ಮಂಗಳೂರಿನಿಂದ ಬೆಂಗಳೂರಿಗೆ ಬರುತ್ತಿದ್ದ ಬಸ್ ಪಲ್ಟಿ; ಓರ್ವನ ಸಾವು, ಅನೇಕರಿಗೆ ಗಾಯ

ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲ್ಲೂಕಿನ ಹಿರೀಸಾವೆ ಗ್ರಾಮದಲ್ಲಿ ಘಟನೆ ನಡೆದಿದೆ. ಚಾಲಕನ ನಿಯಂತ್ರಣ ತಪ್ಪಿ ಸಾರಿಗೆ ಬಸ್ ಮಗುಚಿದೆ.

Rajesh Duggumane | news18-kannada
Updated:November 25, 2019, 8:57 AM IST
ಮಂಗಳೂರಿನಿಂದ ಬೆಂಗಳೂರಿಗೆ ಬರುತ್ತಿದ್ದ ಬಸ್ ಪಲ್ಟಿ; ಓರ್ವನ ಸಾವು, ಅನೇಕರಿಗೆ ಗಾಯ
ಮಗುಚಿದ ಬಸ್​
  • Share this:
ಹಾಸನ (ನ.25): ಬಸ್​ನಲ್ಲಿದ್ದ 45ಕ್ಕೂ ಹೆಚ್ಚು ಪ್ರಯಾಣಿಕರು ನಿದ್ದೆಯಲ್ಲಿದ್ದರು. ಇದ್ದಕ್ಕಿದ್ದಂತೆ ಕಿವಿ ಗಡಚಿಕ್ಕುವ ಶಬ್ದ ಎಲ್ಲರನ್ನೂ ಎಚ್ಚರಿಸಿತ್ತು. ಇದು ಕನಸೋ ಅಥವಾ ನನಸೋ ಎಂದು ತಿಳಿಯುವ ಒಳಗೆ ಬಸ್​ ಮಗುಚಿ ಬಿದ್ದಿತ್ತು. ಓರ್ವ ಸ್ಥಳದಲ್ಲೇ ಮೃತಪಟ್ಟರೆ, ಅನೇಕರಿಗೆ ಗಾಯಗಳಾಗಿವೆ.

ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲ್ಲೂಕಿನ ಹಿರೀಸಾವೆ ಗ್ರಾಮದಲ್ಲಿ ಘಟನೆ ನಡೆದಿದೆ. ಚಾಲಕನ ನಿಯಂತ್ರಣ ತಪ್ಪಿ ಸಾರಿಗೆ ಬಸ್ ಮಗುಚಿದೆ. ಈ ವೇಳೆ ಎದುರಿನಿಂದ ಬರುತ್ತಿದ್ದ ಇನೋವಾ ಕಾರಿಗೂ ಬಸ್​ ಡಿಕ್ಕಿ ಹೊಡೆದಿದೆ. ಈ ವೇಳೆ ಬಂಟ್ವಾಳ ತಾಲೂಕಿನ ಮಾನಿ ಗ್ರಾಮದ ಅಭಿಷೇಕ್(29) ಮೃತಪಟ್ಟಿದ್ದಾರೆ.

ಮಂಗಳೂರಿನಿಂದ ಬೆಂಗಳೂರಿಗೆ ಬಸ್​ ಚಲಿಸುತ್ತಿತ್ತು. ಬಸ್​​​ನಲ್ಲಿ 46 ಮಂದಿ ಪ್ರಯಾಣಿಸುತ್ತಿದ್ದರು. ಈ ಪೈಕಿ 24 ಮಂದಿ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಗಾಯಾಳುಗಳನ್ನು ಆದಿಚುಂಚನಗಿರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಪೊಲೀಸರು ಸ್ಥಳಕ್ಕೆ ಭೇಟಿ ಪರಿಶೀಲನೆ ನೀಡಿದ್ದಾರೆ. ಹಿರೀಸಾವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
First published: November 25, 2019, 8:47 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading