Murudeshwaraದ ಶಿವನ ಮೇಲೆ ISIS ಕರಿನೆರಳು: ಹೆಚ್ಚಿನ ಭದ್ರತೆ, ಸಮುದ್ರದಲ್ಲಿ ಪೋಲಿಸರ ಗಸ್ತು

ಉತ್ತರ ಕನ್ನಡ ಜಿಲ್ಲೆಯ ಮುರುಡೇಶ್ವರಕ್ಕೆ ಈಗ ಹೆಚ್ಚಿನ ಪೋಲಿಸ್ ಭದ್ರತೆ ಒದಗಿಸಲಾಗಿದೆ. ಐಸಿಸ್ ಮ್ಯಾಗ್ ಜಿನ್ ನಲ್ಲಿ ಶಿರಚ್ಛೇದವಾದ ಈಶ್ವರನ ಬೃಹತ್ ಮೂರ್ತಿಯ ಫೋಟೋ ಹರಿದಾಡಿ ಸಾಕಷ್ಟು ಆತಂಕ ಸೃಷ್ಟಿಸಿದ ‌ಬೆನ್ನಲ್ಲೆ ಭದ್ರತೆ ನೀಡಲಾಗಿದೆ.

ಮುರುಡೇಶ್ವರದಲ್ಲಿ ಹೆಚ್ಚಿನ ಭದ್ರತೆ

ಮುರುಡೇಶ್ವರದಲ್ಲಿ ಹೆಚ್ಚಿನ ಭದ್ರತೆ

  • Share this:
ಕಾರವಾರ: ವಿಶ್ವ ಪ್ರಸಿದ್ದ ಧಾರ್ಮಿಕ (Religious Palce) ಮತ್ತು ಪ್ರವಾಸಿ ತಾಣವಾದ ಮುರ್ಡೇಶ್ವರದ (Murudeshwara) ಮೇಲೆ ಐಸಿಸ್ (ISIS) ಉಗ್ರ ಸಂಘಟನೆ ಕಣ್ಣು ಬಿದ್ದಿರುವ ಶಂಕೆಯ ಮೇಲೆ  ಬಿಗಿ ಭದ್ರತೆ (Tight Security) ಕಲ್ಪಿಸಲಾಗಿದೆ.  ಕೆಲ ದಿನಗಳ ಹಿಂದಿನಿಂದ ಇಲ್ಲಿನ ಬೃಹತ್ ಶಿವನ ವಿಗ್ರಹ ವಿರೂಪಗೊಳಿಸಿದ ಪೋಟೋ ವೈರಲ್ ಆಗಿದ್ದರಿಂದ ಸರ್ಕಾರ ಎಚ್ಚೆತ್ತುಕೊಂಡಿದೆ.  ಧಾರ್ಮಿಕ ಭಾವನೆಗೆ ಧಕ್ಕೆ ತಂದ ಕುಚೋದ್ಯರನ್ನ ಬಂಧಿಸಬೇಕೆಂದು ಆಗ್ರಹಿಸಿ ಬಿಜೆಪಿ ಕಾರ್ಯಕರ್ತರು, ಹಿಂದೂ ಪರ ಸಂಘಟನೆ ಕಾರ್ಯಕರ್ತರು  ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಏನಿದು ಘಟನೆ?

ಉತ್ತರ ಕನ್ನಡ ಜಿಲ್ಲೆಯ ಮುರುಡೇಶ್ವರಕ್ಕೆ ಈಗ ಹೆಚ್ಚಿನ ಪೋಲಿಸ್ ಭದ್ರತೆ ಒದಗಿಸಲಾಗಿದೆ. ಐಸಿಸ್ ಮ್ಯಾಗ್ ಜಿನ್ ನಲ್ಲಿ ಶಿರಚ್ಛೇದ ವಾದ ಈಶ್ವರನ ಬೃಹತ್ ಮೂರ್ತಿಯನ್ನ ಹರಿದಾಡಿ ಸಾಕಷ್ಟು ಆತಂಕ ಸೃಷ್ಟಿಸಿದ ‌ಬೆನ್ನಲ್ಲೆ ಭದ್ರತೆ ನೀಡಲಾಗಿದೆ. ಮುರುಡೇಶ್ವರ ದಲ್ಲಿ ಹಿಂದುಪರ ಸಂಘಟನೆಯಿಂದ ಉಗ್ರ ಸಂಘಟನೆ ವಿರುದ್ದ ಪ್ರತಿಭಟನೆ ಕೂಡಾ ನಡೆಯುತ್ತಿದೆ. ವಿಕೃತಿ ಎಸಗಿದವರ ವಿರುದ್ದ ಕೇಂದ್ರ ಸರಕಾರ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಬೇಕು ಎಂಬ ಕೂಗು ಆಕ್ರೋಶ ಜೋರಾಗಿದೆ. ಇನ್ನು ಮುರುಡೇಶ್ವರದಲ್ಲಿ ಹೆಚ್ಚಿನ ಪೋಲಿಸ್ ಭದ್ರತೆ ಯನ್ನ‌ ಒದಗಿಸಲಾಗಿದೆ ಜತೆಗೆ ಸಮುದ್ರದಲ್ಲಿ ಕರಾವಳಿ ಕಾವಲು ಪಡೆಯಿಂದ ನಿರಂತರ ಗಸ್ತು ನಡೆಯುತ್ತಿದೆ. ನಿನ್ನೆಯಿಂದ ಮುರುಡೇಶ್ವರ ಕ್ಕೆ ಬರುವ ಪ್ರತಿ ಪ್ರವಾಸಿಗರ ವಾಹನವನ್ನ ತಪಾಸಣೆ ಮಾಡಿ ಮುಂದಿನ ಸಂಚಾರಕ್ಕೆ ಅನುವು ನಾಡಿಕೊಡಲಾಗುತ್ತಿದೆ. ಹೀಗೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ವಿಕೃತ ಪೋಟೊ ಸಾಕಷ್ಟು ಆತಂಕ ಸೃಷ್ಟಿಸಿದೆ.

ಐಸಿಸ್ ಮುಖವಾಣಿಯಲ್ಲಿ ಮುರ್ಡೇಶ್ವರದ ಚಿತ್ರ 

ಮುರ್ಡೇಶ್ವರ ಅಂದಾಕ್ಷಣ ನೆನಪಾಗೋದು  ಸುಂದರ ಪ್ರವಾಸಿ ತಾಣ, ಇನ್ನೊಂದೆಡೆ ಬೃಹತ್ ಶಿವನ ವಿಗ್ರಹ, ರಾಜಗೋಪುರ. ಪ್ರತಿನಿತ್ಯ ಇಲ್ಲಿಗೆ ಸಾವಿರಾರು ಜನ ಪ್ರವಾಸಿಗರು ಬರ್ತಾರೆ. ಅಲ್ಲದೇ ಮಾತೋಬಾರ ಶ್ರೀ ಮುರಡೇಶ್ವರ ದೇವಾಲಯಕ್ಕೆ ಸಾಕಷ್ಟು ಸಂಖ್ಯೆಯಲ್ಲಿ ಭಕ್ತರು ಆಗಮಿಸ್ತಾರೆ.  ವಿಶ್ವ ಪ್ರಸಿದ್ದವಾಗಿರುವ ಈ ಕ್ಷೇತ್ರದ ಮೇಲೆ ಐಸಿಸ್ ಉಗ್ರ ಸಂಘಟನೆ ಕಾಕ ದೃಷ್ಟಿ ಬಿದ್ದಿರುವ ಅನುಮಾನ ಮೂಡಿದೆ. ಇಲ್ಲಿರುವ ಶಿವನ ಪ್ರತಿಮೆಯ ಪೋಟೋವನ್ನ ವಿರೂಪಗೊಳಿಸಿ ಸಾಮಾಜಿಕ ಜಾಲ ತಾಣದಲ್ಲಿ ಹರಿಬಿಟ್ಟಿರುವುದು ಆತಂಕಕ್ಕೆ ಕಾರಣವಾಗಿದೆ.  ಐಸಿಸ್ ಮುಖವಾಣಿ ದಿ ವೈಸ್ ಆಪ್ ಹಿಂದ್ ನಲ್ಲಿ  ಈ ರೀತಿಯಾಗಿ ಪ್ರಕಟವಾಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹರಿದಾಡತ್ತಿದೆ. ಈ ಹಿನ್ನಲೆಯಲ್ಲಿ  ರಾಜ್ಯ ಗೃಹ ಇಲಾಖೆ ಸೂಚನೆ ಮೇರೆಗೆ  ಮುರ್ಡೇಶ್ವರಕ್ಕೆ ಬಿಗಿ ಭದ್ರತೆ ಕಲ್ಪಿಸಲಾಗಿದೆ. ಮುರ್ಡೇಶ್ವರ ಆಸುಪಾಸಿನ ಪ್ರದೇಶಗಳಲ್ಲಿ  ಪೊಲೀಸರನ್ನ ನಿಯೋಜಿಸಲಾಗಿದೆ.

ಇದನ್ನೂ ಓದಿ: ಚಾಮುಂಡಿ ಬೆಟ್ಟಕ್ಕೆ ನಿಮ್ಮ ಯೋಜನೆ ಬೇಡ; ಪ್ರಧಾನಿ ಮೋದಿಗೆ ಸಾಹಿತಿ SL Bhyrappa ಪತ್ರ..ಕಾರಣವೇನು?

ಶಿವನ ಫೋಟೋ ವಿರೂಪಗೊಳಿಸಿ ವಿಕೃತಿ 

ಮುರ್ಡೇಶ್ವರದ ಪ್ರವೇಶ ದ್ವಾರ, ರಾಜಗೋಪುರ, ಶಿವನ ಪ್ರತಿಮೆ ಇರುವ ಸ್ಥಳಗಳಲ್ಲಿ ಹೆಚ್ಚಿನ ಪೊಲೀಸರನ್ನ ನಿಯೋಜಿಸಲಾಗಿದೆ. ದೇವಾಲಯಕ್ಕೆ ಆಗಮಿಸುವ ಪ್ರವಾಸಿಗರನ್ನ ತಪಾಸಣೆ ಮಾಡಲಾಗುತ್ತಿದೆ. ಶಿವನ ಪೋಟೋ ವಿರೂಪಗೊಳಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿರೋದಕ್ಕೆ ಹಿಂದು ಸಂಘಟನೆ ಕಾರ್ಯಕರ್ತರು ಆಕ್ರೋಶಗೊಂಡಿದ್ದಾರೆ. ಇಂದು ರಾಷ್ಟ್ರೀಯ ಹೆದ್ದಾರಿ 66 ಮುರ್ಡೇಶ್ವರ ಪ್ರವೇಶ ದ್ವಾರದ ಸಮೀಪ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.  ಐಸಿಸ್ ಸಂಘಟನೆ ವಿರುದ್ದ ಆಕ್ರೋಶ ವ್ಯಕ್ತಪಡಿಸಿ ಪ್ರತಿಕ್ರತಿ ದಹಿಸಿದ್ದಾರೆ. ಹಿಂದು ಭಾವನೆಗಳನ್ನ ಕೆರಳಿಸಿ  ಕೃತ್ಯ ಎಸಗುವವರ ಮೇಲೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ. ಈ ಸಂಬಂಧ ಪೊಲೀಸ್ ಅಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ನೀಡಿದ್ದಾರೆ.

ಹಿಂದುಗಳ ಶ್ರದ್ಧಾ ಮತ್ತು ನಂಬಿಕೆಯ ಆರಾಧ್ಯ ದೈವ ಶಿವನ ವಿಗ್ರಹ ವಿರೂಪಗೊಳಿಸಿದ ಪೋಸ್ಟ್ ನಿಂದ ಎಲ್ಲೆಡೆ ಆಕ್ರೋಶ ವ್ಯಕ್ತವಾಗಿದೆ. ಇದರ ಹಿಂದೆ ಯಾರಿದ್ದಾರೆ ಮತ್ತು ಧಾರ್ಮಿಕ ಸ್ಥಳಗಳಿಗೆ ಸಂಚಕಾರ ತರುವ ಹುನ್ನಾರು ಇದೆಯೆ ಎಂಬುದರ ಬಗ್ಗೆ ಸಂಬಂಧಪಟ್ಟ ರಕ್ಷಣಾ ಇಲಾಖೆ ಎಚ್ಚರ ವಹಿಸಬೇಕಾದ ಅವಶ್ಯಕತೆ ಇದೆ.
Published by:Kavya V
First published: