News18 India World Cup 2019

ಮಂಗಳೂರಿನ ಪಾತಕಿ ಮಲಬಾರಿ ಪಾಕಿಸ್ತಾನದಲ್ಲೇ ಕೂತು ಬಿಜೆಪಿ ಮುಖಂಡರ ಹತ್ಯೆಗೆ ಸಂಚು..!

ಡಬಲ್, ಬಿಗ್ ಬಾಸ್, ನಾಯಕ್, ನಾರಾಯಣ ಎಂದು ಅಡ್ಡನಾಮಗಳನ್ನು ಹೊಂದಿರುವ ದಾವೂದ್ ಇಬ್ರಾಹಿಂ ಬಂಟನ ನಿಜಕತೆ ಗೊತ್ತೇ? ಆತನೇ ರಶೀದ್ ಶೇಖ್ ಅಲಿಯಾಸ್ ರಶೀದ್ ಮಲಬಾರಿ. ಮಹಾರಾಷ್ಟ್ರದಲ್ಲಿ 90ರ ದಶಕದಲ್ಲಿ ಭೂಗತ ಚಟುವಟಿಕೆಗಳಲ್ಲಿ ನಿಷ್ಣಾತನಾಗಿದ್ದ ಈತ ಮೂಲತಹ ಕರಾವಳಿಯ ಉಡುಪಿಯವನು. ಮುಂಬಯಿ ಭೂಗತ ಲೋಕದಲ್ಲಿ ಆತ ಮಲಬಾರಿ ಎಂದು ಗುರುತಿಸಿಕೊಂಡು ಕ್ರಮೇಣ ಅದೇ ಹೆಸರನ್ನು ತನಗೆ ಅಂಟಿಸಿಕೊಂಡ! ಈಗ ಈವನಿಂದ ಇದೆ ಬಿಜೆಪಿಯಾ ನಾಯಕರಿಗೆ ಜೀವ ಬೆದರಿಕೆ.


Updated:April 11, 2018, 2:38 PM IST
ಮಂಗಳೂರಿನ ಪಾತಕಿ ಮಲಬಾರಿ ಪಾಕಿಸ್ತಾನದಲ್ಲೇ ಕೂತು ಬಿಜೆಪಿ ಮುಖಂಡರ ಹತ್ಯೆಗೆ ಸಂಚು..!
ರಷೀದ್ ಮಲಬಾರಿ

Updated: April 11, 2018, 2:38 PM IST
- ಆಲ್ವಿನ್ ಮೆಂಡೋನ್ಸ, ನ್ಯೂಸ್18 ಕನ್ನಡ

ಬೆಂಗಳೂರು(ಏ. 11): ಕರಾವಳಿಯ ಗ್ಯಾಂಗ್​ಸ್ಟರ್ ರಷೀದ್ ಮಲಬಾರಿ ಪಾಕಿಸ್ತಾನದಲ್ಲೇ ಕೂತು ಕರ್ನಾಟಕದ ಬಿಜೆಪಿ ಮುಖಂಡರ ಹತ್ಯೆಗೆ ಸ್ಕೆಚ್ ಹಾಕುತ್ತಿರುವ ಆತಂಕಕಾರಿ ಸುದ್ದಿ ಕೇಳಿಬರುತ್ತಿದೆ. ಕೇಂದ್ರ ಗುಪ್ತಚರ ಇಲಾಖೆಯಿಂದಲೇ ರಾಜ್ಯ ಪೊಲೀಸ್​ಗೆ ಅಲರ್ಟ್ ಬಂದಿದೆ. ಯಾರು ಈ ರಷೀದ್ ಮಲಬಾರಿ..?  ಡಬಲ್, ಬಿಗ್ ಬಾಸ್, ನಾಯಕ್, ನಾರಾಯಣ ಎಂಬ ಅಡ್ಡನಾಮಗಳನ್ನು ಹೊಂದಿರುವ ಈತನ ನಿಜಕತೆ ನಿಜಕ್ಕೂ ರೋಚಕ.

ರಶೀದ್ ಶೇಖ್ ಅಲಿಯಾಸ್ ರಶೀದ್ ಮಲಬಾರಿ. ಮಹಾರಾಷ್ಟ್ರದಲ್ಲಿ 90ರ ದಶಕದಲ್ಲಿ ಭೂಗತ ಚಟುವಟಿಕೆಗಳಲ್ಲಿ ನಿಷ್ಣಾತನಾಗಿದ್ದ ಈತ ಮೂಲತಃ ಕರಾವಳಿಯ ಉಡುಪಿಯವನು. ಮುಂಬಯಿ ಭೂಗತ ಲೋಕದಲ್ಲಿ ಆತ ಮಲಬಾರಿ ಎಂದು ಗುರುತಿಸಿಕೊಂಡು ಕ್ರಮೇಣ ಅದೇ ಹೆಸರನ್ನು ತನಗೆ ಅಂಟಿಸಿಕೊಂಡ!  ಈತ ದಾವೂದ್ ಇಬ್ರಾಹಿಂ ತಂಡದ, ಅದರಲ್ಲೂ ಚೋಟಾ ಶಕೀಲ್ ತಂಡದ ಸದಸ್ಯರಲ್ಲಿ ಒಬ್ಬ. ಮಂಗಳೂರು ಪೊಲೀಸರಿಂದ 2009ರಲ್ಲಿ ಬಂಧಿತನಾಗಿದ್ದ ಈ ದಾವೂದ್ ಬಂಟ ಜೈಲಿನ ಕಂಬಿಗಳನ್ನು ಎಣಿಸುತ್ತಿದ್ದ, ಬೆಳಗಾವಿ ಜೈಲಿನಲ್ಲಿ ಇಡಲ್ಪಟ್ಟಿದ್ದ ರಶೀದ್ ಮಲಬಾರಿಯನ್ನು ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ವರ್ಗಾಯಿಸಲಾಗಿತ್ತು. ಆದರೆ, 2014 ಜುಲೈ 21ರಂದು ಆತನಮೇಲಿರುವ ಪ್ರಕಣಗಳಿಗೆ ಸಂಬಂಧಿಸಿ ಜಾಮೀನು ಸಿಕ್ಕ ಬಳಿಕ ಕರ್ನಾಟಕದಲ್ಲೇ ಇರಬೇಕೆಂದು ನ್ಯಾಯಾಲಯದ ಠರಾವು ಇತ್ತಾದರೂ, ರಾಜ್ಯ ಪೊಲೀಸರ ಕಣ್ಣು ತಪ್ಪಿಸಿ ಪರಾರಿಯಾಗಿದ್ದ. ಅತ್ಯುನ್ನತ ಮೂಲಗಳ ಪ್ರಕಾರ, ಆತ ನೇಪಾಳ ಗಡಿ ದಾಟಿ ದುಬೈ ಸೇರಿಕೊಂಡು, ಈಗ ಪಾಕಿಸ್ತಾನದಲ್ಲಿದ್ದಾನೆ. ಕೇಂದ್ರ ಗುಪ್ತಚರ ಮಾಹಿತಿಗಳ ಪ್ರಕಾರ, ಆತ ಡಿ ಕಂಪೆನಿ ಸೇರಿಕೊಂಡು ಮತ್ತೆ ದೇಶದ್ರೋಹಿ ಚಟುವಟಿಕೆಗಳಲ್ಲಿ ನಿರತನಾಗಿದ್ದಾನೆ.

ಕುತೂಹಲಕಾರಿ ಅಂಶವೆಂದರೆ, ಆತ ಹಿಂದೊಂದು ಬಾರಿ ಪೊಲೀಸರ ಕಣ್ಣಿಗೆ ಮಣ್ಣೆರಚಿ 1997-98ರಲ್ಲಿ ಪಾಕಿಸ್ತಾನಕ್ಕೆ ಪರಾರಿಯಾಗಿದ್ದ. ಕರ್ನಾಟಕ ಪೊಲೀಸರ ಪಾಲಿಗೆ ಸತ್ತೇ ಹೋಗಿದ್ದಾನೆಂಬಂತಹ ಸ್ಥಿತಿ ಇತ್ತು. ಆತ ದಾವೂದ್ ಇಬ್ರಾಹಿಂ ತಂಡದ, ಅದರಲ್ಲೂ ಚೋಟಾ ಶಕೀಲ್ ತಂಡದ ಸದಸ್ಯರಲ್ಲಿ ಒಬ್ಬನಾಗಿ ಮೆರೆಯುತ್ತಿದ್ದ ವಿಚಾರ ಬಹುವರ್ಷಗಳ ಕಾಲ ಪೊಲೀಸರಿಗೆ ಗೊತ್ತೇ ಇರಲಿಲ್ಲ!

ಅನೇಕ ಪಾಪಕೃತ್ಯಗಳನ್ನು ಎಸಗಿದ್ದ ಮಲಬಾರಿ, ಆಗ ಮಂಗಳೂರು ಪೊಲೀಸರ ಬಳಿ ಬಾಯಿಬಿಟ್ಟದ್ದು ದೇಶವನ್ನೇ ಬೆಚ್ಚುವಂತೆ ಮಾಡಿತ್ತು. ಇಂದಿರಾಗಾಂಧಿ ಮೊಮ್ಮಗ ಹಾಗೂ ಬಿಜೆಪಿ ಯುವ ಮುಖಂಡ ವರುಣ್ ಗಾಂಧಿಯನ್ನು ಮತ್ತು ಶ್ರೀರಾಮಸೇನೆಯ ಪ್ರಮೋದ್ ಮುತಾಲಿಕ್ ಅವರನ್ನು ಹೊಡೆದುರುಳಿಸುವುದು ಆತನ ಪುನರಾಗಮನಕ್ಕೆ ಕಾರಣವಾಗಿತ್ತು. ಕೇರಳದ ಕಾಸರಗೋಡಿನಲ್ಲಿ ವಾಸವಾಗಿ ತನ್ನ ಹತ್ಯಾ ಸಂಚನ್ನು ರೂಪಿಸುತ್ತಿದ್ದ. ಚೋಟಾ ಶಕೀಲ್​ನಿಂದ ರಿವಾಲ್ವರ್ ಮತ್ತು ಬುಲೆಟ್​ಗಳು ಮತ್ತು ಹವಾಲಾ ಮೂಲಕ ಹಣವೂ ತಲಪಿತ್ತು. ಆದರೆ ಆ ಬಾರಿ ಮಂಗಳೂರು ಪೊಲೀಸರಿಗೆ ಮಾಹಿತಿ ಸಿಕ್ಕಿ ಬಂಧಿತನಾಗಬೇಕಾಯಿತು. ಆದರೆ 2014 ರಲ್ಲಿ ಪೆರೋಲ್​ನಲ್ಲಿ ಹೊರಬಂದ ರಶೀದ್ ಸದ್ಯ ಪಾಕಿಸ್ತಾನದಲ್ಲಿ ಕುಳಿತು ಬಿಜೆಪಿ ನಾಯಕರ ಹತ್ಯೆಗೆ ಸ್ಕೆಚ್ ಹೆಣೆದಿದ್ದಾನೆ.

ಬಂಧಿತನಾದ ಬಳಿಕ ತನ್ನ ವಕೀಲ ನೌಶಾದ್​ನನ್ನು ಚೋಟಾರಾಜನ್ ಕಡೆಯವರು ಮಂಗಳೂರಲ್ಲಿ ಭೀಭತ್ಸವಾಗಿ ಕೊಲೆಮಾಡಿದ್ದು, ಆತನ ಮನಸ್ಸಿಗೆ ಗಾಯಮಾಡಿತು. ಗುಪ್ತಚರ ಇಲಾಖೆ ಮಾಹಿತಿ ಪ್ರಕಾರ, ಆ ಘಟನೆ ಅವನ ಮನಸ್ಸಿಗೆ ನಾಟಿತ್ತು. ಆಗ ಕರ್ನಾಟಕದಲ್ಲಿ ಬಿಜೆಪಿ ಸರಕಾರದ ಆಡಳಿತ ಇದ್ದದ್ದರಿಂದ ತನ್ನ ವಕೀಲನ ಕೊಲೆಯಲ್ಲಿ ಪೊಲೀಸರ ಪಾತ್ರ  ಇರಬಹುದೆಂಬ ಶಂಕೆ ಆತನಲ್ಲಿತ್ತು.
Loading...

ಅಂತೂ ಇಂತೂ ಮತ್ತೊಮ್ಮೆ ಪಾಕಿಸ್ತಾನ ತಲುಪಿ ದಾವೂದ್ ಗುಂಪು ಸೇರಿರುವ ಮಲಬಾರಿ ಈ ಬಾರಿ ಮತ್ತೆ ಭಾರತದಲ್ಲಿ ದಾಳಿ ನಡೆಸಲು ಉತ್ಸುಕನಾಗಿದ್ದಾನೆ ಎಂಬುದು ಗುಪ್ತಚರ ಇಲಾಖೆ ಮಾಹಿತಿ. ಕೇಂದ್ರದ ಗುಪ್ತಚರ ಇಲಾಖೆ ಈಗಾಗಲೆ ಈ ಬಗ್ಗೆ ರಾಜ್ಯ ಪೊಲೀಸರನ್ನು ಎಚ್ಚರಿಸಿದ್ದು, ಹೆಚ್ಚಿನ ಜಾಗರೂಕತೆ ಪ್ರದರ್ಶಿಸಲು ಸೂಚನೆ ನೀಡಿದೆ.
First published:April 11, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...