Floating Jetty: ಮಂಗಳೂರಿನಲ್ಲಿ ನಿರ್ಮಾಣವಾಗಲಿದೆ ರಾಜ್ಯದ ಮೊದಲ ತೇಲುವ ಜೆಟ್ಟಿ!

ಮೀನುಗಾರಿಕಾ ಕ್ಷೇತ್ರದಲ್ಲಿ ಹೊಸತನವನ್ನು ಕಂಡುಕೊಳ್ಳುತ್ತಿರುವ ಕರಾವಳಿ ಭಾಗದಲ್ಲಿ ಇದೀಗ ಮೀನುಗಾರಿಕಾ ದೋಣಿಗಳ ನಿಲುಗಡೆಗೆ ರಾಜ್ಯದಲ್ಲಿಯೇ ಮೊದಲ ಬಾರಿಗೆ ತೇಲುವ ಜೆಟ್ಟಿ ನಿರ್ಮಾಣವಾಗುತ್ತಿದೆ.

ಮೀನುಗಾರಿಕಾ ಬೋಟ್​ಗಳು.

ಮೀನುಗಾರಿಕಾ ಬೋಟ್​ಗಳು.

  • Share this:
ಮಂಗಳೂರು: ಕರಾವಳಿಯ ಪ್ರಮುಖ ಆದಾಯದ ಮೂಲ ಮೀನುಗಾರಿಕೆ (Fishery). ಮಂಗಳೂರಿನಲ್ಲೇ ಎರಡು ಸಾವಿರಕ್ಕೂ ಅಧಿಕ ಮೀನುಗಾರಿಕಾ ಬೋಟ್‌ಗಳಿವೆ (Fishery Boat). ಆದರೆ ಈ ಬೋಟ್‌ಗಳ ನಿಲುಗಡೆಗೆ ಸ್ಥಳಾವಕಾಶದ ಕೊರತೆಯಿದೆ. ಹೀಗಾಗಿ ಈ ಸಮಸ್ಯೆ ನಿವಾರಣೆಗೆ ರಾಜ್ಯದಲ್ಲೇ ಮೊದಲ ಬಾರಿಗೆ ತೇಲುವ ನಿಲ್ದಾಣ ನಿರ್ಮಾಣವಾಗಲಿದೆ. ಮೀನುಗಾರಿಕಾ ಕ್ಷೇತ್ರದಲ್ಲಿ ಹೊಸತನವನ್ನು ಕಂಡುಕೊಳ್ಳುತ್ತಿರುವ ಕರಾವಳಿ ಭಾಗದಲ್ಲಿ ಇದೀಗ ಮೀನುಗಾರಿಕಾ ದೋಣಿಗಳ ನಿಲುಗಡೆಗೆ ರಾಜ್ಯದಲ್ಲಿಯೇ ಮೊದಲ ಬಾರಿಗೆ ತೇಲುವ ಜೆಟ್ಟಿ (Floating Jetty) ನಿರ್ಮಾಣವಾಗುತ್ತಿದೆ.

ಮಂಗಳೂರಿನ ಮೀನುಗಾರಿಕಾ ಬಂದರಿನಲ್ಲಿ ಬೋಟ್‌ಗಳ ನಿಲುಗಡೆಗೆ ಬಾರಿ ಸ್ಥಳಾವಕಾಶದ ಕೊರತೆ ಎದುರಾಗಿತ್ತು. ಇಲ್ಲಿನ ಮೀನುಗಾರಿಕಾ ಬಂದರಿನಲ್ಲಿ 2000ಕ್ಕೂ ಅಧಿಕ ಮೀನುಗಾರಿಕಾ ಬೋಟ್‌ಗಳಿವೆ. ಅಧಿಕ ಸಂಖ್ಯೆಯಲ್ಲಿರುವ ಭಾರಿ ಗಾತ್ರದ ಸ್ಟೀಲ್ ಟ್ರಾಲ್ ಬೋಟ್ ಗಳ ನಡುವೆ ಪರ್ಸಿನ್ ಹಾಗೂ ನಾಡ ದೋಣಿಗಳಿಂದ ಮೀನುಗಳನ್ನು ಅನ್ ಲೋಡ್ ಮಾಡಲು ಭಾರಿ ಸಮಸ್ಯೆ ಆಗುತ್ತಿತ್ತು. ಈ ಸಮಸ್ಯೆಗೆ ಪರಿಹಾರ ಎಂಬಂತೆ ಈಗ ಮಂಗಳೂರಿನ ಹೊಯ್ಗೆ ಬಜಾರ್ ಪ್ರದೇಶದ ಕಡಲಲ್ಲಿ ತೇಲುವ ಜೆಟ್ಟಿ ನಿರ್ಮಾಣ ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ.

ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮದ ವತಿಯಿಂದ ಈ ತೇಲುವ ಜೆಟ್ಟಿ ನಿರ್ಮಾಣವಾಗುತ್ತಿತ್ತು ಯೋಜನೆಗೆ 6 ಕೋಟಿ ರೂಪಾಯಿ ಈಗಾಗಲೇ ಬಿಡುಗಡೆ ಆಗಿದೆ. ಉಡುಪಿಯ ಮಲ್ಪೆಯಲ್ಲಿ ಕೂಡ ತೇಲುವ ಜೆಟ್ಟಿ ನಿರ್ಮಾಣಕ್ಕೆ ಅನುಮೋದನೆ ನೀಡಲಾಗಿದೆ. ತೇಲುವ ಜೆಟ್ಟಿ ನೀರಿನ ಮಧ್ಯಭಾಗದಲ್ಲಿ ಇರಲ್ಲಿದ್ದು ಅಲ್ಲಿಂದ ತೀರಪ್ರದೇಶಕ್ಕೆ ತೇಲುವ ಸಣ್ಣ ರಸ್ತೆ ಕೂಡ ನಿರ್ಮಾಣ ಆಗಲಿದೆ. ಅದರ ಮೂಲಕ ಜೆಟ್ಟಿಗೆ ಸಣ್ಣ ಗಾತ್ರದ ವಾಹನಗಳ ಸಂಚಾರ ಸಾಧ್ಯವಾಗಲಿದೆ. ನೀರಿನ ತಳಭಾಗದಲ್ಲಿ ನವೀನ ತಂತ್ರಜ್ಞಾನ ಆಧಾರಿತ ರಬ್ಬರ್ ಅಳವಡಿಸಿ ಮೇಲ್ಮೈಗೆ ಕಾಂಕ್ರೀಟ್ ತುಂಬುವ ಮೂಲಕ ಜಟ್ಟಿ ನಿರ್ಮಾಣ ಆಗಲಿದೆ. ಈ ತೇಲುವ ಜೆಟ್ಟಿ 60 ಮೀಟರ್ ಉದ್ದ ಹಾಗೂ 6 ಮೀಟರ್ ಅಗಲ ಇರಲಿದ್ದು 180 ಟನ್ ತೂಕವಿರಲಿದೆ. ಇದರಲ್ಲಿ ಪರ್ಸಿನ್ ಬೋಟ್, ನಾಡದೋಣಿ ಹಾಗೂ ಸಾಂಪ್ರದಾಯಿಕ ದೋಣಿಗಳಿಗೆ ಆದ್ಯತೆ ಸಿಗಲಿದೆ. ಮಂಗಳೂರಿನ ಮೀನುಗಾರಿಕಾ ಬಂದರಿನಲ್ಲಿ ನಿಲುಗಡೆಗೆ ಸ್ಥಳಾವಕಾಶ ಇಲ್ಲದೆ ಪರದಾಡುತ್ತಿದ್ದ ನಾಡದೋಣಿ, ಪರ್ಸಿನ್ ಹಾಗೂ ಸಾಂಪ್ರದಾಯಿಕ ದೋಣಿಗಳಿಗೆ ಈ ತೇಲುವ ಜೆಟ್ಟಿ ವರದಾನ ಆಗಲಿದೆ.
ಇದರ ಮೂಲಕ‌ ಜಟ್ಟಿಗೆ ಸಣ್ಣ ಪ್ರಮಾಣದ ವಾಹನಗಳ ಸಂಚಾರ ಮಾಡಬಹುದು. ದೋಣಿಗಳಲ್ಲಿ ತಂದಿರುವ ಮೀನುಗಳನ್ನು ತೇಲುವ ಜಟ್ಟಿಗಳಲ್ಲಿ ಅನ್​ಲೋಡ್​ ಮಾಡಿ ವಾಹನಗಳ ಮೂಲಕ ದಡಕ್ಕೆ ತರಬಹುದು.

ಇದನ್ನು ಓದಿ: SIIMA Award 2021: ಸೈಮಾ ಅವಾರ್ಡ್ ಫಂಕ್ಷನ್​ನಲ್ಲಿ ತಾರೆಯರ ಕಲರವ: ಪ್ರಶಸ್ತಿ ಪಡೆದವರ ಪಟ್ಟಿ ಇಲ್ಲಿದೆ ನೋಡಿ!

ನಿಲುಗಡೆಗೆ ಸ್ಥಳಾವಕಾಶ ಇಲ್ಲದೆ ಪರದಾಡುತ್ತಿರುವ ನಾಡದೋಣಿ ಹಾಗೂ ಸಾಂಪ್ರದಾಯಿಕ ದೋಣಿಗಳಿಗೆ ಉಪಯೋಗ ಆಗಲಿದೆ. ಈಗ ಇರುವ ಜಟ್ಟಿಯಲ್ಲಿ ನೀರಿನ ಮಟ್ಟದಲ್ಲಿ ಏರಿಳಿತವಾಗುವಂತೆ ಬೋಟ್​ಗಳಲ್ಲಿ ಅನ್‌ಲೋಡಿಂಗ್ ಸಮಸ್ಯೆ ಆಗುತ್ತದೆ. ಆದರೆ, ತೇಲುವ ಜಟ್ಟಿಯಲ್ಲಿ ಈ ಸಮಸ್ಯೆ ಇರುವುದಿಲ್ಲ. ನೀರಿನ ಏರಿಳಿತಕ್ಕೆ ತಕ್ಕಂತೆ ಜಟ್ಟಿಯೂ ಮೇಲೆ ಕೆಳಗೆ ಹೋಗುತ್ತದೆ. ಅಲ್ಲದೆ ಅನ್​ಲೋಡ್​ಗೆ ಬರುವ ಸಣ್ಣ ಬೋಟ್​ಗಳಲ್ಲಿ ಮಂಜುಗಡ್ಡೆ ಇರುವುದಿಲ್ಲ. ಅಂತಹ ದೋಣಿಗಳಿಗೆ ಜಟ್ಟಿ ಸಹಾಯವಾಗಲಿದೆ. ಅಲ್ಲದೆ, ಈ ತೇಲುವ ಜಟ್ಟಿಯನ್ನು ಇನ್ನೊಂದು ಕಡೆಗೆ ಸ್ಥಳಾಂತರಿಸಲು ಸಾಧ್ಯವಿದೆ. ಈ ತೇಲುವ ಜೆಟ್ಟಿ ನಿರ್ಮಾಣದಿಂದ ಇಲ್ಲಿನ ಸಾವಿರಾರು ಮೀನುಗಾರಿಕಾ ಕುಟುಂಬಗಳಿಗೆ ಹಾಗೂ ಮೀನುಗಾರಿಕಾ ಬೋಟ್​ ಮಾಲೀಕರಿಗೆ ಸಹಾಯವಾಗಲಿದೆ. ರಾಜ್ಯ ಸರ್ಕಾರ ಶೀಘ್ರದಲ್ಲಿ ಈ ತೇಲುವ ಜೆಟ್ಟಿ ನಿರ್ಮಾಣ ಕಾರ್ಯ ಆರಂಭಿಸಿ, ಬೇಗ ಕಾಮಗಾರಿ ಮುಗಿಸಿ, ಇಲ್ಲಿನ ಎರಡು ಸಾವಿರಕ್ಕೂ ಅಧಿಕ ಮೀನುಗಾರಿಕಾ ಬೋಟ್​ಗಳ ನಿಲುಗಡೆಗೆ ಅನುಕೂಲ ಮಾಡಿಕೊಡಬೇಕು.
Published by:HR Ramesh
First published: