• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Traffic Warden In Mangaluru: ಟ್ರಾಫಿಕ್‌ ವಾರ್ಡನ್‌ ಆಗಲು ಸದವಕಾಶ, ಇಲ್ಲಿದೆ ಸಂಪೂರ್ಣ ಮಾಹಿತಿ

Traffic Warden In Mangaluru: ಟ್ರಾಫಿಕ್‌ ವಾರ್ಡನ್‌ ಆಗಲು ಸದವಕಾಶ, ಇಲ್ಲಿದೆ ಸಂಪೂರ್ಣ ಮಾಹಿತಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಈ ಕೆಲಸಕ್ಕೆ ಸೇರಲು ಎಸ್.ಎಸ್.ಎಲ್.ಸಿ ಪೂರ್ಣಗಳಿಸಿದ್ದು, ಕನ್ನಡ ಮತ್ತು ಇಂಗ್ಲಿಷ್ ಓದಲು, ಬರೆಯಲು ಬರಬೇಕು.

  • Share this:

ಮಂಗಳೂರು: ಮಂಗಳೂರು ನಗರ ಪೊಲೀಸ್ ಸುಪರ್ದಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಟ್ರಾಫಿಕ್‌ ವಾರ್ಡನ್‌ ಸಂಘಟನೆಯು ಇನ್ನು ಮುಂದೆ ಮಂಗಳೂರು ಸಿಟಿ ಪೊಲೀಸ್ ಟ್ರಾಫಿಕ್(Mangaluru Traffic) ವಾರ್ಡನ್ ಆರ್ಗನೈಸೇಷನ್ ಎಂಬ ಹೊಸ ಗುರುತಿನೊಂದಿಗೆ ಕಾರ್ಯಚರಿಸಲಿದೆ. ಈ ಸಂಘಟನೆಯು ಸೂಕ್ತ ತರಬೇತಿ ಮತ್ತು ನಿರ್ದೇಶನದೊಂದಿಗೆ ಹಾಗೂ ನಗರ ಪೊಲೀಸ್ ವ್ಯವಸ್ಥೆಯ ಸಹಭಾಗಿತ್ವದಲ್ಲಿ ಸಂಚಾರ ವ್ಯವಸ್ಥೆಯ ಸುಗಮಕ್ಕೆ (Mangaluru News) ಸಹಕಾರಿಯಾಗಲಿದೆ. ಗರಿಷ್ಟ ವಯೋಮಿತಿಯ ಮಿತಿಯಿಲ್ಲದೇ ಯಾರೇ ಆದರೂ ಈ ಟ್ರಾಫಿಕ್‌ ವಾರ್ಡನ್‌ ಆರ್ಗನೈಸೇಷನ್‌ ನಲ್ಲಿ ಕಾರ್ಯನಿರ್ವಹಿಸಬಹುದಾಗಿದೆ.


ಯಾರೆಲ್ಲ ಅರ್ಜಿ ಸಲ್ಲಿಸಬಹುದು?
ಕನಿಷ್ಟ 20 ವರ್ಷ ಆಗಿರುವ ಯಾವುದೇ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಯಾವುದೇ ಹುದ್ದೆ, ವಿಭಾಗದಲ್ಲಿ ಕೆಲಸ ಮಾಡುವವರು ಟ್ರಾಫಿಕ್ ವಾರ್ಡನ್‌ ಆರ್ಗನೈಸೇಷನ್‌ ನಲ್ಲಿ ತಮ್ಮ ಬಿಡುವಿನ ಸಮಯದಲ್ಲಿ ಟ್ರಾಫಿಕ್‌ ಪೊಲೀಸರ ಜೊತೆಗೂಡಿ ತಾವೂ ಕರ್ತವ್ಯ ನಿರ್ವಹಿಸುವ ಮೂಲಕ ಸಮಾಜಕ್ಕೆ ಸೇವೆಯನ್ನು ಸಲ್ಲಿಸಬಹುದಾಗಿದೆ.




ಹೇಗಿರುತ್ತೆ ಸೇವಾವಧಿ?
ಸ್ವಯಂ ಸೇವೆಯ ತುಡಿತ ಇರುವ ಎಲ್ಲಾ ವರ್ಗದ ಉತ್ಸಾಹ ನಾಗರೀಕರು ಯಾವುದೇ ಫಲಪೇಕ್ಷೆ ಇಲ್ಲದೆ ದಿನಕ್ಕೆ 2 ಗಂಟೆ, ವಾರದಲ್ಲಿ 6 ಗಂಟೆ, ತಿಂಗಳಿಗೆ 24 ಗಂಟೆ (ಕನಿಷ್ಠವಾಗಿ) ಹಾಗೂ ತಿಂಗಳಿಗೆ ಒಂದು ಸಾರಿ 2 ಗಂಟೆಗಳ ಪೇರೆಡ್, ಡ್ರೀಲ್, ಶಾರೀರಿಕ ಕವಾಯಿತು ಮಾಡಲು ಇಚ್ಛೆವುಳ್ಳ ಹಾಗೂ ಆರೋಗ್ಯವಂತರು, ಈ ಟ್ರಾಫಿಕ್ ವಾರ್ಡನ್ ಆರ್ಗನೈಸೇಷನ್‍ನಲ್ಲಿ ಭಾಗವಹಿಸುವ ಅವಕಾಶವಿದೆ.


ಇದನ್ನೂ ಓದಿ: Patrode Recipe: ಮನೆಯಲ್ಲೇ ಮಾಡಿ ರುಚಿಯಾದ ಪತ್ರೊಡೆ, ಇಲ್ಲಿದೆ ಸಿಂಪಲ್ ರೆಸಿಪಿ


ವಿದ್ಯಾರ್ಹತೆ
ಆಸಕ್ತರು ಕನಿಷ್ಠ 20 ವರ್ಷದವರಾಗಿರಬೇಕು. ಗರಿಷ್ಠ ಮಿತಿ ಎಂದರೆ ಶಾರೀರಿಕ ಕವಾಯತು ಮಾಡುವಷ್ಟು ಆರೋಗ್ಯವಂತರಾಗಿರಬೇಕು. ಎಸ್.ಎಸ್.ಎಲ್.ಸಿ ಪೂರ್ಣಗಳಿಸಿದ್ದು, ಕನ್ನಡ ಮತ್ತು ಇಂಗ್ಲಿಷ್ ಓದಲು, ಬರೆಯಲು ಬರಬೇಕು.


ಅರ್ಜಿ ಸಲ್ಲಿಕೆ ಹೇಗೆ?
ಅರ್ಜಿಗಳಿಗೆ ಸ್ಥಳೀಯ ಪೊಲೀಸ್ ಸ್ಟೇಷನ್ ಅಥವಾ 9945875212 ವಾಟ್ಸಾಪ್ ಸಂಖ್ಯೆಗೆ ಮೆಸೇಜ್ ಮಾಡಿ ಪಡೆಯಬಹುದಾಗಿದೆ.


ಇದನ್ನೂ ಓದಿ: Dakshina Kannada: ನೇತ್ರಾವತಿಯಲ್ಲಿ ಮತ್ತೆ ಕಾಣಿಸಿಕೊಂಡ ನೀರಿನ ಹರಿವು!


ಹೆಚ್ಚಿನ ಮಾಹಿತಿಗಾಗಿ
ಹೆಚ್ಚಿನ ಮಾಹಿತಿಗೆ ಪ್ರೊಫೆಸರ್ ಎಂ.ಎಲ್. ಸುರೇಶನಾಥ, ಫ್ಲಾಟ್ ನಂಬರ್ 14, ಮಮತಾ ರೆಸಿಡೆನ್ಸಿ, ಆನೆಗುಂಡಿ ಒಂದನೇ ಅಡ್ಡ ರಸ್ತೆ, ಬಿಜೈ, ಮಂಗಳೂರು 575004, ಮೊಬೈಲ್ ಸಂಖ್ಯೆ 9945875212 ಅನ್ನು ಸಂಪರ್ಕಿಸಬಹುದಾಗಿದೆ.

top videos
    First published: