Positive News: ನಂಬಿಕೆ, ಆತ್ಮಸ್ಥೈರ್ಯವೇ ಅಸ್ತ್ರ: ಕೊರೋನಾ ಗೆದ್ದ ಬೆಳ್ತಂಗಡಿಯ ಕೂಡು ಕುಟುಂಬ

13 ಮಂದಿಯ ಒಗ್ಗಟ್ಟು ಮತ್ತು ಆತ್ಮವಿಶ್ವಾಸದಿಂದ  ಪೈ ಕುಟುಂಬ ಸೋಂಕು ಮುಕ್ತವಾಗಿದೆ. 

13 ಮಂದಿಯ ಒಗ್ಗಟ್ಟು ಮತ್ತು ಆತ್ಮವಿಶ್ವಾಸದಿಂದ  ಪೈ ಕುಟುಂಬ ಸೋಂಕು ಮುಕ್ತವಾಗಿದೆ. 

13 ಮಂದಿಯ ಒಗ್ಗಟ್ಟು ಮತ್ತು ಆತ್ಮವಿಶ್ವಾಸದಿಂದ  ಪೈ ಕುಟುಂಬ ಸೋಂಕು ಮುಕ್ತವಾಗಿದೆ. 

  • Share this:
ಪುತ್ತೂರು (ಜೂ. 2):  ಕೊರೋನಾ ಸೋಂಕು ಜಗತ್ತಿನ ಜನರನ್ನು ಇನ್ನಿಲ್ಲದಂತೆ ಕಾಡಿದೆ. ಕೊರೋನಾ ಎಂಬ ಹೆಸರು ಇಡೀ ಮನುಕುಲವನ್ನೇ ಭಯವೆಂಬ ಕೂಪಕ್ಕೆ ತಳ್ಳಿದೆ. ಸಾವು ಎಂಬ ನಕರಾತ್ಮಕ ಭಾವನೆಗಳಿಗೆ ಕೊರೋನಾ ರಾಕ್ಷಸನ ರೂಪ‌ನೀಡಿ ಜನ ನಿದ್ದೆ ಯಲ್ಲೂ ಕೊರೋನಾ ಎಂಬ ಹೆಸರಿಗೆ  ಬೆಚ್ಚಿ ಬೀಳುವಂತೆ ಮಾಡಿದೆ. ಅಂತಹ ಕೊರೋನಾವನ್ನು ಗೆಲ್ಲುವುದು ಸದ್ಯದ ಕಾಲಘಟ್ಟದಲ್ಲಿ ಸಾವಿನ ಜೊತೆ ಹೋರಾಡಿ ಗೆದ್ದ ರೀತಿ ಅಂತ ಬಣ್ಣಿಸಲಾಗಿದೆ. ಕೊರೊನಾ ಮಹಾಮಾರಿ ಮನುಷ್ಯ ಕುಲ ಈ ಹಿಂದೆ ಎಂದೂ ಕಾಣದ ಭೀತಿಗೆ ತಳ್ಳಿದೆ. ಸಾವು-ನೋವು, ದುಃಖ-ದುಮ್ಮಾನ ಗಳು ಜಗತ್ತಿನಾದ್ಯಂತ ಆವರಿಸಿ, ಜನರನ್ನು ಸಾಕಷ್ಟು ಹೆದರಿಸಿದೆ. ಆದರೆ ಈ  ಕೊರೋನಾ ವನ್ನು ನಮ್ಮಲ್ಲಿರುವ ಆತ್ಮವಿಶ್ವಾಸ ಎಂಬ ಏಕಮಾತ್ರ ಅಸ್ತ್ರದಿಂದ ಮಣಿಸಬಹುದೆಂಬುವುದನ್ನು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕುಟುಂಬವೊಂದು ಸಾಬೀತುಪಡಿಸಿದೆ. 13 ಮಂದಿಯಿದ್ದ ಕೂಡು ಕುಟುಂಬ ಆತ್ಮವಿಶ್ವಾಸದಿಂದಲೇ ಕೊರೋನಾವನ್ನು ಗೆದ್ದಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಬಂಗಾಡಿಯ 13 ಮಂದಿಯಿಂದ ಕೂಡು ಕುಟುಂಬ ಮಾರಕ ಕೊರಫನಾ ಸೋಂಕಿಗೆ ತುತ್ತಾಗಿದ್ದರು. ಬಂಗಾಡಿಯ ಶಿವಪ್ಪ ಪೈಯವರ 13 ಮಂದಿ ಇದ್ದ ಕುಟುಂಬ ಕೊರೋನಾ ಸೋಂಕಿಗೆ ಅಕ್ಷರಶಃ ತತ್ತರಿಸಿ ಹೋಗಿದ್ದರು. ಆದರೆ 13 ಮಂದಿಯ ಒಗ್ಗಟ್ಟು ಮತ್ತು ಆತ್ಮವಿಶ್ವಾಸದಿಂದ  ಪೈ ಕುಟುಂಬ ಸೋಂಕು ಮುಕ್ತವಾಗಿದೆ. ಶಿವಪ್ಪ ಪೈ ಯುವರ ಕುಟುಂಬ ಹಸುಗೂಸಿನಿಂದ ವೃದ್ಧರ ತನಕ ಇದ್ದು ಸೋಂಕಿನ ವಿರುದ್ಧ  ಎಲ್ಲರೂ ಜೊತೆಯಾಗಿ ಮಣಿಸಿದ್ದಾರೆ.

ಕಳೆದ ಎಪ್ರಿಲ್28 ರಂದು ಶಿವಪ್ಪ ಪೈಯವರ ಮನೆಯಲ್ಲಿ ದೈವಾರಾಧನೆಯ ಕಾರ್ಯಕ್ರಮ ನಡೆದಿದ್ದು,ಈ ಕಾರ್ಯಕ್ರಮ ಕ್ಕೆ ಮುಂಬೈ ನಿಂದಲೂ ಬಂಧುಗಳು ಆಗಮಿಸಿದ್ದರು. ಮುಂಬೈ ನಿಂದ ಬಂದ ಸಂಬಂಧಿಕರೋರ್ವ ಮಹಿಳೆಯಲ್ಲಿ ಸೋಂಕು ಲಕ್ಷಣಗಳು ಕಾಣಿಸಿಕೊಂಡಿತ್ತು. ಆನಂತರ ಒಬ್ಬೊಬ್ಬರಂತೆ ಹದಿಮೂರು ಮಂದಿಗೂ ಕೊರೋನಾ ಸೋಂಕು ಕಾಣಿಸಿಕೊಂಡಿದೆ. ಕುಟುಂಬದ ಇಬ್ಬರ ಮಹಿಳೆಯರು ಮತ್ತು ಇಬ್ಬರು ಪುರುಷರು ಮಂಗಳೂರಿನ ಖಾಸಗಿ ಆಸ್ಪತ್ರೆ ಮತ್ತು ಬೆಳ್ತಂಗಡಿ ಯ ಸರ್ಕಾರಿಯ ಆಸ್ಪತ್ರೆ ಗೆ ದಾಖಲಾದರೆ  ಉಳಿದ  9 ಮಂದಿ ಮನೆಯಲ್ಲೇ ಐಸೋಲೇಷನ್ ಗೆ ಒಳಗಾಗಿದ್ದಾರೆ.

ಮನೆಯಲ್ಲಿ ಸಣ್ಣ ಮಕ್ಕಳು ಇರೋದ್ರಿಂದ ಆರಂಭದಲ್ಲಿ ಕುಟುಂಬ ಸದಸ್ಯರಿಗೆ ಭಯವಾದರೂ ಆನಂತರ ಎಲ್ಲರೂ ಒಂದು ನಿರ್ಧಾರ ಕೈಗೊಂಡರು. ಎಲ್ಲರೂ ಪ್ರತ್ಯೇಕ ಪ್ರತ್ಯೇಕ ವಾಗಿ ಇದ್ದು ಅಂತರ ಕಾಯ್ದುಕೊಂಡರು. ಮನೆಯಲ್ಲಿ ದಿನಸಿ ವಸ್ತುಗಳು ಮೊದಲೇ ಶೇಖರಣೆಯಾಗಿದ್ದರಿಂದ, ದಿನಕ್ಕೊಬ್ಬರಂತೆ ಆಹಾರ ತಯಾರಿಸುವ ಕಾರ್ಯ ಕೈಗೊಂಡಿದ್ದಾರೆ. ಕುಟುಂಬ ಸದಸ್ಯೆರೆಲ್ಲರೂ ವೈದ್ಯರ ಸಲಹೆಯನ್ನು ಚಾಚೂ ತಪ್ಪದೆ ಪಾಲಿಸಿದ್ದಾರೆ .ಮನೆಮದ್ದು,ಕಷಾಯವನ್ನು ಆಗಾಗ್ಗೆ ತೆಗೆದುಕೊಂಡಿದ್ದಾರೆ. ಬೆಳಗ್ಗೆ ಬಿಸಿಲಿಗೆ ಸ್ವಲ್ಪ ಹೊತ್ತು ಮನೆಯಂಗಳದಲ್ಲೇ ಮೈ ಯೊಡ್ಡಿ ಆರೋಗ್ಯ ಸಮತೋಲನವನ್ನು ಕಾಪಾಡಿಕೊಂಡಿದ್ದಾರೆ.

ಈದೀಗ 13 ಮಂದಿಯ ನೆಗೆಟಿವ್ ಹೋಮ್ ಐಸೋಲೇಷನ್ ಕೂಡಾ ಮುಗಿದಿದ್ದು, ಕೊರೋನಾ ಸೋಂಕಿನ ವಿರುದ್ಧ ಜಯಿಸಿದ ಸಾರ್ಥಕ ಭಾವ ಮನೆಯವರಲ್ಲಿ ಮೂಡಿದೆ. ಈ ಸಂತಸವನ್ನು ಮನೆಮಂದಿ ಕೇಕ್ ಕಟ್ ಮಾಡುವ ಮೂಲಕ ಆಚರಿಸಿಕೊಂಡಿದ್ದಾರೆ. ಕೊರೋನಾ ಸೋಂಕಿನ ಬಗ್ಗೆ ಭಯ ಬೇಡ ಆದರೆ ಜಾಗೃತವಿರಲಿ.  ಕೊರೋನಾ ವಿರುದ್ಧದ ಹೋರಾಟಕ್ಕೆ ಆತ್ಮ ವಿಶ್ವಾಸವೇ ಪ್ರಬಲ ಅಸ್ತ್ರ ಅಂತಾ ಜನರಿಗೆ ಕಿವಿಮಾತು ಹೇಳಿದ್ದಾರೆ.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
Published by:Seema R
First published: