ಮಂಗಳೂರಿಗರಿಗೆ ಸಿಹಿಸುದ್ದಿ; 10 ವರ್ಷಗಳ ಬಳಿಕ ಪಂಪ್​ವೆಲ್ ಫ್ಲೈಓವರ್​ ಕಾಮಗಾರಿ ಪೂರ್ಣ

Mangalore Pumpwell Flyover: 2010ರಲ್ಲಿ ಆರಂಭವಾಗಿದ್ದ ಈ ಮೇಲ್ಸೇತುವೆಯ ಕಾಮಗಾರಿ ಗುತ್ತಿಗೆ ಕಂಪೆನಿ ನವಯುಗದಿಂದ 2013ಕ್ಕೆ ಪೂರ್ಣಗೊಳ್ಳಬೇಕಿತ್ತು. ಆದರೆ, 10 ವರ್ಷವಾದರೂ ಪೂರ್ಣಗೊಳ್ಳದ ಈ ಮೇಲ್ಸೇತುವೆ ಬಗ್ಗೆ ಹುಟ್ಟಿಕೊಂಡಿದ್ದ ಟ್ರೋಲ್​ಗಳಿಗೆ ಲೆಕ್ಕವಿಲ್ಲ!

ಮಂಗಳೂರು ಪಂಪ್​ವೆಲ್ ಮೇಲ್ಸೇತುವೆ

ಮಂಗಳೂರು ಪಂಪ್​ವೆಲ್ ಮೇಲ್ಸೇತುವೆ

  • Share this:
ಮಂಗಳೂರು (ಜ. 29): ಕರಾವಳಿಯಲ್ಲಿ ಅತಿಹೆಚ್ಚು ಬಾರಿ ಟ್ರೋಲ್​ಗೊಳಗಾಗಿದ್ದ ಪಂಪ್​ವೆಲ್ ಮೇಲ್ಸೇತುವೆ ಬರೋಬ್ಬರಿ 10 ವರ್ಷಗಳ ನಂತರ ಸಂಚಾರಕ್ಕೆ ಮುಕ್ತವಾಗಿದೆ. ಇನ್ನು ಎರಡೇ ಎರಡು ದಿನಗಳಲ್ಲಿ ಈ ಫ್ಲೈಓವರ್​ ಮೇಲೆ ಸಂಚಾರ ಮಾಡಬಹುದು. ಈ ಮೂಲಕ ಮಂಗಳೂರಿಗರ ಅತಿದೊಡ್ಡ ಬೇಡಿಕೆಯೊಂದು ಈಡೇರಿದಂತಾಗಿದೆ.

ಮಂಗಳೂರಿನ ಹೃದಯಭಾಗದಲ್ಲಿರುವ ಈ ಫ್ಲೈಓವರ್​ ಕಾಮಗಾರಿ 10 ವರ್ಷಗಳ ಹಿಂದೆ ಆರಂಭವಾಗಿತ್ತು. 2010ರಿಂದ ಇದುವರೆಗೂ ಆರೇಳು ಬಾರಿ ಈ ಕಾಮಗಾರಿಯನ್ನು ಪೂರ್ಣಗೊಳಿಸಲು ಗಡುವು ವಿಸ್ತರಣೆಯಾಗಿತ್ತು. ಇದೀಗ ಜ. 31ರ ಬೆಳಗ್ಗೆ ಪಂಪ್​ವೆಲ್​ ಮೇಲ್ಸೇತುವೆ ಉದ್ಘಾಟನೆಯಾಗಲಿದೆ. 600 ಮೀ. ಉದ್ದದ ಮೇಲ್ಸೇತುವೆ ಕಾಮಗಾರಿ ಪೂರ್ಣಗೊಂಡಿದ್ದು, ಡಾಂಬರೀಕರಣವೂ ಮುಗಿದಿದೆ.

ಇದನ್ನೂ ಓದಿ: ಅತ್ಯಂತ ಕೆಟ್ಟ ಟ್ರಾಫಿಕ್: ಬೆಂಗಳೂರು ವಿಶ್ವದಲ್ಲೇ ನಂ. 1; ಟಾಪ್ 10 ಪಟ್ಟಿಯಲ್ಲಿವೆ ಭಾರತದ 4 ನಗರಗಳು

2010ರಲ್ಲಿ ಆರಂಭವಾಗಿದ್ದ ಈ ಮೇಲ್ಸೇತುವೆಯ ಕಾಮಗಾರಿ ಗುತ್ತಿಗೆ ಕಂಪೆನಿ ನವಯುಗದಿಂದ 2013ಕ್ಕೆ ಪೂರ್ಣಗೊಳ್ಳಬೇಕಿತ್ತು. ಆದರೆ, 10 ವರ್ಷವಾದರೂ ಪೂರ್ಣಗೊಳ್ಳದೆ ಆರೇಳು ಡೆಡ್ ಲೈನ್​ಗಳನ್ನು ಕಂಡಿತ್ತು. ರಾಷ್ಟ್ರೀಯ ಹೆದ್ದಾರಿ 66ರ ಪಂಪ್​ವೆಲ್ ಬಳಿ ನಿರ್ಮಾಣವಾಗಿರುವ ಈ ಮೇಲ್ಸೇತುವೆ ಬಗ್ಗೆ ಹುಟ್ಟಿಕೊಂಡಿರುವ ಟ್ರೋಲ್​ಗಳಿಗೆ ಲೆಕ್ಕವಿಲ್ಲ!

ಇದನ್ನೂ ಓದಿ: ಹೊಟ್ಟೆನೋವಿನಿಂದ ನರಳುತ್ತಿದ್ದ ಬಾಲಕಿಗೆ ಆಪರೇಷನ್ ಮಾಡಿದ ವೈದ್ಯರಿಗೆ ಕಾದಿತ್ತು ಶಾಕ್!

1 ದಶಕ ಕಳೆದರೂ ಪಂಪ್​ವೆಲ್ ಮೇಲ್ಸೇತುವೆ ಕಾಮಗಾರಿ ಪೂರ್ಣಗೊಳ್ಳದ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡದ ಸಂಸದ ನಳಿನ್ ಕುಮಾರ್ ಕಟೀಲು ವಿರುದ್ಧ ಮಂಗಳೂರಿಗರು ಆಕ್ರೋಶ ಹೊರಹಾಕಿದ್ದರು. 10 ವರ್ಷಗಳಿಂದ ಕುಂಟುತ್ತಾ ಸಾಗಿದ್ದ ಮಂಗಳೂರಿನ ಪಂಪ್​ವೆಲ್ ಫ್ಲೈಓವರ್ ಕಾಮಗಾರಿ 2019ರ ಡಿಸೆಂಬರ್ ವೇಳೆಗೆ ಮುಗಿದು, 2020ರ ಹೊಸ ವರ್ಷಕ್ಕೆ ಉದ್ಘಾಟನೆ ಆಗುತ್ತದೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಭರವಸೆ ನೀಡಿದ್ದರು. ಆದರೆ, ಆ ಭರವಸೆಯೂ ಸುಳ್ಳಾಗಿತತ್ತು. ಇದೀಗ ಜ. 31ರಂದು ಈ ಮೇಲ್ಸೇತುವೆ ಲೋಕಾರ್ಪಣೆಯಾಗಲಿದ್ದು, ಫೆಬ್ರವರಿ 1ರಿಂದ ಸಂಚಾರಕ್ಕೆ ಮುಕ್ತವಾಗಲಿದೆ.

 
First published: