Potholes: ಮಂಗಳೂರಿಗೆ ಮೋದಿ, ರಾತ್ರೋ ರಾತ್ರಿ ಮಾಯವಾಗಿದ್ದ ರಸ್ತೆ ಗುಂಡಿಗಳು ಹತ್ತೇ ದಿನದಲ್ಲಿ ಪ್ರತ್ಯಕ್ಷ!

ರಸ್ತೆ ಗುಂಡಿ ಸಮಸ್ಯೆಗಳು ಸಾಮಾನ್ಯವಾಗಿ ಇಷ್ಟು ಬೇಗ ಪರಿಹಾರ ಕಾಣುವುದು ಬಹಳ ವಿರಳ. ಹೀಗಾಗಿ ಈ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡಿತ್ತು. ಮೋದಿ ಆಗಮನದಿಂದ ಸಮಸ್ಯೆಯೊಂದು ಇಷ್ಟು ಬೇಗ ಬಗೆಹರಿಯುತ್ತದೆಯಾದರೆ ಮೋದಿ ಇಲ್ಲಿಗೆ ಪದೇ ಪದೇ ಬರುತ್ತಿರಲಿ ಎಂದು ಹಾರೈಸಿದ್ದರು. ಆದರೀಗ ಈ ಗುಂಡಿಗಳು ಮತ್ತೆ ಪ್ರತ್ಯಕ್ಷವಾಗಿವೆ.

ಮೋದಿ ಸ್ವಾಗತಕ್ಕೆ ರಾತ್ರೋ ರಾತ್ರಿ ಸಿದ್ಧಪಡಿಸಿದ್ದ ರಸ್ತೆ

ಮೋದಿ ಸ್ವಾಗತಕ್ಕೆ ರಾತ್ರೋ ರಾತ್ರಿ ಸಿದ್ಧಪಡಿಸಿದ್ದ ರಸ್ತೆ

  • Share this:
ಮಂಗಳೂರು(ಸೆ.13): ಕಳೆದ ಹತ್ತು ದಿನಗಳ ಹಿಂದಷ್ಟೇ ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ಕರಾವಳಿ ಪ್ರದೇಶ- ಮಂಗಳೂರಿಗೆ (Mangalore) ಆಗಮಿಸಿದ್ದರು. ಮೋದಿ ನೋಡಲು ಅವರಬನ್ನು ಸ್ವಾಗತಿಸಲು ಮಂಗಳೂರಿಗೆ ಜನ ಸಾಗರವೇ ಹರಿದು ಬಂದಿತ್ತು. ಬೃಹತ್ ಸಮಾವೇಶವನ್ನೂ ಆಯೋಜಿಸಲಾಗಿದ್ದು, ಇಲ್ಲಿ ಅನೇಕ ಯೋಜನೆಗಳನ್ನು ಉದ್ಘಾಟಿಸಲಾಗಿತ್ತು. ಇನ್ನು ಮೋದಿ ಆಗಮಿಸುವುದಕ್ಕೂ ಮುನ್ನ ಮಂಗಳೂರಿನಲ್ಲಿ (Mangalore) ಸದ್ದು ಮಾಡುತ್ತಿದ್ದ, ಅನೇಕ ಅಪಘಾತಗಳಿಗೆ ಕಾರಣವಾಗಿದ್ದ ರಸ್ತೆ ಗುಂಡಿಗಳೆಲ್ಲಾ ರಾತ್ರೋ ರಾತ್ರಿ ಮಾಯವಾಗಿದ್ದವು. ರಸ್ತೆಗಳೆಲ್ಲಾ ಡಾಂಬರೀಕರಣಗೊಂಡು ಹೊಚ್ಚ ಹೊಸದಾಗಿ ಕಾಣಿಸಿಕೊಂಡಿದ್ದವು. ಇಷ್ಟು ಶೀಘ್ರವಾಗಿ ರಸ್ತೆ ಗುಂಡಿಗಳಿಂದ (Pathole) ಮುಕ್ತಿ ಸಿಕ್ಕಿರುವುದಕ್ಕೆ ಪ್ರಯಾಣಿಕರು ಬಹಳ ಸಂತಸಪಟ್ಟಿದ್ದರು. ಈ ವಿಚಾರವಾಗಿ ಸಾಮಾಜಿಕ ಜಾಲತಾಣಗಳಲ್ಲೂ ಅನೇಕ ಚರ್ಚೆಗಳಾಗಿದ್ದವು. ಆದರೀಗ ಪಿಎಂ ಮೋದಿ ಮಂಗಳೂರಿಗೆ ಬಂದು ಹತ್ತು ದಿನಗಳಾಗುವುದರಲ್ಲೇ ಮಾಯವಾಗಿದ್ದ ರಸ್ತೆ ಗುಂಡಿಗಳೆಲ್ಲಾ ಮತ್ತೆ ಕಾಣಿಸಿಕೊಂಡಿವೆ.

ಇದನ್ನೂ ಓದಿ: Aati Kalenja: ಸಂಕಷ್ಟ ದೂರಮಾಡುತ್ತೆ ಆಟಿ ಕಳೆಂಜ! ರೋಗರುಜಿನ ದೂರ ಮಾಡುವ ನಂಬಿಕೆ

ಹೌದು ಗುಂಡಿಮಯವಾಗಿದ್ದ ರಸ್ತೆಗಳೆಲ್ಲಾ ಅದರಲ್ಲೂ ವಿಶೇಷವಾಗಿ ರಾಷ್ಟ್ರೀಯ ಹೆದ್ದಾರಿ 66 ಪ್ರಧಾನಿ ಮೋದಿ ಆಗಮನಕ್ಕೂ ಮುನ್ನ ರಿಪೇರಿಯಾಗಿತ್ತು. ಪ್ರಧಾನಿಯವರ ಆಗಮನದ ಕೆಲವೇ ದಿನಗಳ ಮೊದಲು, ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ (ಎನ್‌ಎಚ್‌ಎಐ) ಅಧಿಕಾರಿಗಳು ಗುಂಡಿಮಯವಾಗಿದ್ದ ನವಮಂಗಳೂರು ಬಂದರು ಮತ್ತು ಕೂಳೂರು ನಡುವಿನ ರಸ್ತೆಯ ಗುಂಡಿಗಳನ್ನು ತುಂಬುವ ಮತ್ತು ಡಾಂಬರೀಕರಣ ಮಾಡುವ ಕಾರ್ಯಾಚರಣೆಯನ್ನು ನಡೆಸಿದ್ದರು. ದಶಕಗಳಷ್ಟು ಹಳೆಯದಾದ ಕೂಳೂರು ಸೇತುವೆಗೂ ಹೊಸ ಬಣ್ಣ ಲೇಪನ ಮಾಡಲಾಗಿತ್ತು. ಇದೆಲ್ಲಾ ಪ್ರಧಾನಿ ಮೋದಿಯನ್ನು ಮೆಚ್ಚಿಸಲು ಹೀಗೆ ರಸ್ತೆಗಳನ್ನು ಏಕಾಏಕಿ ನವೀಕರಣಗೊಳಿಸಲಾಗಿತ್ತು.


ರಸ್ತೆ ಮೂಲಕ ಬರದ ಪ್ರಧಾನಿ

ಹೀಗಿರುವಾಗಲೇ ಪ್ರಧಾನಿ ಮೋದಿ ಅವರ ಕಾರ್ಯಕ್ರಮ ಹಾಗೂ ಆಗಮಿಸುವ ಹಾದಿ ಕೊನೆಯ ಕ್ಷಣದಲ್ಲಿ ಬದಲಾಗಿತ್ತು. ಪಿಎಂ ಮೋದಿ ರಸ್ತೆ ಮೂಲಕ ಪ್ರಯಾಣ ಕೈಗೊಳ್ಳದೇ, ವಿಮಾನ ನಿಲ್ದಾಣದಿಂದ ಎನ್‌ಎಂಪಿಟಿ/ಗೋಲ್ಡ್‌ಫಿಂಚ್ ಸಿಟಿ ಮೈದಾನಕ್ಕೆ ಹೆಲಿಕಾಪ್ಟರ್ ಮೂಲಕ ತಲುಪಿದ್ದರು. ಹೀಗಿರುವಾಗ ನಾಗರಿಕರು/ವಾಹನ ಚಾಲಕರು ಮಾತ್ರ ಬಹಳ ಖುಷಿಯಾಗಿದ್ದರು. ಪಿಎಂ ಮೋದಿ ಆಗಮಿಸುತ್ತಾರೆಂಬ ಕಾರಣದಿಂದಾರೂ ರಸ್ತೆ ಗುಂಡಿಗಳು ಮುಚ್ಚಿದ್ದಾರೆಂದು ಸಂಸತಪಟ್ಟಿದ್ದರು. ಆದರೀಗ ಈ ಖುಷಿ ಹೆಚ್ಚು ದಿನ ಬಾಳಿಕೆ ಬಂದಿಲ್ಲ ಎಂಬುವುದು ವಾಸ್ತವ.ಸಾಮಾಜಿಕ ಜಾಲತಾಣಗಳಲ್ಲೂ ಭಾರೀ ಚರ್ಚೆಯಾಗಿತ್ತು ಈ ವಿಚಾರ

ರಸ್ತೆ ಗುಂಡಿ ಸಮಸ್ಯೆಗಳು ಸಾಮಾನ್ಯವಾಗಿ ಇಷ್ಟು ಬೇಗ ಪರಿಹಾರ ಕಾಣುವುದು ಬಹಳ ವಿರಳ. ಹೀಗಾಗಿ ಈ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡಿತ್ತು. ಮೋದಿ ಆಗಮನದಿಂದ ಸಮಸ್ಯೆಯೊಂದು ಇಷ್ಟು ಬೇಗ ಬಗೆಹರಿಯುತ್ತದೆಯಾದರೆ ಮೋದಿ ಇಲ್ಲಿಗೆ ಪದೇ ಪದೇ ಬರುತ್ತಿರಲಿ. ಏನಿಲ್ಲವೆಂದರೂ ಈ ರಸ್ತೆ ಮತ್ತೆ ಮೂರು ತಿಂಗಳಲ್ಲಿ ಹದಗೆಡಲಿದೆ, ಹೀಗಾಗಿ ಕನಿಷ್ಠ ಪಕ್ಷ ಮೂರು ತಿಂಗಹಳಿಗೊಮ್ಮೆಯಾದರೂ ಬರಲಿ ಎಂದು ಅನೇಕರು ಟ್ವೀಟ್​ ಮಾಡಿದ್ದರು. ಆದರೀಗ ಈ ಮೂರು ತಿಂಗಳ ಗಡುವಿನ ಮೊದಲೇ ರಸ್ತೆ ಹದಗೆಟ್ಟಿದೆ.


ಹತ್ತೇ ದಿನದಲ್ಲಿ ಮತ್ತೆ ರಸ್ತೆಗಳಲ್ಲಿ ಗುಂಡಿ

ಪ್ರಧಾನಿ ಮೋದಿ ಕರಾವಳಿ ಜಿಲ್ಲೆಗೆ ಬಂದು ಹತ್ತು ದಿನಗಳಾಗುವಷ್ಟರಲ್ಲೇ ಮತ್ತೆ ರಸ್ತೆಗಳಲ್ಲಿ ಗುಂಡಿಗಳು ಕಾಣಿಸಲಾರಂಭಿಸಿದೆ. ಹಾಕಲಾಗಿದ್ದ ಡಾಂಬರ್​ ಅಲ್ಲಲ್ಲಿ ಕಿತ್ತು ಬಂದಿದ್ದು, ಮತ್ತೆ ರಸ್ತೆಯಲ್ಲಿ ಓಡಾಡಲು ಪ್ರಯಾಣಿಕರು ಹರಸಾಹಸ ಪಡುತ್ತಿದ್ದಾರೆ. ಹೀಗಾಗಿ ಕಳಪೆ ಕಾಮಗಾರಿ ವಿಚಾರವಾಗಿ ಸಾರ್ವಜನಿಕರಲ್ಲಿ ಮತ್ತೆ ಅಸಮಾಧಾನ ಮನೆ ಮಾಡಿದೆ.

ಕಳಪೆ ಕಾಮಗಾರಿಯಿಂದ ಮತ್ತೆ ಸಮಸ್ಯೆ

ಗುಂಡಿಗಳನ್ನು ತುಂಬುವಲ್ಲಿ ಪಾರದರ್ಶಕತೆ ಮತ್ತು ಹೊಣೆಗಾರಿಕೆ ಇಲ್ಲದಿರುವುದರಿಂದ ಸಾರ್ವಜನಿಕರು ಇಂತಹ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂದು ಹೋರಾಟಗಾರ ಎಂ ಜಿ ಹೆಗಡೆ ಹೇಳಿದ್ದಾರೆ. ಹೊಸದಾಗಿ ಡಾಂಬರೀಕರಣಗೊಂಡ ರಸ್ತೆ ಕೇವಲ ಒಂದು ವಾರದ ಅವಧಿಯಲ್ಲೇ ಹಾಳಾಗಿದ್ದು, ರಸ್ತೆ ದುರಸ್ತಿಗೆ ವ್ಯಯಿಸಿದ ಹಣವೆಲ್ಲ ಚರಂಡಿ ಪಾಲಾಗಿದೆ ಎಂದು ಆರೋಪಿಸಿದ್ದಾರೆ.

ಇದನ್ನೂ ಓದಿ: PM Modi in Mangaluru: ಮಂಗಳೂರಿಗೆ ಪಿಎಂ ಮೋದಿ ಕೊಟ್ಟಿದ್ದೇನು? ಇಲ್ಲಿದೆ ನೋಡಿ

ಶೀಘ್ರದಲ್ಲೇ ಪರಿಹಾರ

ಆದಾಗ್ಯೂ, ನವಮಂಗಳೂರು ಬಂದರಿನಿಂದ ಪ್ರಧಾನಿಯವರ ಸಾರ್ವಜನಿಕ ಕಾರ್ಯಕ್ರಮ ನಡೆಯುವ ಸ್ಥಳದವರೆಗೆ ತಾತ್ಕಾಲಿಕ ರಸ್ತೆ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ಎನ್‌ಎಚ್‌ಎಐ ಯೋಜನಾ ನಿರ್ದೇಶಕ ಲಿಂಗೇಗೌಡ ತಿಳಿಸಿದ್ದಾರೆ. ಗುಂಡಿಗಳನ್ನು ಪರಿಶೀಲಿಸಿ ಕ್ರಮ ಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿದ್ದಾರೆ.
Published by:Precilla Olivia Dias
First published: