ಮಂಗಳೂರು: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು (PM Narendra Modi Australia Visit) ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿದ್ದಾರೆ. ದ್ವಿಪಕ್ಷೀಯ ಸಂಬಂಧ ವಿಚಾರವಾಗಿ ಅವರು ಕಾಂಗರೂ ನಾಡಿಗೆ ತೆರಳಿದ್ದಾರೆ. ಈ ಹಿಂದೆ ರಿಷಬ್ ಶೆಟ್ಟಿ ಅವರ ಭೇಟಿ ವೇಳೆ ಪ್ರಧಾನಿ ಮೋದಿ ʼಕಾಂತಾರʼ ಸಿನೆಮಾ (Kantara Film) ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿದ್ದರು. ಅಷ್ಟೇ ಅಲ್ಲದೇ, ಕಾಂತಾರ ಸಿನೆಮಾದ ವರಾಹರೂಪಂ ಹಾಡಿಗೂ ನರೇಂದ್ರ ಮೋದಿ ಅವರು (PM Modi) ಮೆಚ್ಚುಗೆ ವ್ಯಕ್ತಪಡಿಸಿದ್ದರು. ಇದೀಗ ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ನರೇಂದ್ರ ಮೋದಿ ಅವರಿಗೆ ಮತ್ತೊಮ್ಮೆ ʼಕಾಂತಾರʼ ಹಾಡಿಗೆ ನೃತ್ಯ ನೋಡುವ ಹಾಗೂ ತುಳು ಸಂಸ್ಕೃತಿಯ ಕಣ್ತುಂಬಿಕೊಳ್ಳುವಂತಹ ಅವಕಾಶ ಒದಗಿ ಬಂದಿದೆ.
ಕಾಂಗರೂ ನಾಡಿನಲ್ಲಿ ʼಕಾಂತಾರʼ ವೈಭವ
ಮೇ 23ರ ಬುಧವಾರ ಸಿಡ್ನಿಯಲ್ಲಿ ನರೇಂದ್ರ ಮೋದಿ ಅವರು ಭಾಗವಹಿಸುವ ಕಾರ್ಯಕ್ರಮದಲ್ಲಿ ʼನಾಟ್ಯೋಕ್ತಿʼ ತಂಡವು ಗ್ರೂಪ್ ಡ್ಯಾನ್ಸ್ ಮೂಲಕ ಮನರಂಜಿಸಲಿದೆ.
ಇದನ್ನೂ ಓದಿ: Cobra Bikes In Mangaluru: ಬೀ ಅಲರ್ಟ್! ಈ ಬೈಕ್ಗಳೇ ಟ್ರಾಫಿಕ್ ಸಮಸ್ಯೆಗೆ ರಾಮಬಾಣ
ವಿಶೇಷವಾಗಿ ʼನಾಟ್ಯೋಕ್ತಿʼ ತಂಡವು ಕಾಂತಾರ ಸಿನೆಮಾದ ವರಾಹರೂಪಂ ಹಾಡು ಹಾಗೂ ತುಳು ಜಾನಪದ ʼವಾ ಪೊರ್ಲು ಯಾʼ ಹಾಡಿಗೆ ನೃತ್ಯವನ್ನು ಪ್ರದರ್ಶಿಸಲಿದೆ. ಇದಕ್ಕಾಗಿ ಈ ತಂಡವು ಆಸ್ಟ್ರೇಲಿಯಾದಲ್ಲಿ ತರಬೇತಿ ನಡೆಸುತ್ತಿದೆ.
ತಂಡದಲ್ಲಿ ಮಂಗಳೂರು ಯುವತಿ
ಪ್ರಧಾನಿ ಮುಂದೆ ಪ್ರದರ್ಶನ ನೀಡಲಿರುವ ʼನಾಟ್ಯೋಕ್ತಿʼ ತಂಡದಲ್ಲಿ ಏಕೈಕ ಮಂಗಳೂರಿನ ಯುವತಿ ಇರುವುದು ವಿಶೇಷ. ಮಂಗಳೂರು ನಗರದ ಬಿಜೈ ಕಾಪಿಕಾಡ್ ನಿವಾಸಿ ಅನೀಶಾ ಪೂಜಾರಿ ಈ ತಂಡದಲ್ಲಿದ್ದಾರೆ.
ಇದನ್ನೂ ಓದಿ: Fishing In Mangaluru: ಕರಾವಳಿಯಲ್ಲಿ ಮತ್ಸ್ಯಕ್ಷಾಮ, ಅವಧಿಗೂ ಮುನ್ನವೇ ಲಂಗರು ಹಾಕಿದ ಬೋಟ್ಗಳು
ಪದ್ಮನಾಭ ಪೂಜಾರಿ ಹಾಗೂ ರೂಪಾ ಪದ್ಮನಾಭ ಅವರ ಮಗಳು ಆಗಿರುವ ಇವರು, ಕಳೆದ 6 ವರ್ಷಗಳಿಂದ ಸಿಡ್ನಿಯ ಪ್ರತಿಷ್ಟಿತ ಸಂಸ್ಥೆಯೊಂದರಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅನೀಶಾ ಪೂಜಾರಿ ಎಸ್‌ಡಿಎಂ ಕಾಲೇಜಿನ ಬಿಬಿಎ ಹಾಗೂ ಎಂಬಿಎ ವಿದ್ಯಾರ್ಥಿನಿಯಾಗಿದ್ದರು.
ವರದಿ: ಇರ್ಷಾದ್ ಕಿನ್ನಿಗೋಳಿ, ಮಂಗಳೂರು
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ