ಹೆಂಡತಿ ಜೊತೆ ಜಗಳ, ಅವಳ ತಂಗಿಯೊಡನೆ ಸರಸ: ಅಕ್ಕನ ಗಂಡನ ಜೊತೆ ತಂಗಿ ಪರಾರಿ

Extramarital Affair: ಪತ್ನಿಯನ್ನು ನೋಡಲು ತವರು ಮನೆಗೆ ಬರುತ್ತಿದ್ದ ಮುಸ್ತಾಫ ಆಕೆಯೊಂದಿಗೆ ಜಗಳವಾಡುತ್ತಿದ್ದ. ಆದರೆ ಪತ್ನಿಯ ತಂಗಿಯ ಜೊತೆ ಸಲುಗೆಯಿಂದ ಇದ್ದು ಹೋಗುತ್ತಿದ್ದ. ಅಳಿಯ ಕೆಟ್ಟ ಬುದ್ದಿಯಿಂದ ಮನೆ ರಣರಂಗವಾಗಿತ್ತು.

ಫೈಲ್​ ಫೋಟೋ

ಫೈಲ್​ ಫೋಟೋ

  • Share this:
ಕಾಸರಗೋಡು: ಹರೆಯದ ಯುವತಿ ತನ್ನ ಭಾವನೊಂದಿಗೆ ಪರಾರಿಯಾಗಿರುವ ಘಟನೆ ಇಲ್ಲಿನ ಬೆಳ್ತಂಗಡಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಕಳೆದ ವರ್ಷವಷ್ಟೇ ಅಕ್ಕನೊಂದಿಗೆ ವಿವಾಹವಾಗಿದ್ದ ವ್ಯಕ್ತಿ ಈಗ ಪತ್ನಿಯ ತಂಗಿಯ ಜೊತೆ ಓಡಿ ಹೋಗಿದ್ದಾನೆ ಎಂದು ಯುವತಿಯರ ತಂದೆ ಪೊಲೀಸ್​ ಠಾಣೆಗೆ ದೂರು ನೀಡಿದ್ದಾರೆ. ತಂಗಿ ತನ್ನ ಭಾವನೊಂದಿಗೆ ತೆರಳಿದ್ದು, ಇಬ್ಬರು ಜು.8ರಿಂದ ನಾಪತ್ತೆಯಾಗಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ತಂದೆ-ತಾಯಿ, ಇಬ್ಬರು ಹೆಣ್ಣು ಮಕ್ಕಳಿದ್ದ ಕುಟುಂಬ ಚನ್ನಾಗಿಯೇ ಇತ್ತು. ದೊಡ್ಡ ಮಗಳಿಗೆ ಕಳೆದ ವರ್ಷ ಮುಸ್ತಾಫ ಎಂಬುವರ ಜೊತೆ ಮದುವೆ ಮಾಡಿಕೊಡಲಾಗಿತ್ತು. ಆದರೆ ನವ ದಾಂಪತ್ಯದಲ್ಲಿ ಬಿರುಕು ಮೂಡಿ ಮಗಳು ತವರು ಮನೆ ಸೇರಿದ್ದಳು. ಮನೆಗೆ ಅಳಿಯನಾಗಿ ಬಂದಿದ್ದ ಮುಸ್ತಫ ಪತ್ನಿಯ ತಂಗಿಯ ಮೇಲೆ ಕಣ್ಣಾಕಿದ್ದಾನೆ. ಹರೆಯದ ಯುವತಿಗೂ ಭಾವನೆಡೆಗೆ ಮೋಹಗೊಂಡಿದ್ದಳು ಎನ್ನಲಾಗುತ್ತಿದೆ. ತಂಗಿಯೊಂದಿಗೆ ಅತಿಯಾದ ಸಲುಗೆ ಬೆಳಸಿದ್ದಕ್ಕೆ ಹೆಂಡತಿ, ಮುಸ್ತಾಫ ಜೊತೆ ಜಗಳವಾಡುತ್ತಿದ್ದರು.

ಪತ್ನಿಯನ್ನು ನೋಡಲು ತವರು ಮನೆಗೆ ಬರುತ್ತಿದ್ದ ಮುಸ್ತಾಫ ಆಕೆಯೊಂದಿಗೆ ಜಗಳವಾಡುತ್ತಿದ್ದ. ಆದರೆ ಪತ್ನಿಯ ತಂಗಿಯ ಜೊತೆ ಸಲುಗೆಯಿಂದ ಇದ್ದು ಹೋಗುತ್ತಿದ್ದ. ಅಳಿಯನ ಕೆಟ್ಟ ಬುದ್ದಿಯಿಂದ ಮನೆ ರಣರಂಗವಾಗಿತ್ತು. ಮೊನ್ನೆ ಜು.8ರಂದು ಮುಸ್ತಾಪ ಪತ್ನಿ ಮನೆಯ ಬಳಿ ಕಾರಿನಲ್ಲಿ ಬಂದಿದ್ದಾನೆ. ಈ ವೇಳೆ ತಂಗಿ ಬ್ಯಾಗ್​ ಸಮೇತ ಭಾವನೊಂದಿಗೆ ಪರಾರಿಯಾಗಿದ್ದಾಳೆ.

ಇದನ್ನೂ ಓದಿ: Gadag: 28 ವರ್ಷದ ಹಿಂದೆ ಅಂತರ್ಜಾತಿ ವಿವಾಹ; ಈಗ ಮನೆಗೆ ನುಗ್ಗಿ ಹಲ್ಲೆ- ಮಹಿಳೆ ಸೀರೆ ಎಳೆದ ಕ್ರೂರಿಗಳು

ಹಿರಿಯ ಪುತ್ರಿಯಿಂದ ಪತಿ ದೂರವಾದರೆ, ಕಿರಿಯ ಪುತ್ರಿ ಅಳಿಯನೊಂದಿಗೆ ಪರಾರಿಯಾಗಿರುವುದು ಇಡೀ ಕುಟುಂಬಕ್ಕೆ ಶಾಕ್​ ನೀಡಿದೆ. ಇಬ್ಬರು ಪುತ್ರಿಯರ ಜೀವನವನ್ನು ಸರಿ ಮಾಡಿ ಎಂದು ತಂದೆ ಕಣ್ಣೀರಿಡುತ್ತಿದ್ದಾರೆ. ದೂರು ದಾಖಲಿಸಿಕೊಂಡಿರುವ ಬೆಳ್ತಂಗಡಿ ಪೊಲೀಸರು ಮುಸ್ತಾಫ ಹಾಗೂ ತಂಗಿಯ ಹುಡುಕಾಟ ನಡೆಸಿದ್ದಾರೆ. ಇತ್ತ ವರ್ಷ ತುಂಬುವುದರಲ್ಲೇ ದಾಂಪತ್ಯ ಹಳಿ ತಪ್ಪಿರುವುದಕ್ಕೆ ಹಿರಿಯ ಪುತ್ರಿ ಕಂಗಾಲಾಗಿದ್ದಾರೆ. ಎಲ್ಲಿದ್ದರೂ ವಾಪಸ್​ ಆಗುವಂತೆ ತಂದೆ ಕಿರಿಯ ಪುತ್ರಿಗೆ ಮನವಿ ಮಾಡಿಕೊಳ್ಳುತ್ತಿದ್ದಾರೆ.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್​​ಡೌನ್​ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
Published by:Kavya V
First published: