HOME » NEWS » State » MANGALORE VILLAGE FORCE WILL HELP FOR CONTROL CORONAVIRUS SAYS MINISTER KOTA SRINIVAS POOJARI RHHSN AKP

ಗ್ರಾಮಕ್ಕೆ ಹರಡುತ್ತಿರುವ ಕೊರೋನಾ ಸೋಂಕು ತಡಗೆ ಗ್ರಾಮಪಡೆ ಸಜ್ಜು; ಸಚಿವ ಕೋಟಾ ಶ್ರೀನಿವಾಸ ಪೂಜಾರಿ

ಜಿಲ್ಲೆಯಲ್ಲಿ ಸುಮಾರು 70 ಕೊರೋನಾ ಚಿಕಿತ್ಸೆ ನೀಡುವ ಖಾಸಗಿ ಆಸ್ಪತ್ರೆಗಳಿದ್ದು, ಈ ಎಲ್ಲಾ ಆಸ್ಪತ್ರೆಗಳಲ್ಲಿ ಕೊರೋನಾ ಚಿಕಿತ್ಸೆ ಮುಂದುವರಿಯಲಿದೆ. ರಾಜ್ಯದಲ್ಲಿ ಎಲ್ಲಿಯೂ ರೆಮೆಡಿಸಿವಿರ್ ಚುಚ್ಚುಮದ್ದಿನ ಅಭಾವವಿಲ್ಲ ಎಂದು ಅವರು ಇದೇ ಸಂದರ್ಭದಲ್ಲಿ ಸ್ವಷ್ಟಪಡಿಸಿದರು. 

news18-kannada
Updated:May 13, 2021, 3:56 PM IST
ಗ್ರಾಮಕ್ಕೆ ಹರಡುತ್ತಿರುವ ಕೊರೋನಾ ಸೋಂಕು ತಡಗೆ ಗ್ರಾಮಪಡೆ ಸಜ್ಜು; ಸಚಿವ ಕೋಟಾ ಶ್ರೀನಿವಾಸ ಪೂಜಾರಿ
ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಸಚಿವ ಕೋಟಾ ಶ್ರೀನಿವಾಸ ಪೂಜಾರಿ.
  • Share this:
ಪುತ್ತೂರು: ದಕ್ಷಿಣಕನ್ನಡದ ನಗರ ಪ್ರದೇಶಗಳಲ್ಲಿ ಕೊರೋನಾ ಸಂಖ್ಯೆ ಹೆಚ್ಚಾಗುತ್ತಿದ್ದು, ಗ್ರಾಮಕ್ಕೂ ಇದು ಹರಡದಂತೆ ತಡೆಯಲು ಗ್ರಾಮಪಡೆಯನ್ನು ಸಜ್ಜುಗೊಳಿಲಾಗಿದೆ ಎಂದು ದಕ್ಷಿಣಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ. ಪುತ್ತೂರಿನಲ್ಲಿ ಮಾಧ್ಯಮಗಳಿಗೆ ಮಾಹಿತಿ ನೀಡಿದ ಅವರು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೋನಾ ಸಮುದಾಯ ಹರಡುವಿಕೆಯ ಹಂತಕ್ಕೆ ತಲುಪಿರುವ ವಾಸ್ತವತೆಯನ್ನು ಒಪ್ಪಿ ಕೊಳ್ಳಬೇಕಿದೆ ಎಂದರು. ಈ ಹರಡುವಿಕೆಯು ಗ್ರಾಮಗಳಿಗೂ ತಲುಪುದು ಸಾಧ್ಯತೆ ದಟ್ಟವಾಗಿದ್ದು, ಈ ಕಾರಣಕ್ಕಾಗಿ ಜಿಲ್ಲೆಯ 224 ಗ್ರಾಮ ಪಂಚಾಯತಿಗಳಲ್ಲಿ ಗ್ರಾಮಪಡೆಯನ್ನು ರಚಿಸಲಾಗಿದೆ ಎಂದರು.

ಗ್ರಾಮಪಡೆ ರಚನೆಯಿಂದ ಗ್ರಾಮೀಣ ಭಾಗದಲ್ಲಿ ಕೊರೋನಾ ಸೋಂಕ ತಡೆಯಲು ಸಾಧ್ಯವಿದೆ ಎಂದ ಅವರು, ಎಲ್ಲಾ ಗ್ರಾಮಪಡೆಗಳೂ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ ಎಂದರು. ತಮ್ಮ ತಮ್ಮ ಪಂಚಾಯತ್ ವ್ಯಾಪ್ತಿಗೆ ಬರುವ ಹೊರ ಜಿಲ್ಲೆಯ ಅಥವಾ ಹೊರ ರಾಜ್ಯದ ಜನರ ಮೇಲೆ ಕಣ್ಗಾವಲನ್ನು ಈ ಗ್ರಾಮಪಡೆಗಳು ಇಡಲಿವೆ. ಈ ಕಾರ್ಯಪಡೆಯ ಮೂಲಕ ಕೊರೋನಾ ಪಾಸಿಟಿವ್ ಬಂದ ವ್ಯಕ್ತಿ ಮನೆಯಲ್ಲೇ ಇರುವಂತೆ ಮನವಿ ಮಾಡಲಾಗುತ್ತದೆ. ಇದರಿಂದಾಗಿ ಗ್ರಾಮೀಣ ಭಾಗದಲ್ಲಿ ಕೊರೋನಾ ಹಬ್ಬುವಿಕೆ ಇತ್ತೀಚಿನ ಬೆಳವಣಿಗೆಯ ಪ್ರಕಾರ ಇಳಿಮುಖವಾಗಿಯೇ ಇದೆ. ಗ್ರಾಮಪಡೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಬಳಸಿಕೊಳ್ಳುವ ಮೂಲಕ ಕೊರೋನಾ ಸಮುದಾಯದ ಹಬ್ಬುವಿಕೆಯನ್ನು ನಿಯಂತ್ರಿಸಲಾಗುವುದು ಎಂದರು.

ಜಿಲ್ಲೆಯ ಎರಡನೇ ಅತೀ ದೊಡ್ಡ ಸರಕಾರಿ ಆಸ್ಪತ್ರೆಯಾಗಿರುವ ಪುತ್ತೂರು ಸರಕಾರಿ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಸಚಿವರು, ಆಸ್ಪತ್ರೆಗೆ ಅಗತ್ಯಕ್ಕೆ ಬೇಕಾದ ವ್ಯವಸ್ಥೆಗಳನ್ನು ತಕ್ಷಣ ಪೂರೈಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ 34 ಹಾಸಿಗೆಗಳನ್ನು ಕೋವಿಡ್ ರೋಗಿಗಳಿಗಾಗಿ  ಮೀಸಲಿಡಲಾಗಿದೆ. ರಾಜ್ಯ ಸರಕಾರ ಎಲ್ಲಾ ತಾಲೂಕು ಆಸ್ಪತ್ರೆಗಳಿಗೆ ತಲಾ 6 ವೆಂಟಿಲೇಟರ್ ಅನ್ನು ಈಗಾಗಲೇ ನೀಡಿ. ಆದರೆ ಸದ್ಯದ ಮಟ್ಟಿಗೆ ಇವುಗಳಲ್ಲಿ ಎರಡನ್ನು ಮಾತ್ರ ಉಪಯೋಗಿಸಲು ಸೂಚಿಸಲಾಗಿದೆ. ಜಿಲ್ಲಾ ಆಸ್ಪತ್ರೆಯಲ್ಲೂ ಇದಕ್ಕೆ ಬೇಕಾದ ವ್ಯವಸ್ಥೆಯಿದ್ದು, ಈ ಕಾರಣಕ್ಕಾಗಿ ತಾಲೂಕು ಆಸ್ಪತ್ರೆಯಲ್ಲಿ ಆಕ್ಸಿಜನ್, ಮೆಡಿಸಿನ್ ವ್ಯವಸ್ಥೆಗೆ ಮಾತ್ರ ಹೆಚ್ಚಿನ ಗಮನ ನೀಡಲಾಗುತ್ತಿದೆ ಎಂದರು.

ವೆಂಟಿಲೇಟರ್ ವ್ಯವಸ್ಥೆಗೆ ಜಿಲ್ಲಾ ಆಸ್ಪತ್ರೆಯನ್ನೇ ಪ್ರಮುಖ ಕೇಂದ್ರವನ್ನಾಗಿ ಗುರುತಿಸಲಾಗಿದೆ. ಪುತ್ತೂರು ಆಸ್ಪತ್ರೆಗೆ ತ್ವರಿತವಾಗಿ ಬೇಕಾಗಿರುವ 50 ಜಂಬೋ ಆಕ್ಸಿಜನ್ ಸಿಲಿಂಡರ್, ಇಬ್ಬರು ಸ್ಟಾಫ್, ಓರ್ವ ವೈದ್ಯಾಧಿಕಾರಿ ಹಾಗೂ ಔಷಧಿಗಳನ್ನು ಪೂರೈಸಲಾಗುವುದು ಎಂದರು.

ಇದನ್ನು ಓದಿ: ಐಐಎಸ್​ಸಿಯಿಂದ ಕಡಿಮೆ ವೆಚ್ಚದ, ದಕ್ಷತೆಯ ಆಕ್ಸಿಜನ್ ಕಾನ್ಸಂಟ್ರೇಟರ್ ಆವಿಷ್ಕಾರ ಸಂಬಂಧ ಸಚಿವ ಸುಧಾಕರ್ ಚರ್ಚೆ

ಕೊರೋನಾ ರೋಗಿಗಳಾಗಿ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗುವವರಿಗೆ ಆಯುಷ್ಮಾನ್ ಕಾರ್ಡ್ ಸೌಲಭ್ಯದ ಕುರಿತು ಸ್ಪಷ್ಟನೆ ನೀಡಿರುವ ಸಚಿವರು ಈ ಹಿಂದೆ ಕೊರೋನಾ ಮೊದಲ ಅಲೆ ಸಂದರ್ಭದಲ್ಲಿ ಖಾಸಗಿ ಆಸ್ಪತ್ರೆಯಲ್ಲಿ ಕೊರೋನಾ ಪಾಸಿಟಿವ್ ರೋಗಿಗಳು ಯಾವುದೇ ರೋಗ ಲಕ್ಷಣಗಳು ಇಲ್ಲದಿದ್ದರೂ, ದಾಖಲಾಗಿರುವುದು ಗಮನಕ್ಕೆ ಬಂದಿದೆ. ಕೇವಲ ಪರಿಶೀಲನೆಗಾಗಿ ಮಾತ್ರವೇ ಆಸ್ಪತ್ರೆಗೆ ದಾಖಲಾಗುವುದನ್ನು ತಪ್ಪಿಸುವುದಕ್ಕೋಸ್ಕರ ಈ ಬಾರಿ ಆಯುಷ್ಮಾನ್ ಕಾರ್ಡ್ ಸೌಲಭ್ಯದಲ್ಲಿ ಕೊಂಚ ಬದಲಾವಣೆಗಳನ್ನು ತರಲಾಗಿದೆ. ಕೇವಲ ಆಕ್ಸಿಜನ್, ವೆಂಟಿಲೇಟರ್ ಹಾಗೂ ಇತರ ಗಂಭೀರ ಸ್ವಭಾವದ ರೋಗಿಗಳಿಗೆ ಮಾತ್ರ ಆಯುಷ್ಮಾನ್ ಸೌಲಭ್ಯವನ್ನು ನೀಡಲು ತೀರ್ಮಾನಿಸಲಾಗಿದೆ ಎಂದರು.

ಜಿಲ್ಲೆಯಲ್ಲಿ ಸುಮಾರು 70 ಕೊರೋನಾ ಚಿಕಿತ್ಸೆ ನೀಡುವ ಖಾಸಗಿ ಆಸ್ಪತ್ರೆಗಳಿದ್ದು, ಈ ಎಲ್ಲಾ ಆಸ್ಪತ್ರೆಗಳಲ್ಲಿ ಕೊರೋನಾ ಚಿಕಿತ್ಸೆ ಮುಂದುವರಿಯಲಿದೆ. ರಾಜ್ಯದಲ್ಲಿ ಎಲ್ಲಿಯೂ ರೆಮೆಡಿಸಿವಿರ್ ಚುಚ್ಚುಮದ್ದಿನ ಅಭಾವವಿಲ್ಲ ಎಂದು ಅವರು ಇದೇ ಸಂದರ್ಭದಲ್ಲಿ ಸ್ವಷ್ಟಪಡಿಸಿದರು.
Published by: HR Ramesh
First published: May 13, 2021, 3:56 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories