ಕುಕ್ಕೆ ಸುಬ್ರಹ್ಮಣ್ಯದಲ್ಲಿ ಮೊಸಳೆ ಮರಿ ಪತ್ತೆ; ಸ್ಥಳೀಯರಲ್ಲಿ ಆತಂಕ

ಈ ಹಿಂದೆಯೂ ಕುಮಾರಧಾರಾ ನದಿಯಲ್ಲಿ ಮೊಸಳೆಗಳು ಇರುವ ಬಗ್ಗೆ ಸುದ್ದಿಗಳು ಹರಿದಾಡುತ್ತಿದ್ದು, ಇದೀಗ ಮೊಸಳೆಗಳ ಇರುವಿಕೆಗೆ ಸಾಕ್ಷಿಯೂ ದೊರೆತಂತಾಗಿದೆ. 

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ದಕ್ಷಿಣ ಕನ್ನಡ (ಜೂ. 29): ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದ ಸಮೀಪ ಇರುವ ಪೆಟ್ರೋಲ್ ಬಂಕ್ ಸಮೀಪ ಮೊಸಳೆ ಮರಿಯೊಂದು ಪತ್ತೆಯಾಗಿರುವುದು ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ. ಪೆಟ್ರೋಲ್ ಬಂಕ್​ನ ಅಣತಿ ದೂರದಲ್ಲೇ ಕುಮಾರಧಾರಾ ನದಿ ಹರಿಯುತ್ತಿದ್ದು, ನದಿಯಿಂದಲೇ ಮೊಸಳೆ ಮರಿ ಪೆಟ್ರೋಲ್ ಬಂಕ್ ಬಳಿ ಬಂದಿರಬಹುದು ಎನ್ನುವ ಅನುಮಾನವಿದೆ.

ಮಳೆಗಾಲದ ಸಂದರ್ಭದಲ್ಲಿ ಕುಮಾರಧಾರಾ ನದಿ ತುಂಬಿ ಹರಿಯಲಾರಂಭಿಸುತ್ತಿದ್ದು, ಇದರಿಂದಾಗಿ ನದಿಯಲ್ಲಿ ಇರುವ ಮೊಸಳೆಗಳು ದಡ ಸೇರುತ್ತಿದೆ. ಮರಿ ಪತ್ತೆಯಾದ ಹಿನ್ನೆಲೆಯಲ್ಲಿ ಇನ್ನೂ ಹಲವು ಮೊಸಳೆಗಳು ದಡಕ್ಕೆ ಬಂದಿರುವ ಸಾಧ್ಯತೆಯಿದೆ. ಈ ಕಾರಣದಿಂದ ಸಾರ್ವಜನಿಕರಲ್ಲಿ ಇದೀಗ ಆತಂಕ ಮನೆ ಮಾಡಿದೆ. ಮೊಸಳೆ ಮರಿ ಗಮನಕ್ಕೆ ಬಂದ ತಕ್ಷಣವೇ ಸ್ಥಳೀಯರು ಈ ವಿಚಾರವನ್ನು ಅರಣ್ಯ ಇಲಾಖೆಯ ಗಮನಕ್ಕೆ ತಂದಿದ್ದಾರೆ. ಆದರೆ, ಸಿಬ್ಬಂದಿಗಳು ಬರುವ ಸಂದರ್ಭದಲ್ಲಿ ಮೊಸಳೆ ಮರಿ ಕಾಣೆಯಾಗಿದ್ದು, ಇದೀಗ ಮೊಸಳೆಯನ್ನು ಹುಡುಕುವ ಪ್ರಯತ್ನ ನಡೆಸುತ್ತಿದ್ದಾರೆ.

Crocodile Found in Kukke Subrahmanya.
ಸುಬ್ರಹ್ಮಣ್ಯದಲ್ಲಿ ಪತ್ತೆಯಾದ ಮೊಸಳೆ


ಇದನ್ನೂ ಓದಿ: ಮಳೆಯಿಂದ ಮಲೆನಾಡು, ಕರಾವಳಿಯಲ್ಲಿ ಆರೆಂಜ್ ಅಲರ್ಟ್​; ಕರ್ನಾಟಕದ ಜಲಾಶಯಗಳ ಇಂದಿನ ನೀರಿನ ಮಟ್ಟ ಹೀಗಿದೆ

ಈ ಹಿಂದೆಯೂ ಕುಮಾರಧಾರಾ ನದಿಯಲ್ಲಿ ಮೊಸಳೆಗಳು ಇರುವ ಬಗ್ಗೆ ಸುದ್ದಿಗಳು ಹರಿದಾಡುತ್ತಿದ್ದು, ಇದೀಗ ಮೊಸಳೆಗಳ ಇರುವಿಕೆಗೆ ಸಾಕ್ಷಿಯೂ ದೊರೆತಂತಾಗಿದೆ.  ಶಿರಾಡಿ ಘಾಟ್ ಅರಣ್ಯದಿಂದ ಹರಿದುಬರುವ ಕಾರಣಕ್ಕಾಗಿ ಕುಮಾರಧಾರಾ ನದಿಯಲ್ಲಿ ಮೊಸಳೆಗಳು ಹೆಚ್ಚಿನ ಸಂಖ್ಯೆಯಲ್ಲೂ ಇರುವ ಸಾಧ್ಯತೆಯ ಬಗ್ಗೆ ಸ್ಥಳೀಯರು ಅಭಿಪ್ರಾಯಪಡುತ್ತಾರೆ.
First published: