ಮಂಗಳೂರು ಕುಕ್ಕರ್ ಬಾಂಬ್ (Mangaluru Cooker Bomb) ಸ್ಫೋಟದ ಶಂಕಿತ ರೂವಾರಿ ಶಾರೀಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಬಾಂಬ್ ಸ್ಫೋಟ ಪ್ರಕರಣ ಎನ್ಐಎಗೆ (NIA) ವರ್ಗಾಯಿಸಲಾಗಿದೆ. ಗಂಭೀರವಾಗಿ ಗಾಯಗೊಂಡಿರುವ ಶಂಕಿತ ಉಗ್ರ ಶಾರೀಕ್ ಹೇಳಿಕೆ ನೀಡದ ಸ್ಥಿತಿಯಲ್ಲಿದ್ದಾನೆ. ಒಂದು ವಾರದ ಬಳಿಕ ಆತನಿಂದ ಹೇಳಿಕೆ ಪಡೆಯಬಹುದು ಎಂದು ವೈದ್ಯರು (Doctors) ಹೇಳಿದ್ದಾರೆ ಎನ್ನಲಾಗಿದೆ. ಇತ್ತ ಪೊಲೀಸರು ಮತ್ತು ಎನ್ಐಎ ತಂಡ ತನಿಖೆಯನ್ನು ಚುರುಕುಗೊಳಿಸಿದ್ದಾರೆ. ಶಾರೀಕ್ ಬಳಿಯಲ್ಲಿದ್ದ ಮೊಬೈಲ್ ವಶಕ್ಕೆ ಪಡೆದುಕೊಂಡಿದ್ದು, ಅದರಲ್ಲಿರುವ ಮಾಹಿತಿಯಿಂದ ತನಿಖೆ ನಡೆಸುತ್ತಿದ್ದಾರೆ. ಶಾರೀಕ್ ಮೊಬೈಲ್ನಲ್ಲಿದ್ದ (Sharik Mobile) ಕಾಂಟ್ಯಾಕ್ಟ್ ನಂಬರ್ಗಳಿಗೆ ಕರೆ ಮಾಡಿ ಮಾಹಿತಿ ಕಲೆ ಹಾಕುತ್ತಿದ್ದಾರೆ. ಆದರೆ ಶಾರೀಕ್ ಸಂಪರ್ಕ ಮಾಡಿದ್ದ ಬಹುತೇಕ ನಂಬರ್ಗಳು ಸ್ವಿಚ್ಚ್ ಆಫ್ ಆಗಿವೆ. ಕೆಲ ಸಂಖ್ಯೆಗಳ ಲೋಕೆಶನ್ ತಮಿಳುನಾಡು (Tamilnadu) ಮತ್ತು ಕೇರಳ (Kerala) ಭಾಗಗಳಲ್ಲಿ ಪತ್ತೆಯಾಗಿರುವ ಮಾಹಿತಿ ಲಭ್ಯವಾಗಿದೆ.
ಶಾರೀಕ್ ವಾಟ್ಸಪ್ ಪರಿಶೀಲನೆ ನಡೆಸಿದಾಗ ಆತನಿಗೆ ಬೆಂಗಳೂರಿನಲ್ಲಿ ಒಬ್ಬಳು ಗರ್ಲ್ಫ್ರೆಂಡ್ ಇರೋ ವಿಷಯ ಬೆಳಕಿಗೆ ಬಂದಿದೆ. ಶಾರೀಕ್ ಈ ಯುವತಿ ವಾಟ್ಸಪ್ನಲ್ಲಿ ಸಂಪರ್ಕದಲ್ಲಿದ್ದ ಎಂಬ ವಿಷಯ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಶಾಪಿಂಗ್ ನೆಪದಲ್ಲಿ ಯುವತಿ ಜೊತೆ ಸುತ್ತಾಟ
ಬೆಂಗಳೂರಿನ ಅಮೃತಹಳ್ಳಿಯ ಅಪಾರ್ಟ್ಮೆಂಟ್ನಲ್ಲಿ ಯುವತಿ ವಾಸವಾಗಿದ್ದಾಳೆ. ಬೆಂಗಳೂರಿಗೆ ಬಂದಾಗ ಶಾರೀಕ್ ಯುವತಿ ಜೊತೆ ಸುತ್ತಾಡುತ್ತಿದ್ದನು. ಶಾಪಿಂಗ್ ಮಾಡಿಸುವ ನೆಪದಲ್ಲಿ ಯುವತಿ ಶಾರೀಕ್ ಸುತ್ತಾಡುತ್ತಿದ್ದನು.
ಯುವತಿಯ ವಿಚಾರಣೆ
ಬೆಂಗಳೂರಿಗೆ ಬಂದ ಪ್ರತಿಬಾರಿಯೂ ಶಾರೀಕ್ ಯುವತಿಯನ್ನು ಭೇಟಿಯಾಗುತ್ತಿದ್ದನು. ಈ ಹಿನ್ನೆಲೆ ರಾಜ್ಯ ಹಾಗೂ ಕೇಂದ್ರ ತನಿಖಾ ತಂಡಗಳು ಯುವತಿಯನ್ನು ವಿಚಾರಣೆಗೆ ಒಳಪಡಿಸಿವೆ. ವಿಚಾರಣೆ ವೇಳೆ ಸ್ಪೋಟದಲ್ಲಿ ಯಾಕೆ ಪಾತ್ರ ಇಲ್ಲ ಎಂಬುವುದು ಮೇಲ್ನೋಟಕ್ಕೆ ಕಂಡು ಬಂದ ಹಿನ್ನೆಲೆ ಯುವತಿಯನ್ನು ಹೇಳಿಕೆ ಪಡೆದು ಕಳುಹಿಸಲಾಗಿದೆ ಎಂದು ತಿಳಿದು ಬಂದಿದೆ.
ಶಂಕಿತ ಉಗ್ರ ಮೊಹಮ್ಮದ್ ಶಾರೀಕ್ಗೆ ಜಾಕೀರ್ ನಾಯ್ಕ್ (Zakir Naik) ಪ್ರೇರಣೆಯಾಗಿದ್ದ ಎಂಬ ಮಾಹಿತಿ ಲಭ್ಯವಾಗಿದೆ. ಭಾರತಕ್ಕೆ ಬೇಕಾಗಿರುವ ಮೋಸ್ಟ್ ವಾಂಟೆಡ್ಗಳ ಪಟ್ಟಿಯಲ್ಲಿರೋ ಜಾಕೀರ್ ನಾಯ್ಕ್ನ 50ಕ್ಕೂ ಹೆಚ್ಚು ವಿಡಿಯೋಗಳು (Videos) ಶಾರೀಕ್ ಮೊಬೈಲ್ನಲ್ಲಿದ್ದವು ಎನ್ನಲಾಗಿದೆ.
ಇದನ್ನೂ ಓದಿ: Mangaluru Blast: ಶಾರೀಕ್ ‘ಹೆಜ್ಜೆ’ಗುರುತು ಪತ್ತೆ; ‘ಹಿಂದೂ’ಗಳಿಗೆ ಉಗ್ರಪಟ್ಟ ಕಟ್ಟಲು ಯತ್ನ!
ಜಾಕೀರ್ನ ಇಸ್ಲಾಮಿಕ್ ಮೂಲಭೂತವಾದದ ಭಾಷಣದಿಂದ ಶಾರೀಕ್ ಪ್ರಭಾವಿತನಾಗಿದ್ದನು. ಜಾಕೀರ್ ನಾಯ್ಕ್ನನ್ನೇ ಪ್ರೇರಣೆಯಾಗಿಸಿಕೊಂಡಿದ್ದನು ಎಂದು ತಿಳಿದು ಬಂದಿದೆ. ಜಾಕೀರ್ ನಾಯ್ಕ್ ವಿಡಿಯೋ ಮಾತ್ರವಲ್ಲದೇ, ಬಾಂಬ್ ತಯಾರಿಕಾ ವಿಡಿಯೋಗಳು ಶಾರೀಕ್ ಮೊಬೈಲ್ನಲ್ಲಿ ಸಿಕ್ಕಿವೆ.
ಮಂಗಳೂರಿನಲ್ಲಿ ಬಾಂಬ್ ಸ್ಫೋಟದಲ್ಲಿ ಶಾರೀಕ್ ಕೃತ್ಯ ಬಯಲಾದ ಬೆನ್ನಲ್ಲೇ ಸಂಪರ್ಕಿತರ ಫೋನ್ ಸ್ವಿಚ್ಡ್ ಆಫ್ ಆಗಿವೆ. ಶಾರೀಕ್ ಮೊಬೈಲ್ ರಿಟ್ರೀವ್ ವೇಳೆ ಹಲವು ನಂಬರ್ಗಳು ಪತ್ತೆಯಾಗಿದ್ದು, ಪೊಲೀಸರು ಆ ನಂಬರ್ಗಳಿಗೆ ಕರೆ ಮಾಡಿದಾಗ ಆ ನಂಬರ್ಗಳು ಸ್ವಿಚ್ಡ್ ಆಫ್ ಬರ್ತಿವೆ. ಕೆಲ ನಂಬರ್ಗಳ ಲೊಕೇಷನ್ ತಮಿಳುನಾಡು, ಕೇರಳವನ್ನೂ ತೋರಿಸ್ತಿವೆ.
ಇದನ್ನೂ ಓದಿ: Mangaluru Blast: ಐಸಿಸ್ ಸೇರಲು ಶಾರೀಕ್ ಯತ್ನ? ಬೆಂಗಳೂರಿನ ಅತ್ತೆ ಮನೆಯಲ್ಲಿ ವಾಸವಾಗಿದ್ನಾ ಉಗ್ರ?
ಅಲೋಕ್ ಕಮಾರ್ಗೆ ಜೀವ ಬೆದರಿಕೆ
ಇಸ್ಲಾಮಿಕ್ ರೆಸಿಸ್ಟೆನ್ಸ್ ಕೌನ್ಸಿಲ್ (IRC) ಎಂಬ ಸಂಘಟನೆ ಕಾನೂನು ಸುವ್ಯವಸ್ಥೆ ಎಡಿಜಿಪಿ ಅಲೋಕ್ ಕುಮಾರ್ಗೆ (ADGP Alok Kumar) ಎಚ್ಚರಿಕೆ ನೀಡಿದೆ. ನಿಮ್ಮ ಸಂತೋಷ್ ತುಂಬಾ ದಿನ ಇರಲ್ಲ. ನಾವು ನಮ್ಮ ಕೆಲಸ ಮುಂದುವರಿಸಿದ್ದೇವೆ. ನಾವು ನಿಮ್ಮ ಬಳಿ ಯಾವಾಗ ಬರ್ತೀವೋ ಗೊತ್ತಿಲ್ಲ ಎಂದು ಮಾರ್ಮಿಕವಾಗಿ ಜೀವ ಬೆದರಿಕೆ ಹಾಕಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ