Bride Hunt: ಇಲ್ಲಿ ಬ್ರಾಹ್ಮಣ ವಧು ಸಿಗ್ತಿಲ್ಲ, ಅಲ್ಲಿ ವರದಕ್ಷಿಣೆ ಭೂತ.. ಎರಡೂ ಸಮಸ್ಯೆಗೆ ಸಿಕ್ಕಿತು ‘ಉತ್ತರ’

ಒಳ್ಳೆಯ ವಿದ್ಯಾಭ್ಯಾಸವಿದ್ದರೂ ವಧು ಸಿಗದ ಉತ್ತರ ಕನ್ನಡ ಜಿಲ್ಲೆಯ ಬ್ರಾಹ್ಮಣ ಯುವಕರು ಉತ್ತರ ಪ್ರದೇಶದ ಬ್ರಾಹ್ಮಣ ಯುವತಿಯರನ್ನು ವರಿಸುತ್ತಿದ್ದಾರೆ. ಸಪ್ತಪದಿ ಕಾರ್ಯಕ್ರಮದ ಅಡಿಯಲ್ಲಿ ಈವರೆಗೆ ಸುಮಾರು 40 ಮದುವೆಗಳು ನಡೆದಿವೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಮಂಗಳೂರು: ಮದುವೆ ವಯಸ್ಸಿನ ಬ್ರಾಹ್ಮಣ ಯುವಕರಿಗೆ (Brahmin Men) ವಧು (Bride) ಸಿಗುತ್ತಿಲ್ಲ ಎಂದು ಅಳಲು ತೋಡಿಕೊಳ್ಳುವ ಪೋಷಕರ (Parents) ಸಂಖ್ಯೆ ಹೆಚ್ಚಾಗಿದೆ. ತಮ್ಮ ಸಮುದಾಯದ ವಧುವನ್ನು ಹುಡುಕುವಲ್ಲಿ ಸಮಸ್ಯೆ ಎದುರಿಸುತ್ತಿದ್ದಾರೆ. ರಾಜ್ಯದ ಒಳನಾಡಿನ ಸಣ್ಣ ಪಟ್ಟಣಗಳು ​​ಮತ್ತು ಹಳ್ಳಿಗಳಲ್ಲಿರುವ (smaller towns and villages) ತಮ್ಮ ಮನೆಗಳಿಂದ ಹೆಚ್ಚು ದೂರ ಹೋಗದಿರಲು ನಿರ್ಧರಿಸಿದ ಬ್ರಾಹ್ಮಣ ಹುಡುಗರಿಗೆ ವಧುಗಳು ಸಿಗುತ್ತಿಲ್ಲ. ಅಂತಹ ಹಲವಾರು ಕುಟುಂಬಗಳಿಗೆ ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿರುವ ಶ್ರೀ ಸೋಂದಾ ಸ್ವರ್ಣವಲ್ಲೀ ಮಠದ ಮಧ್ಯಸ್ಥಿಕೆಯು ವರದಾನವಾಗಿದೆ. ಕಳೆದ ಕೆಲವು ವರ್ಷಗಳಲ್ಲಿ ಮಠಾಧೀಶರಾದ ಶ್ರೀ ಗಂಗಾಧರೇಂದ್ರ ಸರಸ್ವತಿ ಸ್ವಾಮಿಗಳ (Shri Gangadharendra Saraswati Swamiji) ಮಾರ್ಗದರ್ಶನದಲ್ಲಿ 40 ಬ್ರಾಹ್ಮಣ ಯುವಕರು ಉತ್ತರ ಪ್ರದೇಶದ ಬ್ರಾಹ್ಮಣ ಯುವತಿಯರೊಂದಿಗೆ ಮದುವೆಯಾಗಿದ್ದಾರೆ.

‘ಸಪ್ತಪದಿ’ ಕಾರ್ಯಕ್ರಮ ಹೇಗೆ ರೂಪುಗೊಂಡಿತು?

ಮಠದೊಂದಿಗೆ ನಿಕಟವಾಗಿ ಕೆಲಸ ಮಾಡುವ ನಾರಾಯಣ ಹೆಗಡೆ ಗಡಿಕಾಯಿ ಮತ್ತು ವೆಂಕಟ್ರಮಣ ಭಟ್ ಬೆಳ್ಳಿ ಅವರು ‘ಸಪ್ತಪದಿ’ ಕಾರ್ಯಕ್ರಮವನ್ನು ರೂಪಿಸಿದ್ದು, ಈ ಮೂಲಕ ಕುಟುಂಬಗಳನ್ನು ಒಗ್ಗೂಡಿಸುತ್ತಿದ್ದಾರೆ. "ಬ್ರಾಹ್ಮಣ ಹುಡುಗರು, ವಿಶೇಷವಾಗಿ ಅರ್ಚಕರಾಗಿ ಅಥವಾ ತಮ್ಮ ಹಳ್ಳಿಗಳಲ್ಲಿ ಕೃಷಿಯನ್ನು ಮುಂದುವರಿಸಲು ಆಯ್ಕೆ ಮಾಡಿಕೊಂಡವರು, ವಿದ್ಯಾವಂತರಾಗಿದ್ದರೂ, ಸೂಕ್ತವಾದ ಯುವತಿಯನ್ನು ಹುಡುಕುವುದು ಕಷ್ಟಕರವಾಗಿದೆ. ಈ ಸಂದರ್ಭದಲ್ಲಿ ಉತ್ತರ ಭಾರತ ಪ್ರವಾಸ ಸಮಯದಲ್ಲಿ ನಮಗೆ ಒಂದೊಳ್ಳೆ ಮಾರ್ಗ ಕಣ್ಣಿಗೆ ಬಿತ್ತು ಅಂತಾರೆ ನಾರಾಯಣ ಹೆಗಡೆ.

ಎರಡೂ ಸಮಸ್ಯೆಗೆ ಸಿಕ್ಕಿತು ‘ಉತ್ತರ’

2013 ರಲ್ಲಿ ನಾವು ಉತ್ತರ ಭಾರತ ಪ್ರವಾಸದಲ್ಲಿದ್ದಾಗ ಉತ್ತರ ಪ್ರದೇಶವು ಅಂದಾಜು ಮೂರು ಕೋಟಿ ಬ್ರಾಹ್ಮಣರ ನೆಲೆಯಾಗಿದೆ ಎಂದು ನಾವು ಕಂಡುಕೊಂಡಿದ್ದೇವೆ. ಉತ್ತರ ಪ್ರದೇಶದ ಗ್ರಾಮಾಂತರದಲ್ಲಿರುವ ಅನೇಕ ಬ್ರಾಹ್ಮಣ ಕುಟುಂಬಗಳು ತಮ್ಮ ಹೆಣ್ಣುಮಕ್ಕಳ ಮದುವೆ ಮಾಡಿಕೊಡಲು ಹೆಣಗಾಡುತ್ತಿರುವುದನ್ನು ನಾವು ಕಂಡುಕೊಂಡಿದ್ದೇವೆ . ಏಕೆಂದರೆ ವರನ ಕುಟುಂಬಗಳು ವರದಕ್ಷಿಣೆಯಾಗಿ ಹೆಚ್ಚಿನ ಮೊತ್ತವನ್ನು ಕೇಳುತ್ತಿದ್ದರು. ಇಂಥ ಸಮಯದಲ್ಲಿ ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶದ ಎರಡೂ ಕುಟುಂಬಗಳೊಂದಿಗೆ ವ್ಯಾಪಕವಾದ ಸಂವಾದದ ನಂತರ, ಸಪ್ತಪದಿ ಉಪಕ್ರಮವನ್ನು ಪ್ರಾರಂಭಿಸಲಾಯಿತು ಎಂದು ಅವರು ಹೇಳಿದರು.

ಅಂತಾರಾಜ್ಯ ಮದುವೆಗಳಲ್ಲಿ ಆದರ್ಶ

ನಾರಾಯಣ ಹೆಗ್ಡೆ ಅವರು ಈ ಉಪಕ್ರಮವನ್ನು ಮೊದಲು ಪ್ರಾರಂಭಿಸಿದಾಗ ಅವರು ಅನೇಕ ಸವಾಲುಗಳನ್ನು ಎದುರಿಸಿದರು. ಮಠವು ಕೆಲವು ಮಾರ್ಗಸೂಚಿಗಳನ್ನು ಹಾಕಿತು, ಅವು ಈ ರೀತಿ ಇದ್ದವು.

-ಮೊದಲನೆಯದು ವರದಕ್ಷಿಣೆ ಪದ್ಧತಿಯನ್ನು ಕೊನೆಗಾಣಿಸುವ ನಿಟ್ಟಿನಲ್ಲಿ ಪೂರ್ವಭಾವಿಯಾಗಿ ಕೆಲಸ ಮಾಡುವುದು.

-ಎರಡನೆಯದು ಹಿಂದಿ ತಿಳಿದಿರುವ ಉತ್ತರ ಕನ್ನಡದ ಹುಡುಗರು ಉತ್ತರ ಭಾರತದ ಹುಡುಗಿಯರೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವುದನ್ನು ಪರಿಗಣಿಸಬೇಕು.

ಸಂಕಷ್ಟ ಎದರಾದರೂ ಮಠ ಇದೆ

ವಧು ಅಥವಾ ವರನ ಕುಟುಂಬವು ಪರಸ್ಪರರ ರುಜುವಾತುಗಳನ್ನು ಪರಿಶೀಲಿಸಲು ದೇಶಾದ್ಯಂತ ಪ್ರಯಾಣಿಸುವುದು ಸುಲಭವಲ್ಲ, ಅಥವಾ ಸಂಸ್ಕೃತಿಗಳಲ್ಲಿನ ವ್ಯತ್ಯಾಸವನ್ನು ನಾವು ಬದಿಗಿಡಲು ಸಾಧ್ಯವಿಲ್ಲ.ಕ್ರಮೇಣ ಉತ್ತರ ಕನ್ನಡ ಮತ್ತು ಉತ್ತರ ಪ್ರದೇಶದ ಕುಟುಂಬಗಳಲ್ಲಿ ಹೊಂದಾಣಿಕೆ ಮಾಡಿಕೊಳ್ಳುವ ಇಚ್ಛೆ ಬೆಳೆಯಿತು. ‘ಸಪ್ತಪದಿ’ ಕಾರ್ಯಕ್ರಮದ ಅಡಿಯಲ್ಲಿ ಇಂತಹ 40 ಮದುವೆಗಳು ನಡೆದಿವೆ. ಒಂದು ಮದುವೆಯನ್ನು ಹೊರತುಪಡಿಸಿ ಉಳಿದೆಲ್ಲವೂ ಯಶಸ್ವಿಯಾಗಿದ್ದು, ಯಾವುದೇ ಬಿಕ್ಕಟ್ಟು ಎದುರಿಸುತ್ತಿರುವ ದಂಪತಿಗಳಿಗೆ ಮಠದ ಬಾಗಿಲು ಸದಾ ತೆರೆದಿರುತ್ತದೆ ಎಂದು ನಾರಾಯಣ ಹೆಗಡೆ ಹೇಳಿದರು.

ಇದನ್ನೂ ಓದಿ: Kerala Couple : ಟೀ ಮಾರಿ ಬಂದ ಹಣದಿಂದ ಹೆಂಡತಿ ಜೊತೆಗೆ 25ಕ್ಕೂ ಹೆಚ್ಚು ದೇಶ ಸುತ್ತಿದ್ದ ಕೇರಳದ ವಿಜಯನ್ ನಿಧನ

ಉತ್ತರ ಕನ್ನಡ ಮೂಲದ ರೈತ ಮತ್ತು ಉದ್ಯಮಿ ಮಂಜುನಾಥ್ ನಾಲ್ಕು ವರ್ಷಗಳ ಹಿಂದೆ ಉತ್ತರ ಪ್ರದೇಶದ ಬಲರಾಂಪುರದ ಪ್ರೀತಿ ಮಿಶ್ರಾ ಅವರನ್ನು ವಿವಾಹವಾದರು. ದಂಪತಿಗೆ ಹೆಣ್ಣು ಮಗುವಾಗಿದೆ. ಕನ್ನಡವನ್ನು ಕಲಿಯಲು ಕೇವಲ ಒಂದು ತಿಂಗಳು ತೆಗೆದುಕೊಂಡಿದ್ದೇನೆ ಎಂದು ಪ್ರೀತಿ ಹೇಳಿದರು. "ಉತ್ತರ ಕನ್ನಡದ ಸಂಸ್ಕೃತಿ ಮತ್ತು ಪದ್ಧತಿಗಳಿಗೆ ಹೊಂದಿಕೊಳ್ಳಲು ನನಗೆ ಯಾವುದೇ ತೊಂದರೆ ಇಲ್ಲ," ಎಂದು ಅವರು ಹೇಳಿದರು. ಉತ್ತರ ಕನ್ನಡಕ್ಕೆ ಸ್ಥಳಾಂತರಗೊಂಡ ಉತ್ತರ ಪ್ರದೇಶದ ಅನೇಕ ಮಹಿಳೆಯರು ಉತ್ತಮ ಶಿಕ್ಷಣ ಪಡೆದಿದ್ದಾರೆ.
Published by:Kavya V
First published: