• Home
  • »
  • News
  • »
  • state
  • »
  • Mangaluru Blast: ಮಂಗಳೂರು ಸ್ಫೋಟ ಕೇಸ್; ನಿಷೇಧಿತ PFI ಸಂಘಟನೆ ಮುಖಂಡ NIA ವಶಕ್ಕೆ

Mangaluru Blast: ಮಂಗಳೂರು ಸ್ಫೋಟ ಕೇಸ್; ನಿಷೇಧಿತ PFI ಸಂಘಟನೆ ಮುಖಂಡ NIA ವಶಕ್ಕೆ

ಸಾಂದರ್ಭಿಕಚಿತ್ರ

ಸಾಂದರ್ಭಿಕಚಿತ್ರ

ಈತ 10 ದಿನಗಳ ಹಿಂದೆ ಜಾಮೀನಿನ ಮೇಲೆ ಹೊರ ಬಂದಿದ್ದನು. ಈ ಮಧ್ಯೆ ಇಂದು ದುಬೈಗೆ (Dubai) ಹಾರಲು ಪಿಎಫ್​ಐ ಮುಖಂಡ ಇಜಾಜ್ ಪ್ಲಾನ್ ಮಾಡಿಕೊಂಡಿದ್ದ ಎಂದು ತಿಳಿದು ಬಂದಿದೆ.

  • Share this:

ಮಂಗಳೂರು ಆಟೋ ಸ್ಫೋಟಕ್ಕೆ (Mangaluru Auto Blast) ಸಂಬಂಧಿಸಿದಂತೆ ಎನ್​ಐಎ ಅಧಿಕಾರಿಗಳು (NIA Investigation) ತನಿಖೆ ಆರಂಭಿಸಿದ್ದು, ನಿಷೇಧಿತ ಪಿಎಫ್​ಐ (PFI) ಸಂಘಟನೆ ಮುಖಂಡನೋರ್ವನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ. ಇತ್ತ ಮಂಗಳೂರು ವಿಮಾನ ನಿಲ್ದಾಣದಲ್ಲಿ (Mangaluru Airport) ಪಿಎಫ್​ಐ ಮುಖಂಡ ಇಜಾಜ್​ ಎಂಬಾತನನ್ನು ಎನ್​ಐಎ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ವಶಕ್ಕೆ ಪಡೆದಿರುವ ಪಿಎಫ್​ಐ ಮುಖಂಡ ಇಜಾಜ್​ ದ‌ಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಪಾಣೆಮಂಗಳೂರು ನಿವಾಸಿ ಎಂದು ತಿಳಿದು ಬಂದಿದೆ. ಪಿಎಫ್​ಐ ನಿಷೇಧವಾದ (PFI Ban) ವೇಳೆ ದಕ್ಷಿಣ ಕನ್ನಡ ಜಿಲ್ಲೆಯ ಹಲವು ಪಿಎಫ್​ಐ ಮುಖಂಡರನ್ನು (PFI Leaders) ಬಂಧಿಸಲಾಗಿತ್ತು. ಈ ವೇಳೆ ಬಂಧಿತನಾಗಿದ್ದ ಈತ 10 ದಿನಗಳ ಹಿಂದೆ ಜಾಮೀನಿನ ಮೇಲೆ ಹೊರ ಬಂದಿದ್ದನು. ಈ ಮಧ್ಯೆ ಇಂದು ದುಬೈಗೆ (Dubai) ಹಾರಲು ಪಿಎಫ್​ಐ ಮುಖಂಡ ಇಜಾಜ್ ಪ್ಲಾನ್ ಮಾಡಿಕೊಂಡಿದ್ದ ಎಂದು ತಿಳಿದು ಬಂದಿದೆ.


ಆಸ್ಪತ್ರೆಯಲ್ಲಿಯೂ ಗಾಯಾಳುಗಳಿಗೆ ಚಿಕಿತ್ಸೆ


ಆಟೋ ಸ್ಪೋಟದಲ್ಲಿ ಗಾಯಗೊಂಡಿರುವ  ಅನುಮಾನಾಸ್ಪದ ವ್ಯಕ್ತಿ ಹಾಗೂ ಚಾಲಕ  ಪುರುಷೋತ್ತಮ್ ಗೆ ಚಿಕಿತ್ಸೆ ಫಾದರ್ ಮುಲ್ಲಾರ್ ಆಸ್ಪತ್ರೆಯ ಐಸಿಯು ಬರ್ನಿಂಗ್ ವಾರ್ಡ್​​ನಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಐಸಿಯು ಹೊರಗೆ ಪೊಲೀಸರನ್ನು ನಿಯೋಜಿಸಲಾಗಿದೆ. ಚಾಲಕ ಪುರುಷೋತ್ತಮ್​ ಪತ್ನಿ ಹಾಗೂ ಕುಟುಂಬಸ್ಥರನ್ನು ಸಹ ಪೊಲೀಸರು  ಆಸ್ಪತ್ರೆಯೊಳಗೆ ಬಿಡುತ್ತಿಲ್ಲ.


ಮೈಸೂರಿನ ನಿವಾಸದ ಬಳಿ ಪೊಲೀಸ್ ಭದ್ರತೆ


ಅನುಮಾನಾಸ್ಪದ ಗಾಯಾಳು ವಾಸವಾಗಿದ್ದ ಮೈಸೂರಿನ ನಿವಾಸದ ಬಳಿ ಪೊಲೀಸರನ್ನು ನಿಯೋಜಿಸಲಾಗಿದೆ. ಮೈಸೂರಿನ ಮೇಟಗಳ್ಳಿಯ ಲೋಕನಾಯಕ ನಗರದ 10ನೇ ಕ್ರಾಸ್​​ನಲ್ಲಿ ಶಂಕಿತ ವ್ಯಕ್ತಿ ವಾಸವಾಗಿದ್ದನು. ಈ ವೇಳೆ ಮನೆಯ ಮಾಲೀಕರಿಗೆ ನಾನು ಹುಬ್ಬಳ್ಳಿ ಮೂಲದವನು ಎಂದು ಹೇಳಿ ಪ್ರೇಮ್​ರಾಜ್ ಹೆಸರಿನ ನಕಲಿ ಆಧಾರ್ ಕಾರ್ಡ್​ ನೀಡಿದ್ದನು ಎಂದು ತಿಳಿದು ಬಂದಿದೆ.


ಇದನ್ನೂ ಓದಿ:  Mangaluru Auto Blast: ಮಂಗಳೂರು ನಗರದಲ್ಲೇ ಸ್ಫೋಟಕ್ಕೆ ನಡೆದಿತ್ತಾ ಪ್ಲಾನ್? ಕೇಸ್​ಗೆ ಕೊಯಂಬತ್ತೂರು ನಂಟು?


ನಕಲಿ ಆಧಾರ್ ಕಾರ್ಡ್​ ಬಳಕೆ


ಮಂಗಳೂರು ಆಟೋ ಸ್ಫೋಟಕ್ಕೆ (Mangaluru Auto Blast Case) ಸಂಬಂಧಿಸಿದಂತೆ ಗಾಯಗೊಂಡಿರುವ ಪ್ರಯಾಣಿಕನ (Passenger) ಬಳಿ ಪತ್ತೆಯಾದ ಆಧಾರ್ ಕಾರ್ಡ್​ ನಕಲಿ (Fake Aadhar Card) ಎಂದು ಗೊತ್ತಾಗಿದೆ. ಆಧಾರ್ ಕಾರ್ಡ್​ ನಲ್ಲಿರುವ ಹೆಸರು, ವಿಳಾಸ ಮತ್ತು ಆಧಾರ್ ಸಂಖ್ಯೆ ಎಲ್ಲವೂ ಸತ್ಯ. ಆದರೆ ಫೋಟೋ ಮಾತ್ರ ನಕಲಿ ಎಂಬುವುದು ಪೊಲೀಸರ ತನಿಖೆಯಲ್ಲಿ (Police Investigation) ತಿಳಿದು ಬಂದಿದೆ.


ಆಧಾರ್ ಕಾರ್ಡ್​​ನಲ್ಲಿರುವ ಅಸಲಿ ಪ್ರೇಮ್​ರಾಜ್​ ರೈಲ್ವೆ ಇಲಾಖೆಯ ಉದ್ಯೋಗಿಯಾಗಿದ್ದು, ತುಮಕೂರಿನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಮೂಲತಃ ಹುಬ್ಬಳ್ಳಿ (Hubballi) ಮೂಲದ ಪ್ರೇಮ್​ರಾಜ್​ ಪೋಷಕರು ಕಳೆದ 25 ವರ್ಷಗಳಿಂದ ನಗರದ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದಾರೆ. ನಕಲಿ ಆಧಾರ್ ಕಾರ್ಡ್​ ಬಳಸಿಯೇ ಈ ಪ್ರಯಾಣಿಕ ಮೈಸೂರಿನಲ್ಲಿ ಬಾಡಿಗೆ ಮನೆ ಪಡೆದುಕೊಂಡಿದ್ದನು.


ಆಧಾರ್ ಕಾರ್ಡ್​ನಲ್ಲಿರುವ ಫೋಟೋ ನಕಲಿ


ನ್ಯೂಸ್ 18 ಕನ್ನಡದ ಜೊತೆ ಮಾತನಾಡಿದ ಪ್ರೇಮ್​ರಾಜ್​ ತಂದೆ ಮಾರುತಿ, ಶನಿವಾರ ರಾತ್ರಿ ಕೇಶವಾಪುರ ಠಾಣೆಯ ಹಿರಿಯ ಪೊಲೀಸರು ಮನೆಗೆ ಬಂದಿದ್ದರು. ಆಧಾರ್ ಕಾರ್ಡ್​ ತೋರಿಸಿ ಕೆಲ ಮಾಹಿತಿಗಳನ್ನು ಕೇಳಿದ್ದರು. ಆಧಾರ್ ಕಾರ್ಡ್​ನಲ್ಲಿರುವ ಸಂಖ್ಯೆ, ಹೆಸರು ಮತ್ತು ವಿಳಾಸ ಎಲ್ಲವೂ ನಿಜ ಆಗಿತ್ತು. ಆದ್ರೆ ಆಧಾರ್ ಕಾರ್ಡ್​ನಲ್ಲಿರುವ ಫೋಟೋ ನಮ್ಮ ಮಗನದ್ದು ಆಗಿರಲಿಲ್ಲ ಎಂದು ಹೇಳಿದರು.


ಇದನ್ನೂ ಓದಿ:  Mangaluru Blast: ವಿಳಾಸ, ಆಧಾರ್ ಸಂಖ್ಯೆ ಸತ್ಯ, ಫೋಟೋ ನಕಲಿ; ರಿಯಲ್ ಪ್ರೇಮ್​ರಾಜ್​ ತಂದೆಯ Exclusive ಹೇಳಿಕೆ


ಆಟೋ ಸ್ಫೋಟದ ಹಿಂದೆ ಉಗ್ರರ ಕೈವಾಡ


ಮಂಗಳೂರಿನ ನಾಗುರಿಯಲ್ಲಿ (Naguri, Mangaluru_ ನಡೆದ ಆಟೋ ಸ್ಫೋಟದ (Auto Blast) ಹಿಂದೆ ಉಗ್ರರ ಕೈವಾಡ ಇರೋದು ದೃಢವಾಗಿದೆ. ಇದು ಅನಿರೀಕ್ಷಿತವಾಗಿ ಸ್ಪೋಟಗೊಂಡಿದ್ದಲ್ಲ. ಇದೊಂದು ಉಗ್ರ ಕೃತ್ಯ ಎಂದು ಡಿಜಿಪಿ ಪ್ರವೀಣ್ ಸೂದ್ (DGP Praveen Sood) ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ.

Published by:Mahmadrafik K
First published: