Shiradi Ghat Road: ಶಿರಾಡಿಘಾಟ್ ರಸ್ತೆಯಲ್ಲಿ ಪ್ರಯಾಣ ಡೇಂಜರ್; ಮಳೆಗಾಲದಲ್ಲಿ ಯಾಮಾರಿದ್ರೆ ಯಮನ ಪಾದ!

ಪ್ರಪಾತದ ರೀತಿಯಲ್ಲಿ ಭೂ ಕುಸಿತ ಉಂಟಾಗಿದ್ದ ಕಡೆ ದುರಸ್ತಿ ಕಾರ್ಯ ಶಾಶ್ವತವಾಗಿ ಆಗಿಲ್ಲ. ಸದ್ಯ ತಾತ್ಕಾಲಿಕವಾಗಿ ತಡೆಗೋಡೆ ಇಲ್ಲವೇ ಮರಳು ಚೀಲ ಜೋಡಿಸಿ ತೇಪೆ ಹಾಕುವ ಕೆಲಸ ಮಾಡಲಾಗಿದೆ.

ಶಿರಾಡಿಘಾಟ್ ರಸ್ತೆ

ಶಿರಾಡಿಘಾಟ್ ರಸ್ತೆ

  • Share this:
ಹಾಸನ : ರಾಜಧಾನಿಯಿಂದ ಕರಾವಳಿ ಭಾಗಕ್ಕೆ (coastal area) ಸಂಪರ್ಕ ಕಲ್ಪಿಸುವ ಶಿರಾಡಿಘಾಟ್ ರಸ್ತೆ  (shiradi ghat road) ಡೇಂಜರ್ ರಸ್ತೆಯಾಗಿ ಪರಣಮಿಸಿದೆ. ಅದರಲ್ಲೂ ಮಳೆಗಾಲದಲ್ಲಿ ಇಲ್ಲಿ ಸಂಚಾರ ಮಾಡುವುದೇ ಬಹಳ ಕಷ್ಟವಾಗಿದೆ. ಒಟ್ಟು 26 ಕಿಲೋಮೀಟರ್ ಉದ್ದದ ಶಿರಾಡಿಘಾಟ್ ನಲ್ಲಿಹಲವು ಕಡೆ ಏಕಮುಖ ಸಂಚಾರಕ್ಕಷ್ಟೇ ಅವಕಾಶವಿದ್ದು, ಕೊಂಚ ಆಯತಪ್ಪಿದ್ರೂ ಅಪಾಯ ಗ್ಯಾರಂಟಿಯಾಗಿದೆ. ಅದರಲ್ಲೂ ಮಳೆಗಾಲದಲ್ಲಿ (rainy season) ಅನಾಹುತ ಅಕ್ಕಪಕ್ಕದಲ್ಲೇ ಕಾದು ಕುಳಿತಿರುವ ಹಿನ್ನೆಲೆಯಲ್ಲಿ ಶಿರಾಡಿಘಾಟ್ ಹಾದಿ ಸೇಫ್ ಎನ್ನುವ ಅಭಯ ಇನ್ನೂ ಸಿಕ್ಕಿಲ್ಲ. ಶಿರಾಡಿಘಾಟ್ ರಸ್ತೆ ರಾಜಧಾನಿ ಬೆಂಗಳೂರು-ಮಂಗಳೂರು (bangalore to mangalore)ನಡುವೆ ನೇರ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆ. ಈ ರಸ್ತೆಯಲ್ಲಿ ಲಘು ವಾಹನ, ಸಾರಿಗೆ ಬಸ್, ಟ್ಯಾಂಕರ್, 16 ಚಕ್ರದ ಲಾರಿ ಸೇರಿದಂತೆ ಭಾರಿ ವಾಹನಗಳ ಸಂಚಾರ ಮಾಡಬಹುದಾಗಿದೆ.

ಶಾಶ್ವತ ಪರಿಹಾರವೇ ಇಲ್ಲ..!

ಇದರಿಂದ ಕರಾವಳಿ ಭಾಗಕ್ಕೆ ನಾನಾ ರೀತಿಯ ವಸ್ತು, ಸರಕು-ಸರಂಜಾಮು ಸಾಗಿಸುವ ಲಾರಿ ಚಾಲಕರಿಗೆ ಅನೇಕ ರೀತಿಯಲ್ಲಿ ಅನುಕೂಲವಾಗಿದೆ. ಇನ್ನೊಂದೆಡೆ ಧರ್ಮಸ್ಥಳ, ಸುಬ್ರಮಣ್ಯಕ್ಕೆ ತೆರಳುವವರು ಈ ರಸ್ತೆಯ ಮೂಲಕ ತೆರಳುತ್ತಾರೆ. ಪ್ರತಿ ವರ್ಷ ಮಳೆಗಾಲದಲ್ಲಿ ಸುರಿಯುವ ಹುಚ್ಚು ಮಳೆಗೆ ಅಲ್ಲಲ್ಲಿ ಭಾರೀ ಭೂ ಕುಸಿತ ಉಂಟಾಗತ್ತಿದ್ದು ಹಲವು ದಿನಗಳ‌ ಕಾಲ ಶಿರಾಡಿ ರಸ್ತೆ ಬಂದ್ ಆಗುತ್ತಿದೆ. ಮಳೆ ಸುರಿದು ಬಿಡುವು ನೀಡಿದ ನಂತರ ಮರಳು ಚೀಲ ಜೋಡಣೆ, ಗೋಡೆ ನಿರ್ಮಾಣ ಮಾಡುವ ಮೂಲಕ ತಾತ್ಕಾಲಿಕವಾಗಿ ರಸ್ತೆ ದುರಸ್ತಿ ಮಾಡಲಾಗುತ್ತಿದೆ. ಆದರೆ ಪ್ರತಿಭಾರಿಯೂ ಮಳೆಗಾಲದಲ್ಲಿ ರಸ್ತೆ ಸಂಚಾರ ಬಂದ್ ಆಗುತ್ತಿದ್ದರು ಸರ್ಕಾರ ಶಾಶ್ವತ ಪರಿಹಾರ ರೂಪಿಸಲು ಮುಂದಾಗಿಲ್ಲ. ಗುಂಡ್ಯಾದವರೆಗೂ ಸಿಮೆಂಟ್ ಕಾಂಕ್ರೀಟ್ ರಸ್ತೆ ಮಾಡಿದ್ದರು ಜೋರು‌ ಮಳೆಯಿಂದ ರಸ್ತೆ ಕಿತ್ತುಹೋಗುತ್ತಿದೆ. ಇದರಿಂದಾಗಿ ವಾಹನ ಸವಾರರು ಪರದಾಡುವಂತಾಗಿದೆ.

ಭೂ ಕುಸಿತದ ಭೀತಿ 

ಪ್ರತಿ ವರ್ಷವೂ ರಸ್ತೆ ದುರಸ್ಥಿ ಕಾರ್ಯ ಮಾಡಲಾಗುತ್ತಿದ್ದು ಇದರಿಂದ ಕಂಟ್ರಾಕ್ಟರ್ ಗಳ ಜೇಬು ತುಂಬುತ್ತಿದೆ, ಹೊರತು ವಾಹನ ಸವಾರರಿಗೆ ಯಾವುದೇ ಪ್ರಯೋಜನವಾಗಿಲ್ಲ‌ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.  ಪ್ರಪಾತದ ರೀತಿಯಲ್ಲಿ ಭೂ ಕುಸಿತ ಉಂಟಾಗಿದ್ದ ಕಡೆ ದುರಸ್ತಿ ಕಾರ್ಯ ಶಾಶ್ವತವಾಗಿ ಆಗಿಲ್ಲ. ಸದ್ಯ ತಾತ್ಕಾಲಿಕವಾಗಿ ತಡೆಗೋಡೆ ಇಲ್ಲವೇ ಮರಳು ಚೀಲ ಜೋಡಿಸಿ ತೇಪೆ ಹಾಕುವ ಕೆಲಸ ಮಾಡಲಾಗಿದೆ. ಹೀಗಾಗಿಯೇ ಎಷ್ಟೋ ಕಡೆ ನಿಧಾನವಾಗಿ ಚಲಿಸಿ ಎಂಬ ನಾಮಫಲಕ ಅಳವಡಿಸಲಾಗಿದೆ.

ಇದನ್ನೂ ಓದಿ: Karnataka Weather Today: ಮುಂದಿನ ಎರಡು ದಿನ ಮೋಡ ಕವಿದ ವಾತಾವರಣ: ಎಲ್ಲೆಲ್ಲಿ ಮಳೆ?

ಕೆಲವು ಕಡೆ ರಸ್ತೆ ಭಾಗದಲ್ಲಿ ತಾತ್ಕಾಲಿಕ ಗೋಡೆ ನಿರ್ಮಿಸಿ ಏಕಮುಖ ಸಂಚಾರಕ್ಕಷ್ಟೇ ಅನುವು ಮಾಡಿಕೊಡಲಾಗಿದೆ. ಹೀಗಾಗಿ ಬೃಹತ್ ವಾಹನ ಚಾಲಕರು ಕೊಂಚ ಯಾಮಾರಿದ್ರೂ, ಅಪಾಯ ಕಟ್ಟಿಟ್ಟ ಬುತ್ತಿ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಈಗಾಗಲೇ ಟನಲ್ ರಸ್ತೆ ನಿರ್ಮಾಣಕ್ಕೆ ಸರ್ವೆ ಮಾಡಲಾಗಿದೆ. ಇದು ನಿರ್ಮಾಣವಾದರೆ ಮಾತ್ರ ಸುರಕ್ಷಿತವಾಗಿ ಪ್ರಯಾಣ ಮಾಡಬಹುದು ಎಂಬುದು ಎಲ್ಲರ ಅಭಿಪ್ರಾಯವಾಗಿದೆ. ಒಟ್ಟಿನಲ್ಲಿ ಶಿರಾಡಿಘಾಟ್ ರಸ್ತೆಯಲ್ಲಿನ ಸಂಚಾರ ನಿಜಕ್ಕೂ ಆತಂಕ ಹುಟ್ಟಿಸುತ್ತದೆ. ದುರಸ್ತಿಕಾರ್ಯ ಗಟ್ಟಿಮುಟ್ಟಾಗಿ ಆಗಿಲ್ಲದ ಕಾರಣ, ಅಕಸ್ಮಾತ್ ಜೋರು ಮಳೆಯಾದ್ರೆ ಆಗುವ ಅಪಾಯಕ್ಕೆ ಯಾವು ಹೊಣೆ ಅನ್ನೋದು ಬಹುತೇಕರ ಪ್ರಶ್ನೆಯಾಗಿದೆ.
Published by:Kavya V
First published: