• Home
  • »
  • News
  • »
  • state
  • »
  • Mangaluru Blast: ಐಸಿಸ್​ ಸೇರಲು ಶಾರೀಕ್​​ ಯತ್ನ? ಬೆಂಗಳೂರಿನ ಅತ್ತೆ ಮನೆಯಲ್ಲಿ ವಾಸವಾಗಿದ್ನಾ ಉಗ್ರ?

Mangaluru Blast: ಐಸಿಸ್​ ಸೇರಲು ಶಾರೀಕ್​​ ಯತ್ನ? ಬೆಂಗಳೂರಿನ ಅತ್ತೆ ಮನೆಯಲ್ಲಿ ವಾಸವಾಗಿದ್ನಾ ಉಗ್ರ?

ಶಾರೀಕ್

ಶಾರೀಕ್

ಬಾಂಬ್ ಸ್ಫೋಟಕ್ಕೂ ಮುನ್ನ ಶಾರೀಕ್ ಜಿಹಾದ್ ಸಂಬಂಧ ವಿಡಿಯೋ ಮಾಡಿ ತನ್ನ ಹ್ಯಾಂಡ್ಲರ್​ಗಳಿಗೆ ಕಳುಹಿಸಿದ್ದನಂತೆ.

  • Share this:

ಶಂಕಿತ ಉಗ್ರರಿಗೆ ದೇವಸ್ಥಾನಗಳೇ(Temples) ಟಾರ್ಗೆಟ್ ಆಗಿದ್ದವಾ ಎಂಬ ಅನುಮಾನ ಮೂಡಿದೆ. ಇಸ್ಲಾಮಿಕ್ ರೆಸಿಸ್ಟೆನ್ಸ್ ಕೌನ್ಸಿಲ್ (IRC) ಎಂಬ ಸಂಘಟನೆ ಹೆಸರಲ್ಲಿ ಡಾರ್ಕ್ ವೆಬ್ (Dark web) ಮೂಲಕ ಒಂದು ಪೋಸ್ಟ್ ಹಾಕಲಾಗಿದೆ. ಡಾರ್ಕ್ ವೆಬ್‌ನಲ್ಲಿ ಸ್ಫೋಟದ ರೂವಾರಿ ತಾವೇ ಎಂದು ಹೇಳಿಕೊಳ್ಳಲಾಗಿದೆ. ಅಲ್ಲದೇ ಆ ಪೋಸ್ಟ್​​ನಲ್ಲಿ ಕದ್ರಿ ದೇವಸ್ಥಾನದ (Kadri Temple) ಬಗ್ಗೆಯೂ ಉಲ್ಲೇಖಿಸಲಾಗಿದ್ದು, ಉಗ್ರರು ಕದ್ರಿ ದೇಗುಲವನ್ನೇ ಟಾರ್ಗೆಟ್ ಮಾಡಿಕೊಂಡಿದ್ರಾ ಎಂಬ ಅನುಮಾನ ಹುಟ್ಟಿಕೊಂಡಿದೆ. ಅಷ್ಟೇ ಅಲ್ಲ, ಕುದ್ರೋಳಿ (Kudroli) ಗೋಕರ್ಣನಾಥೇಶ್ವರ ದೇಗುಲ, ಮಂಗಳೂರಿನ ಮಂಗಳಾದೇವಿ ದೇವಸ್ಥಾನ, ಮಂಗಳೂರಿನ ರೈಲ್ವೇ ನಿಲ್ದಾಣ, ಮಂಗಳೂರು (Mangaluru) KSRTC ಬಸ್ ನಿಲ್ದಾಣ, ಮಂಗಳೂರಿನ ಸಂಘ ನಿಕೇತನದಲ್ಲಿ ಮಕ್ಕಳ ಮಾರಣ ಹೋಮಕ್ಕೆ ಸಂಚು ರೂಪಿಸಲಾಗಿತ್ತಂತೆ. ಸದ್ಯ ಎನ್​ಐಎ ತಂಡ ಪೋಸ್ಟ್ ಸತ್ಯವೋ ಸುಳ್ಳೋ ಎಂಬ ಬಗ್ಗೆ ತನಿಖೆ ಕೈಗೊಂಡಿದೆ.


ಮಂಗಳೂರು ಬಾಂಬ್ ಸ್ಫೋಟದ ಆರೋಪಿ ಶಾರಿಕ್ ಐಸಿಸ್ ಸೇರಲು ಆಸೆ ವ್ಯಕ್ತಪಡಿಸಿದ್ದ ಎಂಬ ಮಾಹಿತಿ ಲಭ್ಯವಾಗಿದೆ. ಕುಕ್ಕರ್ ಬಾಂಬ್ ಹಿಡಿದು ಫೋಟೋಗೆ ಫೋಸ್ ಕೊಟ್ಟಿದ್ದೇ ಈ ಕಾರಣಕ್ಕೆ ಎನ್ನಲಾಗ್ತಿದೆ.


ಐಸಿಸ್ ಸೇರಲು ಪ್ರಯತ್ನ


ಸಿರಿಯಾ ಅಥವಾ ಮತ್ತಿತರ ರಾಷ್ಟ್ರಕ್ಕೆ ತೆರಳಿ ಐಸಿಸ್ ಸೇರುವ ಆಸೆ ವ್ಯಕ್ತಪಡಿಸಿದ್ದ ಶಾರೀಕ್ ಹಲವರನ್ನು ಸಂಪರ್ಕ ಮಾಡಿದ್ದ ಎಂದು ತಿಳಿದು ಬಂದಿದೆ.


ಒಂದು ವೇಳೆ ಸ್ವಂತದ್ದೊಂದು ಐಡೆಂಟಿಟಿ ಇಲ್ಲದಿದ್ದರೆ ಐಸಿಸ್​ನವರು ನಿನಗೆ ಪ್ರಾಮುಖ್ಯತೆ ಕೊಡಲ್ಲ. ಹಾಗಾಗಿ ಅವರೆಲ್ಲರಿಗೂ ನಿನ್ನ ಹೆಸರು ಗೊತ್ತಾಗುವ ರೀತಿಯಲ್ಲಿ ದೊಡ್ಡಮಟ್ಟದಲ್ಲಿ ಏನಾದ್ರೂ ಕೃತ್ಯ ಎಸಗುವಂತೆ ಸೂಚನೆ ಕೊಡಲಾಗಿತ್ತಂತೆ. ಇದೇ ಕಾರಣಕ್ಕೆ ಶಾರೀಕ್ ಬಾಂಬ್ ಸ್ಫೋಟಕ್ಕೆ ಮುಂದಾಗಿದ್ದ ಎನ್ನಲಾಗಿದೆ.


ಹ್ಯಾಂಡಲರ್​ಗಳಿಗೆ ಫೋಟೋ ಕಳುಹಿಸಿದ್ದ ಶಾರೀಕ್


ಬಾಂಬ್ ಸ್ಫೋಟಕ್ಕೂ ಮುನ್ನ ಶಾರೀಕ್ ಜಿಹಾದ್ ಸಂಬಂಧ ವಿಡಿಯೋ ಮಾಡಿ ತನ್ನ ಹ್ಯಾಂಡ್ಲರ್​ಗಳಿಗೆ ಕಳುಹಿಸಿದ್ದನಂತೆ. ಕುಕ್ಕರ್ ಬಾಂಬ್ ಹಿಡಿದುಕೊಂಡು ತೆಗೆಸಿಕೊಂಡ ಫೋಟೋವನ್ನೂ ಹ್ಯಾಂಡ್ಲರ್​ಗೆ ಕಳುಹಿಸಿದ್ದ ಎಂಬ ಮಾಹಿತಿ ಲಭ್ಯವಾಗಿದೆ.


ಸ್ಫೋಟಕ ಖರೀದಿಸಲು ಕ್ಲಾಸ್​ಗೆ ಸೇರಿದ್ನಾ?


ಮಂಗಳೂರಲ್ಲಿ ಕುಕ್ಕರ್ ಬಾಂಬ್ ಬ್ಲಾಸ್ಟ್ ಪ್ರಕರಣದ ತನಿಖೆ ಚುರುಕಾಗಿದೆ. ಶಾರೀಕ್ ಸ್ಫೋಟಕ ಸಂಚಿನ ಮಾಹಿತಿಗಳು ಬಗೆದಷ್ಟೂ ಹೊರ ಬರುತ್ತಿವೆ. ಶಾರೀಕ್ ಮೊಬೈಲ್‌ ರಿಪೇರಿ ತರಬೇತಿ ತರಗತಿಗೆ ಸೇರಿದ್ದರ ಹಿಂದೆ ಬೇರೆ ಪ್ಲ್ಯಾನ್‌ ಇತ್ತಂತೆ. ಸ್ಫೋಟಕ್ಕೆ ವಸ್ತುಗಳ ಖರೀದಿಸೋಕೆಂದೇ ಕ್ಲಾಸ್‌ಗೆ ಸೇರಿರೋ ಶಂಕೆ ವ್ಯಕ್ತವಾಗಿದೆ.


ಮೈಸೂರಿನ ಕೆ.ಟಿ ಸ್ಟ್ರೀಟ್‌ನಲ್ಲಿ ಸೆಕೆಂಡ್ ಹ್ಯಾಂಡ್ ಮೊಬೈಲ್ ಖರೀದಿಸಿ, ಆ ಮೊಬೈಲ್‌ಗಳಲ್ಲಿದ್ದ ಹಲವು ಸಿಮ್‌ಗಳನ್ನು ಬಳಸಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.


ಶಾರೀಕ್ ಸಂಪರ್ಕಿತರ ಮೊಬೈಲ್​ಗಳು ಆಫ್


ಮಂಗಳೂರಿನಲ್ಲಿ ಬಾಂಬ್ ಸ್ಫೋಟದಲ್ಲಿ ಶಾರೀಕ್‌ ಕೃತ್ಯ ಬಯಲಾದ ಬೆನ್ನಲ್ಲೇ ಸಂಪರ್ಕಿತರ ಫೋನ್‌ ಸ್ವಿಚ್ಡ್‌ ಆಫ್ ಆಗಿವೆ. ಶಾರೀಕ್ ಮೊಬೈಲ್ ರಿಟ್ರೀವ್ ವೇಳೆ ಹಲವು ನಂಬರ್‌ಗಳು ಪತ್ತೆಯಾಗಿದ್ದು, ಪೊಲೀಸರು ಆ ನಂಬರ್​ಗಳಿಗೆ ಕರೆ ಮಾಡಿದಾಗ ಆ ನಂಬರ್​ಗಳು ಸ್ವಿಚ್ಡ್ ಆಫ್ ಬರ್ತಿವೆ. ಕೆಲ ನಂಬರ್​ಗಳ ಲೊಕೇಷನ್​ ತಮಿಳುನಾಡು, ಕೇರಳವನ್ನೂ ತೋರಿಸ್ತಿವೆ.


ಶಾರೀಕ್ ಅತ್ತೆ ಮನೆ ಮೇಲೆ NIA ದಾಳಿ


ಮಂಗಳೂರು ಬಾಂಬ್ ಬ್ಲಾಸ್ಟ್ ಆರೋಪಿ ಶಾರೀಕ್​​ನ ಅತ್ತೆ ಮನೆ ಬೆಂಗಳೂರಿನ ಅಮೃತ ಹಳ್ಳಿಯ ಮಾರುತಿ ಲೇಔಟ್​ನಲ್ಲಿದೆ. ಎನ್​​ಐಎ ಅಧಿಕಾರಿಗಳು ಶಾರೀಕ್ ಅತ್ತೆ, ಸೋದರ ಮಾವನನ್ನು ವಿಚಾರಣೆಗೆ ಒಳಡಿಸಿದ್ದಾರೆ. ಉಗ್ರ ಮತೀನ್ ಜೊತೆ ಶಾರಿಕ್ ಅಮೃತಹಳ್ಳಿಯಲ್ಲೇ ವಾಸವಾಗಿದ್ದ ಎಂಬ ಅನಮಾನಗಳು ವ್ಯಕ್ತವಾಗಿವೆ.

Published by:Mahmadrafik K
First published: