ಮಂಗಳೂರಿನ ಸೈಕೋ ಕಿಲ್ಲರ್ ಮತ್ತೆ ತಪ್ಪಿತಸ್ಥ; 16ನೇ ಕೊಲೆ ಪ್ರಕರಣದಲ್ಲಿಯೂ ಸೈನೈಡ್ ಮೋಹನ್ ಆರೋಪಿ

Cyanide Mohan: 2009ರಲ್ಲಿ ಮೋಹನ್ ಸಿಕ್ಕಿಬಿದ್ದಾಗ ಬರಿಮಾರು ಮೂಲದ ಯುವತಿಯೊಬ್ಬಳ ಕೊಲೆ ಪ್ರಕರಣದ ತನಿಖೆ ನಡೆಸುತ್ತಿದ್ದಾಗ ಸೈನೈಡ್ ಮೋಹನ್ ಮಾಣಿಯ ಯುವತಿಯ ಕೊಲೆ ಬಗ್ಗೆ ಬಾಯ್ಬಿಟ್ಟಿದ್ದ. ಹೀಗೆ ಒಂದೊಂದು ಪ್ರಕರಣದ ತನಿಖೆ ನಡೆಸುವಾಗಲೂ ಒಂದೊಂದು ಕೊಲೆ ಪ್ರಕರಣ ಬೆಳಕಿಗೆ ಬಂದು ಒಟ್ಟು 20 ಕೇಸುಗಳು ಆತನ ವಿರುದ್ಧ ದಾಖಲಾಗಿದ್ದವು.

Sushma Chakre | news18-kannada
Updated:September 23, 2019, 8:32 AM IST
ಮಂಗಳೂರಿನ ಸೈಕೋ ಕಿಲ್ಲರ್ ಮತ್ತೆ ತಪ್ಪಿತಸ್ಥ; 16ನೇ ಕೊಲೆ ಪ್ರಕರಣದಲ್ಲಿಯೂ ಸೈನೈಡ್ ಮೋಹನ್ ಆರೋಪಿ
ಸೈಕೋ ಕಿಲ್ಲರ್ ಮೋಹನ್
  • Share this:
ಮಂಗಳೂರು​ (ಸೆ.23): ಇಡೀ ದೇಶವನ್ನೇ ಬೆಚ್ಚಿಬೀಳಿಸಿದ್ದ ಸರಣಿ ಹಂತಕ ಸೈನೈಡ್ ಮೋಹನ್ ವಿಚಾರ ಹಲವರಿಗೆ ನೆನಪಿರಬಹುದು. ಹತ್ತಾರು ಯುವತಿಯರನ್ನು ನಂಬಿಸಿ, ಅತ್ಯಾಚಾರ ಮಾಡಿ ಸೈನೈಡ್ ಬಳಸಿ ಕೊಲೆ ಮಾಡಿದ್ದ ಮಂಗಳೂರಿನ ಮೋಹನ್ ಮಾಡಿದ್ದಾನೆ ಎನ್ನಲಾದ 16ನೇ ಕೊಲೆ ಪ್ರಕರಣದ ತೀರ್ಪು ಹೊರಬಿದ್ದಿದ್ದು, ಇದರಲ್ಲೂ ಆತ ತಪ್ಪಿತಸ್ಥನೆಂದು ಘೋಷಣೆಯಾಗಿದೆ.

ಈ ಮೊದಲು ಯುವತಿಯರನ್ನು ನಂಬಿಸಿ ಅವರನ್ನು ಲೈಂಗಿಕವಾಗಿ ಬಳಸಿಕೊಂಡು ಸಾರ್ವಜನಿಕ ಶೌಚಾಲಯದಲ್ಲಿ ಸೈನೈಡ್ ಕ್ಯಾಪ್ಸೂಲ್​ಗಳನ್ನು ನೀಡಿ ಹತ್ಯೆ ಮಾಡಿದ್ದ ಮೋಹನ್ ಕೃತ್ಯಕ್ಕೆ ಮಂಗಳೂರು ಥರಗುಟ್ಟಿತ್ತು. ಒಬ್ಬೊಬ್ಬರ ಬಳಿ ಒಂದೊಂದು ಹೆಸರು ಹೇಳಿಕೊಂಡು ಪರಿಚಯ ಮಾಡಿಕೊಳ್ಳುತ್ತಿದ್ದ ಮೋಹನ್ ಬಳಿಕ ಅವರನ್ನು ಹತ್ಯೆ ಮಾಡುತ್ತಿದ್ದ. 2007ರಲ್ಲಿ 33 ವರ್ಷದ ಮಹಿಳೆಯೊಬ್ಬರನ್ನು ಬೆಂಗಲೂರಿನ ಲಾಡ್ಜ್​ಗೆ ಕರೆದುಕೊಂಡು ಹೋಗಿ ಆಕೆಯ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಿದ್ದ ವಿಚಾರವಾಗಿ ಮಂಗಳೂರು ಜಿಲ್ಲಾ ಮತ್ತು ಸೆಷನ್ಸ್​ ಕೋರ್ಟ್​ನಲ್ಲಿ ವಿಚಾರಣೆ ನಡೆಸಲಾಗಿದೆ.

ಕೇರಳದ ಕಾಸರಗೋಡಿನ ಉಪ್ಪಾಳ ಮೂಲದ ಮಹಿಳೆಯ ಬಳಿ ಸುಧಾಕರ್ ಆಚಾರ್ಯ ಎಂದು ತನ್ನನ್ನು ಪರಿಚಯಿಸಿಕೊಂಡಿದ್ದ ಮೋಹನ್ ತಾನು ಅರಣ್ಯ ಇಲಾಖೆಯಲ್ಲಿ ಕೆಲಸದಲ್ಲಿರುವುದಾಗಿ ನಂಬಿಸಿದ್ದ. ಆಕೆಯನ್ನು ಮದುವೆಯಾಗುವುದಾಗಿ ನಂಬಿಸಿ ಬೆಂಗಳೂರಿನ ಲಾಡ್ಜ್​ಗೆ ಕರೆದುಕೊಂಡು ಹೋಗಿ ಲೈಂಗಿಕವಾಗಿ ಬಳಸಿಕೊಂಡ ನಂತರ ಒಂದು ಕ್ಯಾಪ್ಸೂಲ್ ಕೊಟ್ಟು ಅದನ್ನು ತಿಂದರೆ ಗರ್ಭಿಣಿಯಾಗುವುದಿಲ್ಲ ಎಂದು ಹೇಳಿದ್ದ. ಆತನ ಮಾತನ್ನು ನಂಬಿದ ಮಹಿಳೆ ಮೋಹನ್ ಸೂಚನೆಯಂತೆ ಸಾರ್ವಜನಿಕ ಶೌಚಾಲಯಕ್ಕೆ ಹೋಗಿ ಆ ಕ್ಯಾಪ್ಸೂಲ್ ತಿಂದಿದ್ದಳು. ಅದರೊಳಗೆ ಸೈನೈಡ್ ತುಂಬಿಸಿದ್ದರಿಂದ ಶೌಚಾಲಯದಲ್ಲೇ ಸಾವನ್ನಪ್ಪಿದ್ದಳು. ಈ ಪ್ರಕರಣದ ತನಿಖೆ ಇದೀಗ ನಡೆದು ಆತನಿಗೆ ಶಿಕ್ಷೆ ಘೋಷಣೆಯಾಗಿದೆ. ನ್ಯಾ. ಸಯೀದುನ್ನೀಸಾ ಅವರು ಈ ಪ್ರಕರಣದ ವಿಚಾರಣೆ ನಡೆಸಿದ್ದು, ಸೆ. 25ರಂದು ಶಿಕ್ಷೆಯ ಅವಧಿ ಪ್ರಕಟವಾಗಲಿದೆ.

ಪೊಲಿಯೋ ಲಸಿಕೆಯಲ್ಲಿ ವೈರಸ್​ ಬೆರೆಸಲಾಗಿದೆ ಎಂದು ವಾಟ್ಸಾಪ್​ನಲ್ಲಿ ಹರಿದಾಡಿದ ಸುಳ್ಳುಸುದ್ದಿ! ಜನರು ವದಂತಿ ನಂಬದಂತೆ ಮನವಿ

ಈ ಪ್ರಕರಣ ಮೋಹನ್​ಗೆ ಶಿಕ್ಷೆ ಪ್ರಕಟವಾದ 16ನೇ ಪ್ರಕರಣವಾಗಿದ್ದು, ಇನ್ನೂ 4 ಪ್ರಕರಣಗಳು ಬಾಕಿಯಿವೆ. ಒಟ್ಟು 20 ಮಹಿಳೆಯರ ಹತ್ಯೆ ಮಾಡಿರುವ ಸೈನೈಡ್ ಮೋಹನ್ ಕುರಿತು ಇದೇ ವರ್ಷ ಫೆಬ್ರವರಿಯಲ್ಲೂ ಇನ್ನೊಂದು ತೀರ್ಪು ಪ್ರಕಟವಾಗಿತ್ತು. ಬಂಟ್ವಾಳ ಮಾಣಿ ಗ್ರಾಮ ಪಂಚಾಯತ್ ನ 25 ವರ್ಷದ ಯುವತಿಯ ಪರಿಚಯ ಮಾಡಿಕೊಂಡಿದ್ದ ಸೈನೈಡ್ ಮೋಹನ್ ಆಕೆಯ ಬಳಿ ತನ್ನನ್ನು ಸದಾನಂದ ನಾಯ್ಕ ಎಂದು ಹೇಳಿಕೊಂಡಿದ್ದ. ವೆನ್ಲಾಕ್ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ಯುವತಿಯನ್ನು ಮದುವೆಯಾಗುವುದಾಗಿ ನಂಬಿಸಿ 2008ರ ಜನವರಿ 2ರಂದು ಪುತ್ತೂರು ಬಸ್ ನಿಲ್ದಾಣಕ್ಕೆ ಚಿನ್ನಾಭರಣ ಧರಿಸಿ ಬರಲು ಹೇಳಿದ್ದ. ಅದರಂತೆ ಯುವತಿ ಬಂದ ಬಳಿಕ ಇಬ್ಬರೂ ಮಡಿಕೇರಿಗೆ ತೆರಳಿ ಅಲ್ಲಿನ ಲಾಡ್ಜ್​ನಲ್ಲಿ ರೂಮ್ ಮಾಡಿದ್ದ. ಅಲ್ಲಿ ಆಕೆಯನ್ನು ಲೈಂಗಿಕವಾಗಿ ಬಳಸಿಕೊಂಡಿದ್ದ. ಆಕೆಯ ಚಿನ್ನಾಭರಣಗಳನ್ನೆಲ್ಲ ರೂಮಿನಲ್ಲೇ ಇಟ್ಟು ಹೊರಗೆ ಕರೆದುಕೊಂಡು ಹೋದವನು ತನ್ನ ಹಳೇ ಪ್ರಕರಣಗಳಂತೆ ಆಕೆಗೂ ಗರ್ಭ ಧರಿಸದಂತೆ ಮಾತ್ರೆ ತೆಗೆದುಕೊಳ್ಳುವಂತೆ ಹೇಳಿ ಸಾರ್ವಜನಿಕ ಶೌಚಾಲಯಕ್ಕೆ ಕಳುಹಿಸಿದ್ದ. ಆಕೆ ಮಾತ್ರ ಸೇವಿಸಿದ ಕೂಡಲೆ ಶೌಚಾಲಯದಲ್ಲೇ ಕುಸಿದುಬಿದ್ದು ಸತ್ತು ಹೋಗಿದ್ದಳು.

ಪ್ರೀತಿ ಒಪ್ಪಿಕೊಳ್ಳದಿದ್ದಕ್ಕೆ ಹುಚ್ಚು ಪ್ರೇಮಿಯಿಂದ ಚಾಕು ಇರಿತಕ್ಕೆ ಒಳಗಾಗಿದ್ದ ಯುವತಿ ಸಾವು

2009ರಲ್ಲಿ ಮೋಹನ್ ಸಿಕ್ಕಿಬಿದ್ದಾಗ ಬರಿಮಾರು ಮೂಲದ ಯುವತಿಯೊಬ್ಬಳ ಕೊಲೆ ಪ್ರಕರಣದ ತನಿಖೆ ನಡೆಸುತ್ತಿದ್ದಾಗ ಸೈನೈಡ್ ಮೋಹನ್ ಮಾಣಿಯ ಯುವತಿಯ ಕೊಲೆ ಬಗ್ಗೆ ಬಾಯ್ಬಿಟ್ಟಿದ್ದ. ಹೀಗೆ ಒಂದೊಂದು ಪ್ರಕರಣದ ತನಿಖೆ ನಡೆಸುವಾಗಲೂ ಒಂದೊಂದು ಕೊಲೆ ಪ್ರಕರಣ ಬೆಳಕಿಗೆ ಬಂದು ಒಟ್ಟು 20 ಕೇಸುಗಳು ಆತನ ವಿರುದ್ಧ ದಾಖಲಾಗಿದ್ದವು. 2003ರಿಂದ 2009ರವರೆಗೆ 16 ಮಹಿಳೆಯರನ್ನು ಕೊಲೆ ಮಾಡಿದ ಪ್ರಕರಣದಲ್ಲಿ ಸೈನೈಡ್​ ಮೋಹನ್​ಗೆ ಶಿಕ್ಷೆ ವಿಧಿಸಲಾಗಿದ್ದು, ಅವುಗಳಲ್ಲಿ ಒಂದು ಪ್ರಕರಣದಲ್ಲಿ ಕರ್ನಾಟಕ ಹೈಕೋರ್ಟ್​ ಆತನಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ. ಇನ್ನೂ 4 ಪ್ರಕರಣಗಳ ಅಂತಿಮ ವಿಚಾರಣೆ ಬಾಕಿಯಿದೆ.
First published: September 23, 2019, 8:31 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading