• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • ತಂಗಿಯ ತಂಟೆಗೆ ಬರಬೇಡ ಎಂದು ಅಣ್ಣಂದಿರ ವಾರ್ನಿಂಗ್: ಯುವತಿಯ ಮನೆಗೆ ನುಗ್ಗಿದ ಪಾಗಲ್​​​ಪ್ರೇಮಿ ಮಾಡಿದ್ದೇನು?

ತಂಗಿಯ ತಂಟೆಗೆ ಬರಬೇಡ ಎಂದು ಅಣ್ಣಂದಿರ ವಾರ್ನಿಂಗ್: ಯುವತಿಯ ಮನೆಗೆ ನುಗ್ಗಿದ ಪಾಗಲ್​​​ಪ್ರೇಮಿ ಮಾಡಿದ್ದೇನು?

ಆರೋಪಿ ಹೇಮಂತ್​

ಆರೋಪಿ ಹೇಮಂತ್​

ತಾನು ಕರೆದ ಕಡೆ ಬರಬೇಕು. ನನಗೆ ಇಷ್ಟ ಆಗುವ ರೀತಿ ಇರಬೇಕು ಎಂದು ಯುವತಿಗೆ ರೌಡಿ ಹೇಮಂತ್​ ತಾಕೀತು ಮಾಡಿದ್ದ.

  • Share this:

ಮಂಗಳೂರು: ಅವನು ಇನ್ನು ಹದಿಹರೆಯದ ವಯಸ್ಸಿನ ಪಡ್ಡೆ ಹುಡುಗ. ಒಬ್ಬಳು ಚೆಲುವೆಯನ್ನು ಲವ್ ಮಾಡುತ್ತಿದ್ದ. ಇವನು ಸರಿಯಾಗಿ ಇದ್ದಿದ್ದರೆ ಆ ಹುಡುಗಿ ಕೂಡ ಪ್ರೀತಿಸುತ್ತಿದ್ದಳೇನೋ. ಆದರೆ ಇವನು ರೌಡಿಸಂ ಮಾಡುತ್ತಾ ಪುಂಡ ಪೋಕರಿಯಾಗಿದ್ದ. ಹೀಗಾಗಿ ಹಿಂದೆ ಬಿದ್ದ ರೌಡಿಯ ಪ್ರೀತಿಯನ್ನು ಯುವತಿ ನಿರಾಕರಿಸಿದ್ದಳು. ಹಿಂದೆ ಬಿದ್ದು ಕಾಡುತ್ತಿದ್ದ ರೌಡಿ ಬಗ್ಗೆ ತನ್ನ ಅಣ್ಣಂದಿರಿಗೆ ಹೇಳಿದ್ದರು. ನಮ್ಮ ಹುಡುಗಿ ಸಹವಾಸಕ್ಕೆ ಬರಬೇಡ ಅಂದಿದ್ದಕ್ಕೆ ತನ್ನ ರೌಡಿ ಪಡೆ ಕಟ್ಟಿಕೊಂಡು ಅವನು ಮಾಡಿದ್ದು ಮಾತ್ರ ಅನಾಹುತದ ಕೆಲಸ. ಮಂಗಳೂರಿನ ಶಕ್ತಿನಗರದಲ್ಲಿ ರಾತ್ರಿ ಏಳೆಂಟು ಪುಡಿ ರೌಡಿಗಳ ತಂಡ ಯುವತಿಯ ಮನಗೆ ನುಗ್ಗಿತ್ತು. ನುಗ್ಗಿದವರೇ ಮನೆಯ ಇಬ್ಬರು ಗಂಡು ಮಕ್ಕಳು ಎಲ್ಲಿ ಎಂದು ಹೇಳಿದ್ದಾರೆ. ಅವರು ಮನೆಯಲ್ಲಿಲ್ಲ ಅಂತಾ ಹೇಳಿದ್ದೇ ತಡ ಇಡೀ ಮನೆಯನ್ನು ಧ್ವಂಸಗೊಳಿಸಿದ್ದರು.


ಮನೆಯಲ್ಲಿದ್ದ ವಯಸ್ಸಾದವರನ್ನು ಬಿಡದೆ ಎಲ್ಲರಿಗೂ ಥಳಿಸಿ ಹೋಗಿದ್ದಾರೆ. ಈ ಸಂಬಂಧ ಮಂಗಳೂರು ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು. ಪೋಲೀಸರು ಪುಡಿ ರೌಡಿಗಳ ಗ್ಯಾಂಗನ್ನು ಬಂಧಿಸಿದ್ದಾರೆ. ದಾಂಧಲೆ ನಡೆಸಿದ್ದ ಬಂಟ್ವಾಳ ತಾಲೂಕಿನ ಬಾರೆಕ್ಕಾಡು ನಿವಾಸಿ ಹೇಮಂತ್ (22), ರೌಡಿಶೀಟರ್ ರಂಜಿತ್ (28), ಉರ್ವಾ ಸ್ಟೋರ್ ನಿವಾಸಿ ಅವಿನಾಶ್ (23), ಕೊಟ್ಟಾರ ಚೌಕಿಯ ಪ್ರಜ್ವಲ್(24), ಕೋಡಿಬೆಂಗ್ರೆ ನಿವಾಸಿ ದೀಕ್ಷಿತ್ (21), ಉರ್ವಾ ಸ್ಟೋರಿನ ಧನುಷ್ (19), ಕುಂಜತ್ ಬೈಲಿನ ಯತಿರಾಜ್ (23) ಬಂಧನಕ್ಕೊಳಗಾಗಿದ್ದಾರೆ.


ದಾಂಧಲೆ ನಡೆದಿದ್ದು ಏಕೆ?


ಶಕ್ತಿನಗರ ನಿವಾಸಿ 18 ವರ್ಷದ ಯುವತಿಯನ್ನು ರೌಡಿಶೀಟರ್ ಹೇಮಂತ್ ಪ್ರೀತಿಸುತ್ತಿದ್ದ. ಆದರೆ ಯುವತಿ ಈತನನ್ನು ತಿರಸ್ಕರಿಸಿದ್ದಳು. ಬೆಂಬಿಡದೆ ಹೇಮಂತ್​​ ಹುಡುಗಿಗೆ ತಾನು ಕರೆದ ಕಡೆ ಬರಬೇಕು. ನನಗೆ ಇಷ್ಟ ಆಗುವ ಹಾಗೆ ಇರಬೇಕು ಅಂತಾ ತಾಕೀತು ಮಾಡಿದ್ದ. ಇದನ್ನು ಯುವತಿ ತನ್ನ ಅಣ್ಣಂದಿರಿಗೆ ಹೇಳಿದ್ದಳು. ಯುವತಿ ಅಣ್ಣಂದಿರು ಹೇಮಂತ್ ಗೆ ಕರೆ ಮಾಡಿ ವಾರ್ನಿಂಗ್ ಮಾಡಿದ್ದರು. ತನ್ನ ತಂಗಿ ಸಹವಾಸಕ್ಕೆ ಬರಬೇಡ ಅಂತಾ ಹೇಳಿದ್ದರು. ಇದರಿಂದ ಕೋಪಗೊಂಡ ಹೇಮಂತ್ ತನ್ನ ರೌಡಿ ಗ್ಯಾಂಗ್ ಕರೆದುಕೊಂಡು ಯುವತಿಯ ಮನೆಗೆ ನುಗ್ಗಿದ್ದಾನೆ.


ಇದನ್ನೂ ಓದಿ: ನಿನ್ನೆ ಮದುವೆ, ಇಂದು ಹೆತ್ತವರ ಸಾವು: ಮಗಳ ಪ್ರೇಮ ವಿವಾಹದಿಂದ ನೊಂದು ಆತ್ಮಹತ್ಯೆಗೆ ಶರಣಾದ ತಂದೆ-ತಾಯಿ!


ಯುವತಿಯ ಅಣ್ಣಂದಿರನ್ನು ಕೊಲೆ ಮಾಡುವ ಉದ್ದೇಶ ಹೇಮಂತ್​ಗೆ ಇತ್ತು. ಮನೆಯಲ್ಲಿ ಅವರಿಲ್ಲದ ಕಾರಣ ವಯಸ್ಸಾದವರನ್ನು ಹೊಡೆದು, ಮನೆಯಲ್ಲಿದ್ದ ವಸ್ತುಗಳನ್ನು ಧ್ವಂಸ ಮಾಡಿದ್ದಾರೆ. ಸಿನಿಮೀಯ ರೀತಿಯಲ್ಲಿ ಕೃತ್ಯ ಮೆರೆದಿದ್ದ ರೌಡಿಗಳನ್ನು ಪೊಲೀಸರು ಬಂಧಿಸಿದ್ದಾರೆ. ತನಿಖೆಯ ಸಂದರ್ಭದಲ್ಲಿ ಪುಡಿ ರೌಡಿಗಳ ಅಟ್ಯಾಕ್​​ ಕೇಸ್​​​ ಪಾಗಲ್ ಪ್ರೇಮಿಯ ಹುಚ್ಚಾಟ ಎಂಬುವುದು ಬೆಳಕಿಗೆ ಬಂದಿದೆ.


ಸದ್ಯ ಆರೋಪಿಗಳ ಹೆಡೆಮುರಿ ಕಟ್ಟಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಇನ್ನು ಇವರಿಗೆಲ್ಲಾ ಕ್ರೈಂ ಹಿಸ್ಟರಿ ಇರೋದು ತಿಳಿದುಬಂದಿದೆ. ಗ್ಯಾಂಗ್ ನಲ್ಲಿರುವ ಉಳಿದ ಆರೋಪಿಗಳಿಗಾಗಿ ಪೊಲೀಸರಿಂದ ಶೋಧ ಕಾರ್ಯ ಮುಂದುವರೆದಿದೆ.


ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್​​ಡೌನ್​ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು. ಇನ್ನು ರಾಜ್ಯದಲ್ಲಿ ಜೂನ್​ 7ರ ನಂತರವೂ ಲಾಕ್​​ಡೌನ್​ ವಿಸ್ತರಣೆ ಆಗಲಿದೆ ಎಂದು ಸಿಎಂ ಬಿ.ಎಸ್​.ಯಡಿಯೂರಪ್ಪ ಇಂದು ಸ್ಪಷ್ಟಪಡಿಸಿದ್ದಾರೆ. ಕೆಲವೊಂದಿಷ್ಟು ಸಡಿಲಿಕೆ ನೀಡುವ ಸೂಚನೆಯನ್ನೂ ನೀಡಿದ್ದಾರೆ.

Published by:Kavya V
First published: