ರಾಜ್ಯಕ್ಕೆ ಮಾದರಿ ಈ ಗ್ರಾ.ಪಂ.; ಕಿಡಿಗೇಡಿಗಳಿಗಿಲ್ಲ ಜಾಗ; ರಾಷ್ಟ್ರೀಯ ಪ್ರಶಸ್ತಿಗಳಿಗೂ ಬಾಜನ

ದಕ್ಷಿಣಕನ್ನಡ ಜಿಲ್ಲೆ ಸುಳ್ಯದ ಸಂಪಾಜೆ ಗ್ರಾಮಪಂಚಾಯತ್ ರಾಜ್ಯಕ್ಕೆ ಮಾದರಿಯಾದ ಕೆಲವೇ ಗ್ರಾ.ಪಂ.ಗಳಲ್ಲಿ ಒಂದಾಗಿದೆ. ಕೇಂದ್ರದ ಹಲವು ಸೌಲಭ್ಯಗಳನ್ನ ಬಳಸಿಕೊಂಡು ಇಲ್ಲಿ ಅಭಿವೃದ್ಧಿ ಮತ್ತು ಭದ್ರತೆಯನ್ನ ಸಾಧಿಸಿದೆ.

ಸಂಪಾಜೆ ಗ್ರಾಮ ಪಂಚಾಯತ್

ಸಂಪಾಜೆ ಗ್ರಾಮ ಪಂಚಾಯತ್

  • Share this:
ಪುತ್ತೂರು: ತಮ್ಮ ವ್ಯಾಪ್ತಿಗೆ ಬರುವ ಪ್ರತಿಯೊಂದು ವ್ಯವಸ್ಥೆಗಳನ್ನೂ ಗಮನಿಸುವ ಜವಾಬ್ದಾರಿ ಆಯಾಯ ಸ್ಥಳೀಯಾಡಳಿತದ ಜವಾಬ್ದಾರಿ. ಆದರೆ ಆ ಜವಾಬ್ದಾರಿಗಳನ್ನು ಎಷ್ಟು ಸ್ಥಳೀಯಾಡಳಿತ ವ್ಯವಸ್ಥೆಗಳು ಪ್ರಾಮಾಣಿಕವಾಗಿ ನಿಭಾಯಿಸುತ್ತಿದೆ ಎನ್ನುವುದು ಮಾತ್ರ ಪ್ರಶ್ನೆಯಾಗಿಯೇ ಉಳಿದಿದೆ. ಆದರೆ ಇಲ್ಲೊಂದು ಗ್ರಾಮ ಪಂಚಾಯತ್ ತನ್ನ ವ್ಯಾಪ್ತಿಗೆ ಬರುವ ಪ್ರತಿಯೊಂದು ಚಟುವಟಿಕೆಗಳನ್ನೂ ಮೂರನೇ ಕಣ್ಣಿನ ಮೂಲಕ ಕಾವಲು ಕಾಯುತ್ತಿದೆ. ರಾಜ್ಯದ ಕೆಲವೇ ಕೆಲವು ಮಾದರಿ ಗ್ರಾಮಪಂಚಾಯತ್ ಗಳಲ್ಲಿ ಈ ಪಂಚಾಯತ್ ಕೂಡಾ ಒಂದಾಗಿದೆ.

ಇಂದಿನ ಬ್ಯುಸಿ ಜೀವನದ ಭರಾಟೆಯಲ್ಲಿ ತಮ್ಮ ಅಕ್ಕಪಕ್ಕಲ್ಲಿ ಏನು ನಡೆಯುತ್ತಿದೆ ಎನ್ನುವುದನ್ನು ಗಮನಿಸಲೂ ಸಮಯ ಇಲ್ಲದ ಸ್ಥಿತಿ ಇದೆ. ಈ ಹಿನ್ನೆಲೆಯಲ್ಲಿ ಒಂದು ಊರು, ಪಟ್ಟಣದ ಜನರ ಚಲನವಲನವನ್ನು ನಿಯಂತ್ರಿಸೋದು ತ್ರಾಸದ ಕೆಲಸವೇ. ಆದರೆ ದಕ್ಷಿಣಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಸಂಪಾಜೆ ಗ್ರಾಮ ಪಂಚಾಯತ್ ತನ್ನ ವ್ಯಾಪ್ತಿಗೆ ಬರುವ ಪ್ರದೇಶಗಳಲ್ಲಿ ನಿರಂತರ ಕಣ್ಗಾವಲು ಇಡುತ್ತಿದೆ. ಕೇಂದ್ರ ಸರಕಾರದ ವಿವಿಧ ಯೋಜನೆಗಳನ್ನು ಯಶಸ್ವಿಯಾಗಿ ಬಳಸಿಕೊಂಡಿರುವ ಈ ಗ್ರಾಮಪಂಚಾಯತ್ ತನ್ನ ವ್ಯಾಪ್ತಿಗೆ ಬರುವ ಕಲ್ಲುಗುಂಡಿ, ಸಂಪಾಜೆ ಪೇಟೆಯ ತುಂಬಾ ಸಿಸಿ ಕ್ಯಾಮಾರಾಗಳನ್ನು ಅಳವಡಿಸುವ ಮೂಲಕ ಎಲ್ಲಾ ಚಲನ ವಲನಗಳನ್ನು ನಿಯಂತ್ರಿಸುತ್ತಿದೆ.

ರಾಜ್ಯಕ್ಕೆ ಮಾದರಿಯಾಗಿದೆ ಈ ಗ್ರಾ.ಪಂ.:

ಅತ್ಯಂತ ಮಾದರಿ ಗ್ರಾಮ ಪಂಚಾಯತ್ ಎಂದು ಗುರುತಿಸಿಕೊಂಡಿರುವ ಈ ಪಂಚಾಯತ್ ತನ್ನ ಕಛೇರಿ ಸೇರಿದಂತೆ ಪಂಚಾಯತ್ ಆಡಳಿತಕ್ಕೆ ಬರುವ ಎಲ್ಲಾ ಸೊತ್ತುಗಳನ್ನೂ ಯಶಸ್ವಿಯಾಗಿ ನಿಭಾಯಿಸುವ ಮೂಲಕ ಉತ್ತಮ ಆದಾಯವನ್ನೂ ಪಡೆಯುತ್ತಿದೆ. ಪಂಚಾಯತ್ ಕಟ್ಟಡದಲ್ಲಿ ಕೆಳ ಅಂತಸ್ತಿನಲ್ಲಿ ಪಂಚಾಯತ್ ಕಛೇರಿ ಇದ್ದರೆ, ಮೇಲಿನ ಅಂತಸ್ತಿನಲ್ಲಿ ಸುಸಜ್ಜಿತವಾದ ಗ್ರಂಥಾಲಯವನ್ನು ನಡೆಸುತ್ತಿದೆ. ಪಂಚಾಯತ್ ನ ಈ ಗ್ರಂಥಾಲಯದಲ್ಲಿ ಐದು ಸಾವಿರಕ್ಕೂ ಮಿಕ್ಕಿದ ವಿವಿಧ ಬಗೆಯ ಪುಸ್ತಕಗಳಿದ್ದು, ಪುಸ್ತಕ ಓದುವವರಿಗಾಗಿ ಆಸನದ ವ್ಯವಸ್ಥೆಯನ್ನೂ ಮಾಡಲಾಗಿದೆ.

ಇದನ್ನೂ ಓದಿ: 681 ಕೋಟಿ ರೂ. ಬೆಳೆ ಪರಿಹಾರ ಬಿಡುಗಡೆ; 10 ಲಕ್ಷ ಜನರ ಖಾತೆಗೆ ಹಣ ವರ್ಗಾವಣೆ; Minister R Ashok

ಮಕ್ಕಳಿಗೆ ಆನ್​ಲೈನ್ ನೆರವು; ಹೊಲಿಗೆ ಯಂತ್ರದ ಮೂಲಕ ಜನರಿಗೆ ನೆರವು:

ಈ ಎಲ್ಲಾ ವ್ಯವಸ್ಥೆಗಳ ನಡುವೆ ಕೊರೊನಾ ಲಾಕ್ ಡೌನ್ ಸಂದರ್ಭದಲ್ಲಿ ಈ ಪಂಚಾಯತ್ ವಿದ್ಯಾರ್ಥಿಗಳಿಗಾಗಿ ಮಾಡಿದ ಸೇವೆಯು ಎಲ್ಲರ ಮೆಚ್ಚುಗೆಯನ್ನೂ ಪಡೆದುಕೊಂಡಿದೆ. ಅತ್ಯಂತ ಹೆಚ್ಚು ಹಿಂದುಳಿದ ಪ್ರದೇಶಗಳನ್ನು ಹೊಂದಿರುವ ಸಂಪಾಜೆ ಗ್ರಾಮಪಂಚಾಯತ್​ನ ಹಲವೆಡೆ ಮೊಬೈಲ್ ನೆಟ್ವರ್ಕ್ ಸಮಸ್ಯೆ ತೀರಾ ಹೆಚ್ಚಾಗಿದೆ.

ಲಾಕ್ ಡೌನ್ ಸಂದರ್ಭದಲ್ಲಿ ಮನೆಯಲ್ಲೇ ಆನ್ ಲೈನ್ ಶಿಕ್ಷಣವನ್ನು ಪಡೆಯಬೇಕಾದ ಅನಿವಾರ್ಯತೆಯಲ್ಲಿದ್ದ ವಿದ್ಯಾರ್ಥಿಗಳಿಗೆ ಗ್ರಾಮಪಂಚಾಯತ್ ನಲ್ಲಿ ಆಶ್ರಯ ನೀಡುವ ಮೂಲಕ ನೆರವಾಗಿತ್ತು. ಈ ಪಂಚಾಯತ್ ನ ಸಂಜೀವಿನಿ ಗುಂಪುಗಳ ಸದಸ್ಯರಿಗೆ ಹೊಲಿಯುವ ಯಂತ್ರಗಳನ್ನು ವಿತರಿಸಿ, ಆ ಸದಸ್ಯರಿಗೆ ತಮ್ಮದೇ ಕಟ್ಟಡದಲ್ಲಿ ಕೆಲಸ ನಿರ್ವಹಿಸಲು ಬೇಕಾದ ವ್ಯವಸ್ಥೆಗಳನ್ನೂ ಮಾಡಿಕೊಟ್ಟಿದೆ ಎನ್ನುತ್ತಾರೆ ಸಂಪಾಜೆ ಗ್ರಾಮಪಂಚಾಯತ್ ಅಧ್ಯಕ್ಷ ಬಿ. ಕೆ. ಹಮೀದ್.

ಇದನ್ನೂ ಓದಿ: Karnataka Dams Water Level: ಅಕಾಲಿಕ ಮಳೆಗೆ ಭರ್ತಿಯಾಗಿವೆ ಜಲಾಶಯಗಳು: ಇಂದಿನ ನೀರಿನ ಮಟ್ಟ ಹೀಗಿದೆ

ರಾಷ್ಟ್ರೀಯ ಪ್ರಶಸ್ತಿಗೆ ಬಾಜನ ಈ ಗ್ರಾ.ಪಂ.:

ಕಛೇರಿ, ಅಂಗನವಾಡಿ, ಸಭಾಂಗಣ, ಅತಿಥಿ ಗೃಹ ಹೀಗೆ ಹಲವು ರೀತಿಯ ವ್ಯವಸ್ಥೆಗಳನ್ನು ಮಾಡಿಕೊಂಡಿರುವ ಸಂಪಾಜೆ ಪಂಚಾಯತ್ ಈ ಮೂಲಕ ಉತ್ತಮ ಆದಾಯವನ್ನೂ ಪಡೆಯುತ್ತಿದೆ. ಪಂಚಾಯತ್ ವ್ಯಾಪ್ತಿಯಲ್ಲಿ ಕಸ ವಿಲೇವಾರಿಗಾಗಿ ಹೊಸ ವಾಹನವನ್ನೂ ಖರೀದಿಸಲಾಗಿದ್ದು, ಪಂಚಾಯತ್ ನ ಈ ಕಾರ್ಯವೈಖರಿಗೆ ರಾಷ್ಟ್ರೀಯ ಪ್ರಶಸ್ತಿಗಳೂ ಸಂದಿವೆ. ಎರಡು ಬಾರಿ ಕೇಂದ್ರ ಸರಕಾರದ ಗಾಂಧಿ ಗ್ರಾಮ ಪುರಸ್ಕಾರ ಪ್ರಶಸ್ತಿಯೂ ಲಭಿಸಿರುವುದು ಸಂಪಾಜೆ ಗ್ರಾಮಪಂಚಾಯ್ ಆಡಳಿತ ವೈಖರಿಯ ಸೇವೆಗೆ ಸಾಕ್ಷಿಯಂತಿದೆ.

ವರದಿ: ಅಜಿತ್ ಕುಮಾರ್
Published by:Vijayasarthy SN
First published: