• Home
  • »
  • News
  • »
  • state
  • »
  • Autorickshaw Explodes: ಪ್ರಯಾಣಿಕನಿಂದ ಅಸ್ಪಷ್ಟ ಮಾಹಿತಿ, ಕುಕ್ಕರ್ ಬಾಂಬ್ ಸ್ಫೋಟದ ಸಾಧ್ಯತೆ

Autorickshaw Explodes: ಪ್ರಯಾಣಿಕನಿಂದ ಅಸ್ಪಷ್ಟ ಮಾಹಿತಿ, ಕುಕ್ಕರ್ ಬಾಂಬ್ ಸ್ಫೋಟದ ಸಾಧ್ಯತೆ

ಮಂಗಳೂರು ಬ್ಲಾಸ್ಟ್​ ಕೇಸ್

ಮಂಗಳೂರು ಬ್ಲಾಸ್ಟ್​ ಕೇಸ್

Mysterious Blast in Auto: ಸದ್ಯ ಸ್ಫೋಟಗೊಂಡ ಆಟೋವನ್ನು ಪೊಲೀಸರು ಘಟನಾ ಸ್ಥಳಕ್ಕೆ ಮತ್ತೆ ತಂದಿದ್ದಾರೆ. ಆಟೋದ ಸುತ್ತ ಟೇಪ್ ಕಟ್ಟಿ ಸಾರ್ವಜನಿಕರು ಬರದಂತೆ ಭದ್ರಪಡಿಸಲಾಗಿದೆ.

  • Share this:

ಮಂಗಳೂರಿನ ನಾಗುರಿಯಲ್ಲಿ (Naguri, Mangaluru) ಶನಿವಾರ (ನವೆಂಬರ್ 20, 2022) ಸಂಜೆ ಸುಮಾರು 4.29ಕ್ಕೆ KA19 AA8471 ಸಂಖ್ಯೆಯ ಚಲಿಸುತ್ತಿದ್ದ ದುರ್ಗಾಪರಮೇಶ್ವರಿ ಹೆಸರಿನ ಆಟೋ ರಿಕ್ಷಾದಲ್ಲಿ ದಿಢೀರ್ ನಿಗೂಢ ಸ್ಫೋಟವಾಗಿತ್ತು (Blast). ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು (Police Investigation) ಎಲ್ಲಾ ಆಯಾಮದಲ್ಲಿಯೂ ತನಿಖೆ ನಡೆಸುತ್ತಿದ್ದಾರೆ. ಸಿಎಂ ಬಸವರಾಜ್ ಬೊಮ್ಮಾಯಿ (CM Basavaraj Bommai) ಮಂಗಳೂರಿಗೆ (Mangaluru) ಬಂದ ವೇಳೆಯೇ ಈ ನಿಗೂಢ ಸ್ಫೋಟ ನಡೆದಿರೋದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಇತ್ತ ಎನ್​ಐಎ ತಂಡ (NIA Team) ಸಹ ಸ್ಫೋಟ ನಡೆದ ಸ್ಥಳಕ್ಕೆ ಭೇಟಿ ನೀಡುವ ಸಾಧ್ಯತೆಗಳಿವೆ ಎಂಬ ಮಾಹಿತಿ ಲಭ್ಯವಾಗಿದೆ. ಸ್ಫೋಟದಲ್ಲಿ ಆಟೋದ ಒಳಭಾಗದಲ್ಲಿ ಭಾರೀ ಪ್ರಮಾಣದ ಹಾನಿಯುಂಟಾಗಿದ್ದು, ಪ್ರಯಾಣಿಕ (Passenger) ಮತ್ತು ಆಟೋ ಚಾಲಕ (Auto Driver) ಗಂಭೀರವಾಗಿ ಗಾಯಗೊಂಡಿದ್ದಾರೆ. ಇಂದು ಮಂಗಳೂರಿಗೆ ಎಡಿಜಿಪಿ ಅಲೋಕ್ ಕುಮಾರ್ (ADGO Alok Kumar) ಭೇಟಿ ನೀಡಲಿದ್ದಾರೆ.


ಸ್ಫೋಟದ ತೀವ್ರತೆಗೆ ಭಾರೀ ಪ್ರಮಾಣದಲ್ಲಿ ಹೊಗೆ ಹಬ್ಬಿದ್ದರಿಂದ ಸಾರ್ವಜನಿಕರಲ್ಲಿ ಆತಂಕ ಮನೆ ಮಾಡಿತ್ತು. ಆಟೋ ಚಾಲಕ ಮತ್ತು ಪ್ರಯಾಣಿಕನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.


ಕುಕ್ಕರ್ ಬಾಂಬ್?


ಇನ್ನು ಸ್ಫೋಟಗೊಂಡಿರುವ ಆಟೋ ಒಳಗೆ ಕುಕ್ಕರ್​​ನೊಳಗೆ ತಯಾರಿಸುವ ಬಾಂಬ್ ಮಾದರಿ ವಸ್ತು ಪತ್ತೆಯಾಗಿದೆ. ಕುಕ್ಕರ್ ಒಳಭಾಗದಲ್ಲಿ ಮ್ಯಾಟ್ ಮಾದರಿ ವಸ್ತು ಪತ್ತೆಯಾಗಿರುವ ಮಾಹಿತಿ ಲಭ್ಯವಾಗಿದೆ. ನಾಲ್ಕು ಡ್ಯೂರೆಸೆಲ್ ಬ್ಯಾಟರಿ, ಸರ್ಕೀಟ್ ಮಾದರಿಯ ವೈರ್ ಸೇರಿದಂತೆ ಬ್ಲಾಸ್ಟ್​​ಗೆ ಬೇಕಾದ ಸಾಧನ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.


ಈ ಪ್ರಕರಣದಲ್ಲಿ ಲಘು ತೀವ್ರತೆ ಇರುವ ಸ್ಫೋಟಕ ಬಳಕೆ ಮಾಡಿರುವ ಸಾಧ್ಯತೆಗಳಿವೆ. ಈ ಹಿಂದೆ ಹೈದರಾಬಾದ್, ದೆಹಲಿಯಲ್ಲೂ ಕುಕ್ಕರ್ ಬಾಂಬ್ ದಾಳಿ ನಡೆದಿತ್ತು.


mangaluru auto blast case injured passenger given different statement mrq
ಆಟೋ ಬ್ಲಾಸ್ಟ್​


ಪ್ರಯಾಣಿಕನಿಂದ ಅಸ್ಪಷ್ಟ ಮಾಹಿತಿ


ಸ್ಫೋಟದಲ್ಲಿ ಗಂಭೀರವಾಗಿ ಗಾಯಗೊಂಡಿರುವ ಪ್ರಯಾಣಿಕ ಪ್ರೇಮ್ ರಾಜ್​ ಪೊಲೀಸರ ಎದುರು ಗೊಂದಲಕಾರಿ ಹೇಳಿಕೆ ನೀಡುತ್ತಿದ್ದಾನೆ ಎನ್ನಲಾಗಿದೆ. ಒಮ್ಮೆ ತಾನು ಮೈಸೂರಿನಿಂದ ಬಂದಿದ್ದಾಗಿ ಹೇಳಿದ್ದು, ತನ್ನ ಸೋದರ ಬಾಬುರಾವ್​ಗೆ ಕರೆ ಮಾಡಿ ಅಂತ ನಂಬರ್ ನೀಡಿದ್ದಾನೆ. ಆದರೆ ಕರೆ ಮಾಡಿದ್ರೆ ಆ ವ್ಯಕ್ತಿ ಸಂಬಂಧಿಕನೇ ಅಲ್ಲ ಎಂಬ ಅಂಶ ಬೆಳಕಿಗೆ ಬಂದಿದೆ.


ಇದನ್ನೂ ಓದಿ:  Actor Chetan Post: ಪಾಕಿಸ್ತಾನ್ ಜಿಂದಾಬಾದ್ ಎಂದ ವಿದ್ಯಾರ್ಥಿಗಳ ಪರ ನಿಂತ ಚೇತನ್; ನಟನ ಸಮರ್ಥನೆಗೆ ತೀವ್ರ ಆಕ್ರೋಶ


ಗಾಯಾಳು ತನ್ನ ರೂಮ್​ನಲ್ಲಿದ್ದನು. ಬೆಂಗಳೂರಿಗೆ ಹೋಗುತ್ತೇನೆಂದು ಇಲ್ಲಿಂದ ಹೋಗಿದ್ದ. ಇದಕ್ಕಿಂತ ಆತನ ಬಗ್ಗೆ ನನಗೆ ಹೆಚ್ಚಿನ ಮಾಹಿತಿ ಗೊತ್ತಿಲ್ಲ ಎಂದು ಫೋನ್ ಸ್ವೀಕರಿಸಿದ ವ್ಯಕ್ತಿ ಹೇಳಿರುವ ಮಾಹಿತಿ ಲಭ್ಯವಾಗಿದೆ. ಆಟೋದಲ್ಲಿ ಪತ್ತೆಯಾದ ಗುರುತಿನ ಚೀಟಿಯಿಂದ ಗಾಯಾಳು ಪ್ರೇಮ್​ರಾಜ್ ಎಂದು ತಿಳಿದು ಬಂದಿದೆ. ಪ್ರೇಮ್​ರಾಜ್​ ಹಿಂದಿ ಮಾತನಾಡುವ ವ್ಯಕ್ತಿಯಾಗಿದ್ದಾನೆ.


mangaluru auto blast case injured passenger given different statement mrq
ಆಟೋ ಬ್ಲಾಸ್ಟ್​


ಸದ್ಯ ಸ್ಫೋಟಗೊಂಡ ಆಟೋವನ್ನು ಪೊಲೀಸರು ಘಟನಾ ಸ್ಥಳಕ್ಕೆ ಮತ್ತೆ ತಂದಿದ್ದಾರೆ. ಆಟೋದ ಸುತ್ತ ಟೇಪ್ ಕಟ್ಟಿ ಸಾರ್ವಜನಿಕರು ಬರದಂತೆ ಭದ್ರಪಡಿಸಲಾಗಿದೆ.


ತನಿಖೆಗೆ NIA ಟೀಂ?


ಆಟೋ ಸ್ಫೋಟ ಹಿನ್ನೆಲೆ ಇಂದು ಬೆಂಗಳೂರಿನಿಂದ ಮಂಗಳೂರಿಗೆ ಎನ್​​​ಐಎ ತಂಡ ಆಗಮಿಸುವ ಸಾಧ್ಯತೆಗಳಿವೆ. ಸಿಎಂ ಬೊಮ್ಮಾಯಿ ಮಂಗಳೂರು ಭೇಟಿ ಬೆನ್ನಲ್ಲೇ ಸ್ಫೋಟವಾಗಿರುವ ಹಿನ್ನೆಲೆ ಪ್ರಕರಣವನ್ನು ರಾಜ್ಯ ಗೃಹ ಇಲಾಖೆ ಗಂಭೀರವಾಗಿ ಪರಿಗಣಿಸಿದೆ. ಈ ಹಿನ್ನೆಲೆ ಇಂದು ಬೆಂಗಳೂರಿನಿಂದ ಮತ್ತಷ್ಟು ಬಾಂಬ್ ತಜ್ಞರ ತಂಡ ಆಗಮಿಸಲಿದೆ ಎನ್ನಲಾಗಿದೆ. ಉಗ್ರ ಕೃತ್ಯದ ಆಯಾಮದಲ್ಲಿ ಎನ್​​ಐಎ ತನಿಖೆ ನಡೆಸುವ ಸಾಧ್ಯತೆಗಳಿವೆ. ಮತ್ತೊಂದು ಕಡೆ ಶ್ವಾನದಳದಿಂದ ಸ್ಥಳದ ಪರಿಶೀಲನೆ ನಡೆಸಲಾಗುತ್ತಿದೆ.


ಇದನ್ನೂ ಓದಿ:  Voters Data Steal: ಮತದಾರರ ಮಾಹಿತಿ ಕನ್ನ; ಕಾಂಗ್ರೆಸ್ ಆರೋಪಕ್ಕೆ 5 ಅಂಶಗಳಲ್ಲಿ ಸಿಎಂ ತಿರುಗೇಟು


ಪ್ರಯಾಣಿಕನ ಬಳಿಯಲ್ಲಿರೋದು ನಕಲಿ ಆಧಾರ್ ಕಾರ್ಡ್​ ?


ಪೊಲೀಸರು ಪ್ರಯಾಣಿಕನನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಆಟೋದಲ್ಲಿ ಪತ್ತೆಯಾಗಿರುವ ಪ್ರೇಮ್ ರಾಜ್ ಕೊಣಗಿಯ ಆಧಾರ್ ಕಾರ್ಡ್​ ನಕಲಿ ಎನ್ನಲಾಗಿದೆ. ಆಧಾರ್​ ಕಾರ್ಡ್​ನಲ್ಲಿ ಪ್ರೇಮ್​ರಾಜ್​ ಹುಬ್ಬಳ್ಳಿಯ ನಿವಾಸಿ ಎಂದು ದಾಖಲಾಗಿದೆ. ಸದ್ಯ ಪ್ರೇಮ್​ರಾಜ್​ ಅರೆಪ್ರಜ್ಞಾವಸ್ಥೆಯಲ್ಲಿದ್ದು, ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ.

Published by:Mahmadrafik K
First published: