Inter Religion Marriage: ಅನ್ಯಧರ್ಮದವರೊಂದಿಗೆ ಮದುವೆ ಆಗಬೇಡ: ವಜ್ರದೇಹಿ ಸ್ವಾಮೀಜಿಯಿಂದ ವೈದ್ಯೆಯ ಮನವೊಲಿಕೆ ಯತ್ನ!

ನಮ್ಮ ಮಾತುಕತೆ ಫಲಪ್ರದವಾಗಿದೆ. ಯುವತಿಗೆ ಎಲ್ಲಾ ವಿಷಯವನ್ನು ಮನವರಿಕೆ ಮಾಡಿದ್ದೇವೆ. ಯುವತಿ ತುಂಬಾ ಒಳ್ಳೆಯ ನಡವಳಿಕೆಯನ್ನು ಹೊಂದಿದ್ದು, ಮುಂದೆ ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂಬುವುದನ್ನು ನೋಡುತ್ತೇವೆ.

ಮನೆಗೆ ಭೇಟಿ ನೀಡಿ ಸ್ವಾಮೀಜಿಯಿಂದ ಮನವೊಲಿಕೆ

ಮನೆಗೆ ಭೇಟಿ ನೀಡಿ ಸ್ವಾಮೀಜಿಯಿಂದ ಮನವೊಲಿಕೆ

  • Share this:
ಕೇರಳ (Kerala) ಮೂಲದ ಅನ್ಯಧರ್ಮದ ವೈದ್ಯನನ್ನು(Doctor) ಮದುವೆಯಾಗಲು ಮುಂದಾಗಿರುವ ಮಂಗಳೂರಿನ ವೈದ್ಯೆಯ ಮನೆಗೆ ತೆರಳಿ ಆಕೆಯ ಮನಪರಿವರ್ತನೆಗೆ ಸ್ವಾಮೀಜಿ ಮತ್ತು ಹಿಂದೂ ಸಂಘಟನೆಗಳ ಮುಖಂಡರು ಯತ್ನಿಸಿದ ಘಟನೆ ನಡೆದಿದೆ. ಮಂಗಳೂರಿನ ಸ್ಟೇಟ್ ಬ್ಯಾಂಕ್ ಬಳಿಯ ಬೇಕರಿಯ ಮಾಲೀಕರ ಮಗಳಾಗಿರುವ ಮಂಗಳೂರಿನ ವೈದ್ಯಕೀಯ ಕಾಲೇಜಿನಲ್ಲಿ ಎಂ.ಬಿ.ಬಿ.ಎಸ್ ಪದವೀಧರೆಯಾಗಿರುವ ಯುವತಿ, ಕೇರಳ ಮೂಲದ ಅನ್ಯಧರ್ಮದ ವೈದ್ಯನನ್ನು ಪ್ರೀತಿಸಿ ಮದುವೆಯಾಗುವ (Inter Religion Marriage) ಹಂತಕ್ಕೆ ಬಂದಿದ್ದರು. ನವೆಂಬರ್29ರಂದು ಕೇರಳ ಕಣ್ಣೂರಿನಲ್ಲಿ ಇಬ್ಬರ ವಿವಾಹ ನಿಶ್ಚಯವಾಗಿದೆ. ಇವರ ಮದುವೆಯ ಆಮಂತ್ರಣ ಪತ್ರಿಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

ಕೇರಳದ ಯುವಕನೊಂದಿಗೆ ಪ್ರೇಮವಿವಾಹ 

ಈ ಹಿನ್ನಲೆಯಲ್ಲಿ ಹಿಂದೂ ಸಂಘಟನೆಗಳ ಮುಖಂಡರು ಯುವತಿಯ ಮನೆಗೆ ಹೋಗಿ ಯುವತಿ ಮನೆಯವರ ಮನವೊಲಿಸಲು ಯತ್ನಿಸಿದರೂ ಮಾತುಕತೆ ಫಲಪ್ರದವಾಗಿರಲಿಲ್ಲ. ಈ ಹಿನ್ನಲೆಯಲ್ಲಿ ಗುರುಪುರ ಶ್ರೀ ವಜ್ರದೇಹಿ ಮಠದ ಸ್ವಾಮೀಜಿ ಶ್ರೀ ರಾಜಶೇಖರಾನಂದ ಸ್ವಾಮೀಜಿ  ಖುದ್ದು ಯುವತಿಯ ಮನೆಗೆ ತೆರಳಿ ಮಾತುಕತೆಗೆ ನಡೆಸಿದರು. ವೈದ್ಯೆ ವೈದ್ಯಕೀಯ ಕಾಲೇಜಿನಲ್ಲಿ ವೈದ್ಯ ನಾಗಿರುವ ಕೇರಳದ ಅನ್ಯಧರ್ಮದ ವೈದ್ಯ ಡಾ.ಜಾಫರ್ ಎಂಬಾತತನ್ನು ಪ್ರೀತಿಸಿ ಮದುವೆಯಾಗಲು ಮುಂದಾಗಿದ್ದಳು. ಈ ಮದುವೆಗೆ ಮನೆಯವರ ಒಪ್ಪಿಗೆಯೂ ದೊರಕಿದ್ದು, ಎರಡು ಕುಟುಂಬಗಳು ಸಹಮತದಿಂದ ನವೆಂಬರ್29ರಂದು ಕೇರಳದ ಕಣ್ಣೂರಿನ ಪಯಾಮ್ಬಾಲಂ ನ ಅರೇಬಿಯನ್ ಬೀಚ್ ರೆಸಾರ್ಟ್ ನಲ್ಲಿ ಮದುವೆಯಾಗಲು ನಿರ್ಧಾರ ಮಾಡಿದ್ದರು.

ಆಮಂತ್ರಣ ಪತ್ರಿಕೆ ವೈರಲ್​ 

ಇವರ ಮದುವೆಯ ಆಮಂತ್ರಣ ಪತ್ರಿಕೆ ಮತ್ತು ಯುವತಿಯ ಫೋಟೋ, ಜೋಡಿಯ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ‌‌. ಯುವತಿ ಅನ್ಯಧರ್ಮದ ಯುವಕನ ಜೊತೆ ಮದುವೆಯಾಗೋದಕ್ಕೆ ಸಾಕಷ್ಟು ವಿರೋಧವೂ ಕೇಳಿಬಂದಿತ್ತು. ಒಂದು ಹಂತದಲ್ಲಿ ಹಿಂದೂ ಸಂಘಟನೆಗಳ ಮುಖಂಡರು ಯುವತಿಯ ಮನೆಗೆ ಹೋಗಿ ಮನವೊಲಿಸಲು ಪ್ರಯತ್ನಿಸಿದ್ದರು. ಈ ವೇಳೆ ಯುವತಿ ಮತ್ತು ಆಕೆ ಹೆತ್ತವರು ಮದುವೆಯನ್ನು ಸಮರ್ಥಿಸಿದ್ದರು. ಯುವಕ ಮತ್ತು ಆತನ ಮನೆಯವರು ತುಂಬಾ ಒಳ್ಳೆಯವರು. ಮದುವೆಯಾದ ಬಳಿಕ ಧರ್ಮ ಆಚರಣೆ ವಿಚಾರದಲ್ಲಿ ಯಾವುದೇ ಮಧ್ಯಪ್ರವೇಶ ಮಾಡೋದಿಲ್ಲ ಅಂತಾ ಹೇಳಿದ್ದಾರೆ ಅಂತಾ ಸಮಾಜಾಯಿಷಿ ನೀಡಿದ್ದರು.

ಮನೆಗೆ ಭೇಟಿ ನೀಡಿ ಮನಪರಿವರ್ತನೆಗೆ ಪ್ರಯತ್ನ 

ಹಿಂದೂ ಸಂಘಟನೆಗಳ ಮುಖಂಡರ ಮಾತುಕತೆ ಮುರಿದುಬಿದ್ದ ಹಿನ್ನೆಲೆಯಲ್ಲಿ ಗುರು ಪಿ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ ಖುದ್ದು ಯುವತಿಯ ಮನೆಗೆ ತೆರಳಿ ಮಾತುಕತೆ ನಡೆಸಿದ್ದಾರೆ. ಯುವತಿ ಮತ್ತು ಆಕೆಯ ಹೆತ್ತವರು ಮತ್ತು ಚಿಕ್ಕಮ್ಮ ಜೊತೆ ಒಂದು ಗಂಟೆ ಮಾತುಕತೆ ಮಾಡಿದ್ದಾರೆ. ಈ ವೇಳೆ ಹಿಂದೆ ಅನ್ಯಧರ್ಮದ ಯುವಕರ ಜೊತೆ ಮದುವೆಯಾದ ಹಿಂದೂ ಧರ್ಮದ ಯುವತಿಯರ ಸ್ಥಿತಿ, ಮದುವೆಯಾದ ಬಳಿಕ ಎದುರಿಸುವ ಸಮಸ್ಯೆ ಗಳ ಬಗ್ಗೆ ತಿಳಿ ಹೇಳಿದ್ದಾರೆ..ಈ ವೇಳೆ ಸ್ವಾಮೀಜಿ ಮಾತಿಗೆ ಯುವತಿ ಮತ್ತು ಮನೆಯವರು ಸಮ್ಮತಿ ಸೂಚಿಸಿದ್ದಾರೆ ಅಂತಾ ಹೇಳಲಾಗಿದೆ.

ಇದನ್ನೂ ಓದಿ: ಮೊದಲು ಮಸೀದಿಗಳಲ್ಲಿ ಮೈಕ್​ಗಳನ್ನು ತೆಗೆದು ಹಾಕಿ, ಇದು ಪಾಕಿಸ್ತಾನ ಅಲ್ಲ ಎಂದ Pramod Muthalik

ಇನ್ನು ಮಾತುಕತೆ ಬಗ್ಗೆ ಮಾತನಾಡಿದ ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ, ನಮ್ಮ ಮಾತುಕತೆ ಫಲಪ್ರದವಾಗಿದೆ. ಯುವತಿಗೆ ಎಲ್ಲಾ ವಿಷಯವನ್ನು ಮನವರಿಕೆ ಮಾಡಿದ್ದೇವೆ. ಯುವತಿ ತುಂಬಾ ಒಳ್ಳೆಯ ನಡವಳಿಕೆ ಯನ್ನು ಹೊಂದಿದ್ದು,ಮುಂದೆ ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂಬುವುದನ್ನು ನೋಡುತ್ತೇವೆ ಅಂತಾ ಹೇಳಿದ್ದಾರೆ. ವಜ್ರದೇಹಿ ಸ್ವಾಮೀಜಿ ಜೊತೆಗೆ ವಿಶ್ವ ಹಿಂದೂ ಪರಿಷತ್ ವಿಭಾಗ ಕಾರ್ಯದರ್ಶಿ ಶರಣ್ ಪಂಪ್ವೆಲ್ ಸೇರಿದಂತೆ ಮುಖಂಡರು ಯುವತಿ ಮನೆಗೆ ತೆರಳಿ ಮನವೊಲಿಸಲು ಯತ್ನಿಸಿದ್ದಾರೆ.
Published by:Kavya V
First published: