ಮಳೆ ಅಬ್ಬರದ ನಡುವೆಯೂ ಆನ್​ಲೈನ್​ ಕ್ಲಾಸ್; ಜೀವ ಕೈಯಲ್ಲಿಡಿದು ಪಾಠ ಕೇಳುತ್ತಿರುವ ವಿದ್ಯಾರ್ಥಿಗಳು

ನೆಟ್ ವರ್ಕ್ ಸಮಸ್ಯೆಯಿಂದ ಭಾರೀ ಗಾಳಿ ಮಳೆಯಲ್ಲಿಯೇ ವಿದ್ಯಾರ್ಥಿಗಳು ಗುಡ್ಡಗಾಡು, ರಸ್ತೆ ಬದಿಯಲ್ಲಿ ಜೀವ ಕೈಯಲ್ಲಿ ಹಿಡಿದು ಆನ್ ಲೈನ್ ತರಗತಿಗೆ ಹಾಜರಾಗುತ್ತಿದ್ದಾರೆ.

ಮಳೆ ನಡುವೆಯೇ ಅನ್​ಲೈನ್​ ತರಗತಿ

ಮಳೆ ನಡುವೆಯೇ ಅನ್​ಲೈನ್​ ತರಗತಿ

  • Share this:
ಮಂಗಳೂರು (ಜೂ. 19): ಸರ್ಕಾರ ಕೋವಿಡ್​ ಲಾಕ್​ಡೌನ್​ನಿಂದಾಗಿ ವಿದ್ಯಾರ್ಥಿಗಳಿಗೆ  ಶಿಕ್ಷಣಕ್ಕೆ ತೊಂದರೆಯಾಗಬಾರದು ಎನ್ನುವ ಉದ್ದೇಶದಿಂದ ಆನ್ ಲೈನ್ ಶಿಕ್ಷಣ ಎನ್ನುವ ಪದ್ಧತಿಯನ್ನು ಪರಿಚಯಿಸಿ ಕೈತೊಳೆದುಕೊಂಡಿದೆ. ಆದರೆ ಇದರಿಂದ ವಿದ್ಯಾರ್ಥಿಗಳು ಎಷ್ಟು ಪರಿಣಾಮಕಾರಿಯಾಗಿ ಕಲಿಯುತ್ತಿದ್ದಾರೆ? ಅದು ಸಮರ್ಪಕವಾಗಿ ತಲುಪುತ್ತಿದೆಯಾ ಎನ್ನುವುದನ್ನು ನೋಡುವ ಗೋಜಿಗೆ ಹೋಗುವುದಿಲ್ಲ. ಇದಕ್ಕೊಂದು ಉದಾಹರಣೆ ದ.ಕ. ಜಿಲ್ಲೆಯ  ಸುಳ್ಯ ತಾಲೂಕಿನಲ್ಲಿ ಸಿಗುತ್ತಿದೆ. ಈಗಾಗಲೇ ಕಳೆದೊಂದು ವರ್ಷದಿಂದ ನೆಟ್​ವರ್ಕ್​ ಸಿಗದೇ ಆನ್​ಲೈನ್​ ಶಿಕ್ಷಣದಲ್ಲಿ ಸಮಸ್ಯೆ ಅನುಭವಿಸಿದ್ದ ವಿದ್ಯಾರ್ಥಿಗಳಿಗೆ ಈ ವರ್ಷ ಕೂಡ ಈ ಸಮಸ್ಯೆ ಮುಂದುವರೆದಿದೆ. ಇದು ಗ್ರಾಮಾಂತರ ಭಾಗದ ವಿದ್ಯಾರ್ಥಿಗಳು ನೆಟ್ ವರ್ಕ್ ಸಮಸ್ಯೆಯಿಂದಾಗಿ ಇನ್ನಿಲ್ಲದ ಸಮಸ್ಯೆ ಅನುಭವಿಸುತ್ತಿದ್ದಾರೆ. ಇದರ ಜೊತೆಗೆ ಮಳೆಯಬ್ಬರ ಕೂಡ ಅವರನ್ನು ಮತ್ತಷ್ಟು ಹೈರಾಣಾಗಿಸಿದೆ. ಸುಳ್ಯ ತಾಲೂಕಿನ ಮೊಗ್ರದ ಬಳ್ಳಕ್ಕ ವಿದ್ಯಾರ್ಥಿಗಳು ಬಿರುಸಿನ ಮಳೆ ನಡೆವೆಯೇ ಆನ್​ಲೈನ್​ ಶಿಕ್ಷಣ ಪಡೆಯಲು ಇನ್ನಿಲ್ಲದ ಕಸರತ್ತು ನಡೆಸಿದ್ದಾರೆ. ಈಗಾಗಲೇ ಕಳೆದೊಂದು ವಾರದಿಂದ ತೀವ್ರಗೊಂಡಿರುವ ಮಳೆಯಿಂದ ಇಲ್ಲಿನ ಜನರು ಸಾಕಷ್ಟು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಈ ನಡುವೆ ನೆಟ್ ವರ್ಕ್ ಸಮಸ್ಯೆ ಕೂಡ ಬಹಳಷ್ಟಿದ್ದು, ಭಾರೀ ಗಾಳಿ ಮಳೆಗೆ ಜೀವ ಕೈಯಲ್ಲಿ ಹಿಡಿದು ಆನ್ ಲೈನ್ ತರಗತಿಗೆ ಹಾಜರಾಗುತ್ತಿದ್ದಾರೆ. ಗುಡ್ಡದ ಮೇಲಿನ ರಸ್ತೆಯಲ್ಲಿ ವಿದ್ಯಾರ್ಥಿಗಳ ಆನ್ ಲೈನ್ ಕ್ಲಾಸ್ ನಡೆಯುತ್ತಿದ್ದು, ಭಾರೀ ಮಳೆಗೆ ಪೋಷಕರು ವಿದ್ಯಾರ್ಥಿಗಳಿಗೆ ಛತ್ರಿಯ ಆಸರೆ ನೀಡುತ್ತಿದ್ದಾರೆ. ಕೆಲ ವಿದ್ಯಾರ್ಥಿಗಳು ಗುಡ್ಡದ ಮೇಲೆ ಪ್ಲಾಸ್ಟಿಕ್ ಗುಡಿಸಲಿನಲ್ಲೇ ದಿನವಿಡೀ ವಾಸವಾಗಿರಬೇಕಾದ ದುಸ್ಥಿತಿಯೂ ಇದೆ.

ಇದನ್ನು ಓದಿ: ಸಂಜೆವರೆಗೆ ಅಂಗಡಿ-ಮುಗ್ಗಟ್ಟು ಓಪನ್​: ಮಾಲ್​​, ದೇವಸ್ಥಾನಕ್ಕಿಲ್ಲ ಅವಕಾಶ

ಈ ಭಾಗದಲ್ಲಿ ಎಸ್ ಎಸ್ ಎಲ್ ಸಿ ಸೇರಿದಂತೆ ಕಾಲೇಜು ಹಂತದ ಸುಮಾರು 30ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇದ್ದಾರೆ. ನೆಟ್ ವರ್ಕ್ ಸಮಸ್ಯೆಯ ಜೊತೆಗೆ ಗುಡ್ಡದಲ್ಲಿ ಪಾಠ ಕೇಳುವಾಗ ಭಾರೀ ಗಾಳಿ-ಮಳೆಗೆ ಮರಗಳು ಬೀಳುವ ಆತಂಕವೂ ಇದೆ. ಇದೆಲ್ಲದರ ನಡುವೆ ಕಲಿತ ಪಾಠ ಅದೆಷ್ಟು ಅರ್ಥವಾಗುತ್ತೋ ಬಿಡುತ್ತೋ ಎಂಬುದು ದೇವನೇ ಬಲ್ಲ. ಎಲ್ಲವನ್ನೂ ಒಂದೇ ತಕ್ಕಡಿಯಲ್ಲಿ ತೂಗಿ ಸರ್ಕಾರ ನಿರ್ಧಾರ ತೆಗೆದುಕೊಳ್ಳುವಾಗ ಗ್ರಾಮಾಂತರ ವಿದ್ಯಾರ್ಥಿಗಳ ಸಮಸ್ಯೆಯನ್ನೂ ಗಮನಿಸಬೇಕು ಎನ್ನು ವುದು ಪೋಷಕರ ಆಗ್ರಹ ವಾಗಿದೆ.

ಇದನ್ನು ಓದಿ: 13 ಜಿಲ್ಲೆಗಳಲ್ಲಿ ನಿಯಂತ್ರಣ ಕಂಡ ಸೋಂಕು; ಮೈಸೂರಲ್ಲಿ ಇಳಿಕೆಯಾಗದ ಪಾಸಿಟಿವಿಟಿ ದರ

ಗುತ್ತಿಗಾರು ಗ್ರಾಮದಲ್ಲಿ ಸರ್ಕಾರಿ ಸ್ವಾಮ್ಯದ ಬಿ ಎಸ್ ಎನ್ ಎನ್ ಟವರ್ ಇದೆ. ಆದರೆಕೆಲವು ಎತ್ತರದ ಭಾಗಗಳಲ್ಲಿ ಕೇವಲ 3G ನೆಟ್ ವರ್ಕ್ ಮಾತ್ರ ಸಿಗುತ್ತಿದೆ‌‌. ವಿದ್ಯುತ್ ಕೈ ಕೊಟ್ಟರೆ ನೆಟ್ ವರ್ಕ್ ಮಾಯವಾಗುತ್ತದೆ. ಜಿಲ್ಲಾಡಳಿತ ಇಂಟರ್ನೆಟ್ ಸಮಸ್ಯೆ ನೀಗಿಸಲು ಸಭೆ ಮಾಡಿ  ಸಮಸ್ಯೆಯನ್ನು ಬಗೆಹರಿಸುತ್ತೇವೆ ಎಂಬ ಆಶ್ವಾಸನೆ ನೀಡುತ್ತಾ ಬಂದಿದೆಯಾದರೂ ಇಲ್ಲಿಯವರೆಗೆ ಕಾರ್ಯರೂಪಕ್ಕೆ ಬಂದಿಲ್ಲ. ವಿದ್ಯುತ್ ಕೈ ಕೊಟ್ಟ ಸಂಧರ್ಭದಲ್ಲಿ ಡಿಸೇಲ್ ಹಾಕಿ ಜನರೇಟರ್ ಹಾಕಬೇಕಾಗುತ್ತದೆ‌‌. ಆದರೆ ಡಿಸೇಲ್ ಪೂರೈಕೆಯೂ ಆಗುತ್ತಿಲ್ಲ. ಇಂತಹ ಸಂಕಷ್ಟದ ಮಧ್ಯೆ ಕೂಡ ವಿದ್ಯಾರ್ಥಿಗಳು ಜೀವದ ಹಂಗು ತೊರೆದು ಶಿಕ್ಷಣ ಪಡೆಯಲು ಮುಂದಾಗುತ್ತಿದ್ದಾರೆ.

ಕಳೆದ ವರ್ಷ ಕೂಡ ಇದೇ ನೆಟ್​ವರ್ಕ್​ ಸಮಸ್ಯೆಯನ್ನು ವಿದ್ಯಾರ್ಥಿಗಳು ಅನುಭವಿಸಿದ್ದರು. ನೆಟ್​ವರ್ಕ್​ ಎಲ್ಲಿ ಸಿಗುತ್ತದೊ ಅಲ್ಲಿ ಕುಳಿತು ಪಾಠ ಕೇಳಲು ತಾತ್ಕಲಿಕ ಗುಡಿಸಲು ನಿರ್ಮಿಸಿ, ಎಲ್ಲಾ ಮಕ್ಕಳು ಒಟ್ಟಾಗಿ ಅಲ್ಲಿ ಪಾಠ ಕಲಿಯಲು ಮುಂದಾಗಿದ್ದಾರೆ. ಈ ಬಾರಿ ಮಾನ್ಸನ್​ ಅಬ್ಬರ ದಕ್ಷಿಣ ಕನ್ನಡದಲ್ಲಿ ಹೆಚ್ಚಿರುವ ಹಿನ್ನಲೆ ವಿದ್ಯಾರ್ಥಿಗಳು ಮತ್ತಷ್ಟು ಸಂಕಷ್ಟ ಅನುಭವಿಸುವಂತೆ ಆಗಿದೆ. ಈಗಾಗಲೇ ಮಳೆಯಿಂದಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜನರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಮಳೆಯಿಂದಾಗಿ ಹಲವೆಡರ ಗುಡ್ಡ ಕುಸಿದಿರುವ ಘಟನೆ ಗಳು ದಾಖಲಾಗಿದ್ದು, ವಿದ್ಯಾರ್ಥಿಗಳು ಈ ಅಂಜಿಕೆ ಅಳುಕಿನಲ್ಲೇ ಪಾಠ ಕೇಳುವ ದುಸ್ಥಿತಿ ನಿರ್ಮಾಣ ಆಗಿದೆ
Published by:Seema R
First published: