HOME » NEWS » State » MANGALORE POLICE ARRESTED THE MANGALURU BOMB ACCUSED TODAY MORNING IN BANGALORE RMD

ಮಂಗಳೂರು ಬಾಂಬ್​ ಪತ್ತೆ ಪ್ರಕರಣ; ಆರೋಪಿ ಆದಿತ್ಯ ರಾವ್​ ಪೊಲೀಸರಿಗೆ ಶರಣು

ಸೋಮವಾರ ಬೆಳಗ್ಗೆ 7 ರಿಂದ 8 ಗಂಟೆ ಸಂದರ್ಭದಲ್ಲಿ ವಿಮಾನ ನಿಲ್ದಾಣಕ್ಕೆ ಆಟೋ ಮೂಲಕ ವ್ಯಕ್ತಿಯೋರ್ವ ಬಂದಿದ್ದ . ಈ ವೇಳೆ ಬಾಂಬ್ ಇದ್ದ ಲ್ಯಾಪ್​ಟಾಪ್​ ಬ್ಯಾಗ್ ಅನ್ನು ವಿಮಾನ ನಿಲ್ದಾಣದಲ್ಲೇ ಬಿಟ್ಟು ಹೋಗಿದ್ದ. ಆದರೆ, ಈ ಬ್ಯಾಗ್​ನಲ್ಲಿ ಸಜೀವ ಬಾಂಬ್ ಇರುವುದು ನಂತರ ಪತ್ತೆಯಾಗಿದೆ.

news18-kannada
Updated:January 22, 2020, 9:48 AM IST
ಮಂಗಳೂರು ಬಾಂಬ್​ ಪತ್ತೆ ಪ್ರಕರಣ; ಆರೋಪಿ ಆದಿತ್ಯ ರಾವ್​ ಪೊಲೀಸರಿಗೆ ಶರಣು
ಆದಿತ್ಯ ರಾವ್​
  • Share this:
ಬೆಂಗಳೂರು (ಜ.22): ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ಮಂಗಳೂರು ವಿಮಾನ ನಿಲ್ದಾಣದ ಬಾಂಬ್​ ಪತ್ತೆ ಪ್ರಕರಣದ ಆರೋಪಿ ಆದಿತ್ಯ ರಾವ್ ಎಂಬಾತ ಪೊಲೀಸರಿಗೆ ಶರಣಾಗಿದ್ದಾನೆ. ಆದಿತ್ಯ ರಾವ್​ ಉಡುಪಿ ಮೂಲದ ವ್ಯಕ್ತಿ ಎಂದು ತಿಳಿದು ಬಂದಿದೆ.

ಶಂಕಿತನ ಜಾಡು ಹಿಡಿದ ಪೊಲೀಸರು ಉಡುಪಿ ಮನೆಯನ್ನು ಶೋಧಿಸಿದ್ದರು. ಮನೆಯಲ್ಲಿದ್ದವರನ್ನು ವಿಚಾರಣೆ ಮಾಡಿದ್ದರು. ಪ್ರಕರಣದಲ್ಲಿ  ಆದಿತ್ಯ ರಾವ್ ಕೈವಾಡದ ಬಗ್ಗೆ ಪ್ರಶ್ನೆ ಮಾಡಲಾಗಿತ್ತು. ಈಗ ಬೆಂಗಳೂರಿಗೆ ಬಂದು ಆದಿತ್ಯ ರಾವ್ ಶರಣಾಗಿದ್ದಾನೆ. ಶರಣಾದ ಬಳಿಕ ಆತನನ್ನು ಖಾಕಿ ಪಡೆ ಬಂಧಿಸಿದೆ.

ಬೆಂಗಳೂರು ಡಿಜಿ ಕಚೇರಿಗೆ ಹೋಗಿ ನಾನೇ ಆದಿತ್ಯರಾವ್ ಅಂತ ಹೇಳಿಕೊಂಡಿದ್ದ. ತಕ್ಷಣ ಹೊಯ್ಸಳ ವಾಹನದಲ್ಲಿ ಹಲಸೂರು ಗೇಟ್ ಪೊಲೀಸ್ ಠಾಣೆಗೆ ಈತನನ್ನು ಕರೆತರಲಾಗಿತ್ತು. ಠಾಣೆಗೆ ಬಂಂದ ಇನ್ಸ್​ಪೆಕ್ಟರ್ ಹರಿವರ್ಧನ್, ಆದಿತ್ಯರಾವ್ ವಿಚಾರಣೆ ಮಾಡಿದ್ದಾರೆ.

ಸೋಮವಾರ ಮಂಗಳೂರು ಏರ್​ಪೋರ್ಟ್​ನಲ್ಲಿ ಸಜೀವ ಬಾಂಬ್ ಪತ್ತೆಯಾಗಿತ್ತು. ಈ ಕಾರಣ ವಿಮಾನಗಳ ಹಾರಾಟದಲ್ಲಿ ಕೆಲ ಕಾಲ ವ್ಯತ್ಯಯ ಉಂಟಾಗಿತ್ತು.  ಬೆಳಗ್ಗೆ 7 ರಿಂದ 8 ಗಂಟೆ ಸಂದರ್ಭದಲ್ಲಿ ವಿಮಾನ ನಿಲ್ದಾಣಕ್ಕೆ ಆಟೋ ಮೂಲಕ ವ್ಯಕ್ತಿಯೋರ್ವ ಬಂದಿದ್ದ . ಈ ವೇಳೆ ಬಾಂಬ್ ಇದ್ದ ಲ್ಯಾಪ್​ಟಾಪ್​ ಬ್ಯಾಗ್ ಅನ್ನು ವಿಮಾನ ನಿಲ್ದಾಣದಲ್ಲೇ ಬಿಟ್ಟು ಹೋಗಿದ್ದ. ಆದರೆ, ಈ ಬ್ಯಾಗ್​ನಲ್ಲಿ ಸಜೀವ ಬಾಂಬ್ ಇರುವುದು ನಂತರ ಪತ್ತೆಯಾಗಿದೆ. ಹೀಗಾಗಿ ಕೆಲ ಕಾಲ ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. ನಂತರ ಈ ಬಾಂಬ್​ಅನ್ನು ಖಾಲಿ ಪ್ರದೇಶದಲ್ಲಿ ನಿಷ್ಕ್ರಿಯಗೊಳಿಸಿದ್ದರು.

 
Youtube Video
First published: January 22, 2020, 9:09 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories