ಉಡುಪಿ: ಮಂಗಳೂರಿನಲ್ಲಿ (Mangaluru Blast Case)ಡಿಸೆಂಬರ್ 19ರಂದು ನಡೆದಿದ್ದ ಕುಕ್ಕರ್ ಬ್ಲಾಸ್ಟ್ (Cooker Blast) ಪ್ರಕರಣದ ತನಿಖೆಯನ್ನು ಎನ್ಐಎ (NIA) ತೀವ್ರಗೊಳಿಸಿದೆ. ಘಟನೆಗೆ ಸಂಬಂಧಿಸಿದಂತೆ ಬೆಂಗಳೂರು, ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ ಸೇರಿದಂತೆ ಆರು ಕಡೆ ದಾಳಿಯನ್ನು ನಡೆಸಿ ಪರಿಶೀಲನೆ ನಡೆಸಿತ್ತು. ಅಲ್ಲದೇ ಉಗ್ರ ಸಂಘಟನೆಯೊಂದಿಗೆ ಸಂಪರ್ಕ ಹೊಂದಿದ್ದ ಶಂಕೆಯ ಮೇರೆಗೆ ಇಬ್ಬರು ಎಂಜಿನಿಯರಿಂಗ್ ವಿದ್ಯಾರ್ಥಿಗಳಾದ (Engineering Students) ರಿಶಾನ್ ಶೇಖ್ ಮತ್ತು ಹೊನ್ನಾಳಿಯ ಎಂಜಿನಿಯರಿಂಗ್ ವಿದ್ಯಾರ್ಥಿಗಳನ್ನು ಬಂಧಿಸಿತ್ತು.
ಕಾಂಗ್ರೆಸ್ ಮುಖಂಡನ ಪುತ್ರ ರಿಯಾನ್ ಶೇಖ್
ಕಾಂಗ್ರೆಸ್ ಮುಖಂಡ ತಾಜುದ್ದೀನ್ ಶೇಖ್ ಮಗ ರಿಶಾನ್ನನ್ನ ಎನ್ಐಎ ವಶಕ್ಕೆ ಪಡೆದಿದೆ. ಬ್ರಹ್ಮಾವರ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ತಾಜುದ್ದೀನ್ರವ್ರು ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಜೊತೆಗೂ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಆದರೆ ಕಾಂಗ್ರೆಸ್ ನಾಯಕನ ಮಗ ರಿಶಾನ್ ಶಂಕಿತ ಉಗ್ರ ಮಾಝ್ ಮುನೀರ್ಗೆ ಗೆಳೆಯನಾಗಿದ್ದ. ಮಂಗಳೂರಿನಲ್ಲಿ ಇಂಜಿನಿಯರಿಂಗ್ ಕಲಿಯುತ್ತಿದ್ದ ರಿಶಾನ್, ಶಾರಿಕ್, ಮಾಜ್ ಮುನೀರ್ ಜೊತೆ ಸಂಪರ್ಕದಲ್ಲಿದ್ದನಂತೆ.
ಶಂಕಿತ ಉಗ್ರ ರಿಶಾನ್ ತಂದೆ ತಾಜುದ್ದೀನ್ ಹಾಗೂ ಕಾಂಗ್ರೆಸ್ ನಾಯಕರ ಬಾಂಧವ್ಯವನ್ನ ರಘುಪತಿ ಭಟ್ ಬಿಚ್ಚಿಟ್ಟಿದ್ದಾರೆ. ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಹಾಗೂ ಯು.ಟಿ ಖಾದರ್ ಜೊತೆ ತಾಜುದ್ದೀನ್ ಇರುವ ಫೋಟೋ ರಿಲೀಸ್ ಮಾಡಿದ್ದಾರೆ. ತಾಜುದ್ದೀನ್ ಸಿದ್ದರಾಮಯ್ಯ, ಡಿಕೆ ಶಿವಕುಮಾರ್, ಯು.ಟಿ ಖಾದರ್ ಪರಮಾಪ್ತ. ಇದೀಗ ತಾಜುದ್ದೀನ್ನನ್ನು ಕಾಂಗ್ರೆಸ್ ಪ್ರಮೋಷನ್ ಕೊಟ್ಟು ಬ್ಲಾಕ್ ಅಧ್ಯಕ್ಷನನ್ನಾಗಿ ಮಾಡುತ್ತಾ? ಇಲ್ಲವೇ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನದಿಂದ ಉಚ್ಛಾಟನೆ ಮಾಡ್ತಾತ್ತಾರಾ ಎಂದು ರಘುಪತಿ ಭಟ್ ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: Mangaluru Blast: ಮಂಗಳೂರು ಸ್ಫೋಟ ಕೇಸ್; ನಿಷೇಧಿತ PFI ಸಂಘಟನೆ ಮುಖಂಡ NIA ವಶಕ್ಕೆ
ಈ ಕುರಿತು ಮಾತನಾಡಿರುವ ಉಡುಪಿಯಲ್ಲಿ ಶಾಸಕ ರಘುಪತಿ ಭಟ್, ಬ್ಲಾಕ್ ಕಾಂಗ್ರೆಸ್ ನಲ್ಲಿ ರಿಶಾನ್ ತಂದೆ ತಾಜುದ್ದೀನ್ ಸಕ್ರಿಯ ಕಾರ್ಯಕರ್ತ. ಅಲ್ಲದೇ ಸಿದ್ದರಾಮಯ್ಯ, ಡಿಕೆ ಶಿವಕುಮಾರ್, ಯು.ಟಿ ಖಾದರ್ ಪರಮಾಪ್ತ. ಈ ಬಗ್ಗೆ ರಾಜ್ಯ ಕಾಂಗ್ರೆಸ್ ಈ ಬಗ್ಗೆ ಸ್ಪಷ್ಟನೆ ಕೊಡಬೇಕು. ಅಲ್ಲದೇ ಕಾಂಗ್ರೆಸ್ ಪಕ್ಷ ಇದರ ಜವಾಬ್ದಾರಿಯನ್ನು ಹೊರಬೇಕು. ಕಾಂಗ್ರೆಸ್ ನಾಯಕರ ಜೊತೆಗಿರುವ ಫೋಟೋವನ್ನು ಬಿಡುಗಡೆ ಮಾಡಿದ್ದೇನೆ.
ಇದನ್ನೂ ಓದಿ: Mangaluru Blast: ಶಾರೀಕ್ಗೆ ಬೆಂಗಳೂರಿನಲ್ಲಿ ಗರ್ಲ್ ಫ್ರೆಂಡ್; ಬಂದಾಗೆಲ್ಲ ಆಕೆಯ ಜೊತೆ ಸುತ್ತಾಟ
ಶಂಕಿತ ಉಗ್ರ ಮಾಝ್ ಮುನೀರ್ ಗೆಳೆಯನಾಗಿದ್ದ ರಿಶಾನ್
ಮಂಗಳೂರಿನಲ್ಲಿ ಎಂಜಿನಿಯರಿಂಗ್ ಓಡುತ್ತಿದ್ದ ರಿಶಾನ್, ಶಂಕಿತ ಉಗ್ರ ಮಾಝ್ ಮುನೀರ್ ಗೆಳೆಯನಾಗಿದ್ದನಂತೆ. ಮಂಗಳೂರಿನ ಕುಕ್ಕರ್ ಬಾಂಬ್ ಸ್ಫೋಟದ ಆರೋಪಿ ಮೊಹಮ್ಮದ್ ಶಾರೀಕ್ ಹಾಗೂ ಶಿವಮೊಗ್ಗದ ಪುರಲೆ ಸಮೀಪದ ತುಂಗಾ ನದಿ ತೀರದಲ್ಲಿ ಪ್ರಯೋಗಿಕ ಸ್ಫೋಟ ನಡೆಸಿದ್ದ ಆರೋಪದಡಿ ಬಂಧತನಾಗಿದ್ದ ಮಾಝ್ ಮುನೀರ್ ಜೊತೆ ಇಬ್ಬರು ವಿದ್ಯಾರ್ಥಿಗಳು ಸಂಪರ್ಕ ಹೊಂದಿದ್ದರಂತೆ. ಅಲ್ಲದೇ ಹಲವು ಚಟುವಟಿಕೆಗಲ್ಲೂ ಭಾಗಿಯಾಗಿದ್ದರುವ ಶಂಕೆ ವ್ಯಕ್ತವಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ