• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • ರಸ್ತೆ ಇಲ್ಲದೇ ಅನಾರೋಗ್ಯ ಪೀಡಿತೆಯನ್ನು ಹೊತ್ತು ನಡೆದ ಮಗ-ಗಂಡ; ಅವ್ಯವಸ್ಥೆಗೆ ಬಲಿಯಾದ ಬಡಜೀವ

ರಸ್ತೆ ಇಲ್ಲದೇ ಅನಾರೋಗ್ಯ ಪೀಡಿತೆಯನ್ನು ಹೊತ್ತು ನಡೆದ ಮಗ-ಗಂಡ; ಅವ್ಯವಸ್ಥೆಗೆ ಬಲಿಯಾದ ಬಡಜೀವ

ತಲೆಯ ಮೇಲೆ ಹೊತ್ತು ಸಾಗಿದ ತಂದೆ-ಮಗ

ತಲೆಯ ಮೇಲೆ ಹೊತ್ತು ಸಾಗಿದ ತಂದೆ-ಮಗ

ಬುದ್ದಿವಂತರ ಜಿಲ್ಲೆ ಎಂಬ ಹಣೆಪಟ್ಟಿ ಕಟ್ಟಿಕೊಂಡಿರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಂದು ಅಮಾನವೀಯ ಘಟನೆ ನಡೆದು ಹೋಗಿದೆ.

  • Share this:

 ದಕ್ಷಿಣ ಕನ್ನಡ : ಅದೊಂದು ರಸ್ತೆ ಸರಿಯಾಗಿದ್ದಿದ್ದರೆ ಆ ಜೀವ ಬದುಕುತ್ತಿತ್ತು. ಅಲ್ಲೊಂದಿಷ್ಟು ಜನರ ಮನಸ್ಸು ಮರುಗಿದ್ದರೆ ಆ ಜೀವ ಇನ್ನು ಬದುಕಿರುತ್ತಿತ್ತು. ಅಲ್ಲಿನ ಸಮಸ್ಯೆಯ ಬಗ್ಗೆ ಅಲ್ಲಿನ ಅಧಿಕಾರಿಗಳು ಕೇಳಿದ್ದರೆ ಆ ಜೀವ ಬದುಕುತ್ತಿತ್ತು. ಅಲ್ಲಿನ ಜನಪ್ರತಿನಿಧಿಗಳು ಸ್ವಲ್ಪ ಕಾಳಜಿ ವಹಿಸಿದ್ದರೆ ಆ ಜೀವ ಬದುಕುತ್ತಿತ್ತು. ಇದು ಬುದ್ದಿವಂತರ, ಮುಂದುವರಿದ ಜಿಲ್ಲೆಯ ಅಮಾನವೀಯ ಘಟನೆ.  ಇಳಿವಯಸ್ಸಿನ ತಂದೆ-ಕಿರಿವಯಸ್ಸಿನ ಮಗ,ಇಬ್ಬರ ತಲೆಯ ಮೇಲೆ ಬೆಂಚು..ಬೆಂಚಿನ ಮೇಲೆ ತಾಯಿ..ತಾಯಿಯನ್ನು ಬೆಂಚಿಗೆ ಕಟ್ಟಿ ಆತುರಾತುರವಾಗಿ ಓಡುತ್ತಿರುವ ತಂದೆ-ಮಗ. ಇವರಿಬ್ಬರು ಹೀಗೆ ಓಡುತ್ತಿರೋದು ತಾಯಿಯ ಜೀವ ಉಳಿಸಲು.. ಹೀಗೆ ಬೆಂಚ್ ನ ಮೇಲೆ ಹೊತ್ತುಕೊಂಡು ಹೋಗುತ್ತಿರುವ ಈ ಪರಿಸ್ಥಿತಿಯನ್ನು ನೋಡಿದ್ರೆ ಯಾರ ಮನಸ್ಸು ಕರಗಲ್ಲ ಹೇಳಿ. ಈ ದೃಶ್ಯ ಕಂಡು ಬಂದಿದ್ದು ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನ ಕೊಯ್ಯೂರು ಗ್ರಾಮದಲ್ಲಿ.


ಬುದ್ದಿವಂತರ ಜಿಲ್ಲೆ ಎಂಬ ಹಣೆಪಟ್ಟಿ ಕಟ್ಟಿಕೊಂಡಿರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಂದು ಅಮಾನವೀಯ ಘಟನೆ ನಡೆದು ಹೋಗಿದೆ. ಕಳೆದ ಕೆಲ ದಿನ ಗಳ ಹಿಂದೆ ಕೊಯ್ಯೂರು ಗ್ರಾಮದ ಕೆರೆ ಹಿತ್ತಿಲು ನಿವಾಸಿಯಾದ ಕಮಲಮ್ಮ ಅವರಿಗೆ ತೀವ್ರ ಅನಾರೋಗ್ಯ ಉಂಟಾಗಿತ್ತು. ಅವರನ್ನು ಕರೆದುಕೊಂಡು ಹೋಗಲು ಮನೆ ಬಳಿ ವಾಹನ ಬರುತ್ತಿರಲಿಲ್ಲ. 200 ಮೀಟರ್ ಗೂ ಹೆಚ್ಚು ದೂರ ಅವರನ್ನು ಹೊತ್ತುಕೊಂಡು ಹೋಗುವ ಪರಿಸ್ಥಿತಿ ಉಂಟಾಗಿತ್ತು. ಪೂವಣಿ ಗೌಡ ಎಂಬುವವರ ಪತ್ನಿ ಕಮಲ ಅವರನ್ನು, ಪೂವಣಿ ಗೌಡ ಮತ್ತು ಮಗ ಬೆಂಚ್ ಗೆ ಕಟ್ಟಿ ಹೊತ್ತುಕೊಂಡು ಹೋಗಿದ್ದಾರೆ. ಬಳಿಕ ಉಜಿರೆಯ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ಹೋಗವಷ್ಟರಲ್ಲಿ ತುಂಬಾ ಲೇಟಾಗಿದ್ರಿಂದ ಬಹು ಅಂಗಾಗ ವೈಫಲ್ಯ ಉಂಟಾಗಿ ಕಮಲ ಮೃತಪಟ್ಟಿದ್ದಾರೆ.


ಕಮಲ ಅವರು ವಿವಿಧ ಖಾಯಿಲೆಗಳಿಂದ ಬಳಲುತ್ತಿದ್ದರು. ರಾತ್ರಿ ಖಾಯಿಲೆ ಉಲ್ಭಣಗೊಂಡಿತ್ತು. ರಾತ್ರಿ ದುರ್ಗಮ ಹಾದಿಯಲ್ಲಿ ಹೊತ್ತುಕೊಂಡು ಹೋಗಲು ಸಾದ್ಯವಾಗದ ಕಾರಣ ಅವರು ಬೆಳಗಾಗುವವರೆಗೂ ಕಾದು ನಂತರ ಹೊತ್ತುಕೊಂಡು ಹೋಗಿದ್ರು. ಆಸ್ಪತ್ರೆಗೆ ಕರೆದೊಯ್ಯುವುದ ತಡವಾದ ಕಾರಣ ಕಮಲ ಮೃತಪಟ್ಟಿದ್ದಾರೆ. ಇನ್ನು ಇಲ್ಲಿಗೆ ಪಂಚಾಯತ್ ನವರು ರಸ್ತೆ ಮಾಡಲು ತಯಾರಿದ್ದಾರೆ. ಆದ್ರೆ ಇಲ್ಲಿರುವ ಐದು ಮನೆಗಳಿಗೆ ಅದೊಂದು ಖಾಸಗಿಯವರ ಜಾಗದಲ್ಲಿ ಹೋಗಬೇಕು. ಆದ್ರೆ ಅವರು ರಸ್ತೆಗೆ ತಮ್ಮ ಜಾಗವನ್ನು ಬಿಟ್ಟುಕೊಡದ ಕಾರಣ ರಸ್ತೆಯನ್ನು ಮಾಡಲು ಆಗಿಲ್ಲ. ಅಲ್ಲಿರೊ ಎಲ್ಲಾ ಮನೆಯವರು ಕೂಡ ಆರೋಗ್ಯ ತಪ್ಪಿದವರನ್ನು ಹೀಗೆ ಹೊತ್ತು ಸಾಗಿದ್ರೆ ಅವರು ಅದನ್ನು ನೋಡಿ ನಗುತ್ತಾರೆಯೇ ಹೊರುತು ರಸ್ತೆ ಬಿಟ್ಟುಕೊಟ್ಟಿಲ್ಲ ಅನ್ನೊದು ಸ್ಥಳೀಯರ ಆರೋಪ.


ಇನ್ನು ಅಧಿಕಾರಿಗಳಿಗೆ, ಸ್ಥಳೀಯ ಶಾಸಕ ಹರೀಶ್ ಪೂಂಜಾಗೆ ಈ ಸಮಸ್ಯೆ ಬಗ್ಗೆ ಮನವಿ ನೀಡಿದ್ರು ಯಾವುದೇ ಪ್ರಯೋಜನವಾಗಿಲ್ಲ. ಆದ್ರಿಂದ ಸ್ಥಳೀಯರಾದ ಸೌಮ್ಯ ಎಂಬುವವರು ಈ ಘೋರ ದೃಷ್ಯವನ್ನು ಸೆರೆ ಹಿಡಿದು ವೈರಲ್ ಮಾಡಿದ್ರು. ತಾಯಿಯನ್ನು ತಂದೆ-ಮಗ ಹೊತ್ತುಕೊಂಡು ಹೋಗುವ ವಿಡಿಯೋ ವನ್ನು ಸ್ಥಳೀಯ ಮನೆವರು ಮೊಬೈಲ್‌ನಲ್ಲಿ ವಿಡಿಯೋ ಮಾಡಿದ್ದಾರೆ..ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ..ಈ ಬಗ್ಗೆ ಮಾತನಾಡಿರುವ ಸ್ಥಳೀಯ ನಿವಾಸಿ ಸೌಮ್ಯ,ಹಲವು ತಿಂಗಳುಗಳಿಂದ ಪೂವಣಿ ಗೌಡರ ಕುಟುಂಬ ತುಂಬಾ ಕಷ್ಟವನ್ನು ಅನುಭವಿಸಿದೆ.


ಇದನ್ನೂ ಓದಿ: Groom Died in Accident: ಮದುವೆ ಆಹ್ವಾನ ಪತ್ರಿಕೆ ನೀಡಲು ಹೋಗಿ ಮಸಣ ಸೇರಿದ ವರ.. ಯಾರದ್ದೋ ತಪ್ಪಿಗೆ ಬಲಿ!


ಕಮಲ ಅವರಿಗೆ ಹುಷಾರಿಲ್ಲದೇ ಅದಾಗ ತಂದೆ-ಮಗ ಇಬ್ಬರೂ ಅವರನ್ನು ಬೆಂಚ್ ಗೆ ಕಟ್ಟಿ ಎತ್ತಿಕೊಂಡು ಹೋಗೋದು ನೋಡೋಕೆ ಸಾಧ್ಯವಾಗುತ್ತಿರಲಿಲ್ಲ..ಹಲವು ಬಾರಿ ಜನಪ್ರತಿನಿಧಿಗಳಿಗೆ ಮನವಿ ಕೊಟ್ಟರೂ ಸಾಧ್ಯವಾಗದ ಹಿನ್ನಲೆಯಲ್ಲಿ, ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದೆ ಅಂತಾ ಹೇಳಿದ್ದಾರೆ. ಇನ್ನು ಈ ಬಗ್ಗೆ ನ್ಯೂಸ್18 ಕನ್ನಡ ಜೊತೆ ಮಾತನಾಡಿದ ಬೆಳ್ತಂಗಡಿ ತಹಶಿಲ್ದಾರ್ ಮಹೇಶ್ ಮುಂದಿನ ಎರಡು ತಿಂಗಳಲ್ಲಿ ರಸ್ತೆ ಮಾಡಿ ಕೊಡೋದಾಗಿ ಭರವಸೆ ನೀಡಿದ್ದಾರೆ. ಪಂಚಾಯತ್ ನ ಅಧಿಕಾರಿಗಳನ್ನು ಸ್ಥಳಕ್ಕೆ ಕಳುಹಿಸಿ,ನರೇಗಾವಯೋಜನೆಯಡಿ ರಸ್ತೆವಮಾಡೋದಾಗಿ ಮಹೇಶ್ ಹೇಳಿದ್ದಾರೆ.


ಒಟ್ಟಿನ್ನಲ್ಲಿ ಜನಪ್ರತಿನಿಧಿಗಳು ಮತ ಕೇಳಲು ಹೋದಾಗ ಕೊಟ್ಟ ಆಶ್ವಾಸನೆಯನ್ನು ಈಡೇರಿಸಬೇಕಿದೆ. ಅದೇನೆ ಇದ್ರು ತಮ್ಮವರ ಕಷ್ಟವನ್ನು ನೋಡಿ ರಸ್ತೆ ಬಿಟ್ಟುಕೊಡದೇ ನಗಾಡುವ ಜನರ ಮನಸ್ಥಿತಿ ಸರಿಯಾಗಬೇಕಿದೆ.

top videos
    First published: