Mangaluru News: ಅಂಚೆ ಪಿಂಚಣಿ ಸಮಸ್ಯೆಗೆ ಇಲ್ಲಿ ಸಿಗುತ್ತೆ ಪರಿಹಾರ

ಅಂಚೆ ಕಚೇರಿ (ಸಾಂದರ್ಭಿಕ ಚಿತ್ರ)

ಅಂಚೆ ಕಚೇರಿ (ಸಾಂದರ್ಭಿಕ ಚಿತ್ರ)

ಮಂಗಳೂರು ಅಂಚೆ ವಿಭಾಗದ ವತಿಯಿಂದ ತ್ರೈಮಾಸಿಕ ಅಂಚೆ ಅದಾಲತ್‌ ಮತ್ತು ಪಿಂಚಣಿದಾರರ ಅದಾಲತ್‌ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

  • News18 Kannada
  • 5-MIN READ
  • Last Updated :
  • Mangalore, India
  • Share this:

ಮಂಗಳೂರು: ಅಂಚೆ ವಿಭಾಗಕ್ಕೆ ಸಂಬಂಧಪಟ್ಟ ದೂರು, ಕುಂದು ಕೊರತೆ ಹಾಗೂ ಪಿಂಚಣಿದಾರರ ಪಿಂಚಣಿ ಸಂಬಂಧಿತ ದೂರುಗಳನ್ನ (Postal Department) ಪರಿಶೀಲಿಸಲೆಂದೇ ಮಂಗಳೂರು ಅಂಚೆ ವಿಭಾಗದ (Mangaluru News)  ವತಿಯಿಂದ ತ್ರೈಮಾಸಿಕ ಅಂಚೆ ಅದಾಲತ್‌ ಮತ್ತು ಪಿಂಚಣಿದಾರರ ಅದಾಲತ್‌ ಕಾರ್ಯಕ್ರಮವನ್ನು ಮೇ 22 ರಂದು ಹಮ್ಮಿಕೊಳ್ಳಲಾಗಿದೆ.


ಎಲ್ಲಿ ನಡೆಯಲಿದೆ ಅದಾಲತ್?‌
ಅಂಚೆ ಅದಾಲತ್‌ ಕಾರ್ಯಕ್ರಮವು ಮೇ 22ರ ಬೆಳಿಗ್ಗೆ 10.30ರಿಂದ ಮಂಗಳೂರು ನಗರದ ಬಲ್ಮಠದಲ್ಲಿರುವ ಹಿರಿಯ ಅಂಚೆ ಅಧೀಕ್ಷಕರ ಕಚೇರಿಯಲ್ಲಿ ನಡೆಯಲಿದೆ. ಅದೇ ದಿನ ಬೆಳಿಗ್ಗೆ 11.30ಕ್ಕೆ ಅರ್ಧವಾರ್ಷಿಕ ಪಿಂಚಣಿದಾರರ ಅದಾಲತ್‌ ಕೂಡಾ ಕಛೇರಿಯಲ್ಲಿ ನಡೆಯಲಿದೆ.


ಇದನ್ನೂ ಓದಿ: Mangaluru News: ಕ್ಯೂಆರ್‌ ಕೋಡ್‌ ಬಳಸಿ ಪೋಸ್ಟ್‌ ಮ್ಯಾನ್‌ ಮೂಲಕ ನಗದು ಪಡೆಯಿರಿ!




ದೂರುಗಳನ್ನು ವಾಟ್ಸಾಪ್‌ ಮಾಡಿ!
ಸಾರ್ವಜನಿಕರು ಅಂಚೆ ಸಂಬಂಧಿತ ದೂರುಗಳಿದ್ದಲ್ಲಿ ಪತ್ರದ ಮೂಲಕ “ಅಂಚೆ ಅದಾಲತ್/ಪಿಂಚಣಿದಾರರ ಅದಾಲತ್‌” ಎಂದ ತಲೆಬರಹದಡಿ ದಿನಾಂಕ ಮೇ 19ರ ಒಳಗಾಗಿ “ಹಿರಿಯ ಅಂಚೆ ಅಧೀಕ್ಷಕರು, ಮಂಗಳೂರು ವಿಭಾಗ, ಬಲ್ಮಠ, ಮಂಗಳೂರು – 575002” ಈ ವಿಳಾಸಕ್ಕೆ ಬರೆಯಬಹುದಾಗಿದೆ. ಅಥವಾ ವಾಟ್ಸಾಪ್‌ ಸಂಖ್ಯೆ 9448291072 ಗೆ ಸಂದೇಶ ರೂಪದಲ್ಲಿ ನೀಡಬಹುದಾಗಿದೆ.


ಇದನ್ನೂ ಓದಿ: Mangaluru News: ಮಂಗಳೂರಲ್ಲಿ ನಡೆಯಲಿದೆ ಹಲಸು ಹಬ್ಬ, ಇರಲಿದೆ ಹಲವು ವಿಶೇಷತೆ

top videos


    ಯಾವೆಲ್ಲ ಅಂಚೆ ಕಛೇರಿ ಬರುತ್ತೆ?
    ಮಂಗಳೂರು ಅಂಚೆ ವಿಭಾಗ ವ್ಯಾಪ್ತಿಯ ಮಂಗಳೂರು, ಉಳ್ಳಾಲ, ಮುಲ್ಕಿ ತಾಲೂಕು ಹಾಗೂ ಕಾರ್ಕಳ ತಾಲೂಕಿನ ಬೆಳ್ಮಣ್ಣು ಮತ್ತು ಮುಂಡ್ಕೂರು ಅಂಚೆ ಕಛೇರಿಯನ್ನು ಒಳಗೊಂಡಿರುತ್ತದೆ. ಈ ವ್ಯಾಪ್ತಿಗೆ ಬರುವವರು ಮಾತ್ರ ದೂರು ಸಲ್ಲಿಸಬಹುದಾಗಿದೆ.

    First published: