Mangaluru: ಠಾಣೆಯಲ್ಲಿ ಎಣ್ಣೆ ಪಾರ್ಟಿ ಮಾಡಿ ಎಂಜಾಯ್​ ಮೂಡ್​ನಲ್ಲಿದ್ದ ಪೊಲೀಸ್​ ಸಿಬ್ಬಂದಿಗೆ ಸಸ್ಪೆಂಡ್ ಶಾಕ್..!

Mangaluru Commissioner: ಮದ್ಯ ಸೇವಿಸಿ ಪೊಲೀಸ್ ಠಾಣೆಯಲ್ಲಿ ಪಾರ್ಟಿ ಮಾಡಿದ್ದಕ್ಕಾಗಿ ಮಹಿಳಾ ಪೊಲೀಸ್ ಠಾಣೆಯ ಐವರು ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ.

ಮಂಗಳೂರು ಪೊಲೀಸ್ ಕಮಿಷನರ್

ಮಂಗಳೂರು ಪೊಲೀಸ್ ಕಮಿಷನರ್

  • Share this:
    ಮಂಗಳೂರು ಕಮಿಷನರ್ (Mangaluru Commissioner) ಆಗಿ ಅಧಿಕಾರ ವಹಿಸಿಕೊಂಡ ಬಳಿಕ ತಮ್ಮ ಖಡಕ್ ನಿರ್ಧಾರದಿಂದಲೇ ಸಾಕಷ್ಟು ಸುದ್ದಿಯಲ್ಲಿರುವ ಶಶಿಕುಮಾರ್ (Shashi Kumar) ಅವರು ಮಂಗಳೂರಿನ (Mangalore) ಜನರ ಮನಸ್ಸಲ್ಲಿ ಪ್ರಾಮಾಣಿಕ ಅಧಿಕಾರಿ ಎಂಬ ಭಾವನೆ ಮೂಡಿಸಿದ್ದಾರೆ.. ಹೀಗಾಗಿಯೇ ಕರ್ತವ್ಯದ (Work) ವೇಳೆಯಲ್ಲಿ ಇದ್ದಾಗ ಯಾರಾದರೂ ಪೊಲೀಸರು (Police) ಅಕ್ರಮ ಎಸಗಿದ್ದಾರೆ ಅವರ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳುವ ಮೂಲಕ ಮಾದರಿಯಾಗಿದ್ದಾರೆ.. ಅದೇ ರೀತಿ ಈಗ  ಎರಡು ಪ್ರತ್ಯೇಕ ಪ್ರಕರಣದಲ್ಲಿ ಕರ್ತವ್ಯಲೋಪ ಎಸಗಿದ್ದಾರೆ ಪೊಲೀಸ್ ಸಿಬ್ಬಂದಿಗಳನ್ನು ಮಂಗಳೂರು  ಪೊಲೀಸ್ ಕಮಿಷನರ್ ಕುಮಾರ್ ಅವರು ಅಮಾನತುಗೊಳಿಸಿದ್ದಾರೆ. ಮೊದಲನೆಯದಾಗಿ ಪೋಕ್ಸೋ (POCSO) ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಯಲ್ಲಿ ಲೋಪ ಎಸಗಿದ ಆರೋಪದ ಮೇಲೆ ಪಿಎಸ್‌ಐ ಒಬ್ಬರನ್ನು ಮಂಗಳೂರು ನಗರ ಪೊಲೀಸ್ ಕಮಿಷನರ್ ಅಮಾನತುಗೊಳಿಸಿದ್ದಾರೆ. ಅಲ್ಲದೆ, ಪೊಲೀಸ್ ಠಾಣೆಯಲ್ಲಿ ಮದ್ಯ ಸೇವಿಸಿ ಪಾರ್ಟಿ ಮಾಡಿದ ಆರೋಪದ ಮೇಲೆ ಮಹಿಳಾ ಪೊಲೀಸ್ ಠಾಣೆಯ ಐವರು ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ ಎಂದು ಮಂಗಳೂರು ಕಮಿಷನರ್ ಶಶಿಕುಮಾರ್ ಮಾಹಿತಿ ನೀಡಿದ್ದಾರೆ.

    ಅಪ್ರಾಪ್ತೆಯ ಜೊತೆ ಅನುಚಿತವಾಗಿ ವರ್ತನೆ ಮಾಡಿದ್ದ ಹೆಡ್ ಕಾನ್ಸ್ಟೇಬಲ್

    ಪೋಕ್ಸೋ ಪ್ರಕರಣದಲ್ಲಿ ಆರೋಪಿ ಹೆಡ್ ಕಾನ್‌ಸ್ಟೆಬಲ್ ಆಗಿರುವಪಿಎಸ್‌ಐ ರೋಸಮ್ಮ ಅವರನ್ನು ಅಮಾನತುಗೊಳಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ತಿಳಿಸಿದ್ದಾರೆ. ಜುಲೈ, 2021 ರಲ್ಲಿ, ಅಪ್ರಾಪ್ತ ಬಾಲಕಿಯೊಂದಿಗೆ ಅನುಚಿತವಾಗಿ ವರ್ತಿಸಿದ್ದಕ್ಕಾಗಿ ಹೆಡ್ ಕಾನ್‌ಸ್ಟೆಬಲ್‌ನನ್ನು ಬಂಧಿಸಲಾಗಿತ್ತು.. ಅಲ್ಲದೆ ದೂರು ನೀಡಲು ಹೋಗಿದ್ದಬಾಲಕಿಗೆ ಸರಿಯಾಗಿ ಸ್ಪಂದನೆ ಮಾಡದ ಕಾರಣ ಪೋಕ್ಸೋ ಪ್ರಕರಣದಲ್ಲಿ ಹೆಡ್ ಕಾನ್ಸ್ಟೇಬಲ್ ವಿರುದ್ಧ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದ ವಿಚಾರಣೆ ನಡೆಸಿದ ಬಳಿಕ ಅಪ್ರಾಪ್ತ ಬಾಲಕಿಯೊಂದಿಗೆ ಅನುಚಿತವಾಗಿ ವರ್ತನೆ ಮಾಡಿದ ಕಾರಣಕ್ಕೆ ಹೆಡ್ ಕಾನ್ಸ್ಟೇಬಲ್ ರೋಸಮ್ಮ ಅವರನ್ನು ಅಮಾನತು ಮಾಡಲಾಗಿದೆ.

    ಇದನ್ನೂ ಓದಿ: ಪೊಲೀಸರ ಕರ್ತವ್ಯಕ್ಕೆ ಕುಟುಂಬದಿಂದ ಈ ರೀತಿಯ ಒಂದು ಶ್ಲಾಘನೀಯ ಕಾರ್ಯ!

    ಎಣ್ಣೆ ಪಾರ್ಟಿ ಮಾಡಿದ್ದಐವರು ಸಿಬ್ಬಂದಿ ಅಮಾನತು

    ಇನ್ನು ಮತ್ತೊಂದು ಘಟನೆಯಲ್ಲಿ ಮದ್ಯ ಸೇವಿಸಿ ಪೊಲೀಸ್ ಠಾಣೆಯಲ್ಲಿ ಪಾರ್ಟಿ ಮಾಡಿದ್ದಕ್ಕಾಗಿ ಮಹಿಳಾ ಪೊಲೀಸ್ ಠಾಣೆಯ ಐವರು ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ. ಪೊಲೀಸ್ ಠಾಣೆಯಲ್ಲಿ ಎಣ್ಣೆ ಪಾರ್ಟಿ ಮಾಡಿದ್ದಕ್ಕಾಗಿ ದೂರು ದಾಖಲಾಗಿತ್ತು.. ಅಲ್ಲದೆ ಇದಕ್ಕೆ ಸಂಬಂಧಪಟ್ಟಂತೆ ಸ್ಪಷ್ಟ ಸಾಕ್ಷ್ಯಗಳಿದ್ದು, ಸಿಸಿಟಿವಿ ದೃಶ್ಯಾವಳಿ ಮತ್ತು ಡಿಸಿಪಿ ಹರಿರಾಮ್ ಶಂಕರ್ ಮತ್ತು ಎಸಿಪಿ ದಕ್ಷಿಣ ಉಪವಿಭಾಗ ರಂಜಿತ್ ಬಂಡಾರು ಸಲ್ಲಿಸಿದ ತನಿಖಾ ವರದಿ ಆಧರಿಸಿ ಕ್ರಮ ಕೈಗೊಳ್ಳಲಾಗಿದ್ದು, ಇಬ್ಬರು ಎಎಸ್‌ಐಗಳು, ಇಬ್ಬರು ಎಚ್‌ಸಿಗಳು ಮತ್ತು ಒಬ್ಬ ಪಿಸಿಯನ್ನು ಅಮಾನತುಗೊಳಿಸಲಾಗಿದೆ ಎಂದು ಮಂಗಳೂರು ಕಮಿಷನರ್ ಶಶಿಕುಮಾರ್ ಅವರು ಮಾಹಿತಿ ನೀಡಿದ್ದಾರೆ.

    ಇದನ್ನೂ ಓದಿ: ಬಸ್​ನಲ್ಲಿ ಕಿರುಕುಳ; ಮಂಗಳೂರು ಕಮೀಷನರ್ ಎದುರೇ ಕಾಮುಕನಿಗೆ ಯುವತಿಯಿಂದ ಕಪಾಳಮೋಕ್ಷ

    ವೈರಲ್ ಆಗಿದ್ದ ಡಾನ್ಸ್ ವಿಡಿಯೋ ಬಗ್ಗೆ ಕಮಿಷನರ್ ಪ್ರತಿಕ್ರಿಯೆ

    ಇನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದ ಮಂಗಳೂರು ಮಹಿಳಾ ಠಾಣೆಯ ಇನ್ಸ್ಪೆಕ್ಟರ್ ಸಹಿತ ಪೊಲೀಸರು ಕರ್ತವ್ಯದ ಅವಧಿಯಲ್ಲಿ ಠಾಣೆಯಲ್ಲಿ ಮಾಡಿದ್ದಾರೆನ್ನಲಾದ ಬ್ರೇಕ್ ಡ್ಯಾನ್ಸ್ ವೀಡಿಯೋ ಬಗ್ಗೆ ಪ್ರತಿಕ್ರಿಯಿಸಿದ ಅವರು ಇದು ಠಾಣೆಯಲ್ಲಿ ಬ್ರೇಕ್ ಡ್ಯಾನ್ಸ್ ಮಾಡಿರುವ ವೀಡಿಯೋ ಅಲ್ಲ. ಕರ್ತವ್ಯದ ಅವಧಿಯಲ್ಲಿಯಾರೂ ಬ್ರೇಕ್ ಡ್ಯಾನ್ಸ್ ಮಾಡಿಲ್ಲ.ದಸರಾ ಹಬ್ಬದ ಸಂದರ್ಭ ಹುಲಿವೇಷ ಸಹಿತ ಇತರ ಕಲಾತಂಡದೊಂದಿಗೆ ಸಂಭ್ರಮಾಚರಣೆಯ ವೀಡಿಯೋ ಆಗಿದೆ. ಈ ಸಂಭ್ರಮಾಚರಣೆಯಲ್ಲಿ ಠಾಣೆಗಳ ಎಲ್ಲಾ ಅಧಿಕಾರಿಗಳು, ಸಿಬ್ಬಂದಿಗಳು ಪಾಲ್ಗೊಂಡಿದ್ದರು. ಇದು ಪೊಲೀಸರು ಕರ್ತವ್ಯದ ಅವಧಿಯಲ್ಲಿ ಮಾಡಲಾದ ಡ್ಯಾನ್ಸ್ ಅಲ್ಲ, ಇದನ್ನು ಇಲಾಖೆಯ ಸೂಚನೆಯ ಮೇರೆಗೆ ಮಾಡಲಾಗಿತ್ತು ಎಂದು ಸ್ಪಷ್ಟನೆ ನೀಡಿದರು.
    Published by:ranjumbkgowda1 ranjumbkgowda1
    First published: