news18-kannada Updated:January 21, 2021, 7:06 PM IST
ದಿಟ್ಟತನ ಪ್ರದರ್ಶಿಸಿದ ಯುವತಿಗೆ ಸನ್ಮಾನ
ಮಂಗಳೂರು (ಜ. 21): ಬಸ್ನಲ್ಲಿ ಯುವತಿಗೆ ದೈಹಿಕ ಕಿರುಕುಳ ನೀಡಿದ್ದ. ಈ ಕುರಿತು ಯುವತಿ ಕಾಮುಕನ ಫೋಟೋ ತೆಗೆದು ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಳು. ಯುವತಿಯ ಈ ಪೋಸ್ಟ್ ವೈರಲ್ ಆಗುತ್ತಿದಂತೆಯೇ ಕಾರ್ಯಪೃವೃತ್ತರಾದ ಮಂಗಳೂರಿನ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಕಾಸರಗೋಡುವಿನ ಕುಂಬಳೆಯ ನಿವಾಸಿ ಹುಸೈನ್ ಬಂಧಿತ ಆರೋಪಿ. ಕೂಲಿ ಕೆಲಸ ಮಾಡುತ್ತಿದ್ದ ಹುಸೈನ್ ಬಸ್ನಲ್ಲಿ ಪ್ರಯಾಣಿಸುತ್ತಿದ್ದ ಯುವತಿಯರಿಗೆ ಕಿರುಕುಳ ನೀಡುತ್ತಿದ್ದ ಎಂಬುದು ವಿಚಾರಣೆ ವೇಳೆ ಬಯಲಾಗಿದೆ. ಇನ್ನು ಯುವತಿಗೆ ಕಿರುಕುಳ ನೀಡಿದ ಸಂದರ್ಭದಲ್ಲಿ ಯಾವುದೇ ಯುವತಿಯ ದಿಟ್ಟ ಕ್ರಮಕ್ಕೆ ನಗರ ಪೊಲೀಸ್ ಕಮಿಷನರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಯುವತಿಗೆ ಇಲಾಖೆ ವತಿಯಿಂದ ಸನ್ಮಾನ ಮಾಡಿ, ಅಭಿನಂಧಿಸಿದ್ದಾರ. ಬಳಿಕ ಮಾಧ್ಯಮದ ಜೊತೆ ಮಾತನಾಡಿದ ಯುವತಿ ಕಿರುಕುಳ ವಾಗುತ್ತಿದ್ದರೂ ಸುಮ್ಮನಿದ್ದ ಜನರ ಮೇಲೆ ಬೇಸರ ವ್ಯಕ್ತಪಡಿಸಿದ್ದಾರೆ. ಕಿರುಕುಳ ನೀಡುವ ಕಾಮುಕರ ವಿರುದ್ಧ ಧೈರ್ಯದಿಂದ ಹೋರಾಡುವಂತೆ ಕರೆ ನೀಡಿದ್ದಾರೆ.
ಏನಿದು ಘಟನೆ:ಜನವರಿ 14 ರಂದು ಮಂಗಳೂರಿನಿಂದ ದೇರಳಕಟ್ಟೆಗೆ ಸಂಚರಿಸುವ ಖಾಸಗಿ ಬಸ್ ನಲ್ಲಿ ಯುವತಿಗೆ ಈ ಕಾಮುಕ ದೈಹಿಕ ಕಿರುಕುಳ ನೀಡಿದ್ದ. ಈ ವೇಳೆ ಈ ಕಾಮುಕನಿಗೆ ಯುವತಿ ಎಚ್ಚರಿಕೆ ನೀಡಿದ್ದರೂ ಮತ್ತೆ ಮತ್ತೆ ಕಿರುಕುಳ ನೀಡಲಾರಂಭಿಸಿದ. ಹತ್ತಾರು ಜನರ ಎದುರೇ ದೌರ್ಜನ್ಯವಾಗುತ್ತಿದ್ದರೂ ಜನರು ಕುರುಡಾಗಿದ್ದು ಆಕೆಯ ಸಹಾಯಕ್ಕೆ ಬರಲಿಲ್ಲ. ಈ ವೇಳೆ ಈತನ ಫೋಟೋ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹಾಕುವುದಾಗಿ ಯುವತಿ ಎಚ್ಚರಿಸಿದಳು. ಇದಕ್ಕೂ ಜಗ್ಗದ್ದ ಈ ಕಾಮುಕ ಮಾಸ್ಕ್ ತೆಗೆದು ಫೋಟೋಗೆ ಫೋಸ್ ನೀಡಿದ್ದ.
ಈ ಘಟನೆ ಕುರಿತು ಯುವತಿ ಸಾಮಾಜಿಕ ಜಾಲತಾಣದಲ್ಲಿ ಸವಿವರವಾಗಿ ಬರೆದು ಪೋಸ್ಟ್ ಮಾಡಿದ್ದಳು. ಈ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಇದರಿಂದ ಮಂಗಳೂರು ಪೊಲೀಸ್ ಕಮಿಷನರ್ ಶಶಿಕುಮಾರ್ ಗಮನಕ್ಕೆ ಕೂಡ ಬಂದಿತ್ತು. ಈ ಪ್ರಕರಣ ಗೊತ್ತಾಗುತ್ತಿದ್ದಂತೆ ಪೊಲೀಸರು ಆರೋಪಿ ಪತ್ತೆಗೆ ಮುಂದಾಗಿ, ಬಂಧಿಸುವಲ್ಲಿ ಯಶಸ್ವಿಯಾದರು.
ಪೊಲೀಸರೆದುರು ಕಪಾಳ ಮೋಕ್ಷ ಮಾಡಿದ ಯುವತಿ
ಆರೋಪಿಯನ್ನು ಬಂಧಿಸಿದ ಬಳಿಕ ಆತನ ಗುರುತು ಪತ್ತೆಗಾಗು ಯುವತಿಯನ್ನು ಪೊಲೀಸರು ಕರೆಸಿದ್ದರು. ಈ ವೇಳೆ ಅಂದು ದೌರ್ಜನ್ಯ ನಡೆಸಿ ಪತ್ತೆಯಾಗಿದ್ದ ಕಾಮುಕನಿಗೆ ಯುವತಿ ಪೊಲೀಸರೆದುರು ಕಪಾಳ ಮೋಕ್ಷ ಮಾಡಿ ಮತ್ತೊಮ್ಮೆ ದಿಟ್ಟತನ ಮೆರೆದಳು.
Published by:
Seema R
First published:
January 21, 2021, 7:06 PM IST