕೆ ಒಪ್ಪಿಸಿ ನ್ಯಾಯಾಧೀಶ ಕೆ.ಎನ್. ಕಿಶೋರ್ ಕುಮಾರ್​ ಆದೇಶ ಹೊರಡಿಸಿದ್ದರು.

  ಇತ್ತೀಚೆಗೆ ಮಂಗಳೂರು ಏರ್​ಪೋರ್ಟ್​ನಲ್ಲಿ ಸಜೀವ ಬಾಂಬ್ ಇರುವ ಬ್ಯಾಗ್ ಪತ್ತೆಯಾಗಿತ್ತು. ಈ ಕಾರಣ ವಿಮಾನಗಳ ಹಾರಾಟದಲ್ಲಿ ಕೆಲ ಕಾಲ ವ್ಯತ್ಯಯ ಉಂಟಾಗಿತ್ತು. ಏರ್​​ಪೋರ್ಟ್​ನಲ್ಲಿದ್ದ ಪ್ರಯಾಣಿಕರನ್ನು ಸುರಕ್ಷಿತ ಸ್ಥಳಕ್ಕೆ ರವಾನಿಸಲಾಗಿತ್ತು. ಈ ಬಗ್ಗೆ ಸಿಸಿಟಿವಿ ಪರಿಶೀಲಿಸಿದಾಗ ಆಟೋದಲ್ಲಿ ಬಂದಿದ್ದ ವ್ಯಕ್ತಿಯೋರ್ವ ಆ ಬ್ಯಾಗ್ ಅನ್ನು ವಿಮಾನ ನಿಲ್ದಾಣದಲ್ಲೇ ಬಿಟ್ಟು ಹೋಗಿದ್ದು ಕಂಡು ಬಂದಿತ್ತು. ನಂತರ ಬಾಂಬ್ ನಿಷ್ಕ್ರಿಯ ದಳದವರು ಆ ಬಾಂಬನ್ನು ಕೆಂಜಾರು ಮೈದಾನಕ್ಕೆ ತೆಗೆದುಕೊಂಡು ಹೋಗಿ, ಸ್ಫೋಟಿಸಲಾಗಿತ್ತು. ಇದರಿಂದಾಗಿ ಭಾರೀ ಅಪಾಯವೊಂದು ತಪ್ಪಿತ್ತು.

  ಇದನ್ನೂ ಓದಿ: ಮಂಗಳೂರು ಬಾಂಬ್​ ಪತ್ತೆ ಪ್ರಕರಣ: ಆರೋಪಿ ಆದಿತ್ಯರಾವ್​​​​ 10 ದಿನ ಪೊಲೀಸರ ವಶಕ್ಕೆ

  ಶಂಕಿತನ ಜಾಡು ಹಿಡಿದ ಪೊಲೀಸರು ಉಡುಪಿ ಮನೆಯನ್ನು ಶೋಧಿಸಿದ್ದರು. ಮನೆಯಲ್ಲಿದ್ದವರನ್ನು ವಿಚಾರಣೆ ಮಾಡಿದ್ದರು. ಪ್ರಕರಣದಲ್ಲಿ ಆದಿತ್ಯ ರಾವ್ ಕೈವಾಡದ ಬಗ್ಗೆ ಪ್ರಶ್ನೆ ಮಾಡಲಾಗಿತ್ತು. ಬಳಿಕ ಬೆಂಗಳೂರಿಗೆ ಬಂದು ಆದಿತ್ಯ ರಾವ್ ಶರಣಾಗಿದ್ದಾನೆ. ಬೆಂಗಳೂರು ಡಿಜಿ ಕಚೇರಿಗೆ ಹೋಗಿ ನಾನೇ ಆದಿತ್ಯರಾವ್ ಅಂತ ಹೇಳಿಕೊಂಡಿದ್ದ. ತಕ್ಷಣ ಹೊಯ್ಸಳ ವಾಹನದಲ್ಲಿ ಹಲಸೂರು ಗೇಟ್ ಪೊಲೀಸ್ ಠಾಣೆಗೆ ಈತನನ್ನು ಕರೆತರಲಾಗಿತ್ತು. ಠಾಣೆಗೆ ಬಂದ ಇನ್ಸ್​ಪೆಕ್ಟರ್ ಹರಿವರ್ಧನ್ ಆರೋಪಿ ಆದಿತ್ಯ ರಾವ್​ನನ್ನು ವಿಚಾರಣೆಗೆ ಒಳಪಡಿಸಿದ್ದಾರೆ.

  ಉಡುಪಿ ಜಿಲ್ಲೆಯ ಮಣಿಪಾಲದವನಾದ ಆದಿತ್ಯ ರಾವ್ 2018ರಲ್ಲಿ ಬೆಂಗಳೂರಿನಲ್ಲಿ ಬಂಧಿತನಾಗಿದ್ದ. ಬೆಂಗಳೂರು ವಿಮಾನ ನಿಲ್ದಾಣಕ್ಕೂ ಹುಸಿಬಾಂಬ್ ಕರೆ ಮಾಡಿದ್ದ ಆದಿತ್ಯ ರಾವ್​ನನ್ನು ಪೊಲೀಸರು ಬಂಧಿಸಿದ್ದರು. ಆತನಿಗೆ 6 ತಿಂಗಳು ಜೈಲು ಶಿಕ್ಷೆ ಕೂಡ ವಿಧಿಸಲಾಗಿತ್ತು. ಮಂಗಳೂರಲ್ಲಿ ಕೃತ್ಯ ನಡೆದ ದಿನವೂ ಮತ್ತೆ ಮಂಗಳೂರು ಏರ್​ಪೋರ್ಟ್​ಗೆ ಕರೆ ಮಾಡಿ ಬಾಂಬ್ ಇಟ್ಟಿರುವ ಬೆದರಿಕೆಯೊಡ್ಡಿದ್ದ. ನನ್ನನ್ನು ಜೈಲುಪಾಲು ಮಾಡಿದ್ದಕ್ಕೆ ಪೊಲೀಸರ ವಿರುದ್ಧ ಸೇಡು ತೀರಿಸಿಕೊಳ್ಳುತ್ತಿದ್ದೇನೆ ಎಂದಿದ್ದ ಆದಿತ್ಯ ರಾವ್ ಮಂಗಳೂರು ವಿಮಾನ ನಿಲ್ದಾಣದಲ್ಲಿ 3 ಕಡೆ ಬಾಂಬ್ ಇಟ್ಟಿರುವುದಾಗಿ ತಿಳಿಸಿದ್ದ.
  First published: