ಮಂಗಳೂರಿನಲ್ಲಿ ಪಿಎಫ್ಐ ಕಾರ್ಯಕರ್ತರಿಂದ ಪೊಲೀಸರ ವಿರುದ್ಧ ಆಕ್ರೋಶ ಸ್ಫೋಟ

ಉಪ್ಪಿನಂಗಡಿಯಲ್ಲಿ ಯುವಕರ ಮೇಲೆ ಹಲ್ಲೆ ನಡೆದಿತ್ತು. ಆ ಪ್ರಕರಣದಲ್ಲಿ ಪಿಎಫ್‌ಐ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಅಂದು ನೂರಾರು ಸಂಖ್ಯೆಯಲ್ಲಿ ಜನರು ಉಪ್ಪಿನಂಗಡಿ ಪೊಲೀಸ್ ಠಾಣಿ ಬಳಿ ಸೇರಿದ್ದರು.

PFI ಪ್ರತಿಭಟನೆ

PFI ಪ್ರತಿಭಟನೆ

  • Share this:
ಉಪ್ಪಿನಂಗಡಿಯಲ್ಲಿ (Uppinangadi) ನಡೆದ ಲಾಠಿ ಚಾರ್ಜ್‌ಗೆ ಉಪ್ಪಿನಂಗಡಿ ಸೇರಿದಂತೆ ಕರಾವಳಿಯ ಕೆಲ ಪ್ರದೇಶಗಳು ಉದ್ವಿಗ್ನಗೊಂಡಿತ್ತು. ಇದನ್ನು ಖಂಡಿಸಿ ಶುಕ್ರವಾರ ಎಸ್ಪಿ ಕಚೇರಿ ಚಲೋವನ್ನು ಹಮ್ಮಿಕೊಳ್ಳಲಾಗಿತ್ತು.
 ಡಿಸೆಂಬರ್ 6 ರಂದು ದಕ್ಷಿಣ ಕನ್ನಡ (Dakshina Kannada) ಜಿಲ್ಲೆ ಪುತ್ತೂರು ತಾಲೂಕಿನ ಉಪ್ಪಿನಂಗಡಿಯಲ್ಲಿ ಯುವಕರ ಮೇಲೆ ಹಲ್ಲೆ ನಡೆದಿತ್ತು. ಆ ಪ್ರಕರಣದಲ್ಲಿ ಪಿಎಫ್‌ಐ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಅಂದು ನೂರಾರು ಸಂಖ್ಯೆಯಲ್ಲಿ ಜನರು ಉಪ್ಪಿನಂಗಡಿ ಪೊಲೀಸ್ ಠಾಣಿ ಬಳಿ ಸೇರಿದ್ದರು. ರಾತ್ರಿಯಾದರೂ  ಹೋಗದ ಜನರ ಮೇಲೆ ಪೊಲೀಸರು ಲಾರಿ ಚಾರ್ಜ್ ನಡೆಸಿದ್ದರು. ಅದರಲ್ಲಿ ಮುಸ್ಲಿಂ ಧರ್ಮಗುರು ಸೇರಿದಂತೆ ಸಾಕಷ್ಟು ಜನರಿಗೆ ಗಾಯಗಳಾಗಿದ್ದವು. ಪೊಲೀಸರಿಗೂ ಕೂಡ ಗಾಯವಾಗಿತ್ತು.

ಪೊಲೀಸ್  ಬಿಗಿ ಬಂದೋಬಸ್ತ್ 

ಇನ್ನು ಈ ಲಾಠಿ ಚಾರ್ಜ್ ಖಂಡಿಸಿ ಪಿಎಫ್‌ಐ (pfi) ಸಂಘಟನೆ ಇಂದು ಮಂಗಳೂರಿನಲ್ಲಿರುವ ಎಸ್ಪಿ ಆಫೀಸ್ ಗೆ ಮುತ್ತಿಗೆ ಹಾಕಲು ಎಸ್ಪಿ ಕಚೇರಿ ಚಲೋ (SP Office Chalo) ಹಮ್ಮಿಕೊಂಡಿತ್ತು. ಇನ್ನು ಸಿಎಎ ಗಲಾಟೆ ಸಂದರ್ಭದಲ್ಲಿ ಆದ ಘಟನೆ ಮರುಕಳಿಸಬಾರದು ಅಂತಾ ಮಂಗಳೂರು ನಗರದಲ್ಲಿ ಮಂಗಳೂರು ನಗರ ಪೊಲೀಸರು ಬಿಗಿ ಬಂದೋಬಸ್ತ್ ಮಾಡಿದ್ದರು.

SP ಕಚೇರಿಗೆ ಹೋಗಲು ಅವಕಾಶ ನೀಡದ ಪೊಲೀಸರು

ಕ್ಲಾಕ್ ಟವರ್ ಬಳಿ 1 ಗಂಟೆಗಳ ಕಾಲ ಪ್ರತಿಭಟನೆಗೆ ಮಾತ್ರ ಅವಕಾಶ ನೀಡಿದ್ದರು. ಇನ್ನು ಹಂಪನಕಟ್ಟೆ ಬಳಿಯಿಂದ ಹೊರಟ ಭಟನಕಾರರನ್ನು ಕ್ಲಾಕ್ ಟವರ್ ಬಳಿ ಹಾಕಿದ್ದ ಬ್ಯಾರಿಕೇಡ್ ಬಳಿ ತಡೆಯಲಾಯ್ತು.. ಅಲ್ಲಿಂದ ಮುಂದೆ ಸಾಗಿದ ಪ್ರತಿಭಟನಕಾರರನ್ನು ತಾಲೂಕು ಕಚೇರಿ ಬಳಿ ತಡೆದು ಅಲ್ಲಿಂದ ಎಸ್ಪಿ ಕಚೇರಿಗೆ ಹೋಗಲು ಪೊಲೀಸರು ಅವಕಾಶ ನೀಡಲಿಲ್ಲ.

ಇದನ್ನೂ ಓದಿ:  Karnataka Weather Today: ಸಂಜೆ-ಬೆಳಗ್ಗೆ ಶೀತಗಾಳಿ; ಚಳಿಗೆ ಜನರು ಗಢ ಗಢ

ಇನ್ನು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸರ ವಿರುದ್ಧ ಮಂಗಳೂರು ನಗರ ಪೊಲೀಸ್ ಲಿಮಿಟ್ಸ್ ನಲ್ಲಿ ಪ್ರತಿಭಟನೆ ಮಾಡಿದ್ರಿಂದ ಎಸ್ಪಿ ಯನ್ನು ಸ್ಥಳಕ್ಕೆ ಕರೆಸಿ ಅಂತಾ ಪ್ರತಿಭಟನಕಾರರು ಪಟ್ಟು ಹಿಡಿದರು‌.

ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್ ಖಡಕ್ ಸೂಚನೆ 

ಸ್ಥಳಕ್ಕೆ ಬಂದು ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್, ಪ್ರತಿಭಟನೆಗೆ ಅವಕಾಶ ಕೇಳಿದ್ದೀರಿ. ನಿಷೇಧಾಜ್ಞೆ ಹಾಕದೇ ನಾವು ಅವಕಾಶ ಕೊಟ್ಟಿದ್ದೀವಿ. ಎಸ್ಪಿ ಸ್ಥಳಕ್ಕೆ ಬರುತ್ತಾರೆ. ಅವರಿಗೆ ಮನವಿ ಕೊಟ್ಟು ಪ್ರತಿಭಟನೆ ಮುಗಿಸಿ ಅಂತಾ ಖಡಕ್ ಸೂಚನೆ ನೀಡಿದರು. ಇದಕ್ಕೆ ಮಣಿದ ಸಂಘಟನೆ ಸ್ಥಳಕ್ಕೆ ಬಂದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಖುಷಿಕೇಷ್ ಸೋನಾವಣೆಗೆ ಮನವಿ ನೀಡಿ ವಾಪಾಸ್ ಆಗಿದ್ದಾರೆ.

ಇದನ್ನೂ ಓದಿ:  Jarkiholi Brothers: ರಾಜ್ಯದ ಶಾಸಕಾಂಗದಲ್ಲೀಗ ನಾಲ್ವರು ಜಾರಕಿಹೊಳಿ ಸಹೋದರರ ದರ್ಬಾರ್‌..!

ಪಿಎಫ್ಐ ಪ್ರತಿಭಟನೆ ಹಿನ್ನಲೆಯಲ್ಲಿ ಮಂಗಳೂರಿನಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತಯ. ಕ್ಲಾಕ್ ಟವರ್, ಕಮೀಷನರ್ ಕಛೇರಿ, ಎಸ್ ಪಿ ಕಛೇರಿ, ಜಿಲ್ಲಾಧಿಕಾರಿ ಕಛೇರಿ ಮುಂಭಾಗ ಬಿಗಿ ಪೊಲೀಸ್ ಬಂದ್ ಬಸ್ತ್ ಮಾಡಲಾಗಿತ್ತು.

600ಕ್ಕೂ ಹೆಚ್ಚು ಪೊಲೀಸರ ಯೋಜನೆ 

6ಎಸಿಪಿ, 16ಇನ್ಸ್ ಪೆಕ್ಟರ್, 32ಪಿ ಎಸೈ, ,4 ಕೆಎಸ್ಆರ್ ಪಿ ತುಕುಡಿ, 5ಸಿಎಆರ್ ಸೇರಿದಂತೆ ಕಮೀಷನೇಟರ್ ವ್ಯಾಪ್ತಿಯ ಸುಮಾರು 600ಕ್ಕೂ ಅಧಿಕ ಪೊಲೀಸರನ್ನು ಭಧ್ರತೆಗೆ ನಿಯೋಜಿಸಲಾಗಿತ್ತು.

ಸದ್ಯ ಈ ಪ್ರಕರಣವನ್ನು ಮಂಗಳೂರು ಪೊಲೀಸರು ತಮ್ಮ ಚಾಕಚಕ್ಯತೆಯಿಂದ ತಣ್ಣಗಾಗಿಸಿದ್ದಾರೆ.  ಆದರೆ ಉಪ್ಪಿನಂಗಡಿಯಲ್ಲಿ ನಡೆದ ಹಲ್ಲೆ ಕೇಸ್ ನಲ್ಲಿ ಸಂಚು ಇದ್ದು ಅದನ್ನು ಬೇಧಿಸಲು ಪೊಲೀಸರು ಇನ್ನೇನು ಮಾಡುತ್ತಾರೆ ಅನ್ನೋದನ್ನು ಕಾದುನೋಡಬೇಕಿದೆ.

ಲಾಠಿ ಚಾರ್ಜ್ ಪ್ರಕರಣವನ್ನು ಮುಚ್ಚಿ ಹಾಕಲು ಇಲ್ಲ ಸಲ್ಲದ ಕಥೆಗಳನ್ನು ಕಟ್ಟುತ್ತಿದ್ದಾರೆ. ಗಲಭೆಗೆ ಪಿತೂರಿ, ಪೊಲೀಸ್ ಜೀಪಿಗೆ ಹಾನಿ ಎಂಬಿತ್ಯಾದಿ ಆರೋಪಗಳೆಲ್ಲವೂ ಸುಳ್ಳು ಎಂದು ಪಿಎಫ್ಐ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಆರೋಪಿಸಿದೆ.
Published by:Mahmadrafik K
First published: