Cyclone Yasa: ತೌಕ್ತೆ ಬಳಿಕ ಅಬ್ಬರಿಸಲಿದೆ ಯಾಸ ಚಂಡಮಾರುತ; ಕರಾವಳಿಯಲ್ಲಿ ಭಾರೀ ಮಳೆ ನಿರೀಕ್ಷೆ

ಮೇ 23 ರಂದು ಬಂಗಾಳ ಕೊಲ್ಲಿಯಲ್ಲಿ ಚಂಡ ಮಾರುತ ಅಬ್ಬರಿಸುವ ಹಿನ್ನಲೆಯಲ್ಲಿ ರಾಜ್ಯದ ಕರಾವಳಿಯಲ್ಲಿ ಮೇ 23 ರಿಂದ ನಾಲ್ಕು ದಿನಗಳ ಕಾಲ ಭಾರೀ ಮಳೆಯಾಗುವ ಸಾಧ್ಯೆಗಳಿವೆ ಎಂದು ಹವಾಮಾನ ಇಲಾಖೆ ಸೂಚಿಸಿದೆ.

ತೌಕ್ತೆ ಚಂಡಮಾರುತದ ಅಬ್ಬರ

ತೌಕ್ತೆ ಚಂಡಮಾರುತದ ಅಬ್ಬರ

  • Share this:
ಮಂಗಳೂರು (ಮೇ. 20):  ಅರಬ್ಬಿ ಸಮುದ್ರದಲ್ಲಿ ತೌಕ್ತೆ ಚಂಡಮಾರುತ ಅಬ್ಬರಿಸಿದ ಬಳಿಕ ಈಗ ಬಂಗಾಳ ಕೊಲ್ಲಿಯಲ್ಲಿ ಯಾಸ್ ಚಂಡಮಾರುತ ಏಳಲಿದ್ದು, ಇದರ ಪರಿಣಾಮವೂ ರಾಜ್ಯ ಕರಾವಳಿಗೆ ತಟ್ಟುವ ಸಾಧ್ಯತೆಗಳಿವೆ.  ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ ಮಾರುತಗಳು ಬಲಪಡೆದುಕೊಂಡಿದ್ದು, ಚಂಡಮಾರುತವಾಗಿ ಬದಲಾಗಲಿದೆ. ಮೇ 23ರಂದು ಪಶ್ಚಿಮ ಬಂಗಾಳ ಕ್ಕೆ ಅಪ್ಪಳಿಸಲಿದೆ. ಈ ಹಿನ್ನಲೆಯಲ್ಲಿ ರಾಜ್ಯ ಕರಾವಳಿಗೂ ಚಂಡಮಾರುತದ ಪರಿಣಾಮ ಬೀರಲಿದ್ದು, ಭಾರೀ ಮಳೆಯ ಮುನ್ಸೂಚನೆ ಯನ್ನು ರಾಜ್ಯ ಹವಾಮಾನ ಇಲಾಖೆ ನೀಡಿದೆ. ಈಗಾಗಲೇ ಭಾರತೀಯ ಹವಾಮಾನ ಇಲಾಖೆ ಮೇ 31 ರಂದು ಕೇರಳ ಕ್ಕೆ ಮುಂಗಾರು ಪ್ರವೇಶವಾಗುವ ಬಗ್ಗೆ ಮುನ್ಸೂಚನೆ ರಾಜ್ಯಕ್ಕೆ ವಾಡಿಕೆಗಿಂತ ಮೊದಲೇ ಮುಂಗಾರಿನ ಆಗಮನವಾಗುವ ಸಾಧ್ಯತೆ ಗಳಿವೆ. ಮೇ 23 ರಂದು ಬಂಗಾಳ ಕೊಲ್ಲಿಯಲ್ಲಿ ಚಂಡ ಮಾರುತ ಅಬ್ಬರಿಸುವ ಹಿನ್ನಲೆಯಲ್ಲಿ ರಾಜ್ಯದ ಕರಾವಳಿಯಲ್ಲಿ ಮೇ 23 ರಿಂದ ನಾಲ್ಕು ದಿನಗಳ ಕಾಲ ಭಾರೀ ಮಳೆಯಾಗುವ ಸಾಧ್ಯೆಗಳಿವೆ ಎಂದು ಹವಾಮಾನ ಇಲಾಖೆ ಸೂಚಿಸಿದೆ. ರಾಜ್ಯ ಕರಾವಳಿ, ಕೇರಳ ಕರಾವಳಿ ಮತ್ತು ಮಹಾರಾಷ್ಟ್ರ ದ ಕೊಂಕಣ ಪ್ರದೇಶಗಳಿಗೆ ಚಂಡ ಮಾರುತದ ಪ್ರಭಾವ ಕಾಣಿಸಲಿದೆ. 

ರಾಜ್ಯ ಕರಾವಳಿ ಭಾಗಕ್ಕೆ ಮುಂಗಾರು ಪೂರ್ವ ಮಳೆ ಉತ್ತಮವಾಗಿ ಸುರಿದಿದ್ದು, ವಾಡಿಕೆಗಿಂತಲೂ ಹೆಚ್ಚಾಗಿ ಮಳೆ ಸುರಿದಿದೆ. ಇನ್ನೂ ಎರಡು ವಾರಗಳ ಕಾಲ ಮುಂಗಾರು ಪೂರ್ವದ ಕಾಲಾವಧಿ ಇರೋದರಿಂದ ಮತ್ತೆ ಉತ್ತಮ ಮಳೆ ಸುರಿಯುವ ಸಾಧ್ಯತೆ ಗಳಿವೆ. ಮುಂಗಾರು ಪೂರ್ವ ಈ ಭಾರಿ ವಾಡಿಕೆಗಿಂತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ  ಶೇ 188 ರಷ್ಟು ಸುರಿದರೆ,ಉಡುಪಿ ಜಿಲ್ಲೆಯ ಶೇ 284ರಷ್ಟು ಮಳೆಯಾಗಿದೆ.

ಇದನ್ನು ಓದಿ: ಲಾಕ್​ಡೌನ್​ ಎಫೆಕ್ಟ್​​: ಆದಾಯ ನಷ್ಟದಲ್ಲಿ ದೇವಾಲಯಗಳು; ಸಿ ಗುಂಪಿನ ದೇವಸ್ಥಾನಗಳ ಸಹಾಯಕ್ಕೆ ಬಂದ ಸರ್ಕಾರ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ಬಾರಿ ಬಿಸಿಲಿನ ಬೇಗೆ ಹೆಚ್ಚಾಗಿದ್ದರೂ ಕೂಡಾ ನೀರಿನ ಅಭಾವ ಕಾಣಿಸಿಕೊಂಡಿಲ್ಲ. ಮಳೆ‌ಬಿಟ್ಟು ಬಿಟ್ಟು ಸುರಿದ ಕಾರಣ ಹಳ್ಳ-ಕೊಳ್ಳ, ಕೆರೆ ಏರಿ ಗಳೆಲ್ಲಾ ತುಂಬಿ ಕೊಂಡಿದೆ. ನದಿಗಳಲ್ಲಿ ಕೂಡಾ ನೀರು ಬಂದು ನದಿಗಳು ಜೀವ ಕಳೆಯನ್ನು ಹೊಂದಿದೆ. ಸರ್ಕಾರ ದ ವಿಶೇಷ ಅನುದಾನದಿಂದ ಕಿಂಡಿ ಅಣೆಕಟ್ಟು ಗಳನ್ನು ನದಿ ಮತ್ತು ಹಳ್ಳಗಳಿಗೆ ಮಾಡಲಾಗಿದ್ದು, ಮಳೆ ನೀರು ಶೇಖರಣೆಯಾಗಿ ನೀರು ತುಂಬಿದೆ. ಇದರಿಂದಾಗಿ ಅಂತರ್ಜಲವೂ ವೃದ್ಧಿಯಾಗಿದೆ.

ಇದನ್ನು ಓದಿ: ಮಂಡ್ಯ ಬಳಿಕ ತಮಿಳುನಾಡಿನಲ್ಲಿ ಕೊರೋನಾ ದೇವಿಗೆ ವಿಶೇಷ ಪೂಜೆ; ಕೊಯಿಮತ್ತೂರಿನಲ್ಲಿ ದೇವಾಲಯ ನಿರ್ಮಾಣ

ಬಿರು ಬೇಸಿಗೆಯಲ್ಲಿ ನೀರು ಆವಿಯಾಗಿ ನದಿಗಳೆಲ್ಲಾ ಬತ್ತಿ ಹೋಗಿ ನೀರಿಗಾಗಿ ಹಾಹಾಕಾರ ಏರ್ಪಡಬಹುದು ಎಂದು ಅಂದಾಜಿಸಲಾಗಿತ್ತು. ಆದರೆ,  ಮಳೆರಾಯ ಮಾತ್ರ ದಕ್ಷಿಣ ಕನ್ನಡ ಜಿಲ್ಲೆಗೆ ಮಳೆಯ ಅಭಾವ ನೀಡಿಲ್ಲ. ಮುಂಗಾರು ಪೂರ್ವ ಅತ್ಯುತ್ತಮ ವಾಗಿದ್ದು, ಈದೀಗ ಚಂಡಮಾರುತ ದಿಂದಲೂ ಜಲ ಸಂಪನ್ಮೂಲ ವೃದ್ಧಿಯಾಗಿದೆ. ಬಾವಿ-ಕೆರೆಗಳಲ್ಲಿ ನೀರು ಈಗಾಗಲೇ ತುಂಬಿದ್ದು, ಮಳೆ ಒಂದು ತಿಂಗಳು ತಡವಾದರೂ ಸಮಸ್ಯೆಯಿಲ್ಲಾ ಅಂತಾ ಕೃಷಿಕರು ಹೇಳಿಕೊಂಡಿದ್ದಾರೆ.

ಯಾಸ ಚಂಡಮಾರುತ ಮುನ್ನ ತೌಕ್ತೆ ಚಂಡಮಾರುತದ ಅಬ್ಬರಕ್ಕೆ ಕರಾವಳಿ ನಲುಗಿ ಹೋಗಿತ್ತು. ತೌಕ್ತೆ ಚಂಡಮಾರುತ ದ ಪರಿಣಾಮ ದಕ್ಷಿಣ ಕನ್ನಡ‌ ಜಿಲ್ಲೆಯಲ್ಲಿ 87ಮನೆಗಳಿಗೆ ಹಾನಿ ಯಾಗಿತ್ತು. ಅದರಲ್ಲಿ 63ಮನೆಗಳು ಭಾಗಶಃ ಹಾನಿಯಾಗಿ, 23ಮನೆಗಳು ಪೂರ್ತಿ ನಾಶವಾಗಿತ್ತು. ತೌಕ್ತೆ ಚಂಡಮಾರುತದ ಹಿನ್ನಲೆಯಲ್ಲಿ ರಾಜ್ಯದ 22 ತಾಲೂಕಗಳ 333 ಕಡೆಗಳಲ್ಲಿ ಹಾನಿಯಾಗಿದ್ದು ,ಒಟ್ಟು 6 ಜೀವ ಬಲಿಯಾಗಿತ್ತು 2. 87ಹೆಕ್ಟರ್ ಭೂ ಪ್ರದೇಶದಲ್ಲಿ ಹಾನಿಯಾಗಿತ್ತು.
Published by:Seema R
First published: