ಮಂಗಳೂರು ಗಲಭೆಯ ಆಯ್ದ ವಿಡಿಯೋಗಳನ್ನು ತಮಗೆ ಬೇಕಾದಂತೆ ಎಡಿಟ್​ ಮಾಡಿದ್ದಾರೆ; ಪೊಲೀಸ್​ ಆಯುಕ್ತ ಹರ್ಷ ತಿರುಗೇಟು

ಗಲಭೆ ಕುರಿತ ಎಲ್ಲಾ ವಿಡಿಯೋ ಗಳನ್ನು ತನಿಖಾ ಸಂಸ್ಥೆಗಳಿಗೆ ನೀಡಿದ್ದಾರೆ. ಸಿಐಡಿ ಮತ್ತು ಮ್ಯಾಜಿಸ್ಟ್ರೀಯಲ್ ತನಿಖೆ ಬಳಿಕ ಮೂಲ ಸತ್ಯ ಏನೆಂಬುದು  ಬಯಲಾಗಲಿದೆ ಎಂದು ತಿಳಿಸಿದರು. 

Seema.R | news18-kannada
Updated:January 11, 2020, 12:27 PM IST
ಮಂಗಳೂರು ಗಲಭೆಯ ಆಯ್ದ ವಿಡಿಯೋಗಳನ್ನು ತಮಗೆ ಬೇಕಾದಂತೆ ಎಡಿಟ್​ ಮಾಡಿದ್ದಾರೆ; ಪೊಲೀಸ್​ ಆಯುಕ್ತ ಹರ್ಷ ತಿರುಗೇಟು
ಪೊಲೀಸ್​ ಆಯುಕ್ತ ಹರ್ಷ
  • Share this:
ಮಂಗಳೂರು (ಜ.114): ಮಂಗಳೂರು ಹಿಂಸಾಚಾರ ಕುರಿತು ಕೆಲವರಿಂದ ಆಯ್ದ ವಿಡಿಯೋ ಬಿಡುಗಡೆ ಮಾಡಲಾಗಿದೆ. ತಮಗೆ ಬೇಕಾದಂತೆ ಎಡಿಟ್​ ಮಾಡಿ ಈ ವಿಡಿಯೋ ಮಾಡಲಾಗಿದೆ. ಗಲಭೆ ಕುರಿತು ಸತ್ಯಾಂಶ ತನಿಖೆಯಿಂದ ತಿಳಿಯಲಿದೆ ಎಂದು ಇಲ್ಲಿನ ಜಿಲ್ಲಾ ಪೊಲೀಸ್​ ಆಯುಕ್ತ ಪಿಎಸ್​ ಹರ್ಷ ಪರೋಕ್ಷವಾಗಿ ಜೆಡಿಎಸ್​ ನಾಯಕ ಕುಮಾರಸ್ವಾಮಿಗೆ ತಿರುಗೇಟು ನೀಡಿದ್ದಾರೆ.

ಮಂಗಳೂರು ಹಿಂಸಾಚಾರದಲ್ಲಿ ಪೊಲೀಸರು ಅಮಾಯಕರ ಮೇಲೆ ದೌರ್ಜನ್ಯ ನಡೆಸಿದ್ದಾರೆ. ಈ ಗಲಭೆಯಲ್ಲಿ ಸರ್ಕಾರ ಬಹುದೊಡ್ಡ ನಾಟಕವಾಡಿದೆ. ಸರ್ಕಾರ ಬಿಡುಗಡೆ ಮಾಡಿರುವ ವಿಡಿಯೋ ಅಸಲಿಯಲ್ಲ ಎಂದು ಆರೋಪಿಸಿ ಶುಕ್ರವಾರ ಮಾಜಿ ಸಿಎಂ ಎಚ್​ಡಿಕೆ ಹೊಸ ವಿಡಿಯೋ ತುಣುಕುಗಳನ್ನು ಬಿಡುಗಡೆ ಮಾಡಿದ್ದರು.

ಈ ಕುರಿತು ಇಂದು ಪ್ರತಿಕ್ರಿಯಿಸಿರುವ ಜಿಲ್ಲಾ ಪೊಲೀಸ್​ ಆಯುಕ್ತರು, ಪೊಲೀಸರು ಗಲಭೆಯನ್ನು ನಿಯಂತ್ರಿಸಿದ್ದಾರೆ. ಡಿ.19 ರಂದು  ನಡೆದ ಗಲಭೆಯಲ್ಲಿ ಆರೋಪಿಗಳ ಪತ್ತೆಗೆ ವಿಡಿಯೋ ಬಿಡುಗಡೆ ಮಾಡಲಾಗಿದೆ ಎಂದರು.

ಪೊಲೀಸರು ಗಲಭೆ ಕುರಿತ ಎಲ್ಲಾ ವಿಡಿಯೋ ಗಳನ್ನು ತನಿಖಾ ಸಂಸ್ಥೆಗಳಿಗೆ ನೀಡಿದ್ದಾರೆ. ಸಿಐಡಿ ಮತ್ತು ಮ್ಯಾಜಿಸ್ಟ್ರೀಯಲ್ ತನಿಖೆ ಬಳಿಕ ಮೂಲ ಸತ್ಯ ಏನೆಂಬುದು  ಬಯಲಾಗಲಿದೆ ಎಂದು ತಿಳಿಸಿದರು.

ಇದನ್ನು ಓದಿ: ಮಂಗಳೂರು ಗಲಭೆಯಲ್ಲಿ ಪೊಲೀಸರ ದೌರ್ಜನ್ಯದ ಹೊಸ ವಿಡಿಯೋ ಬಿಡುಗಡೆ ಮಾಡಿದ ಮಾಜಿ ಸಿಎಂ ಎಚ್​ಡಿಕೆ

ಇನ್ನು ವಿಡಿಯೋ ಕುರಿತು ನಿನ್ನೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ಕುಮಾರಸ್ವಾಮಿ, ಪ್ರಕರಣದಲ್ಲಿ ಪೊಲೀಸ್ ಅಧಿಕಾರಿ ಹರ್ಷ ನಡೆಯೇ ಅನುಮಾನಾಸ್ಪದ. ಘಟನೆ ಕುರಿತು ಕಲೆ ಹಾಕಿದ್ದೇನೆ. ಘಟನೆಯಲ್ಲಿ ಪೊಲೀಸರ ವರ್ತನೆ ಸ್ಪಷ್ಟವಾಗಿದೆ. ಹಿಂಸಾಚಾರಕ್ಕೆ ಪೊಲೀಸರಿಂದಲೇ ಪ್ರಚೋದನೆ ನೀಡಲಾಗಿದೆ. ಈ ಕೂಡಲೇ ಜಿಲ್ಲಾ ಪೊಲೀಸ್​ ಅಧಿಕಾರಿ ಹರ್ಷ ಅಮಾನತು ಮಾಡಬೇಕು ಎಂದು ಆಗ್ರಹಿಸಿದರು.
Published by: Seema R
First published: January 11, 2020, 12:27 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading