Summer Camp In Mangaluru: ಮಕ್ಕಳಿಗಾಗಿ 2 ವಾರದ ಬೇಸಿಗೆ ಶಿಬಿರ, ಕೂಡಲೇ ಅರ್ಜಿ ಸಲ್ಲಿಸಿ

ಬೇಸಿಗೆ ಶಿಬಿರ

ಬೇಸಿಗೆ ಶಿಬಿರ

ಮಕ್ಕಳಿಗಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವತಿಯಿಂದ ಬೇಸಿಗೆ ಶಿಬಿರ ಹಮ್ಮಿಕೊಳ್ಳಲಾಗಿದೆ.

  • News18 Kannada
  • 3-MIN READ
  • Last Updated :
  • Mangalore, India
  • Share this:

ಮಂಗಳೂರು: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವತಿಯಿಂದ ಮಕ್ಕಳಿಗಾಗಿ ಬೇಸಿಗೆ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ. ಎರಡು ವಾರಗಳ ಕಾಲ ನಡೆಯಲಿರುವ ಬೇಸಿಗೆ ಶಿಬಿರದಲ್ಲಿ (Summer Camp) ವಿವಿಧ ಚಟುವಟಿಕೆಗಳನ್ನು ಮಕ್ಕಳಿಗಾಗಿ ಏರ್ಪಡಿಸಲಿದೆ. ಮಂಗಳೂರು ನಗರದ (Mangaluru News) ಕದ್ರಿ ಪಾರ್ಕ್‌ ಹತ್ತಿರದ ಜಿಲ್ಲಾ ಬಾಲಭವನದಲ್ಲಿ ಅರ್ಜಿ ಸಲ್ಲಿಸುವ ಮೂಲಕ ಪೋಷಕರು ತಮ್ಮ ಮಕ್ಕಳನ್ನು ಚಟುವಟಿಕೆಯಲ್ಲಿ ಭಾಗವಹಿಸುವಂತೆ ಮಾಡಬಹುದಾಗಿದೆ.

ಬೇಸಿಗೆ ಶಿಬಿರದ ವಿವರ ನಡೆಸುವವರುಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ
ಸಡೆಯುವ ಸ್ಥಳಮಂಗಳೂರು ನಗರದ ಕದ್ರಿ ಪಾರ್ಕ್‌ ಹತ್ತಿರದ ಜಿಲ್ಲಾ ಬಾಲಭವನ
ಏನೆಲ್ಲ ಚಟುವಟಿಕೆ ನಡೆಯಲಿದೆ?ಚಿತ್ರಕಲೆ, ಕರಕುಶಲ, ಜೇಡಿಮಣ್ಣಿನ ಕಲೆ, ಸಮೂಹ ನೃತ್ಯ, ಸಮೂಹ ಗೀತೆ, ಯೋಗ
ಅವಧಿಎರಡು ವಾರ
ದಿನಾಂಕ15ರಿಂದ 28 ರವರೆಗೆ
ವಯೋಮಿತಿ5 ರಿಂದ 16 ವರ್ಷದ ಒಳಗಿನ ಮಕ್ಕಳು
ಹೆಚ್ಚಿನ ಮಾಹಿತಿಗಾಗಿದೂರವಾಣಿ ಸಂಖ್ಯೆ 0824-2451254

ಏನೆಲ್ಲ ಚಟುವಟಿಕೆ?
ಎರಡು ವಾರಗಳ ಕಾಲ ನಡೆಯಲಿರುವ ಬೇಸಿಗೆ ಶಿಬಿರದಲ್ಲಿ ಚಿತ್ರಕಲೆ, ಕರಕುಶಲ, ಜೇಡಿಮಣ್ಣಿನ ಕಲೆ, ಸಮೂಹ ನೃತ್ಯ, ಸಮೂಹ ಗೀತೆ, ಯೋಗ ಮತ್ತು ಇತರ ಚಟುವಟಿಕೆಗಳ ತರಬೇತಿ ನೀಡಲಾಗುವುದು.


ಇದನ್ನೂ ಓದಿ: Mangaluru Water Crisis: ಕೆರೆಗಳಲ್ಲಿ ನೀರು ಇದ್ರೂ ನೋ ಯೂಸ್!‌


ಯಾರೆಲ್ಲ ಅರ್ಜಿ ಸಲ್ಲಿಸಬಹುದು?
ಬೇಸಿಗೆ ಶಿಬಿರದಲ್ಲಿ 5 ರಿಂದ 16 ವರ್ಷದ ಒಳಗಿನ ಮಕ್ಕಳು ಭಾಗವಹಿಸಬಹುದಾಗಿದೆ. ಶಿಬಿರವು ಮೇ 15ರಿಂದ 28 ರವರೆಗೆ ನಡೆಯಲಿದೆ.




ಅರ್ಜಿ ಸಲ್ಲಿಕೆ ಹೇಗೆ?
ಆಸಕ್ತರು ಜನ್ಮ ದಿನಾಂಕದ ದಾಖಲೆಗಳೊಂದಿಗೆ ತಮ್ಮ ಪೋಷಕರ ಮೂಲಕ ಮೇ.10ರ ಒಳಗೆ ನಗರದ ಬಿಜೈನ ಜಿಲ್ಲಾ ಸ್ತ್ರೀಶಕ್ತಿ ಭವನದ 2ನೇ ಮಹಡಿಯಲ್ಲಿರುವ ಉಪ ನಿರ್ದೇಶಕರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಮುದ್ದಾಂನಲ್ಲಿ ಅರ್ಜಿ ಸಲ್ಲಿಸುವಂತೆ ಕೋರಲಾಗಿದೆ.


ಇದನ್ನೂ ಓದಿ: Free College Admission: ಪ್ರಥಮ ಪಿಯುಸಿ ಸೈನ್ಸ್​ಗೆ ಉಚಿತ ಅಡ್ಮಿಶನ್‌, ಈಗಲೇ ಇಲ್ಲಿ ಅರ್ಜಿ ಸಲ್ಲಿಸಿ


ಹೆಚ್ಚಿನ ಮಾಹಿತಿಗಾಗಿ
ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 0824-2451254 ಯನ್ನು ಸಂಪರ್ಕಿಸುವಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ.

First published: