Krishna Janmashtami 2021: ಕರಾವಳಿಯಲ್ಲಿ ಕೃಷ್ಣಾಷ್ಟಮಿಯ ವಿಶೇಷ ತಿನಿಸು ಕೊಟ್ಟಿಗೆ, ಹೇಗೆ ಮಾಡ್ತಾರೆ? ರೆಸಿಪಿ ಇಲ್ಲಿದೆ..ನೀವೂ ಟ್ರೈ ಮಾಡಿ!

Kottige Recipe: ಬಾಳೆ ಎಲೆಯಲ್ಲಿ ಕೊಟ್ಟಿಗೆ ಮಾಡೋದಾದರೆ, ಬಾಳೆ ಎಲೆಯನ್ನು ಬೆಂಕಿಯಲ್ಲಿ ಬಾಡಿಸಿಬೇಕು.. ನಂತರ ವೃತ್ತಾಕಾರದಲ್ಲಿ ಎಲೆಯನ್ನು ಮಡಚಿ, ಹಿಟ್ಟನ್ನು ಹಾಕಿ,ಬೇಯಲು ಇಡಬೇಕಾಗುತ್ತದೆ..ಇನ್ನು ಹಲಸಿನ ಎಲೆಯಲ್ಲಿ ಕೊಟ್ಟಿಗೆ ಮಾಡೋದಾದರೆ, ನಾಲ್ಕು ಎಲೆಯನ್ನು ಕಡ್ಡಿಯಿಂದ ವೃತ್ತಾಕಾರವಾಗಿ ಮಡಚಿಬೇಕಾಗುತ್ತದೆ..ಎಲೆಯ ಮಧ್ಯ ಕ್ಕೆ ಹಿಟ್ಟನ್ನು ಹಾಕಿ ಬೇಯಲು ಇಡಬೇಕು.

ಕರಾವಳಿಯ ವಿಶೇಷ ತಿನಿಸು 'ಕೊಟ್ಟಿಗೆ'

ಕರಾವಳಿಯ ವಿಶೇಷ ತಿನಿಸು 'ಕೊಟ್ಟಿಗೆ'

  • Share this:
Special Food for Krishna Janmashtami: ಕರಾವಳಿ ವಿವಿಧ ಆಚರಣೆಗಳ ನೆಲೆವೀಡು..ಇಲ್ಲಿನ ಆಚಾರ-ವಿಚಾರ ವಿಭಿನ್ನ ಸಂಸ್ಕೃತಿ,ಆಹಾರದ ವೈಶಿಷ್ಟ್ಯ ಎಲ್ಲವೂ ವಿಶೇಷ.. ಅದರಲ್ಲೂ ಹಬ್ಬ ಹರಿದಿನಗಳು ಬಂತದ್ರೇ ಸಾಕು ಕರಾವಳಿ ಯ ಪ್ರತಿ ಮನೆ ಮನೆಯಲ್ಲೂ ಹಬ್ಬದ ಸಂಭ್ರಮ ಮೇಳೈಸುತ್ತದೆ..ಸಂಪ್ರದಾಯಿಕ ತಿಂಡಿ ತಿನಿಸುಗಳನ್ನು ಮಾಡಿ ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಾರೆ..ಅದರಲ್ಲೂ ಶ್ರೀ ಕೃಷ್ಣ ಜನ್ಮಾಷ್ಟಮಿ,ಗಣೇಶ ಚತುರ್ಥಿಯಲ್ಲಂತೂ ಪ್ರತಿ ಮನೆಯಲ್ಲೂ ಸಂಪ್ರದಾಯಿಕ ತಿನಿಸು ಆದ ಕೊಟ್ಟಿಗೆ (ಕಡುಬು) ಗೆ ವಿಶೇಷ ಮಾನ್ಯತೆ ಇರುತ್ತದೆ.. ಶ್ರೀ ಕೃಷ್ಣ ಜನ್ಮಾಷ್ಟಮಿಗೆ ಕ್ಷಣಗಣನೆ ಆರಂಭವಾಗಿದೆ..ಅಷ್ಟಮಿಗೆ ಏನೇ ಸ್ಪೆಷಲ್ ಇದ್ರೂ ಕೊಟ್ಟಿಗೆಗೆ ಮಾತ್ರ ವಿಶೇಷ ಮಾನ್ಯತೆ ನೀಡಲಾಗುತ್ತದೆ..ವರ್ಷದಲ್ಲೊಂದು ದಿನ ಮಾಡುವ ಕೊಟ್ಟಿಗೆ ಕೃಷ್ಣ ಜನ್ಮಾಷ್ಟಮಿಯಂದು,ಕರಾವಳಿಯ ಪ್ರತಿ ಮನೆಯ ಬೆಳಗ್ಗಿನ ಉಪಹಾರ ಆಗಿರುತ್ತದೆ..ಕೆಲವು ಮಂದಿ ಇಡೀ ದಿನವೂ ಕೊಟ್ಟಿಗೆಯನ್ನೇ ತಿನ್ನೊಂದುಂಟು..ಅಷ್ಟರಮಟ್ಟಿಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಾಡುವ ಕೊಟ್ಟಿಗೆ ಸ್ಪೆಷಲ್..

ಸಾಂಪ್ರದಾಯಿಕ ತಿಂಡಿಯಾದ ಕೊಟ್ಟಿಗೆಯನ್ನು ಮಾಡಲು ಒಂದು ದಿನದ ತಯಾರಿ ಬೇಕು..ಈಗೆಲ್ಲಾ ಕೊಟ್ಟಿಗೆ ಗೆ ಬೇಕಾದ ವಸ್ತುಗಳು ಮಾರುಕಟ್ಟೆಯಲ್ಲಿ ಲಭ್ಯವಾದರೂ,ಗ್ರಾಮೀಣ ಭಾಗದಲ್ಲಿ ಕೊಟ್ಟಿಗೆಗೆ ಬೇಕಾದ ಎಲ್ಲಾ ಸಾಮಾಗ್ರಿಗಳನ್ನು ಮನೆ ಮಂದಿಯೇ ತಯಾರಿಸುತ್ತಾರೆ..ಪ್ರಮುಖವಾಗಿ ಈ ಕೊಟ್ಟಿಗೆ ಯನ್ನು ಹಲಸಿನ ಎಲೆ ಅಥವಾ ಬಾಳೆ ಎಲೆಯನ್ನು ಉಪಯೋಗಿಸಿ ಮಾಡಲಾಗುತ್ತದೆ..ಈ ಎಲೆಗಳಿಂದ ಮಾಡಿದ ಕೊಟ್ಟಿಗೆ ಪಕ್ಕಾ ಪರಿಸರ ಸ್ನೇಹಿ ಮತ್ತು ಆರೋಗ್ಯಕ್ಕೆ ಬಹಳ ಅತ್ಯುತ್ತಮ ಅನ್ನೋದು ಕರಾವಳಿಯ ಮಂದಿ ವಾದ.

Special authentic Krishna Janmashtami delicacy Kottige in coastal Karnataka recipe here
ಬಾಳೆಎಲೆಯ ಕೊಟ್ಟಿಗೆ


ಕೊಟ್ಟಿಗೆ ಅಥವಾ ಕರಾವಳಿಯ ಕಡುಬು ಮಾಡುವ ವಿಧಾನ:

ಈ ಕೊಟ್ಟಿಗೆ ಮಾಡೋದು ಇಡ್ಲಿ ತಯಾರಿಸಿದ ವಿಧಾನದ ರೀತಿಯೇ ಆದರೂ ಕೊಂಚ ವಿಭಿನ್ನವಾಗಿರುತ್ತದೆ..ಕೊಟ್ಟಿಗೆ ಮಾಡಲು ಶ್ರಮ ಜಾಸ್ತಿ..ಆದರೆ ರುಚಿಯೂ ಜಾಸ್ತಿಯಾಗಿರುತ್ತದೆ..ಕೊಟ್ಟಿಗೆ ಯನ್ನು ಮಾಡಬೇಕಾದರೆ ಮೊದಲು ಉದ್ದು ಮತ್ತು ಬೆಳ್ತಿಗೆ ಅಕ್ಕಿಯನ್ನು ಆರರಿಂದ ಎಂಟು ಗಂಟೆಗಳ ಕಾಲ ನೆನೆಸಿಡಬೇಕಾಗುತ್ತದೆ..ಆ ಬಳಿಕ ಮಿಕ್ಸಿಯ ಬದಲು ಗ್ರೈಂಡರ್ ಅಥವಾ ಅರೆಯುವ ಕಲ್ಲಿನಲ್ಲಿ ಹಿಟ್ಟನ್ನು ತಯಾರು ಮಾಡಬೇಕು. ಯಾಕೆಂದರೆ ಉದ್ದಿನ ಬೇಳೆಯ ಹಿಟ್ಟು ಸಾಫ್ಟ್ ಆಗಿ ಹತ್ತಿಯ ತರಹ ರುಬ್ಬಿದರೆ ಅಕ್ಕಿಯ ಹಿಟ್ಟು ತರಿತರಿಯಾಗಿರಬೇಕು.. ಹೀಗಾಗಿ ಎರಡೂ ಹಿಟ್ಟನ್ನು ಕಡಿಮೆ ನೀರು ಹಾಕಿ ಬೇರೆ ಬೇರೆ ಮಾಡಿಯೇ ಅರೆಯಬೇಕಾಗುತ್ತದೆ..ಹೀಗೆ ಮಾಡಿದ ಹಿಟ್ಟನ್ನು ಮತ್ತೆ ಎಂಟು ಗಂಟೆಗಳ ಕಾಲ ಇಡಬೇಕು.

ಇದನ್ನೂ ಓದಿ: Weather Report: ಸೆಪ್ಟೆಂಬರ್ 1 ರ ವರೆಗೆ ರಾಜ್ಯದಲ್ಲಿ ಭಾರೀ ಮಳೆ, ಕರಾವಳಿ ಭಾಗದಲ್ಲಿ ಯೆಲ್ಲೋ ಅಲರ್ಟ್ ಘೋಷಣೆ

ಬಾಳೆ ಎಲೆಯಲ್ಲಿ ಕೊಟ್ಟಿಗೆ ಮಾಡೋದಾದರೆ, ಬಾಳೆ ಎಲೆಯನ್ನು ಬೆಂಕಿಯಲ್ಲಿ ಬಾಡಿಸಿಬೇಕು.. ನಂತರ ವೃತ್ತಾಕಾರದಲ್ಲಿ ಎಲೆಯನ್ನು ಮಡಚಿ, ಹಿಟ್ಟನ್ನು ಹಾಕಿ,ಬೇಯಲು ಇಡಬೇಕಾಗುತ್ತದೆ..ಇನ್ನು ಹಲಸಿನ ಎಲೆಯಲ್ಲಿ ಕೊಟ್ಟಿಗೆ ಮಾಡೋದಾದರೆ, ನಾಲ್ಕು ಎಲೆಯನ್ನು ಕಡ್ಡಿಯಿಂದ ವೃತ್ತಾಕಾರವಾಗಿ ಮಡಚಿಬೇಕಾಗುತ್ತದೆ..ಎಲೆಯ ಮಧ್ಯ ಕ್ಕೆ ಹಿಟ್ಟನ್ನು ಹಾಕಿ ಬೇಯಲು ಇಡಬೇಕು. ಹೀಗೆ ಮಾಡಿದ ಕೊಟ್ಟಿಗೆ ಎರಡು ದಿನಗಳವರೆಗೆ ಇಡಬಹುದು..ಕೊಟ್ಟಿಗೆ ಹಾಳಾಗೋದಿಲ್ಲ ಅನ್ನೋದು ಕೊಟ್ಟಿಗೆ ತಯಾರಿಸುವವರ ಅಭಿಪ್ರಾಯ.

Special authentic Krishna Janmashtami delicacy Kottige in coastal Karnataka recipe here
ಕೆಂಪು ಚಟ್ನಿಯೊಂದಿಗೆ ಕೊಟ್ಟಿಗೆ


ಅದೇನೇ ಆದರೂ ಪ್ರತೀ ವರ್ಷ ಕರಾವಳಿಯ ಅಷ್ಟಮಿ ಸಂಭ್ರಮವನ್ನು ಕೊಟ್ಟಿಗೆ ಇಮ್ಮಡಿಗೊಳಿಸೋತ್ತಿರೋದು ಮಾತ್ರ ಸುಳ್ಳಲ್ಲ.ಆಧುನಿಕ ಕಾಲದಲ್ಲೂ ಹಳೆಯ ಸಂಪ್ರದಾಯಿಕ ತಿಂಡಿ ತಿನಿಸುಗಳನ್ನು ಮಾಡುತ್ತಾ,ಹಿರಿಯರ ಆರೋಗ್ಯ ದ ಗುಟ್ಟು ಇರೋದು ಹಿಂದಿನ ಆಹಾರ ಕ್ರಮದಲ್ಲೇ ಅಂತಾ ಸಾಬೀತುಮಾಡುತ್ತಿರುವ ಕರಾವಳಿಗರ ಆಹಾರ ಪದ್ಧತಿ ನಿಜಕ್ಕೂ ಮೆಚ್ಚಬೇಕಾದದ್ದು.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ತಮ್ಮ ತಮ್ಮ ಸರದಿ ಬಂದಾಗ ತಪ್ಪದೇ ಲಸಿಕೆ ಪಡೆಯಬೇಕು. ಈಗಿನ ಪರಿಸ್ಥಿತಿಯಲ್ಲಿ ಲಸಿಕೆ ಒಂದೇ ಸೋಂಕಿನ ವಿರುದ್ಧ ಹೋರಾಡುವ ಮಾರ್ಗವಾಗಿದೆ. ಅತ್ಯಗತ್ಯವಿದ್ದರೆ ಮಾತ್ರವೇ ಮನೆಯಿಂದ ಹೊರಗೆ ಹೋಗುವ ಅಭ್ಯಾಸ ರೂಢಿಸಿಕೊಳ್ಳಬೇಕು.
Published by:Soumya KN
First published: