ಮಂಗಳೂರು: ನೀವೇನಾದ್ರೂ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಪ್ರಯಾಣ ಬೆಳೆಸುತ್ತಿದ್ದೀರಾ? ಹಾಗಿದ್ರೆ ನಿಮಗಾಗಿ ಕಾಯುತ್ತಿದೆ ಬೇಸಿಗೆಯ ವಿಶೇಷ ಆಫರ್ಗಳು. ಉನ್ನತ ಬ್ರ್ಯಾಂಡ್, ವಿಶೇಷ ರಿಯಾಯಿತಿ, ಸ್ಪರ್ಧಾತ್ಮಕ ದರದಲ್ಲಿ ವಿಮಾನ ನಿಲ್ದಾಣದಲ್ಲಿಯೇ ಭರ್ಜರಿ ಶಾಪಿಂಗ್ ಮಾಡಲು ಅವಕಾಶವೊಂದನ್ನು ಒದಗಿಸಲಾಗಿದೆ. ಇಂತಹದ್ದೊಂದು ಅವಕಾಶವನ್ನು ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ (Mangaluru Airport) ನೀಡುತ್ತಿದೆ. ಈಗಾಗಲೇ ಆರಂಭಗೊಂಡಿರುವ “ಸಮ್ಮರ್ ಆಫ್ 23” ಟೈಟಲ್ನಡಿ ಸಮ್ಮರ್ ಶಾಪಿಂಗ್ಗೆ (Summer Shopping) ಅವಕಾಶ ಮಾಡಿಕೊಡಲಾಗಿದೆ. ಈ ಮೂಲಕ “ತಂಪಾದ ಕೊಡುಗೆಗಳಿಂದ ತಾಪಮಾನವನ್ನು ಸೋಲಿಸಿ” ಅನ್ನೋದೆ ಸಮ್ಮರ್ ಶಾಪಿಂಗ್ ಉದ್ದೇಶ.
2 ತಿಂಗಳ ಭರ್ಜರಿ ಶಾಪಿಂಗ್ ಕಾರ್ನಿವಲ್
ಸುಮಾರು 70 ದಿನಗಳ ಕಾಲ ನಡೆಯಲಿರುವ ಈ ಶಾಪಿಂಗ್ ಮೇಳದಲ್ಲಿ 21 ಬ್ರ್ಯಾಂಡ್ನ ಮಳಿಗೆಗಳು ಇರಲಿದೆ. ಅದರಲ್ಲಿ ಹತ್ತು ಆಹಾರ ಮತ್ತು ಪಾನೀಯಕ್ಕೆ ಸಂಬಂಧಿಸಿದರೆ ಉಳಿದಂತೆ ಇತರೆ ಮಳಿಗೆಗಳು ಆಕರ್ಷಿಸಲಿದೆ. ವಿಶೇಷ ರಿಯಾಯಿತಿಯ ಕೊಡುಗೆಗಳು ಪ್ರಯಾಣಿಕರಿಗೆ ಒನ್ ಸ್ಟಾಪ್ ಶಾಪಿಂಗ್ ಮೂಲಕ ಒದಗಿಸಲಿದೆ.
ಎಲ್ಲಿಯವರೆಗೆ ಮಾಡಬಹುದು ಶಾಪಿಂಗ್?
ಜುಲೈ 2ರವರೆಗೆ ಈ ಶಾಪಿಂಗ್ ಕಾರ್ನಿವಲ್ ಇರಲಿದೆ. ಪ್ರಯಾಣಿಕರು ಇದರ ಲಾಭವನ್ನು ಪಡೆಯಬಹುದಾಗಿದೆ. ವಿಮಾನದಿಂದ ಇಳಿದು ಬರುತ್ತಲೇ ಅಲ್ಲೇ ಶಾಪಿಂಗ್ ಮುಗಿಸಲು ಇದೊಂದು ಸುವರ್ಣಾವಕಾಶ ಕೂಡ.
ಇದನ್ನೂ ಓದಿ: Mangaluru News: ಇಲ್ಲಿ ಫ್ರೀ ಆಗಿ ಸಿಗುತ್ತೆ ಇಂಗ್ಲೀಷ್ ಮೀಡಿಯಂ ಶಿಕ್ಷಣ, ಹೀಗೆ ಅರ್ಜಿ ಸಲ್ಲಿಸಿ
ಕ್ಯೂಆರ್ ಕೋಡ್ ಬಳಸಿ
ವಿಮಾನ ನಿಲ್ದಾಣದಲ್ಲಿ ಅಲ್ಲಲ್ಲಿ ಪ್ರದರ್ಶಿಸಲಾಗುವ ಕ್ಯೂಆರ್ ಕೋಡ್ ಸ್ಕ್ಯಾನಿಂಗ್ ಮಾಡುವ ಮೂಲಕ ಅದಾನಿ ಒನ್ ವೆಬ್ ಸೈಟ್ ತೆರೆದುಕೊಳ್ಳುತ್ತದೆ. ಇದರ ಮೂಲಕವೂ ಅಲ್ಲಿರುವ ಶಾಪಿಂಗ್ ಬ್ರ್ಯಾಂಡ್ ಹಾಗೂ ವಸ್ತುಗಳ ಬಗ್ಗೆ ಮಾಹಿತಿ ಪಡೆಯಬಹುದಾಗಿದೆ. ಅದಲ್ಲದೇ, ಅಲ್ಲಲ್ಲಿರುವ ಡಿಜಿಟಲ್ ಹಾಗೂ ಸ್ಥಿರ ಜಾಹೀರಾತಿನ ಮೂಲಕವೂ ಮಾಹಿತಿ ನೀಡಲಾಗುತ್ತೆ.
ಇದನ್ನೂ ಓದಿ: Dakshina Kannada Voters: ಮನೆಯಲ್ಲೇ ಮತದಾನ; ದಕ್ಷಿಣ ಕನ್ನಡ ಜಿಲ್ಲೆಯೇ ಟಾಪ್
ಯಾವುದೆಲ್ಲ ಬ್ರ್ಯಾಂಡ್ ಇರಲಿದೆ?
ಸಮ್ಮರ್ ಶಾಪಿಂಗ್ನಲ್ಲಿ ಬಟ್ಟೆ ಬರೆ, ಆಭರಣ, ಆಹಾರ, ಶೂ, ಸುಗಂಧ ದ್ರವ್ಯ ಹೀಗೆ ಹಲವು ಬಗೆಯ ಶಾಪಿಂಗ್ ಬ್ರ್ಯಾಂಡ್ಗಳ ಐಟಂಗಳು ಪ್ರಯಾಣಿಕರಿಗೆ ಲಭ್ಯವಿರಲಿದೆ. ವಿಶೇಷವಾಗಿ ಜಸ್ಟ್ ಜ್ಯೂಸ್, ಇಸಿ ಮಾಲ್, ಫಾರೆಸ್ಟ್ ಎಸೆನ್ಶಿಯಲ್ಸ್, ಜ್ಯುವೆಲ್ಸ್ ಆಫ್ ಇಂಡಿಯಾ, ಪೇವರ್ಸ್ ಇಂಗ್ಲೆಂಡ್ ಹೀಗೆ ನಾನಾ ಬ್ರ್ಯಾಂಡ್ಗಳು ಇರಲಿವೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ