HOME » NEWS » State » MANGALORE UPPINANGADI SNAKE CATCHER MUSTAFA DIED DAY AFTER HE PUTS WHATSAPP STATUS ON DEATH SCT KKM

Mangalore: ಸಾವಿನ ಬಗ್ಗೆ ಸ್ಟೇಟಸ್ ಹಾಕಿದ ದಿನವೇ ಹಾವು ಕಚ್ಚಿ ಸಾವನ್ನಪ್ಪಿದ ಉಪ್ಪಿನಂಗಡಿಯ ಉರಗ ರಕ್ಷಕ

Mangaluru: ಮನುಷ್ಯನನ್ನು ಸಾವು ಎಂದಾದರೂ ಒಂದು ದಿನ  ಸೆಳೆದೇ ಸೆಳೆಯುತ್ತದೆ ಅಂತ ಗೆಳೆಯರಿಗೆ ವಾಟ್ಸಪ್ ಮೆಸೇಜ್ ಮಾಡಿದ್ದ ಉರಗ ರಕ್ಷಕ ಅದೇ ದಿನ‌ ಹಾವು ಕಚ್ಚಿ ಸಾವಿಗೀಡಾದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು  ತಾಲೂಕಿನ‌ ಉಪ್ಪಿನಂಗಡಿಯಲ್ಲಿ ನಡೆದಿದೆ. 

news18-kannada
Updated:April 19, 2021, 7:43 AM IST
Mangalore: ಸಾವಿನ ಬಗ್ಗೆ ಸ್ಟೇಟಸ್ ಹಾಕಿದ ದಿನವೇ ಹಾವು ಕಚ್ಚಿ ಸಾವನ್ನಪ್ಪಿದ ಉಪ್ಪಿನಂಗಡಿಯ ಉರಗ ರಕ್ಷಕ
ಉರಗ ರಕ್ಷಕ ಮುಸ್ತಫಾ
  • Share this:
ಮಂಗಳೂರು (ಏ. 19): ಹುಟ್ಟು ನಿಶ್ಚಿತ-ಸಾವು ಆಕಸ್ಮಿಕ ಅನ್ನುವ ಮಾತಿದೆ. ಹುಟ್ಟು ನಿರೀಕ್ಷೆಯಂತೆ ಆದರೂ ಸಾವು ಮಾತ್ರ ಆಕಸ್ಮಿಕವಾಗಿಯೇ ಬಂದುಬಿಡುತ್ತದೆ. ಅದರಲ್ಲೂ ಉರಗ ರಕ್ಷಕರ ಬಾಳಿನ ಬಗ್ಗೆ ಹೇಳಬೇಕಾ? ಸಾವನ್ನು ಅಂಗೈಯಲ್ಲಿಟ್ಟು ಕೊಂಡು ಜೀವನದ ಪ್ರತಿಕ್ಷಣ ಹೋರಾಟ ಮಾಡುತ್ತಿರುತ್ತಾರೆ. ಆದರೆ ಅವರಿಗೂ ಸಾವು ಯಾವಾಗ ಬರುತ್ತದೆ ಅನ್ನುವ ಕಲ್ಪನೆಯೂ ಇರೋದಿಲ್ಲ. ಪ್ರಾಣವನ್ನು ಒತ್ತೆಯಿಟ್ಟು ಹಾವನ್ನು ರಕ್ಷಿಸುವ ಕಾರ್ಯವನ್ನು ಉರಗ ರಕ್ಷಕರು ಮಾಡುತ್ತಾರೆ.

ಕೆಲವರಿಗೆ ಸಾವು ಇಂದೇ ಬರುತ್ತದೆ ಅನ್ನುವ ಸಿಕ್ಸ್ತ್​ ಸೆನ್ಸ್ ಇದೆಯಾ? ಎಂಬ ಸಂದೇಹ ಕಾಡಲಾರಂಭಿಸುತ್ತದೆ. ಯಾಕೆಂದರೆ ಸಾವಿನ ಬಗ್ಗೆ ಅವರು ಮಾತನಾಡುವ ರೀತಿಯೇ ಅವರಿಗೆ ಸಾವಿನ ಮುನ್ಸೂಚನೆ ಸಿಗುವಂತೆ ಮಾಡುತ್ತಾ? ಎಂಬ ಕುತೂಹಲ ಎಲ್ಲರನ್ನೂ ಕಾಡುತ್ತದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಅಂತಹದೇ ಒಂದು ಅಪರೂಪದ ದುರ್ಘಟನೆಯಾಗಿದೆ. ಮನುಷ್ಯನನ್ನು ಸಾವು ಎಂದಾದರೂ ಒಂದು ದಿನ  ಸೆಳೆದೇ ಸೆಳೆಯುತ್ತದೆ ಅಂತ ಗೆಳೆಯರಿಗೆ ವಾಟ್ಸಪ್ ಮೆಸೇಜ್ ಮಾಡಿದ್ದ ಉರಗ ರಕ್ಷಕ ಅದೇ ದಿನ‌ ಹಾವು ಕಚ್ಚಿ ಸಾವಿಗೀಡಾದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು  ತಾಲೂಕಿನ‌ ಉಪ್ಪಿನಂಗಡಿಯಲ್ಲಿ ನಡೆದಿದೆ. ಉಪ್ಪಿನಂಗಡಿಯ 34 ನೆಕ್ಕಿಲಾಡಿಯ ಬೊಳಂತಿಲ ಮನೆ ನಿವಾಸಿ ಎಂ.ಆರ್. ಮುಹಮ್ಮದ್ ಮುಸ್ತಾಫ (30) ಸಾವಿಗೀಡಾದವರು.

ಇದನ್ನೂ ಓದಿ: Mysore: ಮೈಸೂರಿನ ದಲಿತರ ಮನೆ ಬಾಗಿಲಿಗೆ ಹೋಗಿ ಕಟಿಂಗ್, ಶೇವಿಂಗ್ ಮಾಡುವ ಅಣ್ಣ-ತಮ್ಮಂದಿರು

ಸ್ನೇಕ್ ಮುಸ್ತಾಫ' ಎಂದೇ ಚಿರಪರಿಚಿತರಾಗಿದ್ದ ಮುಸ್ತಾಫ ವೃತ್ತಿಯಲ್ಲಿ  ಅಟೋ ರಿಕ್ಷಾ ಚಾಲಕರಾಗಿದ್ದವರು. ಇದರ ಜೊತೆಗೆ ಹಾವುಗಳನ್ನು ಹಿಡಿದು ರಕ್ಷಿಸುವ ಕಾರ್ಯವನ್ನು ಹವ್ಯಾಸವನ್ನಾಗಿ ಮಾಡಿಕೊಂಡಿದ್ದರು. ಶನಿವಾರ ಸಂಜೆ ಬೆಳ್ತಂಗಡಿ ತಾಲೂಕಿನ ನೇಜಿಕಾರಿನಲ್ಲಿ ಮನೆಯೊಂದಕ್ಕೆ ನಾಗರಹಾವು ಬಂತೆಂದು ಮುಸ್ತಾಫಗೆ ಕರೆ ಬಂದಿದ್ದು, ಅದನ್ನು ಹಿಡಿದು ರಕ್ಷಿಸಲು ಅಲ್ಲಿಗೆ ತೆರಳಿದ್ದರು. ಕೋಳಿ ಗೂಡಿನ ಒಳ ಹೊಕ್ಕ ನಾಗರಹಾವು ಗೂಡಿನ ಮೆಷ್ ಒಳಗೆ ಸಿಲುಕಿಹಾಕಿಕೊಂಡಿದ್ದು ನಾಗರ ಹಾವನ್ನು ರಕ್ಷಣೆ ಮಾಡುತ್ತಿದ್ದರು. ಹಾವು ಹಿಡಿಯುತ್ತಿದ್ದ ಸಂದರ್ಭ ಮುಸ್ತಫಾ ಎಡದ ಹಾಗೂ ಬಲದ ಕೈಗೆ ನಾಗರಹಾವು ಕಚ್ಚಿದೆ. ತೀವ್ರ ಅಸ್ವಸ್ಥಗೊಂಡ ಮುಸ್ತಫಾರನ್ನು ಪುತ್ತೂರಿನ ಆಸ್ಪತ್ರೆಗೆ ಸಾಗಿಸಿ, ಬಳಿಕ ಹೆಚ್ಚಿನ ಚಿಕಿತ್ಸೆಗೆಂದು ಮಂಗಳೂರಿಗೆ ತೆಗೆದುಕೊಂಡು ಹೋಗುತ್ತಿದ್ದಾಗ ದಾರಿ ಮಧ್ಯೆ ಮುಸ್ತಾಫ ಮೃತ ಪಟ್ಟಿದ್ದಾರೆ.

ಮುಸ್ತಾಫ ಹಾವು ಹಿಡಿಯುತ್ತಿದ್ದನ್ನು ಮನೆಯವರು ವಿಡಿಯೋ ಮಾಡಿದ್ದು, ಹಾವು ಕಚ್ಚುವ ದೃಶ್ಯ ಮೊಬೈಲ್ ನಲ್ಲಿ ಸೆರೆಯಾಗಿದೆ. ಹಾವು ಹಿಡಿಯುವಲ್ಲಿ ನಿಪುಣರಾಗಿರುವ ಮುಹಮ್ಮದ್ ಮುಸ್ತಾಫ ಪ್ರಾಣಿ ಪ್ರಿಯರಾಗಿದ್ದು, ಮನೆಯಲ್ಲಿ ಪಾರಿವಾಳ, ಲವ್‍ಬರ್ಡ್ಸ್​, ಆಡು, ಕೋಳಿ ಹೀಗೆ ಸಾಕು ಪ್ರಾಣಿಗಳನ್ನು ಸಾಕಿ ಕೊಂಡಿರುತ್ತಿದ್ದರು. ಹಾವು ಹಿಡಿಯುವಲ್ಲಿಯೂ ನಿಪುಣತೆ ಪಡೆದಿದ್ದರು. ವಿಷಕಾರಿ ಹಾವುಗಳನ್ನು ಯಾವುದೇ ಸಲಕರಣೆಗಳನ್ನು ಬಳಸದೇ ಬರಿಗೈಯಲ್ಲೇ ಹಿಡಿದು ದೂರದ ಕಾಡಿಗೆ ಬಿಡುತ್ತಿದ್ದರು. ಇವರು ಸುಮಾರು 1,000ಕ್ಕೂ ಅಧಿಕ ಹಾವುಗಳನ್ನು ರಕ್ಷಿಸಿ ಕಾಡಿಗೆ ಬಿಟ್ಟಿದ್ದಾರೆ.
ಅದರಲ್ಲೂ ಸಾವಿನ ಬಗ್ಗೆ ಸ್ಟೇಟಸ್ ಹಾಕಿದ ದಿನವೇ ಮಸ್ತಫಾ ಸಾವಿನ ವಶವಾಗಿದ್ದಾರೆ.. ತನ್ನ ವಾಟ್ಸಪ್ ನಲ್ಲಿ ಬೆಳಗ್ಗಿನಿಂದಲೇ ಮೃತದೇಹವೊಂದರ ಫೋಟೋ ಹಾಕಿ ಸಾವು ಮನುಷ್ಯನನ್ನು ಎಂದಾದರೊಂದು ದಿನ ಸೆಳೆದೇ ಸೆಳೆಯುತ್ತದೆ ಎಂಬ ಭಾವವನ್ನು ಪ್ರಕಟಿಸಿದ್ದರು. ಅದೇ ದಿನ ಸಾಯಂಕಾಲವಾಗುತ್ತಲೇ ತನ್ನದೇ ಹವ್ಯಾಸದ ಹಾವು ಹಿಡಿಯುವ ಕಾಯಕದಲ್ಲಿ ಹಾವು ಕಡಿತಕ್ಕೆ ಸಿಲುಕಿ ಸಾವಿನ ವಶವಾಗಿದ್ದಾರೆ.
Published by: Sushma Chakre
First published: April 19, 2021, 7:43 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories