• Home
 • »
 • News
 • »
 • state
 • »
 • Traffic Fine: ಇನ್ಮೇಲೆ ಪೋಸ್ಟ್ ಆಫೀಸ್​ನಲ್ಲೇ ಟ್ರಾಫಿಕ್ ಫೈನ್ ಪಾವತಿಸಿ!

Traffic Fine: ಇನ್ಮೇಲೆ ಪೋಸ್ಟ್ ಆಫೀಸ್​ನಲ್ಲೇ ಟ್ರಾಫಿಕ್ ಫೈನ್ ಪಾವತಿಸಿ!

ಅಂಚೆ ಕಚೇರಿ

ಅಂಚೆ ಕಚೇರಿ

ದಂಡ ಸ್ವೀಕರಿಸುವ ವ್ಯವಸ್ಥೆ ದಕ್ಷಿಣ ಕನ್ನಡ ಜಿಲ್ಲೆಯ 126, ಉಡುಪಿ ಜಿಲ್ಲೆಯ 62 ಹಾಗೂ ರಾಜ್ಯದ ಇನ್ನಿತರ ಕಡೆಗಳ 1702 ಅಂಚೆ ಕಚೇರಿಗಳಲ್ಲಿ ಇರಲಿದೆ‌. ನಗದು ಅಥವಾ QR ಕೋಡ್ ಸ್ಕ್ಯಾನ್ ಮಾಡುವ ಮೂಲಕ ದಂಡದ ಮೊತ್ತ ಪಾವತಿಸಬಹುದಾಗಿದೆ.

 • News18 Kannada
 • Last Updated :
 • Mangalore, India
 • Share this:

  ಮಂಗಳೂರು: ಟ್ರಾಫಿಕ್ ನಿಯಮ ಉಲ್ಲಂಘನೆ ಮಾಡಿದ್ದೀರ? ಮನೆಗೆ ಏನಾದ್ರೂ ನೋಟೀಸ್ ಬಂದಿದ್ಯಾ? ಪೊಲೀಸ್ ಠಾಣೆಗೆ ಹೋಗಿ ದಂಡ ಕಟ್ಟೋವಷ್ಟು ಟೈಮ್ ಇಲ್ವ? ಅಥವಾ ಪೊಲೀಸ್ ಸ್ಟೇಷನ್ ತಮಗೆ ಹತ್ತಿರ ಇಲ್ವ? ಹಾಗಿದ್ರೆ ಇದಕ್ಕೆಲ್ಲ ಪರಿಹಾರವಿದೆ ನೋಡಿ ಅಂಚೆ ಕಚೇರಿಯಲ್ಲಿ. ಹೌದು, ಇನ್ಮುಂದೆ ಟ್ರಾಫಿಕ್ ನಿಯಮ ಉಲ್ಲಂಘನೆ ಮಾಡಿ ನೋಟೀಸ್ ಪಡೆದುಕೊಂಡರೆ ಸ್ಥಳೀಯ ಪ್ರಧಾನ ಅಥವಾ ಉಪ ಅಂಚೆ ಕಚೇರಿಗಳಲ್ಲಿ ದಂಡ ಮೊತ್ತ ಪಾವತಿಸಬಹುದಾಗಿದೆ. ಮಂಗಳೂರಿನಲ್ಲಿ ಈಗಾಗಲೇ ಇಂತಹ ಯೋಜನೆಗೆ ಚಾಲನೆ ನೀಡಲಾಗಿದೆ. ಹಾಗಂತ ಟ್ರಾಫಿಕ್ ನಿಯಮ ಉಲ್ಲಂಘಿಸದಿರುವುದು ಇನ್ನಷ್ಟು ಉತ್ತಮ.


  ದಂಡ ಬಿದ್ದಲ್ಲಿ ಅಲೆದಾಡಬೇಕಿಲ್ಲ
  ತ್ರಿಬಲ್ ರೈಡಿಂಗ್, ಸಿಗ್ನಲ್ ಜಂಪ್, ಹೆಲ್ಮೆಟ್ ರಹಿತ, ಸೀಟ್ ಬೆಲ್ಟ್ ರಹಿತ, ದೋಷಯುಕ್ತ ನಂಬರ್ ಪ್ಲೇಟ್ ಹೊಂದಿರುವ ವಾಹನಗಳ ಚಾಲನೆ ಹೀಗೆ ಹಲವು ರೀತಿಯಲ್ಲಿ ಟ್ರಾಫಿಕ್ ನಿಯಮ ಉಲ್ಲಂಘಿಸಿದರೆ ಅಟೋಮೇಷನ್ ಸೆಂಟರ್ ಮೂಲಕ ಮಾಹಿತಿ ಪಡೆದು ಟ್ರಾಫಿಕ್ ಪೊಲೀಸರು ಅಂತಹ ನಿಯಮ ಉಲ್ಲಂಘನೆ ಮಾಡಿದ ವಾಹನ ಮಾಲಕರಿಗೆ ನೋಟೀಸ್ ಕಳುಹಿಸುವರು.


  ಮಂಗಳೂರು ನಗರಕ್ಕೆ ಆಗಮಿಸುವ ಯಾವುದೋ ಬೇರೆ ಊರಿನ ವಾಹನಗಳಾದರೆ ಅವರು ದಂಡ ತೆರಲು ಮಂಗಳೂರಿಗೆ ಬರುವುದು ಕಷ್ಟ. ಯಾಕೆಂದರೆ ಮಂಗಳೂರು ನಗರ ಕೇಂದ್ರೀಕೃತವಾಗಿಯೇ ನಾಲ್ಕು ಟ್ರಾಫಿಕ್ ಠಾಣೆಗಳು ಕಾರ್ಯಾಚರಿಸುತ್ತಿವೆ. ಹೀಗಾಗಿ ಸ್ಥಳೀಯ ಅಂಚೆ ಕಚೇರಿಯಲ್ಲಿ ಸುಲಭವಾಗಿ ತಮಗೆ ಬಂದ ನೋಟೀಸ್ ಹಿಡಿದುಕೊಂಡು ಹೋಗಿ ದಂಡದ ಮೊತ್ತ ತೆರಬಹುದಾಗಿದೆ.


  ಇದನ್ನೂ ಓದಿ: Jobs In Hubballi: ಹುಬ್ಬಳ್ಳಿಯಿಂದಲೇ ದೇಶ ರಕ್ಷಿಸೋಕೆ ಚಾನ್ಸ್! ಉತ್ತರ ಕರ್ನಾಟಕ ಜನರಿಗೆ ಸುವರ್ಣಾವಕಾಶ


  ದಂಡ ಶುಲ್ಕಕ್ಕೆ ವಿಧಿಸಲಾಗುವ ಸೇವಾ ಶುಲ್ಕ
  ದಂಡದ ಮೊತ್ತಕ್ಕೂ GST ಸಹಿತ ಸೇವಾ ಶುಲ್ಕ ವಿಧಿಸಲಾಗುತ್ತದೆ. ಅದರ ವಿವರ ಹೀಗಿದೆ ನೋಡಿ.


  ₹1000 - ₹10
  ₹1000 ರಿಂದ ₹2500 - ₹15
  ₹2501 ರಿಂದ ₹5000 - ₹20
  ₹5000 ಕ್ಕಿಂತ ಮೇಲ್ಪಟ್ಟು - ₹25


  ಇದನ್ನೂ ಓದಿ: Sweet Potato: ಅಂಕೋಲಾ ಗೆಣಸು ಉಪವಾಸಕ್ಕೆ ಫೇಮಸ್ಸು! ಆರೋಗ್ಯಕ್ಕಂತೂ ಭಾರೀ ಬೆಸ್ಟು


  ಯಾವೆಲ್ಲ ಕಚೇರಿಯಲ್ಲಿ ಸೇವೆ ಲಭ್ಯ?
  ದಂಡ ಸ್ವೀಕರಿಸುವ ವ್ಯವಸ್ಥೆ ದಕ್ಷಿಣ ಕನ್ನಡ ಜಿಲ್ಲೆಯ 126, ಉಡುಪಿ ಜಿಲ್ಲೆಯ 62 ಹಾಗೂ ರಾಜ್ಯದ ಇನ್ನಿತರ ಕಡೆಗಳ 1702 ಅಂಚೆ ಕಚೇರಿಗಳಲ್ಲಿ ಇರಲಿದೆ‌. ನಗದು ಅಥವಾ QR ಕೋಡ್ ಸ್ಕ್ಯಾನ್ ಮಾಡುವ ಮೂಲಕ ದಂಡದ ಮೊತ್ತ ಪಾವತಿಸಬಹುದಾಗಿದೆ.

  Published by:ಗುರುಗಣೇಶ ಡಬ್ಗುಳಿ
  First published: