• Home
  • »
  • News
  • »
  • state
  • »
  • Mangaluru Blast: ಮೈಸೂರಿನಲ್ಲಿ ಕುಕ್ಕರ್ ಬಾಂಬ್ ರೆಡಿ ; ಶಾರೀಕ್ ಕತೆ ಬಿಚ್ಚಿಟ್ಟ ಅಲೋಕ್ ​ಕುಮಾರ್

Mangaluru Blast: ಮೈಸೂರಿನಲ್ಲಿ ಕುಕ್ಕರ್ ಬಾಂಬ್ ರೆಡಿ ; ಶಾರೀಕ್ ಕತೆ ಬಿಚ್ಚಿಟ್ಟ ಅಲೋಕ್ ​ಕುಮಾರ್

ಮಂಗಳೂರು ಬ್ಲಾಸ್ಟ್​ ಕೇಸ್

ಮಂಗಳೂರು ಬ್ಲಾಸ್ಟ್​ ಕೇಸ್

2020 ರಲ್ಲಿ ಈಸ್ಟ್ ಪೊಲೀಸ್ ಮತ್ತು ನಾರ್ತ್ ಪೊಲೀಸ್ ನಲ್ಲೂ ಕೇಸ್ ಆಗಿತ್ತು. ಶಾರೀಕ್, ಮಾಜ್ ,ಯಾಸಿನ್, ಅರಾಫತ್ ಎಂಬವರ ವಿರುದ್ಧ ಕೇಸ್ ಆಗಿತ್ತು. ಅರಾಫತ್ ಸದ್ಯ ದುಬೈನಲ್ಲಿದ್ದಾನೆ. ಮೈಸೂರು ಮನೆಯಲ್ಲಿಯೇ ಸ್ಫೋಟಕ ತಯಾರಿಕೆ ಮಾಡಿಕೊಂಡು ಬ್ಲಾಸ್ಟ್​ ಮಾಡಲು ಸಂಚು ರೂಪಿಸಿದ್ದನು.

  • Share this:

ಮಂಗಳೂರಿನ ನಾಗುರಿ (Naguri, Mangaluru) ಬಳಿಯಲ್ಲಿ ನಡೆದ ಸ್ಫೋಟದ ಕುರಿತು ಎಡಿಜಿಪಿ ಅಲೋಕ್ ಕುಮಾರ್ (ADGP Alok Kumar) ಸುದ್ದಿಗೋಷ್ಠಿ ನಡೆಸಿ ಇಡೀ ಪ್ರಕರಣದ ಮಾಹಿತಿ ನೀಡಿದರು. ಆಟೋದಲ್ಲಿ ಸ್ಫೋಟವೊಂದು (Auto Blast) ನಡೆದಿತ್ತು. ಈ ಸ್ಫೋಟದಲ್ಲಿ ಆಟೋ ಚಾಲಕ ಪುರಷೋತ್ತಮ್ ಮತ್ತು ಉಗ್ರ ಶಾರೀಕ್ ಗಾಯಗೊಂಡಿದ್ದರು. ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮಂಗಳೂರು ಕಮಿಷನರ್ (Mangaluru Commissioner) ಕೂಡಲೇ ತನಿಖೆ ಕೈಗೊಂಡಿದ್ದರು. ತನಿಖೆ ವೇಳೆ ಪತ್ತೆಯಾದ ಆಧಾರ್ ಕಾರ್ಡ್​ನಲ್ಲಿ (Fake Aadhar Card) ಪ್ರೇಮರಾಜ್ ಹುಟುಗಿ, ಧಾರವಾಡದ ನಿವಾಸಿ ಎಂದು ಇತ್ತು. ಈ ಸಂಬಂಧ ಧಾರವಾಡದಲ್ಲಿ ಪರಿಶೀಲನೆ ಮಾಡಿದಾಗ ಇದೊಂದು ನಕಲಿ ಆಧಾರ್ ಕಾರ್ಡ್​ ಎಂದು ಗೊತ್ತಾಗಿತ್ತು. ನಂತರ ನಾನೇ ನಿಜವಾದ ಪ್ರೇಮ್ ರಾಜ್​ ಫೋನ್​ನಲ್ಲಿ ಮಾತನಾಡಿದಾಗ, ಅವರು ತುಮಕೂರಿಲ್ಲಿರೋದಾಗಿ ಹೇಳಿದ್ರು. ನಂತರ ನಾನು ಸ್ಥಳೀಯ ಎಸ್​​ಪಿ ಅವರನ್ನು ಭೇಟಿಯಾಗುವಂತೆ ಹೇಳಿದ್ದೆ. ಕೂಡಲೇ ಎಸ್​​ಪಿ ಭೇಟಿಯಾಗಿದ್ದರು.


ಇತ್ತ ಮೈಸೂರಿನಲ್ಲಿಯೂ ಕಮಿಷನರ್ ತನಿಖೆ ಕೈಗೊಂಡಿದ್ದರು. ಶಿವಮೊಗ್ಗದಲ್ಲಿ ನಡೆದ ಗಲಾಟೆಯಲ್ಲಿ ಜಬಿವುಲ್ಲಾ ಎಂಬಾತನನ್ನು ಅರೆಸ್ಟ್ ಮಾಡಲಾಗಿತ್ತು. ಈ ವೇಳೆ ತಪ್ಪಿಸಿಕೊಂಡಿದ್ದ ಶಾರೀಕ್ ಕೊಯಂಬತ್ತೂರು ಮತ್ತು ಮೈಸೂರಿನಲ್ಲಿ ವಾಸವಾಗಿದ್ದನು.


ಶಾರೀಕ್​​ನನ್ನು ಗುರುತಿಸಿದ ಕುಟುಂಬಸ್ಥರು


ಆಧಾರ್ ಕಾರ್ಡ್​ ನೋಡಿದಾಗ ಈತ ಶಾರೀಕ್ ಇರಬಹುದು ಎಂಬ ಅನುಮಾನ ಮೂಡಿತ್ತು. ಸಂಬಂಧಿಕರು ಈತನನ್ನು ಶಾರೀಕ್ ಎಂದು ಗುರುತಿಸಿದ್ದಾರೆ.


mangaluru blast case update adgp alok kumar press meet mrq
ಶಾರೀಕ್


2020 ರಲ್ಲಿ ಈಸ್ಟ್ ಪೊಲೀಸ್ ಮತ್ತು ನಾರ್ತ್ ಪೊಲೀಸ್ ನಲ್ಲೂ ಕೇಸ್ ಆಗಿತ್ತು. ಶಾರೀಕ್, ಮಾಜ್ ,ಯಾಸಿನ್, ಅರಾಫತ್ ಎಂಬವರ ವಿರುದ್ಧ ಕೇಸ್ ಆಗಿತ್ತು. ಅರಾಫತ್ ಸದ್ಯ ದುಬೈನಲ್ಲಿದ್ದಾನೆ. ಮೈಸೂರು ಮನೆಯಲ್ಲಿಯೇ ಸ್ಫೋಟಕ ತಯಾರಿಕೆ ಮಾಡಿಕೊಂಡು ಬ್ಲಾಸ್ಟ್​ ಮಾಡಲು ಸಂಚು ರೂಪಿಸಿದ್ದನು.


ಆದ್ರೆ ಇದ್ಯಾವುದೂ ಮನೆ ಮಾಲೀಕ ಮೋಹನ್​ಗೆ ಗೊತ್ತಿರಲಿಲ್ಲ. ಮನೆಯಲ್ಲಿ ಸ್ಫೋಟಕ ವಸ್ತುಗಳು ಪತ್ತೆಯಾಗಿವೆ. ಮೈಸೂರಿನಿಂದ ಮಡಿಕೇರಿ ಮೂಲಕ ಮಂಗಳೂರಿಗೆ ಒಂದು ವಾರದ ಹಿಂದೆ ಬಂದು ತಿರುಗಾಡಿದ್ದನು.


mangaluru blast case update adgp alok kumar press meet mrq
ಸ್ಫೋಟಕ್ಕೆ ಬಳಸಿದ ವೈರ್


ಸುರೇಂದರ್ ಬಳಿ ಆಧಾರ್ ಕಾರ್ಡ್​ ಬಳಕೆ


ಅರುಣ್ ಕುಮಾರ್ ಎಂಬವರ ಆಧಾರ್ ಕಾರ್ಡ್​ ಕಳೆದಿತ್ತು. ಇದೇ ಆಧಾರ್ ಕಾರ್ಡ್​ ಬಳಸಿ ಸುರೇಂದರ್ ಎಂಬವರ ಬಳಿ ಶಾರೀಕ್ ಸಿಮ್ ಖರೀದಿ ಮಾಡಿದ್ದನು.


ಸುದ್ದಗುಂಟೆಪಾಳ್ಯ ಕೇಸ್​​ನಲ್ಲಿ ಎರಡು ವರ್ಷದಿಂದ ತಲೆ ಮರೆಸಿಕೊಂಡಿರುವ ಅಬ್ದುಲ್ ಮತೀನ್ ದುಬೈನಲ್ಲಿದ್ದುಕೊಂಡು ಶಾರೀಕ್ ಕೈಯಲ್ಲಿ ಈ ಕೃತ್ಯ ಮಾಡಿಸಿದ್ದಾನೆ. ಶಾರೀಗ್ ಮೇನ್ ಹ್ಯಾಂಡಲರ್ ಆಗಿದ್ದ, ಈ ಬಗ್ಗೆ ಆಳವಾಗಿ ತನಿಖೆ ನಡೆಸಬೇಕು. ದೊಡ್ಡ ಅನಾಹುತವೊಂದು ತಪ್ಪಿದೆ ಎಂದು ಅಲೋಕ್ ಕುಮಾರ್ ಹೇಳಿದರು.


ಕುಕ್ಕರ್ ಬಾಂಬ್ ಜತೆ ಪೋಸ್​​


ಶಾರೀಕ್​​ ಸಾಮಾನ್ಯದವನಲ್ಲ ಅನ್ನೋದು ಗೊತ್ತಾಗಿದೆ. ಕುಕ್ಕರ್ ಬಾಂಬ್ ತಯಾರಿಸಿ ಐಸಿಸ್ ಮಾದರಿಯಲ್ಲೇ ಪೋಸ್​ ಕೊಟ್ಟಿದ್ದಾನೆ. ಇದನ್ನೆಲ್ಲಾ ಗಮನಿಸಿದ್ರೆ ಶಾರೀಕ್ ಐಸಿಸ್​ನಿಂದ ಪ್ರೇರಿತನಾಗಿದ್ದ ಅನ್ನೋದು ತಿಳಿದು ಬಂದಿದೆ. ಮತ್ತಷ್ಟು ಸ್ಫೋಟ ನಡೆಸೋಕೆ ಬೇಕಾದ ವಸ್ತುಗಳನ್ನ ಕೂಡಿಟ್ಟಿದ್ದ. ಕುಕ್ಕರ್ ಬಾಂಬ್​ಗೆ ಪಾಸ್ಪರಸ್, ಸಲ್ಫರ್, ಪೊಟ್ಯಾಷಿಯಂ ನೈಟ್ರೇಟ್ ಬಳಸಿದ್ದ. ಆದರೆ ಬಾಂಬ್ ಸ್ಫೋಟಿಸಲು ತೆರಳುತ್ತಿದ್ದಾಗ ನಸೀಬು ಕೆಟ್ಟು ಕುಕ್ಕರ್ ಸ್ಫೋಟ ಸಂಭವಿಸಿದೆ ಅನ್ನೋದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.


ಕಂಕನಾಡಿ ಠಾಣೆಯಲ್ಲಿ ಎಫ್​ಐಆರ್


ಮಂಗಳೂರಲ್ಲಿ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದ FIR  ಪ್ರತಿ ನ್ಯೂಸ್​18 ಕನ್ನಡಕ್ಕೆ ಲಭ್ಯವಾಗಿದೆ. ಆಟೋ ಚಾಲಕ ಪುರುಷೋತ್ತಮ್ ನೀಡಿದ ದೂರಿನ ಆಧಾರದ ಮೇಲೆ FIR ದಾಖಲಾಗಿದ್ದು, ಯುಎಪಿಎ, ಐಪಿಸಿ 120ಬಿ, 307 ಅಡಿ ಕೇಸ್ ದಾಖಲಿಸಲಾಗಿದೆ. ಆರೋಪಿ ಹೆಸರು ಸ್ಪಷ್ಟವಾಗದ ಕಾರಣಕ್ಕೆ ಆಟೋ ಚಾಲಕ ನೀಡಿದ ದೂರಿನ ಮೇಲೆ ಪ್ರೇಮ್​ರಾಜ್ ಎಂದೇ ಎಫ್ಐಆರ್​ನಲ್ಲಿ ಹೆಸರು ಉಲ್ಲೇಖಿಸಲಾಗಿದೆ.


mangaluru blast case update adgp alok kumar press meet mrq
ಸ್ಫೋಟಕ್ಕೆ ಬಳಸಿದ ಕುಕ್ಕರ್


ಇದನ್ನೂ ಓದಿ:  Mangaluru Blast: ಶಂಕಿತ ಉಗ್ರ ಸೂಸೈಡ್ ಬಾಂಬರ್ ಆಗಿದ್ನಾ?


ಆಟೋ ಡ್ರೈವರ್ ಕುಟುಂಬದ ಸಂಕಷ್ಟ


ಮಂಗಳೂರಲ್ಲಿ ಬಾಂಬ್ ಬ್ಲಾಸ್ಟ್​ ಆಗಿದ್ದಕ್ಕೆ ಆಟೋ ಚಾಲಕ ಪುರುಷೋತ್ತಮ್​ಗೆ ಕಷ್ಟ ಎದುರಾಗಿದೆ. ಮಾಡದ ತಪ್ಪಿಗೆ ಪುರುಷೋತ್ತಮ್ ಆಟೋ ಕಳೆದುಕೊಂಡಿದ್ದಾರೆ. ಆಟೋದಲ್ಲಿ ಕುಕ್ಕರ್ ಬ್ಲಾಸ್ಟ್ ಆಗಿದ್ರಿಂದ ಪುರುಷೋತ್ತಮ್​​ಗೂ ಗಾಯಗಳಾಗಿದ್ವು. ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿದೆ.


ದೊಡ್ಡಮಟ್ಟದ ಕೃತ್ಯಕ್ಕೆ ಸಂಚು


ಶಾರೀಕ್ ದೊಡ್ಟಮಟ್ಟದಲ್ಲಿ ವಿಧ್ವಂಸಕ ಕೃತ್ಯ ನಡೆಸೋಕೆ ಪ್ಲ್ಯಾನ್ ಮಾಡಿದ್ದ. ಮೈಸೂರಿನಲ್ಲಿರೋ ಶಾರೀಕ್ ಬಾಡಿಗೆ ರೂಮ್​ನಲ್ಲಿ 5 ದೊಡ್ಡ ಚೀಲಗಳಷ್ಟು ಸ್ಫೋಟಕಗಳು ಸಿಕ್ಕಿವೆ. ಸ್ಫೋಟಕಗಳನ್ನು ಪುಡಿ ಮಾಡಲು ಮಿಕ್ಸರ್ ಗ್ರೈಂಡರ್ ತಂದಿದ್ದ. ಹಲವು ರಾಸಾಯನಿಕ ಪೌಡರ್, ಕಚ್ಚಾವಸ್ತು ತಂದಿದ್ನಂತೆ. ಸದ್ಯ ಎಲ್ಲಾ ವಸ್ತುಗಳನ್ನು ಸೀಲ್ ಮಾಡಿ ಜಪ್ತಿ ಮಾಡಲಾಗಿದೆ.


ಇದನ್ನೂ ಓದಿ:  Mangaluru Blast: ಇವನೇ ಶಾರೀಕ್, ಗುರುತು ಪತ್ತೆ ಹಚ್ಚಿದ ಕುಟುಂಬಸ್ಥರು; ಸ್ಫೋಟಕ್ಕೂ ಮುನ್ನ ಕುಕ್ಕರ್ ಬಾಂಬ್ ಹಿಡಿದು ಪೋಸ್


ಕೊಠಡಿಯಲ್ಲಿ ಆರು ಟೇಬಲ್​ಗಳ ಮೇಲೆ ಸ್ಫೋಟಕ ವಸ್ತುಗಳನ್ನ ಪೊಲೀಸ್ರು ಜೋಡಿಸಿದ್ದಾರೆ. ಅದರ ಮಾಹಿತಿ ಪಡೆಯಲು ಮೈಸೂರ್ ಕಮಿಷನರ್​ಗೆ ಅಲೋಕ್ ಕುಮಾರ್ ಬುಲಾವ್ ಕೊಟ್ಟಿದ್ದಾರೆ. ಸೀಝ್ ಮಾಡಿದ ವಸ್ತುಗಳನ್ನು ಮಂಗಳೂರಿಗೆ ತರಲಾಗ್ತಿದೆ.

Published by:Mahmadrafik K
First published: