ಕಡೆಗೂ ಸಿಕ್ಕಿತು ನೆರವಿನ ಹಸ್ತ; ಬಡ ಕುಟುಂಬಕ್ಕೆ ಆಶಾಕಿರಣವಾದ ಅಧಿಕಾರಿಗಳು

ಬಡ ಕುಟುಂಬಕ್ಕೆ ಪಂಚಾಯತಿ ಸಾಧ್ಯವಾಗುವಂತಹ ಎಲ್ಲಾ ರೀತಿಯ ಸವಲತ್ತುಗಳನ್ನು ಒದಗಿಸಿಕೊಡಲಾಗುವುದು ಕಬಕ ಪಂಚಾಯತಿ ಅಧ್ಯಕ್ಷ ವಿಜಯಕುಮಾರ್ ಮಾಹಿತಿ ನೀಡಿದ್ದಾರೆ.

ಬಡ ಕುಟುಂಬಕ್ಕೆ ಪಂಚಾಯತಿ ಸಾಧ್ಯವಾಗುವಂತಹ ಎಲ್ಲಾ ರೀತಿಯ ಸವಲತ್ತುಗಳನ್ನು ಒದಗಿಸಿಕೊಡಲಾಗುವುದು ಕಬಕ ಪಂಚಾಯತಿ ಅಧ್ಯಕ್ಷ ವಿಜಯಕುಮಾರ್ ಮಾಹಿತಿ ನೀಡಿದ್ದಾರೆ.

ಬಡ ಕುಟುಂಬಕ್ಕೆ ಪಂಚಾಯತಿ ಸಾಧ್ಯವಾಗುವಂತಹ ಎಲ್ಲಾ ರೀತಿಯ ಸವಲತ್ತುಗಳನ್ನು ಒದಗಿಸಿಕೊಡಲಾಗುವುದು ಕಬಕ ಪಂಚಾಯತಿ ಅಧ್ಯಕ್ಷ ವಿಜಯಕುಮಾರ್ ಮಾಹಿತಿ ನೀಡಿದ್ದಾರೆ.

  • Share this:
ಪುತ್ತೂರು (ಮೇ. 11): ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಕಬಕ ಗ್ರಾಮದ ಪೋಳ್ಯ ಎಂಬಲ್ಲಿ ವಾಸಿಸುತ್ತಿರುವ ಕುಟುಂಬವೊಂದು ಮೂಲಭೂತ ಸೌಲಭ್ಯ ವಂಚಿತವಾಗಿದೆ. ಈಗ ಈ ಕುಟುಂಬಕ್ಕೆ ಗ್ರಾಮ ಪಂಚಾಯತ್, ತಾಲೂಕು ಆಡಳಿತದಿಂದ ಸಂಪೂರ್ಣ ನೆರವಿನ ಭರವಸೆ ದೊರಕಿದ್ದು, ಬಡ ಕುಟುಂಬಬದಲ್ಲಿ ಹೊಸ ಬದುಕಿನ ಆಶಾಕಿರಣ ಮೂಡಿದೆ. ಬಡ ಕುಟುಂಬ ಪರಿಸ್ಥಿತಿ ಬಗ್ಗೆ ಅರಿವಿಗೆ ಬರುತ್ತಿದ್ದಂತೆ  ಎಚ್ಚೆತ್ತುಕೊಂಡಿರುವ ಪಂಚಾಯತ್, ತಾಲೂಕು ಅಡಳಿತ ನಾರಾಯಣ ನಾಯ್ಕ್ ಕುಟುಂಬಕ್ಕೆ ಅಗತ್ಯವಿರುವ ಎಲ್ಲಾ ರೀತಿಯ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವ ಭರವಸೆ ನೀಡಿದ್ದು, ಬಡ ಕುಟುಂಬ ಇದೀಗ ನಿಟ್ಟುಸಿರು ಬಿಡುವಂತಾಗಿದೆ. ಪತಿ ನಾರಾಯಣ ನಾಯ್ಕ್, ಪತ್ನಿ ಹರಿಣಾಕ್ಷಿ ಮತ್ತು ಓರ್ವ ಪುತ್ರಿ ಪ್ರತಿಜ್ಞಾ ಅವರನ್ನು ಒಳಗೊಂಡಿರುವ ಬಡ ಪುಟ್ಟ ಕುಟುಂಬಕ್ಕೆ ಕೂಲಿ ಕೆಲಸವೇ ಜೀವನಾಧಾರವಾಗಿದ್ದು, ಕಳೆದ ಫೆ.22 ರಂದು ಪುತ್ತೂರಿನ ಎಲ್ಲೆಡೆಯೂ ಭಾರೀ ಮಳೆ. ರಾತ್ರಿ 8.30 ಕ್ಕೆ ಈ ಭಾರೀ ಮಳೆಗೆ ಈ ಬಡ ಕುಟುಂಬದ ಮನೆಯ ಮೇಲೆ ಮರವೊಂದು ಅಪ್ಪಳಿಸಿತ್ತು. ಈ ಸಂದರ್ಭ ತಾಯಿ, ಮಗಳು ಮನೆಯೊಳಗಡೆ ಇದ್ದರೂ ಅಪಾಯದಿಂದ ಪಾರಾಗಿದ್ದರು. ಇದಾದ ಬಳಿಕ ಪಂಚಾಯತ್‌ನವರು ಬಂದು ಮನೆಯ ಫೋಟೋ ತೆಗೆದುಕೊಂಡು ಮನೆ ಹಾನಿಗೆ ಸರಕಾರದಿಂದ ಪರಿಹಾರ ಸಿಗುತ್ತದೆ ಎಂದೆಲ್ಲಾ ಹೇಳಿ ಹೋಗಿದ್ದರು.

ಆದರೆ, ಪ್ರಕೃತಿ ವಿಕೋಪ ನಿಧಿಯಡಿ ಪರಿಹಾರ ದೊರಕುವುದೆಂಬ ನಿರೀಕ್ಷೆಯಲ್ಲಿದ್ದ ಈ ಬಡ ಕುಟುಂಬಕ್ಕೆ ಘಟನೆ ನಡೆದು ಸುಮಾರು ಎರಡೂವರೆ ತಿಂಗಳಾಗುತ್ತಾ ಬಂದರೂ  ಸರಕಾರದಿಂದ ಚಿಕ್ಕಾಸೂ ದೊರಕಲಿಲ್ಲ. ಇದ್ದ ಬದ್ದವರಲ್ಲಿ ಹೇಳಿಕೊಂಡಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಪಂಚಾಯತ್‌ನಲ್ಲಿ ಕೇಳಿದರೆ, ಪರಿಹಾರ ಮೊತ್ತ ಜಿಲ್ಲಾ ಪಂಚಾಯತ್ ನ ನಿಂದ ಬಿಡುಗಡೆ ಆಗಬೇಕಾಗಿದೆ ಎಂದು ಸಬೂಬು ನೀಡುತ್ತಾ ಬರುತ್ತಿದ್ದರು. ಈ ಕುಟುಂಬದ ಸಂಕಷ್ಟದ ವರದಿ ಮಾಧ್ಯಮಗಳಲ್ಲಿ ಭಿತ್ತರವಾಗುತ್ತಿದ್ದಂತೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ತಂಡ ಇದೀಗ ಈ ಮನೆಗೆ ಭೇಟಿ ನೀಡಿದ್ದಾರೆ.

ಪುತ್ತೂರು ತಹಶೀಲ್ದಾರ್ ರಮೇಶ್‌ಬಾಬು ಮತ್ತು ಸಿಬಂದಿಗಳು ಈ ಮನೆ ವೀಕ್ಷಣೆ  ನಡೆಸಿದ್ದಾರೆ. ಬಡ ಕುಟುಂಬದ ಮನೆಯ ದುಃಸ್ಥಿತಿಯನ್ನು ಕಂಡು ಖೇದ ವ್ಯಕ್ತಪಡಿಸಿದರು, ಅಲ್ಲದೇ ಒಂದು ವಾರದೊಳಗೆ ಮನೆ ದುರಸ್ತಿಗೆ ಸಹಾಯಧನವನ್ನು ಬಿಡುಗಡೆಗೊಳಿಸಲು ತುರ್ತು ಕ್ರಮ ಕೈಗೊಳ್ಳುವುದಾಗಿ ಮನೆ ಮಂದಿಗೆ ಭರವಸೆ ನೀಡಿದರು.

ಇತ್ತ ಕಬಕ ಗ್ರಾಮ ಪಂಚಾಯತ್ ಕೂಡಾ ನಾರಾಯಣ ನಾಯ್ಕ್ ಅವರಿಗೆ ಶೌಚಾಲಯ ನಿರ್ಮಿಸಲು ರೂ. 15 ಸಾವಿರ ಮೊತ್ತ ಒದಗಿಸುವುದಾಗಿ ತಿಳಿಸಿದ್ದಾರೆ. ಅಲ್ಲದೆ, ಕಂದಾಯ ಹಾಗಾಗಿ ಇತರ ಕೆಲ ಸಂಘಟನೆಗಳು ಸಹಾಯಹಸ್ತ ನೀಡಲು ಮುಂದೆ ಬಂದಿವೆ. ಸರಕಾರದ ಸಹಾಯ ಸಿಗದೆ ಮಾನಸಿಕವಾಗಿ ಜರ್ಜರಿತವಾಗಿದ್ದ ಬಡಕುಟುಂಬವಿಂದು ಈ ಬೆಳವಣಿಗೆಯಿಂದ ನಿರಾಳವಾಗಿದೆ. ಇನ್ನು ಈ ಮನೆಗೆ ವಿದ್ಯುತ್ ಸಂಪರ್ಕ ದೊರಕಿದರೆ ಕುಟುಂಬದ ಮೂಲಭೂತ ಸೌಲಭ್ಯದ ಕೊರತೆ ನೀಗಲಿದೆ.  ಮನೆ ಶೇ.15 ರಷ್ಟು ಹಾನಿ ಆಗಿಲ್ಲ. ಆದರೂ ಮಾನವೀಯ ನೆಲೆಯಲ್ಲಿ ಒಂದು ವಾರದೊಳಗೆ ಪರಿಹಾರ ಮೊತ್ತ ಒದಗಿಸಿಕೊಡಲು ಕ್ರಮ ಕೈಗೊಳ್ಳಲಾಗುವುದು ಎಂದು ಪುತ್ತೂರು ತಹಶೀಲ್ದಾರ್ ರಮೇಶ್‌ಬಾಬು ಭರವಸೆ ನೀಡಿದ್ದಾರೆ.

ಈ ಮನೆ ಮಂದಿಗೆ ಸಮೀಪದ ಪೋಳ್ಯಕ್ಕೆ ಹೋಗಿ ಬರಲು ಕಷ್ಟವಾಗುವುದರಿಂದ ಬಲ್ನಾಡ್‌ನಲ್ಲಿ ಮನೆ ಕಟ್ಟಲು ಜಾಗ ಇದೆ. ಅಲ್ಲಿ ಮನೆ ಕಟ್ಟುತ್ತೇವೆ ಎಂದು ಹೇಳಿದ್ದಾರೆ. ಆದರೂ, ಕಬಕ ಗ್ರಾಮದ ವಿದ್ಯಾಪುರದಲ್ಲಿ ಡಿಸಿ ಮನ್ನಾ ಜಾಗದಲ್ಲಿ ಸ್ವಂತ ಮನೆ ಕಟ್ಟಲು ಅವಕಾಶ ಮಾಡಿಕೊಡಲಾಗುವುದು. ಈ ಕುರಿತು ಶಾಸಕರೊಂದಿಗೆ ಮಾತನಾಡಲಾಗಿದ್ದು, ಬಡ ಕುಟುಂಬಕ್ಕೆ ಪಂಚಾಯತಿ‌ ಸಾಧ್ಯವಾಗುವಂತಹ ಎಲ್ಲಾ ರೀತಿಯ ಸವಲತ್ತುಗಳನ್ನು ಒದಗಿಸಿಕೊಡಲಾಗುವುದು ಕಬಕ ಪಂಚಾಯತಿ ಅಧ್ಯಕ್ಷ ವಿಜಯಕುಮಾರ್ ಮಾಹಿತಿ ನೀಡಿದ್ದಾರೆ. ಎಲ್ಲರ ದಿವ್ಯ ನಿರ್ಲಕ್ಷ್ಯಕ್ಕೆ ಒಳಗಾಗಿದ್ದ ಈ ಬಡ ಕುಟುಂಬಕ್ಕೆ ಕೊನೆಗೂ ಭರವಸೆಯ ಆಶಾಕಿರಣ ದೊರೆತಿದೆ.
Published by:Seema R
First published: