HOME » NEWS » State » MANGALORE STRICT LOCKDOWN BY MANGALORE BY DISTRICT ADMINISTRATION KKM SESR

ಸೋಂಕು ನಿಯಂತ್ರಣಕ್ಕೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಗಿ ಲಾಕ್​ಡೌನ್​; ಅನಗತ್ಯವಾಗಿ ರಸ್ತೆಗಿಳಿದರೆ ಲಾಠಿ ಏಟು

ಜಿಲ್ಲೆಯಲ್ಲಿ ಇಂದು ರಾತ್ರಿಯಿಂದಲೇ ವಿಕೇಂಡ್ ಕರ್ಫ್ಯೂ ಸಹ ಆರಂಭವಾಗಲಿದ್ದು ನಾಳೆ, ನಾಡಿದ್ದು ಅಗತ್ಯ ವಸ್ತುಗಳ ಅಂಗಡಿ ತೆರೆಯುವುದಕ್ಕೂ ಅವಕಾಶವಿಲ್ಲ.

news18-kannada
Updated:May 8, 2021, 8:39 PM IST
ಸೋಂಕು ನಿಯಂತ್ರಣಕ್ಕೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಗಿ ಲಾಕ್​ಡೌನ್​; ಅನಗತ್ಯವಾಗಿ ರಸ್ತೆಗಿಳಿದರೆ ಲಾಠಿ ಏಟು
ಪೊಲೀಸ್​ ತಪಾಸಣೆ
  • Share this:
ಮಂಗಳೂರು (ಮೇ. 8):  ದಕ್ಷಿಣ ಕನ್ನಡ‌ ಜಿಲ್ಲೆಯಲ್ಲಿ ಕೋವಿಡ್​ ಸೋಂಕು ಪ್ರಕರಣ ಹೆಚ್ಚಾಗುತ್ತಿರುವುದು ಸಾಕಷ್ಟು ಆತಂಕ ಮೂಡಿಸಿದೆ. ಇದೇ ಕಾರಣಕ್ಕೆ ಜಿಲ್ಲಾಡಳಿತ ಇಂದಿನಿಂದ ಕಟ್ಟು ನಿಟ್ಟಿನ ಕ್ರಮ ಜಾರಿಗೊಳಿಸಿದೆ. ರಾಜ್ಯ ಸರ್ಕಾರದ ನಿಯಮದ ಜೊತೆಯಲ್ಲೂ ಜಿಲ್ಲಾಡಳಿತದಿಂದಲ್ಲೂ ಅಗತ್ಯ ಕ್ರಮಗಳನ್ನು ಕೈಗೊಂಡಿದ್ದು, ಬಿಗಿ ಲಾಕ್​ಡೌನ್​ ಜಾರಿ ಮಾಡಿದೆ. ಅಗತ್ಯ ವಸ್ತುಗಳ ಖರೀದಿಗೆ ಬೆಳಗ್ಗೆ 6ರಿಂದ 9ರವರೆಗೆ ಅನುಮತಿ ನೀಡಲಾಗಿದೆ. 9 ಗಂಟೆಯೊಳಗೆ ಜನರು ಮನೆ ಸೇರುವುದು ಅವಶ್ಯವಾಗಿದೆ.  ಈ ಹಿನ್ನೆಲೆಯಲ್ಲಿ ಮೊದಲ ದಿನವಾದ ಇಂದು ಡೆಡ್ ಲೈನ್ ಮುಕ್ತಾಯವಾಗುತ್ತಿದ್ದಂತೆ ಪಾಲಿಕೆ ಅಧಿಕಾರಿಗಳು ದಿನಸಿ, ತರಕಾರಿ ಅಂಗಡಿಗಳನ್ನು ಬಂದ್ ಮಾಡಿಸಿದರು. ಬಂದ್ ಮಾಡದವರಿಗೆ ಧ್ವನಿ ವರ್ಧಕದ ಮೂಲಕ ಎಚ್ಚರಿಕೆ ನೀಡಿ ಬಂದ್ ಮಾಡಿಸಿದರು. ನಗರದ ಮಲ್ಲಿಕಟ್ಟೆ ಸೇರಿ ನಗರದ ಎಲ್ಲಾ ಮಾರ್ಕೆಟ್, ಅಂಗಡಿ ಬಂದ್ ಮಾಡಿಸಲಾಯಿತು.

ಗ್ರಾಹಕರು ಮತ್ತು ವ್ಯಾಪಾರಿಗಳು ಹತ್ತು ಗಂಟೆಯೊಳಗೆ ಮನೆ ಸೇರಬೇಕು ಎಂಬ ನಿಯಮ ಜಾರಿಗೊಳಿಸಲಾಗಿದೆ. ಹೀಗಾಗಿ 10 ಗಂಟೆಯ ಬಳಿಕ ಅನಗತ್ಯ ಸಂಚಾರ ನಡೆಸಿದ ವಾಹನಗಳನ್ನು ವಶಕ್ಕೆ ಪಡೆಯಲಾಗುತ್ತಿದೆ. ಕಮೀಷನರೇಟ್ ವ್ಯಾಪ್ತಿಯಲ್ಲಿ ಸ್ವತಃ ಪೊಲೀಸ್ ಕಮೀಷನರ್ ಎನ್‌.ಶಶಿಕುಮಾರ್ ಅವರೇ ಫೀಲ್ಡ್ ಗಿಳಿದು ಕಾರ್ಯಾಚರಣೆ ನಡೆಸಿದರು. ಚೆಕ್ ಪೋಸ್ಟ್ ಗಳಿಗೆ ಭೇಟಿ ನೀಡಿ ಪರಿಸ್ಥಿತಿ ವಿವರಣೆ ಪಡೆದರು.  ಜಿಲ್ಲೆಯಲ್ಲಿಯೂ ಜಿಲ್ಲಾಡಳಿತದ ಕಠಿಣ ನಿಯಮದ ನಡುವೆಯೂ ರಸ್ತೆಯಲ್ಲಿ ತಿರುಗಾಡುತ್ತಿರುವ ಜನರಿಗೆ ಪೊಲೀಸರು ಲಾಠಿ ರುಚಿ ತೋರಿಸಿದರು.

ಇನ್ನು ಪ್ರಮುಖವಾಗಿ ಜಿಲ್ಲೆಯಲ್ಲಿ ಮೇ 15ರ ನಂತರ ಯಾವುದೇ ಕಾರ್ಯಕ್ರಮ ನಡೆಸುವಂತಿಲ್ಲ ಎಂದು ಜಿಲ್ಲಾಡಳಿತ ಈಗಾಗಲೇ ಸ್ಪಷ್ಟಪಡಿಸಿದೆ‌. 15ರ ನಂತರ ಅನುಮತಿ ನೀಡಿರುವ ಮದುವೆ ಸೇರಿದಂತೆ ಇತತೆ  ಕಾರ್ಯಕ್ರಮಗಳನ್ನು  ಮನೆಯವರ ಮನವೊಲಿಸಿ ಕಾರ್ಯಕ್ರಮ ಮುಂದೂಡುವಂತೆ ಜಿಲ್ಲಾಡಳಿತ ನಿರ್ಧರಿಸಿದೆ.

ಇದನ್ನು ಓದಿ: ತಮ್ಮ ಕಷ್ಟದಲ್ಲೂ ಇತರರ ನೆರವಿಗೆ ಆಗಮಿಸುತ್ತಿರುವ ಮಹಿಳೆ; ಇವರ ಕಾರ್ಯಕ್ಕೊಂದು ಸಲಾಂ

ಜಿಲ್ಲೆಯಲ್ಲಿ ಇಂದು ರಾತ್ರಿಯಿಂದಲೇ ವಿಕೇಂಡ್ ಕರ್ಫ್ಯೂ ಸಹ ಆರಂಭವಾಗಲಿದ್ದು ನಾಳೆ, ನಾಡಿದ್ದು ಅಗತ್ಯ ವಸ್ತುಗಳ ಅಂಗಡಿ ತೆರೆಯುವುದಕ್ಕೂ ಅವಕಾಶವಿಲ್ಲ. ಒಟ್ಟಿನಲ್ಲಿ ಜಿಲ್ಲೆಯಲ್ಲಿ ಇಂದಿನಿಂದ ಸಂಪೂರ್ಣ ಲಾಕ್ ಡೌನ್ ಮಾದರಿಯ ನಿಯಮ ಜಾರಿಗೊಳಿಸಲಾಗಿದೆ. ಜಿಲ್ಲೆಯ ಜನರು ಇದಕ್ಕೆ ಸಹಕಾರ ನೀಡಬೇಕಿದ್ದು, ಇದನ್ನು ಕಟ್ಟ ನಿಟ್ಟಾಗಿ ಪಾಲಿಸಬೇಕು ಎಂಬ ಸೂಚನೆಯನ್ನು ನೀಡಲಾಗಿದೆ.

ಅನಗತ್ಯವಾಗಿ ರಸ್ತೆಗಿಳಿದವರಿಗೆ ಲಾಠಿ ರುಚಿ:

ಲಾಕ್ ಡೌನ್ ನಡುವೆಯೂ ಅನಾವಶ್ಯಕ ವಾಗಿ ರಸ್ತೆಗಿಳಿದವರಿಗೆ ಪೊಲೀಸರು ಸರಿಯಾಗಿ ಪಾಠ ತೆಗೆದುಕೊಂಡಿರುವ ಘಟನೆ ಕೂಡ ನಡೆದಿದೆ. ವಿವಿಧ ಪಾಸ್ ,ಅಗತ್ಯ ಸೇವೆಗಳ ಸ್ಟೀಕರ್ ಗಳನ್ನು ವಾಹನಗಳಿಗೆ ಅಂಟಿಸಿ  ತಿರುಗಾಡುತ್ತಿದ್ದವರ ಮೇಲೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಈ ಬಗ್ಗೆ ಕಾರ್ಯಾಚರಣೆ ನಡೆಸಿದ ಮಂಗಳೂರು ನಗರ ಪೊಲೀಸ್ ಕಮೀಷನರ್ ಎನ್ ಶಶಿಕುಮಾರ್ ಮತ್ತು ಡಿಸಿಪಿ ಹರಿರಾ‌ಂ ಶಂಕರ್ ಮಂಗಳೂರಿನ ಕುಳೂರು ಚೆಕ್ ಪೋಸ್ಟ್ ಗೆ  ಭೇಟಿ ನೀಡಿ ಅಗತ್ಯ ಸೇವೆಗಳ ಸ್ಟೀಕರ್​ ಗಳನ್ನು ವಾಹನದಿಂದ ಸ್ಥಳದಲ್ಲೇ ತೆಗೆಸಿ ಚಾಲಕರಿಗೆ ದಂಡ ವಿಧಿಸಿದ್ದಾರೆ.ಲಾಕ್ ಡೌನ್ ನಡುವೆಯೂ ಜನರ ಅನಗತ್ಯ ಓಡಾಟಕ್ಕೆ ನಿಯಂತ್ರಣ ಹಾಕುವಂತೆ ಪೊಲೀಸರಿಗೆ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ ಸೂಚನೆ ನೀಡಿದ ಹಿನ್ನಲೆಯಲ್ಲಿ ಇಡೀ ಜಿಲ್ಲೆಯಲ್ಲಿ ಪೊಲೀಸರು ರಸ್ತೆಗಳಲ್ಲಿ ಅಲ್ಲಲ್ಲಿ ನಾಕಾಬಂದಿ ಹಾಕಿ ತಪಾಸಣೆ ಮಾಡಿದ್ದಾರೆ. ಬೆಳ್ತಂಗಡಿ, ಪುಂಜಾಲಕಟ್ಟೆ, ಬಂಟ್ವಾಳ ಸೇರಿದಂತೆ ಗ್ರಾಮೀಣ ಭಾಗದಲ್ಲೂ ಪೊಲೀಸರು ಬಿಗಿ ನಿಯಮ ತೆಗೆದುಕೊಂಡಿದ್ದು, ಲಾಕ್ ಡೌನ್ ಯಶಸ್ವಿಯಾಗಿ ನಡೆಸಿ, ಸೋಂಕಿನ ನಿಯಂತ್ರಣಕ್ಕೆ ಅಗತ್ಯ ಕ್ರಮವಹಿಸುವಂತೆ ಸೂಚನೆ ನೀಡಲಾಗಿದೆ
Published by: Seema R
First published: May 8, 2021, 8:39 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories