• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Water Rationing In Mangaluru: ಮಂಗಳೂರು ನಗರಕ್ಕೆ ನೀರು ಪೂರೈಕೆ ವ್ಯವಸ್ಥೆಯಲ್ಲಿ ಮಹತ್ವದ ನಿರ್ಧಾರ

Water Rationing In Mangaluru: ಮಂಗಳೂರು ನಗರಕ್ಕೆ ನೀರು ಪೂರೈಕೆ ವ್ಯವಸ್ಥೆಯಲ್ಲಿ ಮಹತ್ವದ ನಿರ್ಧಾರ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Mangaluru News: ಕಟ್ಟಡ ರಚನೆ, ಇತರ ನಿರ್ಮಾಣ ಕಾಮಗಾರಿಗಳು ಹಾಗೂ ವಾಹನ ತೊಳೆಯುವ ಸರ್ವಿಸ್ ಸೆಂಟರ್​ಗಳ ಜೋಡಣೆಯನ್ನು ಮುಂದಿನ ಸೂಚನೆಯವರೆಗೆ ಕಡಿತಗೊಳಿಸಲಾಗುತ್ತದೆ.

  • News18 Kannada
  • 2-MIN READ
  • Last Updated :
  • Mangalore, India
  • Share this:

ಮಂಗಳೂರು: ನೇತ್ರಾವತಿ ನದಿಯ ನೀರಿನ ಒಳಹರಿವು ಈಗಾಗಲೇ ನಿಂತಿರುವುದರಿಂದ ಮತ್ತು ಬೇಸಿಗೆ ಬಿರು ಬಿಸಿಲಿನಿಂದಾಗಿ ನಗರಪಾಲಿಕೆಯ ತುಂಬೆ ಕಿಂಡಿ ಅಣೆಕಟ್ಟಿನಲ್ಲಿ ನೀರಿನ ಮಟ್ಟ (Water Level) ತೀವ್ರವಾಗಿ ಕುಸಿಯುತ್ತಿದ್ದು, ದಿನನಿತ್ಯ ನೀರಿನ ಪೂರೈಕೆ ಕಷ್ಟಕರವಾಗಿದೆ. ಹೀಗಾಗಿ ಸಾರ್ವಜನಿಕರಿಗೆ ಈ ಬೇಸಿಗೆಯ ಅಂತ್ಯದವರೆಗೆ ಕುಡಿಯುವ ನೀರಿನ ಪೂರೈಕೆಯಲ್ಲಿ (Mangaluru Water Supply) ತೊಂದರೆಯಾಗದಂತೆ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಮೇ 4 ರಿಂದ ರೇಷನಿಂಗ್ ಮೂಲಕ ನೀರು ಸರಬರಾಜು (Water Rationing In Mangaluru) ಮಾಡುವುದಾಗಿ ದಕ್ಷಿಣ ಕನ್ನಡ ಜಿಲ್ಲಾಡಳಿತ (Dakshina Kannada News) ತಿಳಿಸಿದೆ. ಈ ಕುರಿತ ಸಭೆಯ ಬಳಿಕ ಜಿಲ್ಲಾಧಿಕಾರಿ ಅವರು ಈ ನಿರ್ಧಾರ ಪ್ರಕಟಿಸಿದ್ದಾರೆ.


Netravati river water level decreased see photos
ನೇತ್ರಾವತಿ ನದಿ


ಇಲ್ಲೆಲ್ಲ ನೀರಿಲ್ಲ!
ಕಟ್ಟಡ ನಿರ್ಮಾಣ, ಇತರ ನಿರ್ಮಾಣ ಕಾಮಗಾರಿಗಳು ಹಾಗೂ ವಾಹನ ತೊಳೆಯುವ ಸರ್ವಿಸ್ ಸೆಂಟರ್​ಗಳ ಜೋಡಣೆಯನ್ನು ಮುಂದಿನ ಸೂಚನೆಯವರೆಗೆ ಕಡಿತಗೊಳಿಸಲಾಗುತ್ತದೆ. ಸಾರ್ವಜನಿಕರು ನೀರನ್ನು ಅನವಶ್ಯಕವಾಗಿ ಪೋಲು ಮಾಡುವುದು ಕಂಡು ಬಂದಲ್ಲಿ ಯಾವುದೇ ಸೂಚನೆ ನೀಡದೆ, ಜೋಡಣೆ ಕಡಿತಗೊಳಿಸುವ ಅಧಿಕಾರವನ್ನು ಮಂಗಳೂರು ಮಹಾನಗರ ಪಾಲಿಕೆ ಅಧಿಕಾರಿಗಳು ಹೊಂದಿರುತ್ತಾರೆ.




ಇದನ್ನೂ ಓದಿ: Matsyagandha Express: ಕರಾವಳಿಯ ಕಣ್ಮಣಿ ಮತ್ಸ್ಯಗಂಧ ಎಕ್ಸ್​ಪ್ರೆಸ್​ಗೆ 25 ವರ್ಷ, ಇದು ಕೇವಲ ರೈಲಲ್ಲ, ಬದುಕು!


ಕುಡಿಯುವ ನೀರಿಗೆ ಆದ್ಯತೆ
ಜಲಾಶಯದಲ್ಲಿ ನೀರಿನ ಮಟ್ಟ ಕುಸಿದಿರುವುರಿಂದ ಸದ್ಯ ರೇಷನಿಂಗ್‌ ಮೂಲಕ ಪೂರೈಕೆ ಮಾಡುವ ನೀರನ್ನು ಕುಡಿಯುವುದಕ್ಕಾಗಿ ಆದ್ಯತೆ ನೀಡಲಾಗಿದೆ. ಹೀಗಾಗಿ ಇತರೆ ಕೆಲಸ, ಕಾರ್ಯಗಳಿಗೆ ಬಳಸದಂತೆ ಪಾಲಿಕೆಯು ಸೂಚನೆ ನೀಡಿದೆ.




ಹೇಗಿದೆ ರೇಷನಿಂಗ್‌ ಸಿಸ್ಟಂ?
ಲಭ್ಯವಿರುವ ನೀರನ್ನು ಮಂಗಳೂರು ನಗರ ಪ್ರದೇಶಕ್ಕೆ (ಮಂಗಳೂರು ನಗರ ದಕ್ಷಿಣ) ಮತ್ತು ಸುರತ್ಕಲ್ ಪ್ರದೇಶಕ್ಕೆ (ಮಂಗಳೂರು ನಗರ ಉತ್ತರ ಭಾಗಕ್ಕೆ) ಹೀಗೆ ವಿಭಾಗಗಳನ್ನಾಗಿ ಪರ್ಯಾಯ ದಿನಗಳಲ್ಲಿ (Alternative Days) ರೇಷನಿಂಗ್‌ ಮೂಲಕ ನೀರು ಬಿಡಲು ನಿರ್ಣಯಿಸಲಾಗಿದೆ.


ಇದನ್ನೂ ಓದಿ: Netravati River: ನೇತ್ರಾವತಿಯಲ್ಲಿ ನೀರಿಲ್ಲ, ಮಂಗಳೂರಿನಲ್ಲಿ ಹಾಹಾಕಾರ!


ಅದರಂತೆ ಮೇ 5 ರಂದು ಮಂಗಳೂರು ನಗರ ಉತ್ತರಕ್ಕೆ ಹಾಗೂ ಮೇ 6 ರಂದು ಮಂಗಳೂರು ನಗರ ದಕ್ಷಿಣಕ್ಕೆ ನೀರು ಪೂರೈಕೆ ಮಾಡಲಾಗುತ್ತದೆ. ನಂತರ ನೇತ್ರಾವತಿ ಒಳಹರಿವು ಹೆಚ್ಚಾಗುವ ತನಕ ಇಲ್ಲವೇ ಮಳೆ ಆರಂಭವಾಗುವ ತನಕ ಇದೇ ಕ್ರಮಾನುಗತವಾಗಿ ನೀರು ಪೂರೈಕೆ ನಡೆಯಲಿದೆ.

First published: