Crime: ಅತ್ತೆಯ ಮಾಂಗಲ್ಯ ಸರವನ್ನೇ ಕದ್ದ ಅಳಿಯ

ಹೆಚ್ಚಿನ ತನಿಖೆ ನಡೆಸಿದಾಗ ಮಹಿಳೆಯ ಅಳಿಯನೇ ಈ ಕಳ್ಳತನ ಕೃತ್ಯ ನಡೆಸಿರುವುದು ಎಂದು ಕಂಡು ಬಂದಿತು.

ಆರೋಪಿ ಬಂಧಿಸಿದ ಪೊಲೀಸರು

ಆರೋಪಿ ಬಂಧಿಸಿದ ಪೊಲೀಸರು

 • Share this:
  ಮಂಗಳೂರು (ಜು. 28): ರಾಜ್ಯದಲ್ಲಿ ಸರಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿದೆ. ಒಂಟಿ ಮಹಿಳೆಯರನ್ನೇ ಟಾರ್ಗೆಟ್ ಮಾಡುವ ಖತಾರ್ನಾಕ್ ತಂಡ ಸರ ಕಳ್ಳತನವನ್ನು ಮಾಡುತ್ತಿದ್ದಾರೆ. ಹೀಗಾಗಿ ಒಂಟಿಯಾಗಿ ಇರುವ ಮಹಿಳೆಯರು ಜಾಗೃತಿಯನ್ನು ವಹಿಸಬೇಕೆಂದು ಪೊಲೀಸರು ಮನವಿ ಮಾಡಿದ್ದಾರೆ. ಈ ನಡುವೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮನೆಯಲ್ಲಿ ಅತ್ತೆ ಒಬ್ಬರೇ ಇದ್ದ ಸಮಯದಲ್ಲಿ ಅಳಿಯನೇ ಖನ್ನ ಹಾಕಿರುವ ಪ್ರಕರಣ ನಡೆದಿದೆ. ಸದ್ಯ   ಖತರ್ನಾಕ್ ಅಳಿಯನೇ ಅತ್ತೆಯ ಸರ ಕದ್ದು ಅಂದರ್ ಆಗಿದ್ದಾನೆ. ಅಳಿಯನೇ ತನ್ನ ಸರ ಕದ್ದು ಸಿಕ್ಕಿಬಿದ್ದಿರೋದು ಅತ್ತೆಗೆ ಒಂದು ಕ್ಷಣ ನಂಬುವುದಕ್ಕೂ ಸಾಧ್ಯವಾಗಿಲ್ಲ. 

  ಏನಿದು ಘಟನೆ? 

  ಮಂಗಳೂರು ನಗರ ಕಮೀಷನರೇಟ್‌ನ ಸುರತ್ಕಲ್ ಠಾಣಾ ವ್ಯಾಪ್ತಿಯ ಸುರತ್ಕಲ್ ಬಳಿಯ  ಹೊಸಬೆಟ್ಟು ಗ್ರಾಮದ ಮಿತ್ತೊಟ್ಟು ಪ್ರದೇಶದಲ್ಲಿ ಒಂಟಿ ಮಹಿಳೆಯ ಮನೆಗೆ ಇಬ್ರು ಕಳ್ಳರು ನುಗ್ಗಿ ಮಹಿಳೆಗೆ ಹಲ್ಲೆ ನಡೆಸಿ ಕರಿಮಣಿ ಸರ ದೋಚಿದ್ದರು. ಸಂತ್ರಸ್ತ ಮಹಿಳೆ ಸುಮತಿ ಆಚಾರ್ಯ ಈ ಬಗ್ಗೆ ಸುರತ್ಕಲ್ ಠಾಣೆಗೆ ದೂರು ನೀಡಿದ್ದರು. ಈ ಬಗ್ಗೆ ತನಿಖೆ ನಡೆಸಿದ ಪೊಲೀಸರಿಗೆ ಹೊರಗಿನವರು ಬಂದು ಕೃತ್ಯ ನಡೆಸಿರುವುದು ಅಲ್ಲ, ಯಾರೋ ಪರಿಚಿತರೆ ಕೃತ್ಯ ಎಸಗಿದ್ದಾರೆ ಎಂಬ ಸಂಶಯ ಬಂದಿತ್ತು.

  ಇದೇ ಹಿನ್ನಲೆ ಮನೆಯ ಸಿ ಸಿ ಕ್ಯಾಮರೆ  ಪರಿಶೀಲನೆಗೆ ಮುಂದಾಗಿದ್ದರು. ಈ ಸಂದರ್ಭ ಸ್ಥಳೀಯ ಸಿ. ಸಿ ಕ್ಯಾಮಾರದಲ್ಲಿ ಕೃತ್ಯ ಎಸಗಿ ಇಬ್ಬರು ಪರಾರಿಯಾಗಿರುವುದು ರೆಕಾರ್ಡ್ ಆಗಿತ್ತು. ಈ ಬಗ್ಗೆ ಹೆಚ್ಚಿನ ತನಿಖೆ ನಡೆಸಿದಾಗ ಮಹಿಳೆಯ ಅಳಿಯನೇ ಈ ಕಳ್ಳತನ ಕೃತ್ಯ ನಡೆಸಿರುವುದು ಎಂದು ಕಂಡು ಬಂದಿತು. ಸದ್ಯ ಮಹಿಳೆಯ ಅಳಿಯ ವಿನಯ್ ಕುಮಾರ್, ಆತನ ಜೊತೆಗಿದ್ದ ಮಣಿ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ.

  ಕಳ್ಳತನ ಪ್ರಕರಣಗಳಲ್ಲಿ ಹೆಚ್ಚಾಗಿ ಹೊರಗಿನ ವ್ಯಕ್ತಿ ಬಂದು ಕೃತ್ಯ ನಡೆಸಿರುವುದನ್ನು ಕೇಳಿರ್ತೆವೆ. ಆದ್ರೆ ಇಲ್ಲೊಬ್ಬ ಅಳಿಯ ತನ್ನ ಅತ್ತೆಯ ಕರಿಮರಿ ಸರಕ್ಕೆ ಕನ್ನ ಹಾಕೋಕೆ ಹೋಗಿ ಅಂದರ್ ಆಗಿದ್ದಾನೆ. ಈ ಕೃತ್ಯವನ್ನು ಸಂಬಂಧಿಕನೆ ಮಾಡಿದ ಅಲ್ವಾ ಎಂದು ಗೊತ್ತಾಗಿ ಮನೆಯವರು ಶಾಕ್‌ಗೆ ಒಳಗಾಗಿದ್ದಾರೆ.

  ಇದನ್ನು ಓದಿ: ಸಚಿವ ಸ್ಥಾನಕ್ಕಾಗಿ ಶುರುವಾಯಿತು ಲಾಬಿ; ಯಾರಿಗೆ ಉಂಟು, ಯಾರಿಗಿಲ್ಲ ಸ್ಥಾನ?

  ಕಳ್ಳತನ ಮಾಡಿದ ಬಳಿಕ ಆರೋಪಿಗಳು ಯಾರಿಗೂ ಸಂಶಯ ಬಾರದಂತೆ  ವರ್ತನೆ ಮಾಡಿದ್ದರು. ಇವರ ವರ್ತನೆಯಲ್ಲಿ ಅನುಮಾನ ವ್ಯಕ್ತವಾದ ಹಿನ್ನಲೆ ಪೊಲೀಸರಿಗೆ ಸಂಶಯ ಮೂಡಿದೆ. ಈ ವೇಳೆ ಆರೋಪಿಗಳ ವಿಚಾರಣೆ ನಡೆಸಿದಾಗ  ಮಾಡಿದ ತಪ್ಪನ್ನು ಅವರು ಒಪ್ಪಿಕೊಂಡಿದ್ದಾರೆ.

  ಆರೋಪಿ ವಿನಯ್ ಕುಮಾರ್ ಸುರತ್ಕಲ್‌ನ ಕೃಷ್ಣಾಪುರ ಸಮೀಪ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದ. ಕೌಟುಂಬಿಕ ಕಲಹದ  ಹಿನ್ನಲೆಯಲ್ಲಿ ಈ ಕೃತ್ಯವನ್ನು ಎಸಗಿದ್ದಾಗಿ ಆರೋಪಿ ತನಿಖೆ ವೇಳೆ ತಿಳಿಸಿದ್ದಾನೆ. ಅಷ್ಟೇ ಅಲ್ಲದೇ ಇದಕ್ಕಾಗಿ ಸ್ನೇಹಿತರ ಜೊತೆಗೂಡ ಕಳ್ಳತನದ ಸಂಚು ರೂಪಿಸಿದ್ದಾಗಿ ಕೂಡ ತಿಳಿಸಿದ್ದಾನೆ.

  ಈ ಇಬ್ಬರು ಆರೋಪಿಗಳು ಏಕಾಏಕಿ ಮನೆಯೊಳಗೆ ನುಗ್ಗಿ ಸುಮತಿ ಆಚಾರ್ಯರ ಬಾಯಿಗೆ ಬಟ್ಟೆಕಟ್ಟಿ ಕುತ್ತಿಗೆಯಲ್ಲಿದ್ದ ಕರಿಮಣಿ ಸರ ಎಳೆದು ಏಸ್ಕೇಪ್ ಆಗಿದ್ದರು. ಸದ್ಯ ಇಬ್ಬರು ಆರೋಪಿಗಳಿಂದ 60 ಸಾವಿರ ಮೌಲ್ಯದ 32 ಗ್ರಾಂ ತೂಕದ ಕರಿಮಣಿ ಸರ, ಕೃತ್ಯಕ್ಕೆ ಬಳಸಿದ ಸ್ಕೂಟರ್‌ನ್ನು ವಶಪಡಿಸಿಕೊಳ್ಳಲಾಗಿದೆ.

  ಅಳಿಯನೇ ಕಳ್ಳತನ ಕೃತ್ಯ ನಡೆಸಿರುವ ಬಗ್ಗೆ ಅತ್ತೆ ಶಾಕ್‌ಗೆ ಒಳಗಾಗಿದ್ದಾರೆ. ಸದ್ಯ ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಒಟ್ಟಿನಲ್ಲಿ ಹೆಣ್ಣು ಕೊಟ್ಟ ಮನೆಗೆ ಕನ್ನ ಹಾಕಲು ಬಂದು ಅಳಿಯ ಈಗ ಅಂದರ್ ಆಗಿದ್ದಾನೆ..ತಾಯಿ ರೂಪದ ಅತ್ತೆಯ ಮಾಂಗಲ್ಯ ಸರವನ್ನೇ ಕದ್ದ ಆರೋಪಿಯ ವಿರುದ್ಧ ಅತ್ತೆ ಹಿಡಿಶಾಪ ಹಾಕಿದ್ದಾರೆ..

  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
  Published by:Seema R
  First published: