ಮಂಗಳೂರು: ಇನ್ನೇನು ಶಾಲೆ ಆರಂಭವಾಗಲಿಕ್ಕೆ ಕೆಲವೇ ದಿನಗಳಷ್ಟೇ ಬಾಕಿಯಿದೆ. ಎಳೆಯ ಮಕ್ಕಳಂತೂ ರಜೆಯ ಗುಂಗಿನಿಂದ ಹೊರಬರುವುದೇ ಕಷ್ಟ. ಹಾಗಾಗಿ ಪೋಷಕರು ಏಕಾಏಕಿ ಮಕ್ಕಳನ್ನು ಶಾಲೆಗೆ (School) ಕಳುಹಿಸಲು ಅನುಭವಿಸುವ ತೊಂದರೆ ಅಂತಿಂತದ್ದಲ್ಲ. ಹೀಗಾಗಿ ಮಕ್ಕಳಿಗಾಗಿ (Children Summer Camp) ವಿವಿಧ ಕ್ರಿಯಾತ್ಮಕ ಚಟುವಟಿಕೆ ಮೂಲಕ ಚಿಣ್ಣರ ಚಾವಡಿ ಮಂಗಳೂರು ಇದರ ಆಶ್ರಯದಲ್ಲಿ ಮಕ್ಕಳ ಸಂತಸ ಕಲಿಕಾ ಕಾರ್ಯಾಗಾರ “ಚಿಣ್ಣರ ಕಲರವ – 2023” ಅನ್ನು ಆಯೋಜಿಸಿದೆ.
ಎಲ್ಲಿ ನಡೆಯಲಿದೆ ಶಿಬಿರ?
ಮಕ್ಕಳ ಬೇಸಿಗೆ ಶಿಬಿರವು ಮೇ 22 ರಿಂದ 24ರ ವರೆಗೆ ಮೂರು ದಿನಗಳ ಕಾಲ ಸಂತ ಅಲೋಶಿಯಸ್ ಹೈಸ್ಕೂಲ್ ಸಭಾಂಗಣದಲ್ಲಿ ನಡೆಯಲಿದೆ.
ಏನೆಲ್ಲ ಇರುತ್ತೆ?
ಶಿಬಿರದಲ್ಲಿ ಕ್ರಿಯಾತ್ಮಕ ಚಿತ್ರಕಲೆ, ಊದುವ ಚಿತ್ರ, ಮಡಚುವ ಚಿತ್ರ, ಮುಳುಗಿಸುವ ಚಿತ್ರ, ಕ್ಲೇ ಆರ್ಟ್, ವರ್ಲಿ ಆರ್ಟ್, ಗುಳ್ಳೆ ಆಟ, ಮೂಕಾಭಿನಯ, ನಾಟಕ, ಅಭಿನಯ ಗೀತೆ, ಮಿಮಿಕ್ರಿ, ಮ್ಯಾಜಿಕ್ ಶೋ, ಮನೋರಂಜನಾ ಆಟಗಳು.
ಪ್ರಬುದ್ಧ ಸಂಪನ್ಮೂಲ ವ್ಯಕ್ತಿಗಳು
ವಿಶೇಷ ಅಂದ್ರೆ ಈ ಶಿಬಿರದಲ್ಲಿ ಕರಾವಳಿಯ ಪ್ರಸಿದ್ಧ ಕಲಾವಿದರು, ಸಂಪನ್ಮೂಲ ವ್ಯಕ್ತಿಗಳಾದ ಮೈಮ್ ರಾಮದಾಸ್, ಪ್ರೇಮನಾಥ್ ಮರ್ಣೆ, ವಿಸ್ಮಯ ವಿನಾಯಕ್, ವಿದ್ದು ಉಚ್ಚಿಲ್, ಸೂರಜ್ ಶೆಟ್ಟಿ, ಪ್ರವೀಣ್ ವಿಸ್ಮಯ, ಗುರುಪ್ರಸಾದ್, ತಾರಾನಾಥ ಕೈರಂಗಳ, ಮನೋಜ್ ವಾಮಂಜೂರು ಉಪಸ್ಥಿತರಿದ್ದು ಮಕ್ಕಳಿಗೆ ಕ್ರಿಯಾತ್ಮಕ ಚಟುವಟಿಕೆಗಳನ್ನು ಹೇಳಿಕೊಡಲಿದ್ದಾರೆ.
ಯಾರೆಲ್ಲ ಅರ್ಜಿ ಸಲ್ಲಿಸಬಹುದು?
ಶಿಬಿರಕ್ಕೆ ಸೇರಲು ಇಚ್ಛಿಸುವ ಮೊದಲು ನೋಂದಣಿ ಮಾಡಿದ 60 ಮಕ್ಕಳಿಗೆ ಮಾತ್ರ ಅವಕಾಶ. ಹಾಗೂ 5ನೇ ತರಗತಿಯಿಂದ 10ನೇ ತರಗತಿಯೊಳಗಿನ ಮಕ್ಕಳಿಗೆ ಮಾತ್ರ ಭಾಗವಹಿಸಲು ಅವಕಾಶವಿರುತ್ತದೆ.
ಇದನ್ನೂ ಓದಿ: Mangaluru Water Crisis: ಮಳೆ ಬರದಿದ್ರೆ ಮಂಗಳೂರು ನಗರಕ್ಕೆ ಇನ್ನೆರಡು ವಾರಕ್ಕಷ್ಟೇ ನೀರು!
ನೋಂದಣಿ ಯಾವಾಗ ಕೊನೆ?
ಆಸಕ್ತ ಪೋಷಕರು ತಮ್ಮ ಮಕ್ಕಳ ಹೆಸರನ್ನು ಮೇ 22 ರ ಬೆಳಿಗ್ಗೆ 8.30ಕ್ಕೆ ಸ್ಥಳದಲ್ಲೇ ನೋಂದಾವಣೆ ಶುಲ್ಕ ರೂ. 100 ನೀಡಿ ಹೆಸರು ನೋಂದಾಯಿಸಿಕೊಳ್ಳಬೇಕಾಗುತ್ತದೆ.
ಶಿಬಿರ ನಡೆಯಲಿರುವ ಸಮಯ?
ಶಿಬಿರಾರ್ಥಿಗಳು 100 ಪುಟದ ಪುಸ್ತಕ, ಪೆನ್, ಪೆನ್ಸಿಲ್,ಕತ್ತರಿ,ಪಾಸ್ ಪೋರ್ಟ್ ಅಳತೆಯ ಫೋಟೋ ತರತಕ್ಕದ್ದು, ಉಳಿದ ಸಾಮಗ್ರಿಗಳನ್ನು ಶಿಬಿರದಲ್ಲಿ ನೀಡಲಾಗುವುದು. ಭಾಗವಹಿಸುವ ಎಲ್ಲಾ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ನೀಡಲಾಗುವುದು. ಬೆಳಿಗ್ಗೆ 9ರಿಂದ ಸಂಜೆ 4.30ರವರೆಗೆ ಶಿಬಿರ ನಡೆಯಲಿದೆ.
ಇದನ್ನೂ ಓದಿ: Patrode Recipe: ಮನೆಯಲ್ಲೇ ಮಾಡಿ ರುಚಿಯಾದ ಪತ್ರೊಡೆ, ಇಲ್ಲಿದೆ ಸಿಂಪಲ್ ರೆಸಿಪಿ
ಹೆಚ್ಚಿನ ಮಾಹಿತಿಗಾಗಿ
ಹೆಚ್ಚಿನ ಮಾಹಿತಿಗಾಗಿ ಪೋಷಕರು ಮೊಬೈಲ್ ಸಂಖ್ಯೆ 8277691151, 9901699667 ಸಂಪರ್ಕಿಸಬಹುದಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ